ಬೆವರಿಲ್ಲದ ಹಣೆಯುಂಟೆ
ನೋವಿಲ್ಲದ ಮನಸ್ಸುಂಟ್ಟೆ
ಕಂಬನಿ ಮಿಡಿಯದ ಕಣ್ಣುಂಟ್ಟೆ
ಜೀವನ ಚದುರಂಗ
ಎಲ್ಲೆಲ್ಲೂ ಕಪ್ಪು-ಬಿಳುಪು
ಅರಿತಿಹುದು ಎಡವಿದ ತಪ್ಪು
ಬಂದಿಸಿವುದು ನುಡಿದ ಒಪ್ಪು
ಜೀವನ ಚದುರಂಗ
ನಡೆಯದ್ದಿಲ್ಲಿ ಸನ್ಯಾಸ ವ್ರತ
ನಿಲ್ಲು ನೀನೆಂದು ಸತ್ಯದ ಮತ
ಕ್ರಿಸ್ತನ ಸಾನ್ನಿಧ್ಯವೇ ಪುಣ್ಯ ಪಥ
ಜೀವನ ಚದುರಂಗ
ಸೋಲಿನಲ್ಲಿ ಇಹುದು ಪಾಠ
ಮುಗಿಯದ ಶತ್ರು ಕಾಟ
ಮರ್ಮ ಅಳಿಯದ ಈ ಆಟ
ಜೀವನ ಚದುರಂಗ
- ನವೀನ್ ಮಿತ್ರ, ಬೆಂಗಳೂರು
*******************
No comments:
Post a Comment