ಹಾಡೆಂದು ನೀವೆನಗೆ ಹೇಳಿದರೆ ಸಾಕು ಎದೆಯುಬ್ಬುವುದು ಹೆಮ್ಮೆಯಿಂದ
ಸ್ವಾಮಿ ನಿಮ್ಮ ಸಿರಿಮೊಗವ ನೋಡಿದರೆ ಸಾಕು ಕಣ್ದುಂಬುವುದು ಸುಮ್ಮಾನದಿಂದ
ನನ್ನೊಡಲ ಗೊಗ್ಗರುದನಿಯೆಲ್ಲ ಕರಗಿ ನೀರಾಗಿ ಇಂಚರವಾಗುವುದು
ಅನುರಾಗವದು ಕಡಲ ಹಾಯುವಕ್ಕಿಯ ವಿಶಾಲ ರೆಕ್ಕೆಯೊಲು ಚಾಚುವುದು
ನನ್ನ ಹಾಡದು ನಿಮಗೆ ಸುಮಧುರವೆಂದರಿತಿರುವೆ
ಗಾನವಾಡಲೆಂದೇ ನಾ ನಿಮ್ಮ ಸನ್ನಿಧಿಗೆ ಬರುವೆ
ಹಾಡೆಂಬ ವಿಶಾಲ ರೆಕ್ಕೆಯ ಗರಿಯ ಕೊನೆಯಿಂದ
ನಾನೆಂದೂ ಮುಟ್ಟಲಾಗದ ನಿಮ್ಮಡಿಯನೆಟಕುವೆ
ಹಾಡಿ ಅಮಲೇರಿ ನನ್ನನೇ ಮರೆವೆ
ಒಡೆಯ ನಿಮ್ಮನ್ನು ಗೆಳೆಯನೆಂದೇ ಕರೆವೆ
(ರವೀಂದ್ರನಾಥ ಟಾಗೋರ್ ನವರ ಗೀತಾಂಜಲಿ ಯಿಂದ
When thou commandest me to sing
ಪದ್ಯದ ಅನುವಾದ ಸಿ ಮರಿಜೋಸೆಫ್ ನವರಿಂದ)
No comments:
Post a Comment