Friday, 7 June 2019

ದೃಷ್ಟಿಯಲ್ಲಿದೆ ಸೃಷ್ಟಿ

ಪ್ರೀತಿಯ ಅನು.. 
ಹಾರೈಕೆಗಳ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು, ಸುಂದರ ಸುಮಧುರ ಜಗತ್ತಿನ ಚುಂಬನದಲ್ಲಿ ತೇಲಾಡುತ್ತಿರಬಹುದು! ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಊಟದಂತೆ ಸಪ್ಪೆ ಸಪ್ಪೆ, ಆದರೂ ಬದುಕಿಗೆ ಸ್ವಲ್ಪ ಬೇಕಿರುವಷ್ಟು ಪುಡಿ ಉಪ್ಪು ಸೇರಿಸಿ, ಸರಿಪಡಿಸಿ ಬದುಕ ಊಟದ ಸವಿಯನ್ನು ತಿನ್ನುವ ಹಂಬಲ. ಸಾಲವೇನಾದರೂ ನೀನು ಕೂಡುವುದಾದರೆ ನಿನ್ನ ನಗುವನ್ನು ನನಗೆ ಕೊಟ್ಟು, ನನ್ನನ್ನು ನಿನ್ನ ನಗುವಿನ ಸಾಲಗಾರನಾಗಿ ಮಾಡಿಕೂಳ್ಳಬೇಕೆಂದು ಕೇಳಿಕೂಳ್ಳುವ ನನ್ನ ಬಿಳಿಚಿಕೊಂಡ ಮುಖ, ಹೌದು ನಿನಗೆ ಪತ್ರ ಬರೆಯದೆ ಸುಮಾರು ದಿನಗಳಾಯ್ತು. ಅಂದು ನೀನು ಹೇಳಿದ “ದೃಷ್ಟಿಯಲ್ಲಿದೆ ಸೃಷ್ಟಿ” ಎಂಬ ಮಾತು ನನಗೆ ನೆನಪಿಗೆ ಬಂದು ಈ ಪತ್ರವನ್ನು ಬರೆಯಲು ಅನುವು ಮಾಡಿದೆ. 

ನಮ್ಮ ಬದುಕು ತರತರ ಘಟನೆ, ಅನುಭವಗಳನ್ನು ಗರ್ಭಕಟ್ಟಿಕೊಂಡ ಒಂದು ಮೊತ್ತ. ಈ ಘಟನೆಗಳ, ಆನುಭವಗಳ ಸ್ವಭಾವ ನಾವು ಕಾಣುವ ದೃಷ್ಟಿಯ ಮೇಲೆ ಆಧಾರವಾಗಿರುತ್ತದೆ ಎಂದು ನೀನು ನನಗೆ ಹೇಳಿದ್ದು ನೆನಪು ಅನು.... ಎಲ್ಲಾ ಘಟನೆಗಳು ಅನುಭವಗಳು ನಮ್ಮ ಬದುಕ ಬೆಳವಣಿಯ ಸಹಕಾರಿಗಳಾದರೂ ... ನಮ್ಮ ನಕಾರಾತ್ಮಕ ಮನೋಭಾವದಿಂದ, ... ಒಳ್ಳೆತನದಲ್ಲಿ ಕೆಟ್ಟದನ್ನು ಹುಡುಕುತ್ತೇವೆ, ಗೆಲುವಿನಲ್ಲಿ ಸೋಲನ್ನು ಅನುಭವಿಸುತ್ತೇವೆ... ಹೌದು ಅನು ಬದುಕ ತಾಜ್ಯ ಅನುಭವಗಳು, ಘಟನೆಗಳು ... ನಾವು ಕಾಣುವ ದೃಷ್ಟಿಯ ಮೇಲೆ ಆಧಾರವಾಗಿರುತ್ತದೆ. ಮೊನ್ನೆ ಆಂಗ್ಲ ಭಾಷೆಯಲ್ಲಿದ್ದ ಒಂದು ಕವನ ಓದಿದೆ. ನಮ್ಮ ಕಣ್ಣುಗಳನ್ನು ತೆರೆವಷ್ಟು ಅರ್ಥಗರ್ಭಿತವಾದ ಸಾಲುಗಳು.... 

Attitude is everything 

what happens within you 

two forces are at work around you, 

external and internal, 

you have little control over 

external forces such, 

earthquake, distress, sickness and pain. 



What really matters is the internal force 

how do you respond to these disaster? 

Over that you have complete control 

no one on earth can hurt you 

unless you accept the hurt in your own mind 

the problem is not other people, 

its your reaction to them 

you can can not always control 

your circumstances 

but you can control your own thoughts... 

ಹೀಗೆ ನಮ್ಮ ಬದುಕಿನ ಪ್ರತಿಯೊಂದು ಘಟನೆಗಳು.. ಕ್ರಿಯೆಗಳು ... ಅನುಭವಗಳು ನಾವು ನೋಡುವ ದೃಷ್ಟಿಯ ಮೇಲೆ ... ನಾವು ಸ್ವೀಕರಿಸುವ ಮನೋಭಾವ ಮೇಲೆ depend ಆಗಿರುತ್ತದೆ ಅನು ... ನಮ್ಮ attitude positive ಆಗಿದ್ದರೆ.. ನಾವು ಕಸದಿಂದ ರಸ ಕೂಡ ಮಾಡಲು ಸಹ ಸಾಧ್ಯ, ಇಲ್ಲವಾದರೆ ಜೀವನ negative feelings ತುಂಬಿ ತುಳುಕುವ ಒಂದು ಭಾರವಾದ ಹೊರೆಯಾಗುವುದರಲ್ಲಿ ಸಂಶಯವೇ ಇಲ್ಲ... 

ನನ್ನ ಮಾತನ್ನು ಒಂದು ಕತೆಯ ಜೊತೆ ಕೊನೆಗೊಳಿಸುತ್ತೇನೆ. ಡೇವಿಡ್ ಹಾಗೂ ಗೋಲಿಯತ್ ಎಂಬುವುದು ಬೈಬಲನಲ್ಲಿ ಬರುವ ಒಂದು ಸುಂದರ ಹಾಗೂ ಒಳ್ಳೆಯ ಪಾಠವನ್ನು ತಿಳಿಸುವ ಘಟನೆ. ಒಂದು ಹಳ್ಳಿಯಲ್ಲಿ ದೈತ್ಯನೊಬ್ಬನಿದ್ದ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಒಂದು ದಿನ ಆ ಹಳ್ಳಿಗೆ ತನ್ನ ಸಹೋದರನನ್ನ ಭೇಟಿಯಾಗಲು ಬಂದ ಹದಿನೇಳು ವರ್ಷದ ಕುರುಬರ ಹುಡುಗನೊಬ್ಬ “ನೀವೆಲ್ಲ ಏಕೆ ಈ ದೈತ್ಯನ ವಿರುದ್ಧ ಎದ್ದು ನಿಂತು ಹೋರಾಡಬಾರದು?” ಎಂದು ಕೇಳಿದ. ಆತನ ಮಾತು ಕೇಳಿ ಅವರೆಲ್ಲರೂ ತಲ್ಲಣಗೊಂಡರು. ಅತನ ವಿರುದ್ಧ ಹೋರಾಡುವುದೇ? “ಆತನಿಗೆ ಹೊಡೆಯುವುದೇ? ಆತ ಹೊಡೆತಕ್ಕೆ ನಿಲುಕದಷ್ಟು ದೈತನಾಗಿದ್ದಾನೆ” ಎಂದರು. ಆದಕ್ಕೆ ಕುರುಬರ ಹುಡುಗ ಹೇಳಿದ, “ಇಲ್ಲ ಹೊಡೆಯಲಾರದಷ್ಟು ಆತ ಎತ್ತರವಾಗಿಲ್ಲ, ಆದರೆ ಹೊಡೆತ ತಪ್ಪಿಸಿಕೊಳ್ಳದಷ್ಟು ಎತ್ತರವಾಗಿದ್ದಾನೆ ಎಂಬುವುದು ನೆನಪಿರಲಿ.” ಮುಂದಿನದು ಇತಿಹಾಸ. ಆನಂತರ ಆ ಹುಡುಗ ಆ ದೈತ್ಯನನ್ನು ಕವಣೆಯಿಂದ ಸಾಯಿಸಿದ. ಅದೇ ದೈತ್ಯ. ಉಪಾಯ ಮಾತ್ರ ಬೇರೆ. 

ನಿನ್ನ ಪ್ರತಿಯೊಂದು ಬದುಕ ಅನುಭವಗಳು, ಘಟನೆಗಳು .. ನಿನ್ನ ಆಶಾವಾದ ದೃಷ್ಟಿಯಲ್ಲಿ ನಿನಗೆ ಕಾಣಲಿ .. ಎಂದು ಹಾರೈಸುವ 

¨ ಆನಂದ 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...