Because He lives
Because He lives, I can face tomorrow
Because He lives, all fear is gone
Because I know, He holds the future
And life is worth the living, just because He lives.
ಬಿಲ್ ಮತ್ತು ಗ್ಲೋರಿಯ ದಂಪತಿಗಳು ಸಂಯೋಜಿಸಿ ರಚಿಸಿರುವ ಈ ಹಾಡು ಚರ್ಚುಗಳಲ್ಲಿ ಆಗಾಗ ಕೇಳುತ್ತಿರುತ್ತದೆ. 1960ರ ಅಸುಪಾಸಿನಲ್ಲಿ ರಚನೆಗೊಂಡ ಈ ಹಾಡು, ಒಂದು ಕುತೂಹಲಕಾರಿ ಕಥೆಯನ್ನು ಗರ್ಭ ಕಟ್ಟಿಕೊಂಡಿದೆ. ವರ್ಷ 1969. ಚಳಿಗಾಲದ ಸಮಯ. ಮನೆಯಲ್ಲಿ ಗಂಡ ಬಿಲ್‍ನ ಅರೋಗ್ಯ ಕೆಟ್ಟಿದೆ. ಈ ಕಡೆ ಧರ್ಮಕೇಂದ್ರದಲ್ಲಿ ಗ್ಲೋರಿಯ ಬಗ್ಗೆ ಸುಳ್ಳು ಅಪಾದನೆಗಳು ಮುತ್ತಿಕೊಳ್ಳುತ್ತವೆ. ಇವಿಷ್ಟು ವೈಯಕ್ತಿವಾದರೆ, ಹೊರ ಜಗತ್ತಿನಲ್ಲಿ ಬೇರೆ ರೀತಿಯದೇ ಸಮಸ್ಯೆ. God is dead ಎಂಬ ಮನೋಭಾವ ಜನರಲ್ಲಿ ಬೇರೂರಿ ದೇವರನ್ನು ಮರೆತಿದ್ದಾರೆ. ಜೊತೆಗೆ ಜನಾಂಗೀಯ ಗಲಭೆಗಳು ಹೆಚ್ಚುತ್ತಿವೆ. ಮಾದಕವಸ್ತು ಸೇವನೆಯು ಜನರಲ್ಲಿ ಅತಿರೇಕವಾಗಿದೆ. ಇಂತಹ ದುಃಸ್ಥಿತಿಯಲ್ಲಿ ಗ್ಲೋರಿಯಾ ಗರ್ಭಿಣಿಯಾಗಿದ್ದಾಳೆ. ಮುಗ್ಧ ಮಗುವಿನ ನಿರೀಕ್ಷೆಯಲ್ಲಿ ದಂಪತಿಗಳಿದ್ದಾರೆ. ಆದರೆ ಅವರಲ್ಲಿ ಒಂದು ಪ್ರಶ್ನೆ ಕಾಡಲಾರಂಭಿಸುತ್ತದೆ:
ಜಗದ ಈ ದುಃಸ್ಥಿತಿಯಲ್ಲಿ ಮಗುವಿಗೆ ಜನ್ಮಕೊಡುವುದು ಸೂಕ್ತವೇ?
ಪ್ರಶ್ನೆಯು ಅವರ ಮನಸ್ಸುಗಳನ್ನು ಕೊರೆಯುತ್ತಿದೆ. ಇಬ್ಬರೂ ಭರವಸೆಯನ್ನು ಕಳೆದುಕೊಂಡು ಹತಾಶರಾಗಿದ್ದಾರೆ…
ಒಂದು ದಿನ ಬಿಲ್ ನ ತಂದೆ ಮನೆಯ ಕೈತೋಟದಲ್ಲಿ ನಡೆಯುತ್ತಿದ್ದಾಗ…ಒಂದು ಲವಲವಿಕೆಯ ದೃಶ್ಯವನ್ನು ಕಂಡು ಮೂಕವಿಸ್ಮಿತರಾಗುತ್ತಾರೆ. ಮಗ ಮತ್ತು ಸೊಸೆಯನ್ನು ಕರೆದು ಅವರು ಕಂಡಿದ್ದನ್ನು ತೋರಿಸುತ್ತಾರೆ. ಹೌದು.. ಒಂದು ಪುಟ್ಟ ಸಸಿ ಕಾಂಕ್ರೀಟ್ ನಡುವೆ ಪ್ರಯಾಸದಿಂದ ಕಾಂಕ್ರೀಟನ್ನು ಮೀರಿ ಮೊಳಕೆಯೊಡೆಯುತ್ತಿರುವ ದೃಶ್ಯ. ಬದುಕಬೇಕೆಂಬ ಬಲವಾದ ಛಲ ಈ ಪುಟ್ಟ ಗಿಡದಲ್ಲಿ ಕಾಣುತ್ತದೆ
ಈ ಒಂದು ದೃಶ್ಯದಿಂದ ಪ್ರೇರಿತಗೊಂಡ ದಂಪತಿಗಳು Because he lives I can face tomorrow ಎಂಬ ಹಾಡನ್ನು ರಚಿಸುತ್ತಾರೆ.
No comments:
Post a Comment