ಹಾಳು ಬಿದ್ದ ಊರಿನೊಳಗೆ
ಹುರಿ ಮೀಸೆಯ ಗೌಡನು
ಕೇಸರಿ ಬಣ್ಣ ರುಮಾಲಿನಲಿ
ಸೋತು - ಗೆದ್ದ ಬಿಗುಮಾನವು !
ಹಸಿರು, ಬಿಳಿ ಬಣ್ಣಗಳ
ನುಂಗುತ್ತಿದೆ ಕೇಸರಿಯು
ರಾಷ್ಟ ಭಕ್ತಿ ಅಮಲಿನಲಿ
ಬಿರುಕುಬಿಟ್ಟ ಭಾವೈಕ್ಯತೆ
ಮತಯಂತ್ರದ ಸುತ್ತ
ಅನುಮಾನದ ಹುತ್ತ
ತಂತ್ರ ಕುತಂತ್ರಾಂಶದಲಿ
ಸೋತಿರುವುದು ದೇಶ
ದಾರಿ ತಪ್ಪಿದ ದೇಶಭಕ್ತಿ
ದ್ವೇಷದಿಂದಲೇ ಮುಕ್ತಿ ??
ಬಹುತ್ವದ ಭಾರತಕ್ಕೆ
ಸಂವಿಧಾನವೇ ಶಕ್ತಿ
¨ ಡೇವಿಡ್ ಕುಮಾರ್. ಎ.
No comments:
Post a Comment