Showing posts with label ದನಿ ರೂಪಕ. Show all posts
Showing posts with label ದನಿ ರೂಪಕ. Show all posts

Tuesday, 10 November 2020

ದನಿ ರೂಪಕ - ಡಿಯಾರ್ ಪೋಪ್ ಫ್ರಾನ್ಸಿಸ್

ಜಗತ್ತಿನಾದ್ಯಂತ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಪೋಪ್‌ರವರ ಉತ್ತರ...


ನಿಮಗೇನಾದರೂ ಪೋಪ್ ಫ್ರಾನ್ಸಿಸ್‌ರವರಿಗೆ ಪ್ರಶ್ನೆ ಕೇಳುವ ಅವಕಾಶ ಸಿಕ್ಕರೆ ಯಾವ ಪ್ರಶ್ನೆಗಳನ್ನು ಕೇಳುತ್ತೀರಿ?

ವಯಸ್ಕರಂತೆ ಮಕ್ಕಳಲ್ಲೂ ಅನೇಕ ಪ್ರಶ್ನೆಗಳಿವೆ, ಸಮಸ್ಯೆಗಳಿವೆ. ಆದರೆ ಇಂತಹ ಪ್ರಶ್ನೆಗಳನ್ನು ಕೇಳಲು ಅವರಿಗಿರುವ ಅವಕಾಶಗಳು ಕಡಿಮೆ, ಡಿಯರ್ ಫ್ರಾನ್ಸಿಸ್ ಎಂಬ ಪುಸ್ತಕದಲ್ಲಿ ಪೋಪ್ ಫ್ರಾನ್ಸಿಸ್‌ರವರು ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಕೊಟ್ಟಿದಲ್ಲದೆ, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿತ್ತಾ, ಮಕ್ಕಳಲ್ಲಿರುವ ಆಧ್ಯಾತ್ಮಿಕ ಆಳವನ್ನು ಕಂಡು ಸಂಭ್ರಮಿಸುತ್ತಾರೆ. ಹೌದು, ಕೆಲವೊಂದು ಪ್ರಶ್ನೆಗಳು ತಮಾಶೆಯಿಂದ ಕೂಡಿವೆಯಾದರೂ, ಇನ್ನೂ ಕೆಲವು ಗಂಭೀರವಾದಂತಹವುಗಳು, ಮತ್ತೂ ಕೆಲವು ನಮ್ಮ ಹೃದಯಗಳನ್ನು ಕಲುಕುವಂಥವು. ಆದರೆ ಎಲ್ಲ ಪ್ರಶ್ನೆಗಳು ಮಕ್ಕಳಿಂz ಕೇಳಲ್ಪಟ್ಟ ಪ್ರಶ್ನೆಗಳೇ; ಅವು ದೇವರ ಅನುಪಮ ಪ್ರೀತಿಗೆ ಅರ್ಹರಾಗಿರುವ ಮುಗ್ಧ ಮಕ್ಕಳ ಪ್ರಶ್ನೆಗಳು.


ಜೊವೊ (Joāo)  

ವಯಸ್ಸು - ೧೦, ಪೊರ್ಚುಗಲ್

ಡಿಯರ್ ಪೋಪ್ ಫ್ರಾನ್ಸಿಸ್ ನಿಮ್ಮನ್ನು ನಾನು ಸೈಂಟ್ ಪೀಟರ್   ಸ್ಕ್ವೇರ್‌ನಲ್ಲಿಕಂಡಾಗ ನೀವು ನನ್ನನ್ನು ಗಮನಿಸಿ ನೋಡಿದನ್ನು ತಿಳಿದು ತುಂಬಾ ಸಂತೋಷವಾಯಿತ್ತು. ನಿಮ್ಮ ಸುತ್ತಮುತ್ತಲಿರುವ ಮಕ್ಕಳನ್ನು ಕಂಡಾಗ ನಿಮಗೇನಿಸುತ್ತದೆ? ನೀವು ನನ್ನನ್ನು ಗಮನಿಸಿ ನೋಡಿದಕ್ಕೆ ನಿನಗೆ ಧನ್ಯವಾದಗಳು.

ಪೋಪ್ ಫ್ರಾನ್ಸಿಸ್: ಪ್ರೀತಿಯಜೊ॒ವೊ

ನೀವು ಮಕ್ಕಳನ್ನು ಕಂಡಾಗ ನಿಮಗೆ ಏನೇನಿಸುತ್ತದೆ ಎಂಬ ಪ್ರಶ್ನೆಯನ್ನು ನೀನು ಕೇಳಿರುವೆ. ಹೌದು ನಾನು ಅನೇಕ ಮಕ್ಕಳನ್ನು ನೋಡುತ್ತಿರುತ್ತೇನೆ. ನಾನು ಅವರನ್ನು ಕಂಡು ಅವರಿಗೆ ಕಿರುನಗೆ ಬೀರುತ್ತೇನೆ. ಅವರನ್ನು ತಬ್ಬಿಕೊಳ್ಳುತ್ತೇನೆ ಮತ್ತು ಕಾರಿನಿಂದ ಅವರಿಗೆ ಚುಂಬನದ ಸನ್ನೆ ಮಾಡಿ ಮುದ್ದಿಸುತ್ತೇನೆ. ನೀನು ನಿನ್ನ ಕೈಯಾರೆ ಬಿಡಿಸಿ ನನಗೆ ಕಳಿಸಿರುವ ಚಿತ್ರದಲ್ಲಿ ನಾನು ಕಾರನ್ನು ಚಾನೆ ಮಾಡುವಂತಿದ್ದರೂ, ನನ್ನ ಕೈಗಳು ಯಾವಾಗಲೂ ಫ಼್ರೀ ಇರುವ ಕಾರಣ ಇವೆಲ್ಲಾ ಮಾಡಲು ನನಗೆ ಸಾಧ್ಯ.

ಮಕ್ಕಳನ್ನು ಕಂಡಾಗ ನಾನು ಸಂತೋಷಗೊಳ್ಳುತ್ತೇನೆ. ಅವರಿಗಾಗಿ ನನ್ನ ಮನಸ್ಸು ಪ್ರೀತಿಯಿಂದ ತುಂಬಿಕೊಳ್ಳುತ್ತದೆ. ಮುಖ್ಯವಾಗಿ ನಿನ್ನಂತಹ ಮಕ್ಕಳನ್ನು ಕಂಡಾಗ ನನ್ನ ಹೃದಯದಲ್ಲಿ ಭರವಸೆ ಹುಟ್ಟಿಕೊಳ್ಳುತ್ತದೆ. ಏಕೆಂದರೆ ನನಗೆ ಮಕ್ಕಳನ್ನು ಕಾಣುವುದೆಂದರೆ ಭವಿಷ್ಯವನ್ನು ಕಾಣುವಂತದ್ದು. ಹೌದು ಭರವಸೆ ನನ್ನಲ್ಲಿ ತುಂಬಿಕೊಳ್ಳುತ್ತದೆ ಏಕೆಂದರೆ ಪ್ರತಿಯೊಂದು ಮಗುವು ಮುಂದಿನ ಭವಿಷ್ಯದ ಮಾನವಕುಲಕ್ಕೆ ನಮ್ಮ ಭರವಸೆ.

ಎಮಿಲ್ ವಯಸ್ಸು ೯, ಡೊಮಿನಿಕಾನ್ ರಿಪಬ್ಲಿಕ್

ಪ್ರೀತಿಯ ಪೋಪ್ ಫ್ರಾನ್ಸಿಸ್, ಸತ್ತ ನಮ್ಮ ಸಂಬಂಧಿಕರು ಸ್ವರ್ಗದಿಂದ ನಮ್ಮನ್ನು ನೋಡಬಹುದಾ?

ಪೋಪ್ ಫ್ರಾನ್ಸಿಸ್: ಹೌದು, ಇದರ ಬಗ್ಗೆ ನಿನಗೆ ಖಚಿತತೆ ಇರಲಿ. ನೀನು ಸ್ವರ್ಗದಲ್ಲಿರುವ ನಿನ್ನ ಸಂಬಂಧಿಕರ ಬಗ್ಗೆ ಯೋಚಿಸುತ್ತಿರುವೆ. ನೀನು ಅವರನ್ನು ಕಾಣಲಾಗುತ್ತಿಲ್ಲ, ಆದರೆ ದೇವರ ಅನುಮತಿಯ ಮೇರೆಗೆ ಅವರು ನಿನ್ನನ್ನು ಸ್ವರ್ಗದಿಂದ ನೋಡಬಹುದು. ಕನಿಷ್ಠಪಕ್ಷ, ನಿನ್ನ ಬದುಕಿನ ಕೆಲವೊಂದು ಕ್ಷಣಗಳಲ್ಲಿ ನಿನ್ನನ್ನು ಅವರು ನೋಡುತ್ತಿರುತ್ತಾರೆ. ನಿನಗೆ ಗೊತ್ತಾ? ಅವರು ನಮ್ಮಿಂದ ದೂರವಿಲ್ಲ. ಅವರು ನಮಗಾಗಿ ಪ್ರಾರ್ಥಿಸುತ್ತಾರೆ ಮತ್ತು ಪ್ರೀತಿಯಿಂದ ನಮ್ಮನ್ನು ಆರೈಕೆ ಮಾಡುತ್ತಾರೆ. ಇದು ಮುಖ್ಯವಾದ ವಿಷಯ. 

ನಿನ್ನ ಸತ್ತ ಸಂಬಂಧಿಕರನ್ನು ಈ ರೀತಿಯಾಗಿ ನೀನು ಕಲ್ಪಿಸಿಕೊಳ್ಳಬಹುದು; ಸ್ವರ್ಗದಿಂದ ನಿನ್ನನ್ನು ನೋಡುತ್ತಾ ನಗುತ್ತಿದ್ದಾರೆ, ನಿನ್ನ ಸುತ್ತಾ ಹಾರಡುವಂತೆ ನೀನು ನಿನ್ನ ಚಿತ್ರದಲ್ಲಿ ಚಿತ್ರಿಸಿರುವೆ, ಆದರೆ ಅವರು ನಿನ್ನ ಪಕ್ಕದಲ್ಲೆ ಹಾರಾಡುತ್ತಿರುತ್ತಾರೆ. ಅವರ ಪ್ರೀತಿಯ ಆರೈಕೆಯೊಂದಿಗೆ ನಿನ್ನ ಜೊತೆಗೂಡಿ ಸದಾಕಾಲ ನಿನ್ನೊಂದಿಗೆ ನಡೆಯುತ್ತಿರುತ್ತಾರೆ.

-----

ಅನು

-----


Sunday, 8 November 2020

ಯಾರಿಗೆ ಸ್ವಾತಂತ್ರ್ಯ ಬೇಕು? - - ಅನು


ವಾಲ್ಸ್ ಎಂಬ ಕಾದಂಬರಿಯಲ್ಲಿ ವೈಕೊಮ್ ಮುಹಮದ್ ಬಸೀರ್ ಎಂಬ ಲೇಖಕ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ:

೧. ನಾನು ಏಕೆ ಸ್ವತಂತ್ರನಾಗಿರಬೇಕು?

೨. ಯಾರಿಗೆ ಸ್ವಾತಂತ್ರ್ಯ ಬೇಕು?

ಕಾದಂಬರಿಕಾರ ಇಲ್ಲಿ ಸ್ವಾತಂತ್ರ್ಯದ ಅರ್ಥಹೀನತೆಯ ಬಗ್ಗೆ ಹೇಳುತ್ತಿದ್ದಾನೆ. ಪ್ರೀತಿ ರಹಿತ ಜಗತ್ತಿನಲ್ಲಿ ಅಥವಾ ದ್ವೇಷ ತುಂಬಿದ ಮನಸಿನಲ್ಲಿ ಸ್ವಾತಂತ್ರ್ಯದ ಬೆಲೆ ಏನು? ಒಂದು ಭ್ರಾತೃತ್ವದ ಸಮುದಾಯದಲ್ಲಿ ಮಾತ್ರ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ಅರ್ಥವಿರುವುದು. ನಾವು ಪ್ರೆಂಚ್ ಕ್ರಾಂತ್ರಿಯ ಧ್ಯೇಯವಾಕ್ಯವನ್ನು ನೆನೆಸಿಕೊಳ್ಳುವುದು ಸೂಕ್ತ: ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ; ಇವುಗಳಲ್ಲಿ ಯಾವುದನ್ನೂ ಪರಸ್ಪರ ಒಂದರಿಂದ ಬೇರ್ಪಡಿಸಲಾಗದು. 

 

ರವೀಂದ್ರನಾಥ ಠಾಕೂರರ ಕವಿತೆ;

 ಎಲ್ಲಿ ಮನಸ್ಸು ನಿರ್ಭಯವೋ, 

ಶಿರ ಎತ್ತರಕ್ಕೆ ನಿಮಿರಿ ನಿಂತಿದೆಯೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, 

ಎಚ್ಚರಗೊಳ್ಳಲಿ ನನ್ನ ನಾಡು


ಎಲ್ಲಿ ಜ್ಞಾನ ಸ್ವತಂತ್ರವೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, 

ಎಚ್ಚರಗೊಳ್ಳಲಿ ನನ್ನ ನಾಡು

ಎಲ್ಲಿ ಜಗತ್ತು ಸಂಕುಚಿತವಾದ

ಮನೆಗೋಡೆಗಳಿಂದ ಒಡೆದು

ಚೂರುಚೂರಾಗಿಲ್ಲವೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ 

ಎಚ್ಚರಗೊಳ್ಳಲಿ ನನ್ನ ನಾಡು

ಎಲ್ಲಿ ಮನಸ್ಸನ್ನು ನೀನು ಸತತ 

ವಿಸ್ತರಣಶೀಲ ವಿಚಾರ ಕ್ರಿಯೆಗಳಿಗೆ ಮುನ್ನಡೆಸುತ್ತೀಯೋ

ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, 

ಎಚ್ಚರಗೊಳ್ಳಲಿ ನನ್ನ ನಾಡು

===============

ದೇವರೆಂದರೆ ಸ್ವಾತಂತ್ರ್ಯ ಮತ್ತು ಬಿಡುಗಡೆ. ದೇವರು, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆಯ ಬಂಡೆಯ ಮೇಲೆ ಮನುಷ್ಯರ ಘನತೆಯನ್ನು ಸ್ಥಾಪಿಸಿದ್ದಾನೆ. ಆದ್ದರಿಂದ, ಸೃಷ್ಟಿಯ ಮೇರು ಸೃಷ್ಟಿ ಮನುಷ್ಯನ ಅಮಾನವೀಯಗೊಳಿಸುವ ಯಾವುದೇ ಕ್ರಿಯೆ, ದಬ್ಬಾಳಿಕೆ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿರುತ್ತದೆ ಮತ್ತು ಆದ್ದರಿಂದ  ಅವು ದೇವರ ವಿರುದ್ಧವು ಹೌದು. 

ತರಗತಿಗಳಲ್ಲಿ ಮತ್ತು ಧರ್ಮೋಪದೇಶ ಪಠ್ಯ ಪುಸ್ತಕಗಳಲ್ಲಿ ದೇವರೆಂದರೆ ಸ್ವಾತಂತ್ರ್ಯ ಎಂದು ನಾವು ಕಲಿಸುತ್ತೇವೆ, ಆದರೆ ಈ ಸ್ವಾತಂತ್ರ್ಯವು ಕೇವಲ ಅಧಿಕಾರಸ್ಥರಿಗೆ ಮಾತ್ರ ಕಾಯ್ದಿರಿಸಲಾಗಿದೆ. ಅವರು ತಮ್ಮ ಅಧೀನದಲ್ಲಿರುವವರಿಗೆ, "ನಾವು ಆದೇಶಗಳನ್ನು ಪಾಲಿಸುವವರಲ್ಲ, ನಾವು ಆದೇಶಗಳನ್ನು ಕೊಡುವವರು" ಎಂದು ತಮ್ಮ ಗರ್ವವನ್ನು ತೋರಿಸುತ್ತಾರೆ. ಹೌದು, ಬಹುಪಾಲು ಜನರಿಗೆ, ನಿಜವಾದ ಸ್ವಾತಂತ್ರ್ಯವೆಂಬುವುದು ದೂರದ ಕನಸು...

**********


ನೈಜ ಧರ್ಮಸಭೆಯನ್ನು ಕಟ್ಟುವ ದೇವರ ವಾಕ್ಯದ ಬೋಧನೆ ಯಾವುದು? - - ಅನು



ಎಲ್ ಸಾಲ್ವಡಾರ್ ಮಧ್ಯಪ್ರಾಚ್ಯ ಅಮೆರಿಕಾ ಭಾಗದ ಒಂದು ದೇಶ. 

ಇಂದಿಗೂ ಕಿತ್ತು ತಿನ್ನುವ ಬಡತನ, ಅಸಮಾನತೆ ಹಾಗೂ ಅಪರಾಧ- ಕ್ರೌರ್ಯಗಳಿಂದ ಬಳಲುತ್ತಿರುವ ಈ ದೇಶ ೧೯ ಹಾಗು ೨೦ನೇ ಶತಮಾನದ ಉದ್ದಕ್ಕೂ ರಾಜಕೀಯ ಹಾಗೂ ಸಾಮಾಜಿಕ ಅತಂತ್ರ ಸ್ಥಿತಿಯಲ್ಲೇ ಬಳಲುತ್ತಲೇ ನಲುಗಿದ ದೇಶ. ಇದರ ಉಚ್ಛ್ರಾಯ ಸ್ಥಿತಿ ತಲುಪಿದ್ದು ೧೯೭೯ರಿಂದ ೧೯೯೨ರ ತನಕ ನಡೆದ ಆಂತರಿಕ ಯುದ್ಧದ ಸಮಯದಲ್ಲಿ. ಆ ಸಮಯದಲ್ಲಿ ದೇಶವನ್ನು ಆಳುತ್ತಿದ್ದ ಸೇನಾಡಳಿತಕ್ಕೂ, ಅದರ ವಿರುದ್ಧ ದಂಗೆ ಎದ್ದ ದಂಗೆಕೋರ ಗುಂಪಿನಿಂದ ಸದಾ ಕಲಹದ ಸ್ಥಿತಿಯೇ. ಲೂಟಿ, ಕೊಲೆ, ಮಾರಣಹೋಮಗಳಿಂದ ಬೆಂದು ನಲುಗಿ ಹೋದ ಸ್ಥಿತಿಯಲ್ಲಿ ಅಲ್ಲಿನ ಕ್ರೈಸ್ತಧರ್ಮಸಭೆ ತನ್ನ ಸ್ಪಷ್ಟ ನಿಲುವುಗಳನ್ನು ತಿಳಿಸಲು ಹಿಂಜರಿಯುತ್ತಿತ್ತು. ದೇಶವನ್ನು ಆಳುತ್ತಿದ್ದ ಸೈನ್ಯಸರ್ಕಾರ ಹಾಗೂ ಅದರ ಬೆಂಬಲಕ್ಕೆ ನಿಂತ ಶ್ರೀಮಂತರ ಪಡೆ ಒಂದು ಕಡೆಯಾದರೆ, ಸರ್ಕಾರವನ್ನು ಹಿಂಸಾತ್ಮಕವಾದ ಮಾರ್ಗದಿಂದಲೇ ಎದುರಿಸಲು ನಿಂತ ಎಡಪಂಥೀಯ ದಂಗೆಕೋರರು ಇನ್ನೊಂದೆಡೆ. ಇವೆರಡರ ನಡುವೆ ಬಳಲುವ ಶಾಂತಿಪ್ರಿಯ, ಬಡ ಸಾಮಾನ್ಯ ಜನ.

ಕುರುಬನಿಲ್ಲದ ಕುರಿಗಳಂತಿಹ ಜನರ ನಡುವೆ ತನ್ನ ನಿಲುವು ಹೇಳಿಕೊಳ್ಳಲಾಗದೆ ವ್ಯಾಟಿಕನ್ನಿಗೆ ಬದ್ಧವಾದ ಯಾಜಕವರ್ಗ. ಈ ಯಾಜಕರಲ್ಲೂ ಕೆಲವರು ಸರ್ಕಾರದ ಪರ. ಈ ಎಲ್ಲಾ ಗೊಂದಲಗಳ ನಡುವೆ ತಟಸ್ಥವಾಗಿ ನಿಂತ ಆಸ್ಕರ್ ರೊಮೇರೊ ಎಂಬ ಪಾದ್ರಿ ಗಲಭೆಪೀಡಿತ ಸ್ಯಾನ್ ಸಾಲ್ವಡೊರ್ ನಗರಕ್ಕೆ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ನಂತರ ಜನಪರ ಕಾಳಜಿಯಿಂದ ಸರ್ಕಾರದ ವಿರುದ್ಧವಾಗಿ ನಿಂತು ಇಡೀ ವಿಶ್ವದ ಗಮನ ಸೆಳೆದು ನಂತರ ಅದೇ ಕಾರಣಕ್ಕೆ ಪ್ರಾಣಬಿಟ್ಟ ರೊಮೇರೊರವರ ಜೆ.ಬಿ. ಕ್ಯಾಸ್ತಲಿನೋರವರು ಅನುವಾದಿಸಿರುವ ಕೆಲವೊಂದು ಮಾತುಗಳು...

 ಲೋಕದಲ್ಲಿ ತಲ್ಲಣವನ್ನು ಉಂಟು ಮಾಡದೆ ದೇವರ ವಾಕ್ಯದ ಸೇವೆ ಮಾಡುವುದು ಸುಲಭ. ಇಲ್ಲಿ ದೇವರ ವಾಕ್ಯದ ಬೋಧನೆಯು ತೀರಾ ಅಮೂರ್ತವಾಗಿರುತ್ತದೆ. ಈ ಬೋಧನೆಯು ಮಾನವ ಚರಿತ್ರೆಗೆ ಯಾವುದೇ ಬದ್ಧತೆ ಪ್ರದರ್ಶಿಸುವುದಿಲ್ಲ. ಇದು ವಿಶ್ವದೆಲ್ಲೆಡೆ ಸಲ್ಲುವ ಬೋಧನೆಯಾಗಿರುತ್ತದೆ. ಈ ಬೋಧನೆಯು ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ, ಯಾವುದೇ ಸಂಘರ್ಷವನ್ನು ಹುಟ್ಟುಹಾಕುವ ಬೋಧನೆ ಯಾವುದು? ಹಿಂಸೆಯನ್ನು ಆಹ್ವಾನಿಸುವ ಬೋಧನೆ ಯಾವುದು? ನೈಜ ಧರ್ಮಸಭೆಯನ್ನು ಕಟ್ಟುವ ದೇವರ ವಾಕ್ಯದ ಬೋಧನೆ ಯಾವುದು? ಅದು ಪ್ರವಾದಿಗಳ ಬೋಧನೆಯಂತಿರುವ ಉರಿಜ್ವಾಲೆಯನ್ನು ಹೊತ್ತಿಸುವ ಬೋಧನೆ. ಅಂತಹ ದೇವರ ವಾಕ್ಯದ ಬೋಧನೆಯು ಸಾರುತ್ತದೆ ಹಾಗೂ ಆಪಾದಿಸುತ್ತದೆ. ಆ ಬೋಧನೆಯು ಜನತೆಗೆ ದೇವರ ಮಹತ್ಕಾರ್ಯಗಳನ್ನು ಸಾರುತ್ತದೆ ಹಾಗೂ ಅವುಗಳನ್ನು ಅವರು ವಿಶ್ವಾಸಿಸುವಂತೆ ಮತ್ತು ಗೌರವಿಸುವಂತೆ ಪ್ರೇರೇಪಿಸುತ್ತದೆ. ಆ ಬೋಧನೆಯು ದೇವರ ರಾಜ್ಯಭಾರವನ್ನು ವಿರೋಧಿಸುವವರ ಪಾಪಗಳನ್ನು ಖಂಡಿಸುತ್ತದೆ.. ಮಾತ್ರವಲ್ಲದೆ ಅವರ ಹೃದಯಗಳಿಂದ, ಅವರ ಸಮಾಜದಿಂದ, ಅವರ ಕಾನೂನುಗಳಿಂದ, ಶೋಷಿಸುವ, ಕಾರಣ ಇಲ್ಲದೆ ಬಂಧಿಸುವ, ದೈವಿಕ ಮತ್ತು ಮಾನವ ಹಕ್ಕುಗಳನ್ನು ಧಮನಿಸುವ ಅವರ ಸಂಸ್ಥೆಗಳಿಂದ, ಪಾಪವು ತೊಲಗುವಂತೆ ನೋಡಿಕೊಳ್ಳುತ್ತದೆ. ಈ ಪರಿ ದೇವರ ವಾಕ್ಯದ ಸೇವೆ ಮಾಡುವುದು ಕಷ್ಟಕರ. ಆದರೆ ಇಲ್ಲಿ ದೇವರಾತ್ಮರು ಪ್ರವಾದಿಯೊಂದಿಗೆ ಹಾಗೂ ಬೋಧಕರೊಂದಿಗೆ ಇರುತ್ತಾರೆ. ಏಕೆಂದರೆ ಅವರೇ ದೇವರ ರಾಜ್ಯವನ್ನು ಸಮಸ್ತ ಜನತೆಗೆ ಸದಾ ಕಾಲಕ್ಕೂ ಸಾರುವ ಪ್ರಭು ಯೇಸುಕ್ರಿಸ್ತ. (ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೧೮)


Saturday, 20 June 2020

ದನಿರೂಪಕ


ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ?

ದಕ್ಷಿಣ ಅಮೇರಿಕ ಹಾಗು ಚಿಲಿ ತೀವ್ರ ಸಂಘರ್ಷ ಎದುರಿಸುತ್ತಿದ್ದ ಕಾಲಕ್ಕೆ ಸಾಕ್ಷಿಯಾಗಿ ನೆರೂಡನ ಕವಿತೆಗಳು ಸೃಷ್ಟಿಯಾದವು. ಎಲ್ಲೇ ಹೋದರೂ, ಯಾವ ಹುದ್ದೆಯನ್ನೇ ನಿರ್ವಹಿಸುತ್ತಿದ್ದರೂ ಆತ ಕವಿತೆ ಬರೆಯುವುದು ನಿಲ್ಲಿಸಲಿಲ್ಲ. ಯಾವ ನೆಲದಲ್ಲಿದ್ದನೋ ಅಲ್ಲಿಯ ಸಾರ ಸತ್ವ, ಸಂಕಟಗಳನ್ನೆಲ್ಲ ಹೀರಿಕೊಂಡು ಕವಿತೆ ಬರೆದ ಎಂದೇ ಜನವಿರೋಧಿ ಆಳ್ವಿಕರಿಗೆ ಅವು ಅಪಾಯಕಾರಿಯಾಗಿ ಕಂಡವು. ಒಮ್ಮೆ ಚಿಲಿಯ ಪೆÇೀಲಿಸರಿಂದ ಅವನ ಮನೆ ತಪಾಸಣೆಗೊಳಗಾದಾಗ, ಎಲ್ಲಿ ಬೇಕಾದರೂ ಹುಡುಕಿ, ಕವಿತೆಗಿಂತ ಅಪಾಯಕಾರಿಯಾದ ಯಾವುದೂ ಇಲ್ಲಿಲ್ಲ? ಎಂದು ಹೇಳಿದ.

ಕವಿಗೇಕೆ ಬೊಂಬೆ?

ಕಪ್ಪುಚಿಪ್ಪುಗಳಂತೆಯೇ ಕವಿಯ ಬಳಿ ವಿಶಿಷ್ಟ ಬೊಂಬೆ ಸಂಗ್ರಹವೂ ಇತ್ತು! ಬೊಂಬೆಯಾಕಾರದ ವೈನ್ ಬಾಟಲು, ಬಾಟಲಿಯೊಳಗೆ ಹಡಗು ಕೂರಿಸಿದ ಬೊಂಬೆ, ಹಡಗಿನ ಮುಂಚೂಣಿಯಲ್ಲಿರುತ್ತಿದ್ದ ಫಿಗರ್ ಹೆಡ್ ಬೊಂಬೆ ಎಲ್ಲ ಅವನಲ್ಲಿದ್ದವು. ಕವಿಗೇಕೆ ಗೊಂಬೆ? ಅವನ ಮಾತುಗಳಲ್ಲೇ ನಮ್ಮ ಅಚ್ಚರಿಗೆ ಉತ್ತರವಿದೆ: ಆಟವಾಡದ ಮಗು ಮಗುವೇ ಅಲ್ಲ, ಆಟವಾಡದೇ ಬೆಳೆದ ವ್ಯಕ್ತಿಗಳು ತಮ್ಮೊಳಗಿನ ಮಗುವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಾರೆ. ತಮ್ಮೊಳಗಿನ ಮಗುತನಕ್ಕೆ ಅಪರಿಚಿತರಾಗಿರುತ್ತಾರೆ. ನಾನು ನನ್ನ ಮನೆಯನ್ನು ಬೊಂಬೆಮನೆಯ ಹಾಗೆ ಕಟ್ಟಿದ್ದೇನೆ. ಬೆಳಗಿನಿಂದ ಸಂಜೆಯವರೆಗೆ ಆಡುತ್ತೇನೆ?

ನಾನು ನನ್ನ ಮನೆ ಇಸ್ಲಾ ನೆಗ್ರಾವನ್ನು ಜನತೆಗೆ ಅರ್ಪಿಸುತ್ತಿದ್ದೇನೆ; ಒಂದಲ್ಲ ಒಂದು ದಿನ ಅದು ಯೂನಿಯನ್ ಮೀಟಿಂಗುಗಳ ಸ್ಥಳವಾಗುತ್ತದೆ, ಗಣಿ ಕಾರ್ಮಿಕರು, ರೈತರು ವಿಶ್ರಾಂತಿ ಪಡೆಯುವ ಜಾಗವಾಗುತ್ತದೆ. ಹೊಟ್ಟೆಕಿಚ್ಚಿನ ಜನರ ಮೇಲೆ ನನ್ನ ಕಾವ್ಯವು ತೀರಿಸಿಕೊಳ್ಳುವ ಪ್ರತೀಕಾರ ಅದು? ಎಂದು ಹೇಳಿದ. ಜನಪರ ಹೋರಾಟಗಾರನೊಬ್ಬ ಇದಕ್ಕಿಂತ ಉದಾತ್ತವಾಗಿ ತನ್ನ ನೆಲೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?

(ಪಾಬ್ಲೊ ನೆರೂಡ ನೆನಪುಗಳು- ಆತ್ಮಕತೆ, ಕನ್ನಡಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ)

**********


Saturday, 9 May 2020

ಏಕೆಂದರೆ ಒಬ್ಬನಿಗಿಂತ ಇಬ್ಬರು ಲೇಸು..

ಒಂದೇ ದಿನದಲ್ಲಿ ನಮ್ಮೆಲ್ಲಾ ಗುರಿಗಳನ್ನು ಸಾಧಿಸಬಿಡಬಹುದೇ?

ಒಂದೇ ದಿನದಲ್ಲಿ ನಮ್ಮೆಲ್ಲಾ ಗುರಿಗಳನ್ನು ಸಾಧಿಸಿಬಿಡಬಹುದೇ? ನಮಗೆ ಗೊತ್ತು; ಕೇವಲ 24 ಗಂಟೆಗಳಲ್ಲಿ ನಮ್ಮೆಲ್ಲಾ ಕನಸುಗಳು ನನಸಾಗುವುದಿಲ್ಲ ಎಂದು. ಕೆಲವೇ ಸೆಕೆಂಡ್‍ಗಳಲ್ಲಿ ಒಂದು ಬಹೃತ್ ಮನೆಯನ್ನು ಕಟ್ಟಲು ನಮಗೆ ಸಾಧ್ಯವೇ? ಮನೆಯನ್ನು ಕಟ್ಟಲು ಅತ್ಯಾವಶ್ಯಕವಾಗಿ ಬೇಕಾಗಿರುವ ದುಡ್ಡನ್ನು ಕೆಲವೇ ನಿಮಿಷಗಳಲ್ಲಿ ಕೂಡಿಕರಿಸಲು ಸಾಧ್ಯವೇ? ಮೂರು ವರ್ಷ ಅವಧಿಯ ಕೋರ್ಸನ್ನು ಪೂರ್ಣಗೊಳಿಸಲು ಮೂರಕ್ಕಿಂತ ಹೆಚ್ಚು ಕಾಲವಾಕಾಶವು ನಮಗೆ ಬೇಕು. ವ್ಯವಹಾರ, ಉದ್ಯಮ, ಉದ್ಯಾವನ ಬಹು ಮುಖ್ಯವಾಗಿ ಆತ್ಮೀಯ ಸಂಬಂಧ, ಗೆಳೆತನ ಹೀಗೆ ಇವುಗಳೆಲ್ಲಾವನ್ನು ಕ್ಷಣಮಾತ್ರದಲ್ಲಿ ಗಳಿಸಿಬಿಡಲು ಸಾಧ್ಯವಿಲ್ಲ. ತ್ವರಿತ ಫಲಿತಾಂಶಗಳನ್ನು ಬಯಸುವ ಜಗತ್ತಿಗೆ ನಮ್ಮ ಪ್ರಯತ್ನಗಳು ಫಲಪ್ರದವಾಗಲು ಹೆಚ್ಚು ಸಮಯ ತೆಗೆದುಕೊಂಡಾಗ ನಿರಾಶಾದಾಯಕವಾಗುತ್ತದೆ. ಆದರೆ ನಾವು ಹೆಜ್ಜೆ ಹೆಜ್ಜೆಗೂ ನಿಧಾನವಾಗಿ ಪ್ರಗತಿಯನ್ನು ಸಾಧಿಸಬಹುದು. ಹೌದು, ಪ್ರತಿದಿನ ಸಂಕಲ್ಪತೊಟ್ಟು ಮೆಲ್ಲ ಮೆಲ್ಲನೇ ನಮ್ಮ ಪ್ರಯತ್ನವನ್ನು ಮುಂದುವರಿಸಿದರೆ, ಖಂಡಿತವಾಗಿಯೂ ನಾವು ನಮ್ಮ ಗುರಿಯ ಮನೆಯನ್ನು ತಲುಪೇ ತಲಪುತ್ತೇವೆ. ಅದರಲ್ಲಿ ಅನುಮಾನವೇ ಬೇಡ.

**********

ಪ್ರಯಾಣಿಸಲು ನಮಗೆ ಉತ್ತಮ ಆತ್ಮೀಯ ಗೆಳೆಯರು ಬೇಕೇಬೇಕು

ಬದುಕೆಂಬುವುದು ಒಂದು ಪ್ರಯಣ. ಆದರೆ ನಾವ್ಯಾರು ಏಕಾಂಗಿಯಾಗಿ ಈ ಪ್ರಯಾಣವನ್ನು ಕೈಗೊಳ್ಳಲು ಸಾಧ್ಯವಿಲ್ಲ. ಪ್ರಯಾಣಿಸಲು ನಮಗೆ ಉತ್ತಮ ಆತ್ಮೀಯ ಗೆಳೆಯರು ಬೇಕೇಬೇಕು, ಹೌದು, ಪ್ರಯಾಣ ನಮಗೆ ಕಠಿಣವಾದಾಗ, ನಮ್ಮನ್ನು ಪೆÇ್ರೀತ್ಸಾಹಿಸಿ ಮುನ್ನಡೆಸಲು ನಮಗೆ ನಮ್ಮ ಆತ್ಮೀಯರು ಬೇಕು. ಈ ಮೊದಲು ಪ್ರಯಾಣಿಸಿ ಅನುಭವ ಪಡೆದವರು ನಮ್ಮ ಮಾರ್ಗದರ್ಶನಕ್ಕಾಗಿ ನಮಗೆ ಬೇಕು. ಅವರು ನಮ್ಮ ಪ್ರಯಾಣದ ದಾರಿಗಳಲ್ಲಿ ಮೈಲಿಗಲ್ಲುಗಳಂತೆ. ಪ್ರಯಾಣ ವೇಳೆ ನಮ್ಮನ್ನು ನಕ್ಕು ನಗಿಸಲು ಮತ್ತು ನಮ್ಮ ನಗುವನ್ನು ಹಂಚಿಕೊಳ್ಳಲು ಕೆಲವರ ಅವಶ್ಯಕತೆ ನಮಗಿದೆ. ಇನ್ನೂ ಕೆಲವರು ಮೌನದಿಂದ ಎಲ್ಲವನ್ನು ಗ್ರಹಿಸಿಕೊಳ್ಳುತ್ತಾ ನಮ್ಮ ಜೊತೆ ಜೊತೆಗೆ ಹೆಜ್ಜೆ ಹಾಕಿ ನಡೆಯಲು ಬೇಕು. ಹೌದು, ನಮ್ಮ ಪ್ರಯಾಣದ ಜೊತೆಗಾರರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಬೇಕಾಗಿದೆ. ಆರಿಸಿಕೊಂಡು ನಮ್ಮ ಪ್ರಯಾಣದಲ್ಲಿ ಅವರು ವಹಿಸುವ ಪ್ರಾಮುಖ್ಯತೆಯನ್ನು ತಿಳಿದು ಅದನ್ನು ಅವರಿಗೆ ತಿಳಿಸಿ ಜೊತೆ ಜೊತೆಯಾಗಿ ನಡೆಯಬೇಕಾಗಿದೆ. ಅಷ್ಟೂ ಮಾತ್ರವಲ್ಲ, ಅವರ ಸುಖ ಪ್ರಯಾಣಕ್ಕೆ ನಾವು ಕೂಡ ಅವರ ಜೊತೆ ಸಹಕರಿಸಿ ನಡೆಯಬೇಕಾಗಿದೆ. ಹೌದು, ಪ್ರಯಾಣಿಸುವ ನಾವು ಏಕಾಂಗಿಗಳಲ್ಲ. ಏಕಾಂಗಿಯಾಗಿ ಪ್ರಯಾಣಿಸಲು ಕಷ್ಟಸಾಧ್ಯ. ಒಳ್ಳೆಯ ಜೊತೆಗಾರರ ಜತೆ ನಾವು ಹೆಜ್ಜೆ ಕಾಕಿದರೆ ಖಂಡಿತವಾಗಿಯೂ ನಮ್ಮ ಪ್ರಯಾಣ ಸುಲಭವಾಗಿಯೂ ಮತ್ತು ಸುರಕ್ಷಿತವಾಗಿರುತ್ತದೆ.

**********

ಏಕೆಂದರೆ ಒಬ್ಬನಿಗಿಂತ ಇಬ್ಬರು ಲೇಸು...

ಉಪದೇಶಕ ಹೇಳುವಂತೆ “ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಹೆಚ್ಚಿನ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುತ್ತಾನೆ; ಬಿದ್ದಾಗ ಎತ್ತುವವನು ಇಲ್ಲದಿದ್ದರೆ ಅವನ ಗತಿ ದುರ್ಗತಿಯೇ ಸರಿ”. ಬಿದ್ದವನನ್ನು ಮೇಲೆತ್ತಲು ಯಾರು ಇಲ್ಲದ ದುಸ್ಥಿತಿಯನ್ನು ಕಲ್ಪಿಸಿಕೊಳ್ಳಿ! ಅದು ಭಯಂಕರ. ಹೌದು ಈ ಅಸ್ತವ್ಯಸ್ತವಾಗಿರುವ ದುರಿತ ಕಾಲದಲ್ಲಿ ನಾವು ಸಮಸ್ಯೆಗಳಿಗೆ ಸಿಲುಕಿದಾಗ, ಸಮಸ್ಯೆಗಳಿಂದ ಜಾಗರೂಕತೆಯಿಂದ ನಮ್ಮನ್ನು ಬಿಡಿಸಿ ಮುನ್ನಡೆಸಲು ನಮಗೆ ಇನ್ನೊಬ್ಬರ ಅಗತ್ಯ ತುಂಬಾ ಇದೆ. ನಾವು ಆತಂಕಕ್ಕೊಳಗಾದಾಗ ನಮಗೆ ಧೈರ್ಯ ಹೇಳಲು ನಮ್ಮ ಆತ್ಮೀಯರು ನಮಗೆ ಬೇಕೇ ಬೇಕು, ನಮ್ಮ ಸುಖದುಃಖಗಳನ್ನು, ನಮ್ಮ ಆಸೆ ಆಕಾಂಕ್ಷೆಗಳನ್ನು ಹಂಚಿಗೊಳ್ಳಲು ಮತ್ತೊಬ್ಬರ ಅಗತ್ಯವಿದೆ. ನಿಮ್ಮ ಜೊತೆ ಮತ್ತೊಬ್ಬರು ಇದ್ದಾರೆ ಎಂಬುವುದು ನನ್ನ ನಂಬಿಕೆ. ಏಕೆಂದರೆ ಒಬ್ಬನಿಗಿಂತ ಇಬ್ಬರು ಲೇಸಲ್ಲವೇ!

- ಅನು


Saturday, 4 April 2020

ದನಿ ರೂಪಕ - ಕ್ರಿಸ್ತ ಒಂದು ವಿಗ್ರಹವೋ ಅಥವಾ ಸಂಕೇತವೋ?

ಶಿಲುಬೆಯ ಸಾಮಾಜಿಕ ಆಯಾಮವೇನು?
ಶಿಲುಬೆ ಮೇಲಿರುವ ಕ್ರಿಸ್ತ - ಮಾನವಕುಲಕ್ಕೆ ತಾನು ತೋರಿದ ತನ್ನ ಸಾಮಾಜಿಕ ಬದ್ಧತೆಯ ಸಂಕೇತ;
ಶಿಲುಬೆ ಮೇಲೆ ನಗ್ನನಾಗಿರುವ ಕ್ರಿಸ್ತ - ಬಡವರ ಪರವಾಗಿರಲು ಕ್ರಿಸ್ತ ಮಾಡಿದ ಮೂಲಭೂತ ನಿರ್ಧಾರದ ಸಂಕೇತ.;
ಶಿಲುಬೆಯಲ್ಲಿರುವ ಕ್ರಿಸ್ತ- ಸರ್ವೋಚ್ಛ ಜೀವಂತದ ಸಂಕೇತ. ಏಕಾಂಗಿಯಾಗಿ ಹೋರಾಡಿ, ಜನರಿಂದ ತಿರಸ್ಕರಿಸಲ್ಪಟ್ಟ ‘ನ್ಯಾಯ’ ದ ತತ್ವ ಮತ್ತು ಮಹತ್ತರವಾದ ಸಂಘಟನೆಯ ಶಕ್ತಿ ಎಂದು ಜಗತ್ತಿಗೆ ಘೋಷಿಸಲ್ಪಡುವ ಒಂದು ಸಂಕೇತ;
ಶಿಲುಬೆ ಮೇಲೆ ಜಡಿಯಲ್ಪಟ್ಟಿರುವ ಕ್ರಿಸ್ತ ಸರ್ವ ಕಾಲಕ್ಕೂ ಮಿಡಿಯುವ ಶಕ್ತಿ. ಆದರೆ ಇಂದು ಸಾಂಸ್ಥಿಕಕೊಂಡಿರುವ ಕ್ರಿಸ್ತ ಕಿವುಡ ಮತ್ತು ಮೂಕ (ನಿರ್ಜೀವ) ಮೂರ್ತಿ ಮಾತ್ರ.
--------------------
ಕ್ರಿಸ್ತನು ದಿವ್ಯ ಬೆಳಕಾದ ದಿನ
ನಾಲ್ಕನೆಯ ಶುಭಸಂದೇಶಕಾರ ಕ್ರಿಸ್ತನ ಪುನರುತ್ಥಾನದ ಬಗ್ಗೆ ಪ್ರಸ್ತಾಪಿಸುವಾಗ “ವಾರದ ಮೊದಲನೆಯ ದಿನ” ಎಂದು ಆರಂಭಿಸುತ್ತಾನೆ. ಅವನೇಕೆ ರವಿವಾರ ಅಥವಾ ಭಾನುವಾರವೆಂದು ಹೇಳುವುದಿಲ್ಲ? ಬಹುಶಃ ದೇವರ ಸೃಷ್ಟಿ ಕಾರ್ಯದಲ್ಲಿ ಕಾಲದ ಪ್ರಾರಂಭದಲ್ಲಿ ಮೊದಲನೆಯ ವಾರದ ಮೊದಲ ದಿನದಲ್ಲಿ ಮಾಡಿದ ಕಾರ್ಯದ ಕಡೆ ನಮ್ಮ ಗಮನ ಸೆಳೆಯಲು ಬಯಸಿರಬೇಕು!
ಜಗತ್ತಿನ ಮೊದಲ ದಿನದಲ್ಲಿ ಏನು ನಡೆಯಿತು? ದೇವರು ‘ಬೆಳಕಾಗಲಿ’ ಎಂದು ಮೊದಲಿಗೆ ಬೆಳಕನ್ನು ಸೃಷ್ಟಿಸಿದರು; ಗಮನಿಸಿ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಸೃಷ್ಟಿಯಾದುದು ನಾಲ್ಕನೆಯ ದಿನ.
ಬೆಳಕು ಎಂದರೇನು? ಯೊವಾನ್ನ ತನ್ನ ಶುಭಸಂದೇಶದಲ್ಲಿ ದೇವರೇ ಬೆಳಕು ಅಥವಾ ಜ್ಯೋತಿ ಎಂದು ವ್ಯಾಖ್ಯಾನಿಸುವುದನ್ನು ಕೇಳುತ್ತೇವೆ. ದೇವರೆಂದರೆ ಬೆಳಕು; ಅವರು ಮೊದಲಿಗೆ ಬೆಳಕನ್ನು ಸೃಷ್ಟಿಸುತ್ತಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಇಡೀ ಸೃಷ್ಟಿಯೇ ಬೆಳಕಿನ ಅಂದರೆ ದೇವರ ಅಭಿವ್ಯಕ್ತಿ ಮತ್ತು ಪ್ರತಿಬಿಂಬ.
ಧರ್ಮಸಭೆ ಕ್ರಿಸ್ತನ ಪುನರುತ್ಥಾನವನ್ನು ಬೆಳಕಿನ ಹಬ್ಬವೆಂದು ಪರಿಗಣಿಸುತ್ತದೆ. ಅದು ವಾರದ ಮೊದಲನೆಯ ದಿನ ಬೆಳಕಿನ ದಿನ. ಆದ್ದರಿಂದ ಪುನರುತ್ಥಾನವು ಮೊದಲ ದಿನದಲ್ಲಿ ಘಟಿಸಿದ ಅಂದರೆ ಕ್ರಿಸ್ತನು ದಿವ್ಯ ಬೆಳಕಾದ ದಿನ.
ಹೌದು ಪುನರುತ್ಥಾನವೆಂದರೆ ನಿತ್ಯಜೀವನದ ದಿವ್ಯ ಪ್ರಜ್ಞೆ. ಜೀವನದ ಗುರಿಯನ್ನು ಪೂರೈಸಿದ ಪ್ರತಿಯೊಬ್ಬರು ಆಕಾಶದ ಬೆಳಕಾಗುತ್ತಾರೆ. ಅವರು ಬೆಳಕಿನ ದಿನವನ್ನು ಪ್ರವೇಶಿಸಿ ನಕ್ಷತ್ರರಾಗುತ್ತಾರೆ.
**********

Saturday, 8 February 2020

ನಮ್ಮ ಸಂವಿಧಾನದ ಪೀಠಿಕೆಯನ್ನು ಮೌನದಿಂದ ಓದುತ್ತಾ, ಧ್ಯಾನಿಸೋಣ


--------------
ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ; ಗಳನ್ನು ದೊರಕಿಸಿ,
ವೈಯುಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪೆÇ್ರೀತ್ಸಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ 1949ರ ನವೆಂಬರ್ ಮಾಹೆಯ 26ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, 
ಶಾಸನವನ್ನಾಗಿ ವಿಧಿಸಿಕೊಳ್ಳುತ್ತೇವೆ.
------------------

ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. 
ಪೀಠಿಕೆಯ ಮೊದಲ ಪದಗಳು - "ನಾವು, ಜನಗಳು " - ಭಾರತಲ್ಲಿ ಅಧಿಕಾರ ಜನಗಳ ಕೈಯ್ಯಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, ಭಾರತದ ಪ್ರತಿಯೊಬ್ಬ ನಾಗರೀಕ ಹಾಗೂ ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ - ನವೆಂಬರ್ 26, 1949 ಎಂದು ಹೇಳುತ್ತದೆ. 

ಸಂವಿಧಾನದ ಆಶಯಗಳಂತೆ ನಮ್ಮ ದೇಶವು ವಿಕಾಸಗೊಳ್ಳಲಿ ಎಂದು ನಮ್ಮ ದೇಶಕ್ಕಾಗಿ ಪ್ರಾರ್ಥಿಸೋಣ.


-0--0--0--0--0--0-

Saturday, 11 January 2020

SWOT Analysis


SWOT Analysis ಎಂದರೆ ಕಾರ್ಯವೆಸಗುವಲ್ಲಿನ ನಮ್ಮ ಸಾಮಥ್ರ್ಯ (Strength), ದೌರ್ಬಲ್ಯ,  (Weakness), ಅವಕಾಶಗಳು (Opportunity), ಹಾಗೂ ಅಡತಡೆ (Threats) ಗಳನ್ನು ವಿವೇಚಿಸುವ ವ್ಯವಸ್ಥಿತವಾದ ಯೋಜನಾಕ್ರಮ. ಇದು ಇನ್ನೂ ಉತ್ತಮ ನಿರ್ಣಯ ಹಾಗೂ ಸಮಸ್ಯಾ-ಪರಿಹಾರಗಳನ್ನು ಹುಡುಕುವ ಕ್ರಮ.
ಸಾಮಥ್ರ್ಯಗಳು - ನಮ್ಮ ಕಾರ್ಯದಲ್ಲಿ ನೆರವಾಗುವಂತಹ ಸಕಾರಾತ್ಮಕ ಗುಣ-ಸಾಧ್ಯತೆಗಳು.
ದೌರ್ಬಲ್ಯಗಳು - ಕಾರ್ಯದಲ್ಲಿ ತಡೆ ಉಂಟು ಮಾಡುವಂತಹ ನಕಾರಾತ್ಮಕ ಅಂಶಗಳು.
ಅವಕಾಶಗಳು - ಲಕ್ಷ್ಯ ಸಾಧನೆಯಲ್ಲಿ ಅನುಕೂಲವೊದಗಿಸುವಂತಹ ಬಾಹ್ಯ ಸಂದರ್ಭಗಳು.
ಅಡತಡೆಗಳು - ನಮ್ಮ ಕಾರ್ಯದಲ್ಲಿ ತಡೆಯುಂಟು ಮಾಡುವಂತಹ ಬಾಹ್ಯ ಕಾರಣಗಳು.
SWಔಖಿ ಚಿಟಿಚಿಟಥಿsis ಮೂಲಕ ನಮ್ಮ ಹಿಂದಿನ ಜೀವನವನ್ನು ಒಳಹೊಕ್ಕು ನೋಡಿ ವಿವೇಚಿಸಿ, ಇಂದಿನ ಅಥವಾ ಮುಂದೆ ಬರಬಹುದಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರಿಹಾರಗಳನ್ನು ಹುಡುಕಬಹುದು. ಒಂದೊಂದನ್ನೂ ವಿವರವಾಗಿ ನೋಡೋಣ. ಉದಾಹರಣೆ - ನಾನು ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯಾಗಲು ಬಯಸುತ್ತೇನೆ. 
ಸಾಮಥ್ರ್ಯಗಳು
ನಾನು ಬಿ.ಕಾಂ ಮಾಡಿದ್ದೇನೆ.
ಪರಿವಾರದ ವೃತ್ತಿ- ಉದ್ಯಮ.
ಅಪಾಯಗಳನ್ನು ಎದುರಿಸುವ ಸಾಹಸ ಪ್ರವೃತ್ತಿ ಇದೆ.
ತಾಯ್ತಂದೆಯರು ನನ್ನ ನಿರ್ಧಾರವನ್ನು ಬೆಂಬಲಿಸುತ್ತಾರೆ.

ದೌರ್ಬಲ್ಯಗಳು
ಉದ್ಯಮವನ್ನು ಪ್ರಾರಂಭಿಸುವುದು ನನಗೆ ಗೊತ್ತಿಲ್ಲ.
ಸ್ನೇಹಿತರು ಅಪಹಾಸ್ಯ ಮಾಡುತ್ತಾರೆ.
ಪೂರ್ವ ಅನುಭವವಿಲ್ಲ.

ಅವಕಾಶಗಳು
ನನ್ನ ಚಿಕ್ಕಪ್ಪ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾರೆ.
ಸಾಲ ಪಡೆಯಲು ಸಾಧ್ಯ.
ಅಧ್ಯಯನ ಮೂಲಗಳ ಪ್ರಕಾರ ರಿಯಲ್ ಎಸ್ಟೇಟ್ ರಂಗದಲ್ಲಿ ಪ್ರಗತಿಯಿದೆ.
ಈ ವೃತ್ತಿಯಲ್ಲಿ ಹೆಚ್ಚಿನ ಲಾಭವಿದೆ.

ಅಡತಡೆಗಳು
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಏರುಪೇರುಗಳಿರುತ್ತವೆ.
ಭ್ರಷ್ಟಾಚಾರ ತುಂಬ ಹೆಚ್ಚು.
ಕೆಲಸಗಾರರನ್ನು ಉಳಿಸಿಕೊಳ್ಳುವುದು ಕಷ್ಞ.

ಈ ಅಭ್ಯಾಸವು ನಮ್ಮ ಮೌಮಾಪನ ಮಾಡುತ್ತ ನಮ್ಮ ನಿರ್ಧಾರ ಶಕ್ತಿಯನ್ನು ಹೆಚ್ಚಿಸುತ್ತದೆ. ಬನ್ನಿ ಕೆಳಗಿನವುಗಳಿಗೆ ಉತ್ತರಿಸುತ್ತಾ  SWOT Analysis ಮಾಡೋಣ. 
ನಮ್ಮ ಸಾಮಥ್ರ್ಯಗಳು
ನಮ್ಮ ದೌರ್ಬಲ್ಯಗಳು
ನಮ್ಮ ಅವಕಾಶಗಳು
ನಮ್ಮ ಅಡತಡೆಗಳು

-0--0--0--0--0--0-

Saturday, 21 December 2019

ಸುಖ ದು:ಖ


ಖಲೀಲ್ ಗಿಬ್ರಾನ್ನರ ಸುಖ ದು:ಖ ಬಗೆಗಿನ ಚಿಂತನೆಗಳನ್ನು ಪ್ರಭುಶಂಕರವರು ಅರ್ಥಪೂರ್ಣವಾಗಿ ಭಾವಾನುವಾದಿಸಿದ್ದಾರೆ. ಖಲೀಲ್ ಗಿಬ್ರಾನ್ರವರ ಸಾಲುಗಳನ್ನು ಓದುತ್ತಾ ಮೌನಕ್ಕೆ ಜಾರಿಕೊಳ್ಳೋಣ… 

ಒಂದು ಧ್ವನಿ ತನಗೆ ರೆಕ್ಕೆಗಳನ್ನು ನೀಡದ ತುಟಿ ನಾಲಿಗೆಗಳನ್ನು ತನ್ನೊಂದಿಗೆ ಒಯ್ಯಲಾರದು. ಏಕಾಂಗಿಯಾಗಿ ಅದು ಅಕಾಶವನ್ನು ಅರಸಬೇಕು. ಹಾಗೆಯೇ ಹದ್ದು, ತನ್ನ ಗೂಡನ್ನು ಒಯ್ಯದೆ ಏಕಾಂಗಿಯಾಗಿ ಸೂರ್ಯನನ್ನು ದಾಟಿ ಹಾರಬೇಕು. ನಿನ್ನ ಸುಖ,ಮುಖವಾಡ ಸರಿದ ನಿನ್ನ ದುಃಖವೇ. ಯಾವ ಬಾವಿಯಿಂದ ನಗೆ ಬುಗ್ಗೆಯುಕ್ಕುತ್ತಿದೆಯೋ ಅದೇ ಅನೇಕ ಸಲ ನಿನ್ನ ಕಂಬನಿಗಳಿಂದ ತುಂಬಿತ್ತು. ಬೇರೆ ಹೇಗಾಗಲು ತಾನೆ ಸಾಧ್ಯ? ನಿನ್ನ ಚೇತನದ ಆಳವನ್ನು ದುಃಖಕೊರೆಕೊರೆದಷ್ಟೂ ಸುಖವನ್ನು ಅದು ತುಂಬಿಕೊಳ್ಳಬಲ್ಲುದು. ನಿನ್ನ ಮಧುವನ್ನು ತಳೆದಿರುವ ಬಟ್ಟಲೇ ಅಲ್ಲವೆ ಕುಂಬಾರನ ಒಲೆಯಲ್ಲಿ ಬೆಂದದ್ದು? ನಿನ್ನ ಆತ್ಮವನ್ನು ಸಾಂತ್ವನಗೊಳುಸುತ್ತಿರುವ ಕೊಳಲನ್ನೇ ಅಲ್ಲವೆ ಚಾಕು ಕೊರೆದು ಕೊರೆದದ್ದು? ನೀವು ಸಂತೋಷಭರಿತರಾಗಿರುವಾಗ ನಿಮ್ಮ ಹೃದಯದಾಳವನ್ನು ನೋಡಿ; ಆಗ ನಿಮಗೆ ತಿಳಿಯುತ್ತದೆ, ಯಾವುದು ನಿಮಗೆ ದುಃಖವನ್ನು ನೀಡಿತ್ತೋ ಅದೇ ಆನಂದವನ್ನು ನೀಡುತ್ತಿದೆ. ನೀವು ದುಃಖಿತರಾಗಿರುವಾಗ, ಮತ್ತೆ ನೀವು ಹೃದಯವನ್ನು ಹುಡುಕಿ ನೋಡಿ ಇಂದು ನಿಮ್ಮ ದುಃಖದ ಕಾರಣವಾಗಿರುವುದು ಒಮ್ಮೆ ನಿಮ್ಮ ಆನಂದದ ಕಾರಣವೂ ಆಗಿತ್ತು. ನಿಮ್ಮಲ್ಲಿ ಕೆಲವರು ಹೇಳುತ್ತೀರಿ ದುಃಖಕ್ಕಿಂತ ಸುಖ ಹೆಚ್ಚು ಮತ್ತೆ ಕೆಲವರು ಹೇಳುತ್ತೀರಿ ಇಲ್ಲ ದುಃಖವೇ ಹೆಚ್ಚಿನದು’. ಆದರೆ ನಾನು ಹೇಳುತ್ತೇನೆ ಅವೆರಡನ್ನೂ ಬೇರ್ಪಡಿಸಲಾಗದು. ಅವು ಒಟ್ಟಾಗಿಯೇ ಬರುತ್ತವೆ. ನೆನಪಿಡಿ. ಒಂದು ನಿಮ್ಮೊಡನೆ ಊಟಕ್ಕೆ ಕುಳಿತಿರುವಾಗ ಮತ್ತೊಂದು ನಿಮ್ಮ ಹಾಸಿಗೆಯ ಮೇಲೆ ನಿದ್ರಿಸುತ್ತಿರುತ್ತದೆ…. 

· ಅನು 

ಭವಿಷ್ಯಕ್ಕಾಗಿ ಶುಕ್ರವಾರ

ಗ್ರೆಟಾ ಥನ್ಬರ್ಗ್ 16 ವಯಸ್ಸಿನ ಯುವ ಪರಿಸರವಾದಿ ಹೆಣ್ಣುಮಗಳು. ಇತ್ತೀಚಿಗೆ ನಡೆದ ವಿಶ್ವಸಂಸ್ಥೆ ಹವಾಮಾನ ಶೃಂಗದಲ್ಲಿ ವಿಶ್ವ ನಾಯಕರನ್ನೇ ತರಾಟೆಗೆ ತೆಗೆದುಕೊಂಡಿದ್ದ ಸ್ವೀಡನ್ ದೇಶದ ಈ ಯುವ ಪರಿಸರ ಹೋರಾಟಗಾರ್ತಿ ಇತರ ಹದಿನೈದು ಮಕ್ಕಳ ಜೊತೆಗೂಡಿ; ವಿಶ್ವದ ಐದು ಶ್ರೀಮಂತ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಹವಾಮಾನ ವೈಪರೀತ್ಯ ತಡೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿದಳು. 

''ಹವಾಮಾನ ವೈಪರೀತ್ಯದಿಂದ ಜನರು ನರಳುತ್ತಾ ಸಾಯುತ್ತಿದ್ದಾರೆ. ನಿಮ್ಮ ಸುಳ್ಳಿನ ಭರವಸೆಗಳ ಮೂಲಕ ನಮ್ಮ ಕನಸುಗಳು ಹಾಗೂ ಬಾಲ್ಯವನ್ನು ಕಸಿದುಕೊಂಡಿದ್ದೀರಿ, ಆದರೂ, ನಾನು ಅದೃಷ್ಟಶಾಲಿಗಳಲ್ಲಿ ಒಬ್ಬಳು'' ಎಂದು ಹೇಳುವ ಮೂಲಕ ವಿಶ್ವದ ನಾಯಕರ ವಿರುದ್ಧ ಗ್ರೆಟಾ ಥನ್ಬರ್ಗ್ ಕಿಡಿಕಾರಿದಳು. 

ಪ್ರತಿ ಶುಕ್ರವಾರ ಶಾಲೆಗೆ ಹೋಗದೆ ಸ್ವೀಡಿಷ್ ಸಂಸತ್ತಿನ ಹೊರಗೆ ನಿಂತು ಬಲವಾದ ಹವಾಮಾನ ಕಾಯಿದೆಗಾಗಿ ಒತ್ತಾಯಿಸುತ್ತಿದ್ದಳಂತೆ. 

ವಿಶ್ವಸಂಸ್ಥೆಯಲ್ಲಿ ಜಾಗತಿಕ ತಾಪಮಾನ ವೈಪರೀತ್ಯ ಕುರಿತ ಸಮ್ಮೇಳನ ನಡೆಯುವುದಕ್ಕೂ ಮೊದಲು ಇಂಡಿಯಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗಳಿಂದ ಸ್ಪೂರ್ತಿ ಪಡೆದು ಅವಳ ಮುಂದಾಳತ್ವದಲ್ಲಿ ಪ್ರತಿಭಟಿಸಿದನ್ನು ಕಂಡ ಜಗತ್ತು ಹಲವಾರು ಪ್ರಶಸ್ತಿಗಳನ್ನು ಕೊಟ್ಟು ಗ್ರೆಟಾಳನ್ನು ಗೌರವಿಸುತ್ತಿದೆ. 

· ಅನು 

Wednesday, 9 October 2019

ಏಳು ಸಲವಲ್ಲ ಏಳೆಪ್ಪತ್ತು ಸಲ ಕ್ಷಮಿಸಬೇಕು”


· ಅನು



ಸಂವಾದ ಶುರುವಾಗುವುದೇ ಒಂದು ಪ್ರಶ್ನೆಯಿಂದ. ಅದು ಶಿಷ್ಯರಲೇ ಪ್ರಮುಖನಾಗಿದ್ದ ಪೇತ್ರನ ಕ್ಷಮಾಪಣೆಯ ಲೆಕ್ಕಚಾರದ ಗೊಂದಲದಲ್ಲಿ ಮೂರ್ತಗೊಂಡ ಪ್ರಶ್ನೆಯಿಂದ. ಅ ಪ್ರಶ್ನೆಗೆ ಉತ್ತರವಾಗಿ ಬಂದಿದ್ದು “ಏಳು ಸಲವಲ್ಲ ಏಳೆಪ್ಪತ್ತು ಸಲ ಕ್ಷಮಿಸಬೇಕು” ಎಂಬ ಕ್ರಿಸ್ತನ ಮಾತು. ಅದನ್ನು ಸ್ಪಷ್ಟಪಡಿಸಲು ಹೇಳಿದ ಒಂದು ಸ್ವಾರಸ್ಯಕರ ಸಾಮತಿ. ಈ ಪ್ರಶ್ನೆಗಳ ಕೆಲಸವೇ ಅದು. ಹೊಸ ಹೊಸ ಅವಿಷ್ಕಾರಗಳಿಗೆ, ಅರ್ಥಗಳ ಹೆರಿಗೆಗಳಿಗೆ ಭೂಮಿಕೆಯಾಗುವಂತೆ ಇಲ್ಲೂ ಶಿಷ್ಯನ ಪ್ರಶ್ನೆಯು ಕ್ಷಮಾಪಣೆಯ ಒಂದು ಗಂಭೀರ ವ್ಯಾಖ್ಯಾನಕ್ಕೆ ಮುನ್ನುಡಿಯಾಗುತ್ತದೆ. “ಸ್ವಾಮಿ ನನ್ನ ವಿರುದ್ಧ ದ್ರೋಹ ಮಾಡುತ್ತಿರುವ ನನ್ನ ಸಹೋದರರನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?” ಈ ಪ್ರಶ್ನೆಗೆ ಉತ್ತರವಾಗಿ ಕ್ಷಮಾಪಣೆ ಎಂಬ ಒಂದು ಸಾಮತಿ ಕ್ರಿಸ್ತನ ಬತ್ತಳಿಕೆಯಿಂದ ಅನಾವರಣಗೊಳ್ಳುತ್ತಾ ಕ್ಷಮಾಪಣೆಯ ಹತ್ತಾರು ಸ್ತರಗಳನ್ನು ಬಿಚ್ಚುತ್ತಾ ಹೋಗುತ್ತದೆ. 

“ಸ್ವಾಮಿ ನನ್ನ ವಿರುದ್ಧ ದ್ರೋಹ ಮಾಡುತ್ತಿರುವ ನನ್ನ ಸಹೋದರರನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?” ಪೇತ್ರನ ಪ್ರಶ್ನೆಯನ್ನು ಮತ್ತೊಮ್ಮೆ ಓದಿ ನೋಡಿ! ಯೇಸುವಿನ ಉದಾರತೆ ಮತ್ತು ಉನ್ನತ ಮಟ್ಟದ ಮೌಲ್ಯಗಳ ಬಗ್ಗೆ ಅರಿವಿದ್ದ ಪೇತ್ರ ಯೆಹೊದ್ಯ ಗುರುಗಳು ಪ್ರತಿಪಾದಿಸಿದ ’ಮೂರು ಭಾರಿಯ ಕ್ಷಮಾಪಣೆ”ಯನ್ನು ಎರಡರಿಂದ ಗುಣಿಸಿ. ಉತ್ತರಕ್ಕೆ ಮತ್ತೊಂದು ಸೇರಿಸಿ ಏಳು ಸಲವೆಂದು ಉತ್ತರದಲ್ಲೇ ಲೆಕ್ಕದ ಪ್ರಶ್ನೆಯನ್ನು ಕ್ರಿಸ್ತನ ಮುಂದಿಡುತ್ತಾನೆ, ಇಲ್ಲಿ ಪೇತ್ರನಿಗೆ ತಪ್ಪು ಮಾಡಿದವರನ್ನು ಕ್ಷಮಿಸಬೇಕೆಂಬ ಅರಿವಿನ ಬಗ್ಗೆ ಎಳ್ಳಷ್ಟೂ ಸಂಶಯವಿರಲಿಲ್ಲ, ಅವನಿಗೆ ಸಮಸ್ಯೆಯಾಗಿ ಕಾಡಿದ್ದು ಕ್ಷಮಿಸುವುದು ಎಷ್ಟು ಸಲ ಎಂಬ ಲೆಕ್ಕಚಾರ. ಪ್ರೇತ್ರನ ಈ ಗೊಂದಲಕ್ಕೆ ಕಾರಣಗಳೇನಿರಬಹುದು? 

ಲೆಕ್ಕಚಾರವೆಂಬುದು ಯೆಹೊದ್ಯರ ಬದುಕಿನಲ್ಲಿ ಅದರಲ್ಲೂ ಅವರ ಧಾರ್ಮಿಕತೆಯಲ್ಲಿ ಹಾಸುಹೊಕ್ಕಾಗಿತ್ತು. ದಿನಕ್ಕೆ ಎಷ್ಟುಸಲ ಪ್ರಾರ್ಥಿಸಬೇಕು? ಊಟದ ಮುಂಚೆ ಎಷ್ಟು ಸಲ ಕೈತೊಳೆದುಕೊಳ್ಳಬೇಕು? ಹೀಗೆ ಅವರಲ್ಲಿ ಪ್ರತಿಯೊಂದಕ್ಕೂ ಲೆಕ್ಕಚಾರವಿರುತಿತ್ತು. ಅವರ ಬದುಕೇ ಲೆಕ್ಕಚಾರವಾಗಿತ್ತು ಎಂದರೆ ಅತಿಶೋಕ್ತಿಯಾಗಲಾರದು. ಇಂತಹ ಅವರ ಒಂದು ಮನೋವ್ಯಾಧಿ ಕ್ಷಮಾಪಣೆ ಎಂಬ ಉದಾತ್ತ ಗುಣವನ್ನು ಸಹ ಬೆಂಬಿಡದೆ ಕಾಡುವುದನ್ನು ನಾವು ಇಲ್ಲಿ ಕಾಣುತ್ತೇವೆ. ಹೌದು, ಯೆಹೂದ್ಯರಿಗೆ ಕ್ಷಮಾಪಣೆ ಎಂಬುದು ಮೂರು ಸಲ ಮಾತ್ರ ನೀಡಬಹುದಾಗಿದ್ದ ಒಂದು ವಿಧಿವಿಧಾನವಾಗಿತ್ತು. ಇದು ಧಾರ್ಮಿಕ ಮುಖಂಡರು ಬೋಧಿಸುತ್ತಿದ್ದ: ಒಬ್ಬನು ಇನ್ನೊಬ್ಬನನ್ನು ಮೂರು ಬಾರಿಗಿಂತ ಹೆಚ್ಚು ಸಲ ಕ್ಷಮಿಸಬಾರದು” ಎಂಬ ತತ್ವದ ಬೇರಿನ ಗಿಡವಾಗಿತ್ತು. ಇದೇ ಒಂದು ಸಂಕುಚಿತತೆಯ ತಕ್ಕಡಿಯಲ್ಲಿ ಯೆಹೂದ್ಯರು ಭಗವಂತನ ಕ್ಷಮಾಗುಣವನ್ನು ಅಳೆಯುತ್ತಿದ್ದರು. ಈ ಕಾರಣದಿಂದ ಭಗವಂತ ಕೇವಲ ಮೂರು ಸಲ ಕ್ಷಮಿಸಿ ನಾಲ್ಕನೇಯ ಭಾರಿಗೆ ತಪ್ಪಿಸ್ಥನನ್ನು ಶಿಕ್ಷಿಸುವ ನಿಷ್ಠುರ ನ್ಯಾಯಾಧೀಶ ಎಂಬ ಅಲ್ಪ ಅಭಿಪ್ರಾಯ ಜನರಲ್ಲಿ ಗಾಢವಾಗಿತ್ತು. 

ಇಂತಹ ಹಿನ್ನೆಲೆಯಿಂದ ಬಂದಿದ್ದ ಯೆಹೂದಿ ಪೇತ್ರನಿಗೆ ಕಾಡಿದ್ದು ಈ ಲೆಕ್ಕದ ವಿಚಾರವೇ. ಆದರೆ ಯೇಸು ಅವನ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿ, ಏಳು ಸಲವಲ್ಲ ಏಳೆಪ್ಪತ್ತುಸಲ ಕ್ಷಮಿಸಬೇಕೆಂದು ಹೇಳುತ್ತಾರೆ. ಅದರರ್ಥ ಕ್ಷಮೆಯೆಂಬುದು ಗಣಿತದ ಲೆಕ್ಕವಲ್ಲ, ಅದು ಲೆಕ್ಕ ಇಟ್ಟಷ್ಟೂ ಲೆಕ್ಕಕ್ಕೆ ಸಿಗದ ಅಂತಃಕರಣದ ನಡೆ ಎಂದು. ಆದುದರಿಂದ ಕ್ಷಮಾಪಣೆ ಎಂಬುದು ಲೆಕ್ಕಗಳಿಂದ ಬಂಧಿಸಲ್ಪಡುವಂತದಲ್ಲ. ಅದು ಪ್ರತಿಯೊಬ್ಬ ಆತ್ಮದ ಅಪರಿಮಿತ ಚೈತನ್ಯವಾಗಿರಬೇಕೆಂಬುದೇ ಕ್ರಿಸ್ತನ ಆಶಯ. 

ಇವಿಷ್ಟು ಕ್ಷಮಿಸುವ ಲೆಕ್ಕಚಾರವಾದರ, ಇನ್ನೊಂದು ಕಡೆ, ನಮ್ಮ ಕ್ಷಮೆ ಯಾವ ರೀತಿದಾಗಿರಬೇಕು ಎಂಬುವುದನ್ನು ಸಹ ಕ್ರಿಸ್ತನ ಮಾತುಗಳು ಬಹಿರಂಗಪಡಿಸುತ್ತವೆ. ಬೈಬಲ್‍ನಲ್ಲಿ ಏಳು ಎಂಬುದು, ಸಂಪೂರ್ಣತೆಯನ್ನು ಸಂಕೇತಿಸುವ ಒಂದು ಸಂಖ್ಯೆ. ಆದ್ದರಿಂದ ಯೇಸುವಿನ ಉದಾರತೆಯ ಉತ್ತರದಲ್ಲಿ ಕಾಣಸಿಗುವ ಏಳು, ನಾವು ಸಹ ದೇವರಂತೆ ನಮ್ಮವರನ್ನು ಸಂಪೂರ್ಣವಾಗಿ, ಮನಃಪೂರ್ವಕವಾಗಿ ಯಾವುದೇ ಶರತ್ತುಗಳಿಲ್ಲದೆ ಕ್ಷಮಿಸಬೇಕೆಂಬ ಪೂರ್ಣತೆಯ ರೂಪಕವಾಗಿದೆ. ಇಲ್ಲಿ ಎಷ್ಟು ಬಾರಿ ಕ್ಷಮಿಸಿದ್ದೇನೆ ಎಂಬುವುದರ ಜತೆಗೆ ನಿರಂತರವಾಗಿ, ನಿಯಮಗಳನ್ನು ಮೆಟ್ಟಿ, ಶರತ್ತುಗಳಿಲ್ಲದೆ ಸಂಪೂರ್ಣವಾಗಿ ಕ್ಷಮಿಸಬೇಕೆಂಬುವುದೇ ಕ್ರಿಸ್ತನ ಉತ್ತರದ ಒಳಾರ್ಥ. 

ಕ್ರಿಸ್ತ, ತನ್ನ ಮಾತನು ಸ್ಪಷ್ಟಪಡಿಸಲು ಅಥವಾ ಗಟ್ಟಿಗೊಳಿಸಲು ಒಂದು ಕಥೆಯ ಮರೆಹೊಗುತ್ತಾನೆ. ಈ ಸಾಮತಿಯು ಸ್ವರ್ಗರಾಜ್ಯದಲ್ಲಿ ಕ್ಷಮೆಯೆಂಬ ಅದಮ್ಯ ಚೇತನದ ಪೂರ್ಣ ಸ್ವರೂಪವನ್ನು ಅಭಿವ್ಯಕ್ತಿಗೊಳಿಸುತ್ತದೆ. 

ಕ್ರಿಸ್ತ ಹೇಳಿದ ಸಾಮತಿಯಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶ, ಸೇವಕರ ಸಾಲಗಳ ನಡುವೆಯಿದ್ದ ವ್ಯತಿರಿಕ್ತವಾದ ಅಂತರ. ಈ ಅಂತರವನ್ನು ಸಾಲಗಾರರ ಸಾಲದ ಒಟ್ಟು ಮೊತ್ತಗಳು ನಮಗೆ ಸ್ಪಷ್ಟವಾಗಿ ಬಹಿರಂಗ ಪಡಿಸುತ್ತವೆ. ಸೇವಕ ರಾಜನಿಂದ 10,000 ತಲೆಂತುಗಳನ್ನು ಸಾಲವಾಗಿ ಪಡೆದಿದ್ದರೆ, ಅವನ ಜೊತೆಗಾರ ಆಳು, ಕೇವಲ 100 ದಿನಾರಿ ನಾಣ್ಯಗಳನ್ನು ಆ ಸೇವಕನಿಂದ ಸಾಲ ಪಡೆದಿರುತ್ತಾನೆ. ಈಗಿನ ವಿನಿಮಯದ ಲೆಕ್ಕದಲ್ಲಿ 10,000 ತಲೆಂತುಗಳು 9 ಮಿಲಿಯನ್ ಡಾಲರಗಳಿಗೆ ಸಮಾನವಾದರೆ, 100 ದಿನಾರಿ ಕೇವಲ 15 ಡಾಲರ್ಗಳಿಗೆ ಸರಿಸಮನಾಗಿವೆ. 10000*600=60000000 ದಿನಾರಿಗಳಷ್ಟು ತೀರಿಸಲಾಗದಂತಹ ಬಹೃತ್ ಮೊತ್ತದ ಸಾಲ ಮಾಡಿದ್ದ ಆ ಸೇವಕ. ಯೆಹೂದ್ಯ ಇತಿಹಾಸ ಬರಹಗಾರನಾದ ಯೋಸೆಫಸ್ಸನ ಪ್ರಕಾರ ಯೆಹೂದ್ಯರು ಸಲ್ಲಿಸುತ್ತಿದ್ದ ವಿವಿಧ ತೆರಿಗೆಗಳ ಮುಖಾಂತರ ಒಂದು ಇಡೀ ವರ್ಷಕ್ಕೆ ರಾಜನ ಖಜಾನೆಗೆ ಅಥವಾ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ 600 ತಲೆಂತುಗಳು ಮಾತ್ರ. ರಾಜನ ಬೊಕ್ಕಸಕೆ ಬರುತ್ತಿದ್ದ ಆದಾಯ ಮತ್ತು ಸೇವಕನ ಸಾಲವನ್ನು ಒಮ್ಮೆ ತಾಳೆ ಮಾಡಿ ನೋಡಿ. ಆ ಸೇವಕ ತನ್ನ ಜೀವಮಾನಾವಧಿಯಲ್ಲಿ ಹಿಂತಿರುಗಿಸಲಾಗದಂತಹ ಸಾಲವನ್ನು ಮಾಡಿದ್ದ ಎಂದು. ರಾಜನು ಸೇವಕನ 9 ಮಿಲಿಯನ್ ಡಾಲರುಗಳಿಗೆ ಸಮಾನವಾದ, ಊಹಿಸದಷ್ಟು ನಂಬಲಾಗದಷ್ಟು ಬೆಟ್ಟದಾಕಾರದ ಸಾಲವನ್ನು ಮನ್ನಿಸಿದರೂ ಆ ಸೇವಕ ಜೊತೆ ಸೇವಕನ 100 ದಿನಾರಿ ನಾಣ್ಯಗಳು- ಮೊದಲನೆಯ ಸೇವಕನ ಬೆಟ್ಟದಂತಹ ಸಾಲಕ್ಕೆ ಒಂದು ಚಿಕ್ಕ ಕಣದಂತಹ ಸಾಲ- ಆನೆ ಗಾತ್ರದ ಸಾಲದ ಮುಂದೆ ಸಣ್ಣ ಇರುವೆಷ್ಟು ಸಾಲವನ್ನು ಮನ್ನಿಸುವುದಿಲ್ಲ. ದೇವರು ನಮ್ಮ ಅಸಂಖ್ಯ ಪಾಪಗಳನ್ನು ಮನ್ನಿಸಿದರೂ ನಮ್ಮ ಸಹೋದರರ ಕೆಲವೊಂದು ಪಾಪಗಳನ್ನು ಕ್ಷಮಿಸಲು ನಾವು ಹಿಂದು ಮುಂದು ನೋಡುತ್ತೇವೆ. 

ಕ್ಷಮೆ ಎಂಬ ಮೌಲ್ಯ ನಮ್ಮಲ್ಲಿ ಗರ್ಭಕಟ್ಟಿಕೊಳ್ಳಲಿ. ಆ ಕ್ಷಮೆ ಎಂಬ ಮೌಲ್ಯವನ್ನು ನಾವು ಲೆಕ್ಕಗಳಲ್ಲಿ ಬಂಧಿಸದೆ ಲೆಕ್ಕವಿಲ್ಲದಷ್ಟು ಸಲ ಕ್ಷಮಿಸುವ ಮನೋಭಾವ ನಮ್ಮಲ್ಲಿ ಹುಟ್ಟಿಕೊಳ್ಳಲಿ. ಇತರರಿಗೆ ದಯೆ, ಕ್ಷಮೆ, ಕರುಣೆ ತೋರಿಸುವವರಿಗೆ ದೇವರು ದಯೆ ಕ್ಷಮೆ ಕರುಣೆಯನ್ನು ತೋರಿಸುತ್ತಾರೆ ಎಂಬುದು ಈ ಸಾಮತಿಯ ಸಂದೇಶ. ದೇವರ ಕ್ಷಮಾಗುಣವನ್ನು ಧರ್ಮಸಭೆಯ ಪ್ರತಿಯೊಬ್ಬ ವಿಶ್ವಾಸಿಗಳು ಕಲಿಯಬೇಕು. ನಮಗೆ ಉತ್ತಮ ಉದಾಹರಣೆ ಶಿಲುಬೆ ಮೇಲೆ ನೇತಾಡುತ್ತಿರುವಾಗ ಕ್ರಿಸ್ತ ತೋರಿದ ಅನುಪಮ ಕ್ಷಮೆ. 


******************* 

Friday, 6 September 2019

ದನಿ ರೂಪಕ

ಪೂರ್ವಗ್ರಹ ಪೀಡಿತರಾದವರಿಗೆ ಸತ್ಯದ ದರ್ಶನ ಎಂದಿಗೂ ಸಾಧ್ಯವಿಲ್ಲ 

ಅವರ ಮನಸ್ಸು ಏಕಮುಖವಾಗಿ ಸಂಚರಿಸುತ್ತಲೇ ಇರುತ್ತದೆ. ಅವರಿಗೆ ಸಿಗುವುದು ಅರ್ಧಸತ್ಯ ಮಾತ್ರ ಎಂಬುದನ್ನು ನಿರೂಪಿಸಲು ಓಶೋ ತನ್ನ ಶಿಷ್ಯರಿಗೆ ಮುಲ್ಲಾ ನಸ್ರುದ್ದೀನನ ಪ್ರಸಂಗವನ್ನು ವಿವರಿಸಿದ್ದಾರೆ. 

ಒಮ್ಮೆ ಗೌರವಾನ್ವಿತ ನ್ಯಾಯಾಧೀಶನಾದ ಮುಲ್ಲಾ ನಸ್ರುದ್ದೀನ್ ತನ್ನ ಮೊದಲ ಮೊಕದ್ದಮೆಯ ತೀರ್ಪು ನೀಡಲು ಸಜ್ಜಾಗಿ ನ್ಯಾಯಪೀಠವನ್ನು ಅಲಂಕರಿಸಿ ಕೂತಿದ್ದ. ಒಂದು ಕಡೆ ಫಿರ್ಯಾದುಗಳ ವಾದವನ್ನು ಆಸಕ್ತಿಯಿಂದ ತುಂಬಾ ಏಕಾಗ್ರತೆಯಿಂದ ಆಲಿಸಿದ ನಸ್ರುದ್ದೀನ್, ಕೋರ್ಟಿನಲ್ಲಿ ನೆರದಿದ್ದವರನ್ನು ಉದ್ದೇಶಿಸಿ ಇಂತೆಂದನು: "ಇನ್ನು ಐದು ನಿಮಿಷಗಳಲ್ಲಿ ನಾನು ಈ ಕೇಸಿಗೆ ಸಮರ್ಪಕವಾದ ತೀರ್ಪನ್ನು ನೀಡುತ್ತೇನೆ" 

ಆದರೆ, ಮುಲ್ಲಾನ ಈ ಮಾತುಗಳನ್ನು ಕೇಳಿ ಕೋರ್ಟ್ ಆವರಣದಲ್ಲಿ ಗುಸುಗುಸು ಶುರುವಾಯಿತು. ಕೊಂಚ ಧೈರ್ಯ ಮಾಡಿದ ಕ್ಲರ್ಕ್ ಒಬ್ಬ ಮುಲ್ಲಾನಿಗೆ ಕಿವಿಯಲ್ಲಿ ಈ ರೀತಿ ಪಿಸುಗುಟ್ಟಿದ "ಇದೇನು ಮಾಡುತ್ತಿದ್ದೀರಿ ಮಹಾಸ್ವಾಮಿ? ಇನ್ನೊಂದು ಪಕ್ಷದವರ ವಾದವನ್ನು ಕೇಳದೆ ತೀರ್ಪು ನೀಡಲು ಹೇಗೆ ಸಾಧ್ಯ?" 

ಅದಕ್ಕೆ ಉತ್ತರಿಸಿದ ಮುಲ್ಲಾ "ಈಗ ನನ್ನನ್ನು ಗೊಂದಲಕ್ಕೆ ದೂಡಬೇಡ. ನನ್ನ ಮನಸ್ಸು ತೀರ್ಪನ್ನು ಯೋಚಿಸಿ ಆಗಿದೆ. ಘೋಷಿಸುವುದೊಂದೇ ಬಾಕಿ. ನಾನು ಇನ್ನೊಂದು ಪಾರ್ಟಿಯ ವಾದ ಕೇಳಿದರೆ, ಮತ್ತೆ ಮನಸ್ಸಿನಲ್ಲಿ ಗೊಂದಲವುಂಟಾಗುತ್ತದೆ!" ಗೊಂದಲದಲ್ಲಿ ಇರುವ ಮನಸ್ಸು ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದುಬಿಟ್ಟನು. 


ಶಾಂತಿಯೋಧ 

ಡಾನ್ ಮಿಲ್ ಮನ್ ಒಬ್ಬ ಕಾಲೇಜು ವಿದ್ಯಾರ್ಥಿ. ಅವನು ಸ್ಥಳೀಯವಾಗಿ ಪ್ರಸಿದ್ಧನಾಗಿರುವ ಜಿಮ್ನಾಸ್ಟ್ ಕೂಡ ಆಗಿರುತ್ತಾನೆ. ಅವನಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಕನಸಿರುತ್ತದೆ. ಆದರೆ ಅವನನ್ನು ಅವಿಶ್ರಾಂತ ಸ್ಥಿತಿ (restlessness)ಕಾಡುತ್ತಿರುತ್ತದೆ. ಅದರಿಂದ ಹೊರಬರಲು ಅವನು ಸೂರ್ಯೋದಯಕ್ಕೆ ಮೊದಲು ಓಡುವ ಅಭ್ಯಾಸ ಇಟ್ಟುಕೊಂಡಿರುತ್ತಾನೆ. ಹಾಗೆ ಓಡುತ್ತಿರುವಾಗ ಒಂದು ದಿನ ಒಬ್ಬ ವೃದ್ಧ (ಸಾಕ್ರಟೀಸ್) ಅವನಿಗೆ ಎದುರಾಗುತ್ತಾನೆ. ಡಾನನ ಸಮಸ್ಯೆಯ ಬಗ್ಗೆ ಸ್ವತಃ ಡಾನನಿಗೆ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿ ಅವನಿಗೆ ತಿಳಿದಿರುವಂತೆ ತೋರುತ್ತದೆ! ಸಾಕ್ರಟೀಸ್ ಒಬ್ಬ ಮಾರ್ಗದರ್ಶಿಯಾಗಿ,ಡಾನನಿಗೆ ಅನೇಕ ಕೆಲಸ (task)ಗಳನ್ನು ಕೊಟ್ಟು,ತಿಳಿಹೇಳುತ್ತಾ ಅವನಲ್ಲಿದ್ದ ದೌರ್ಬಲ್ಯಗಳನ್ನು ನಿವಾರಿಸಲು ಪ್ರಯತ್ನಿಸುತ್ತಾನೆ. . . ಅವನಿಗೆ ಪ್ರತಿ ಕ್ಷಣದ ಮಹತ್ವವನ್ನು ಅರಿಯುವುದನ್ನು ಕಲಿಸುತ್ತಾನೆ. ಗುರಿಗಿಂತಲೂ ಕ್ರಮಿಸುವ ಮಾರ್ಗ ಪ್ರಮುಖವಾದುದು ಎನ್ನುವ ಮಹತ್ವವನ್ನು ಡಾನ್ ಅನ್ನು ಒಂದು ಬೆಟ್ಟದ ಮೇಲಕ್ಕೆ ಕರೆದುಕೊಂಡು ಹೋಗುತ್ತಾ ಮನವರಿಕೆ ಮಾಡುತ್ತಾನೆ. . . . ಈ ನಡುವೆ ಒಂದು ಅಪಘಾತದಲ್ಲಿ ಡಾನನ ಬಲಗಾಲಿನ ಮೂಳೆ ಮುರಿದು ಅವನು ಜಿಮ್ನಾಸ್ಟಿಕ್ ಅಭ್ಯಾಸದಿಂದ ಹೊರಬರಬೇಕಾದ ಸನ್ನಿವೇಶ ಎದುರಾಗುತ್ತದೆ. ಆದರೂ ಸಾಕ್ರಟೀಸನ ಮಾರ್ಗದರ್ಶನದಲ್ಲಿ ಸತತ ಪ್ರಯತ್ನದಿಂದ ಅರ್ಹತೆಯನ್ನು ಪಡೆದು ಒಲಂಪಿಕ್ ಟ್ರಯಲ್‍ನಲ್ಲಿ ಆಯ್ಕೆಯಾಗುತ್ತಾನೆ. ಅಂತಿಮ ಸ್ಪರ್ಧೆಯ ಮೊದಲು ಸಾಕ್ರಟೀಸ್ ಡಾನನಿಗೆ ಎಲ್ಲಿಯೂ ಸಿಗುವುದಿಲ್ಲ. ಸ್ಪರ್ಧೆಯ ಕಡೆಯ ಸುತ್ತಿನಲ್ಲಿ ಸಾಕ್ರಟೀಸ್ ಅವನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ: 

"ಎಲ್ಲಿದ್ದೀಯಾ ಡಾನ್?" 

"ಈ ಜಾಗದಲ್ಲೇ" 

"ಇದಾವ ಸಮಯ?" 

"ಈ ಸಮಯ" 

"ನೀನಾರು?" 

"ನಾನು ಈ ಕ್ಷಣ" 

ನಂತರ ಡಾನ್ ಜಿಂಕೆಯಂತೆ ನೆಗೆದು ಸತತ ಮೂರು ಹೊರಳುಗಳನ್ನು ಬಲು ಸರಾಗವಾಗಿ ನಿರ್ವಹಿಸಿ ತೀರ್ಪುಗಾರರಿಗೇ ಅಚ್ಚರಿ ಮೂಡಿಸುತ್ತಾನೆ! ಪ್ರೇಕ್ಷಕರೆಲ್ಲ ಹುಚ್ಚೆದ್ದು ಕುಣಿಯುತ್ತಾರೆ. ಡಾನ್ ಇರುವ ತಂಡವು ಮೊದಲ ರಾಷ್ಟ್ರೀಯ ಪದಕವನ್ನು ಪಡೆಯುತ್ತದೆ. 

ಈ ರೂಪಕದಲ್ಲಿ ಬರುವ ಡಾನ್ ಮತ್ತು ಸಾಕ್ರಟೀಸ್ ನಡುವಿನ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿದೆ. ಎಲ್ಲೆಲ್ಲೋ ಅಲೆಯುವ ನಮ್ಮ ಮನಸ್ಸನ್ನು ಇಲ್ಲಿಗೆ, ಈಗ, ಈ ಕ್ಷಣಕ್ಕೆ ಹಿಡಿದು ನಿಲ್ಲಿಸಿದರೆ ಯಾವುದೇ ಸಾಧನೆಯೂ ಕಷ್ಟಕರವಲ್ಲ. ಅದಕ್ಕಾಗಿ ಒಬ್ಬ ಮಾರ್ಗದರ್ಶಕನ ಅವಶ್ಯಕತೆಯಿದೆ. ಅದು ಸದಾ ನಮ್ಮೊಂದಿಗೇ ಇರುವ ನಮ್ಮ ಅಂತರಂಗವೇ ಆದರೆ ಎಷ್ಟು ಚೆನ್ನ! 


· ಅನು 

Saturday, 10 August 2019

ದನಿ ರೂಪಕ


(ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ)



ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...