ಹಸಿರೇ ಉಸಿರಾಗಲಿ
¨ ಎ ಡೇ ಕು
ಮೊಗ್ಗಿನ ಮುಸುಕಿನಲಿ
ಹೂವೊಂದು ಹಿಗ್ಗುವುದು
ಹಣ್ಣೊಳಗಿನ ಬೀಜದಲಿ
ಮರವೊಂದು ಬಿರಿಯುವುದು
ಬೀಜ ಬ್ರಹ್ಮಾಂಡದಲಿ
ಕೋಟಿ ವೃಕ್ಷದ ಸೈನ್ಯ
ಮಣ್ಣ ಪೊರೆಯ ಬಿರಿದು
ಹಸಿರು ಕಣ್ಣ ತೆರೆದು
ಖಗ, ಮೃಗದ ಗೂಡಾಗಿ
ಸೃಷ್ಟಿಯ ಸೊಬಗಾಗಿ
ಕ್ರಿಮಿ ಕೀಟಕೆ ನೆಲೆಯಾಗಿ
ಜೀವಾತ್ಮಕೂ ಸೆಲೆಯಾಗಿ
ಮಣ್ಣೊಡಲು ಬಸಿರಾಗಿ
ವನಸಿರಿಯು ಹೊನಲಾಗಿ
ಎಲೆ ಎಲೆಯ ಲೀಲೆಯಲಿ
ಹಸಿರೆಲ್ಲಾ ಉಸಿರಾಗಿ !
No comments:
Post a Comment