ನನ್ನ ಸೋಲುಗಳನ್ನು ಬರೆದಿಡು...
ಸಂತ ಪೇತ್ರನ ಬಗ್ಗೆ ಒಂದು ಕೂತುಹಲಕಾರಿ ಕಥೆಯಿದೆ.ಈ ಕಥೆಯ ಮೂಲ ಜನಪದ. ಆಗ ಪೇತ್ರನು ಧರ್ಮಸಭೆಯ ಮುಂದಾಳತ್ವವನ್ನು ವಹಿಸಿಕೊಂಡಿದ್ದ. 64AD ನಂತರ ಕ್ರೈಸ್ತರ ಮೇಲಿನ ದೌರ್ಜನ್ಯದ ಪ್ರಮಾಣದಲ್ಲಿ ಏರಿಕೆ ಕಂಡುಬಂತು. ಪ್ರತಿದಿನ ಸಾವಿರಾರು ಕ್ರೈಸ್ತರ ಸತ್ತ ದೇಹಗಳನ್ನು ಕಾಣುವುದು ಪೇತ್ರನಿಗೆ ಸರ್ವೇಸಾಮಾನ್ಯವಾಗಿಬಿಟ್ಟಿತ್ತು. ಇದನ್ನು ಪೇತ್ರನಿಂದ ಸಹಿಸಲಾಗಲಿಲ್ಲ. ಆವೇಗಯುಕ್ತ, ಹಿಂದು ಮುಂದು ನೋಡದೆ ನುಗ್ಗುವಮನುಷ್ಯ, ಹಿಂಸೆಗೆ ಹೆದರಿ ರೋಮ್‍ನಿಂದ ಪಲಾಯನ ಮಾಡಲು ನಿರ್ಧರಿಸಿ, ಕತ್ತಲಾದ ನಂತರ, ಓಡಲಾರಂಭಿಸಿ ಬೆಳಗಿನ ಜಾವದಲ್ಲಿ ರೋಮ್ ನಗರದ ಮುಖ್ಯದ್ವಾರವನ್ನು ತಲಪಿದ.
ಅವನ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದ ಒಬ್ಬ ವ್ಯಕ್ತಿಯನ್ನು ಕಂಡ ಪೇತ್ರ ಕಳವಳಗೊಂಡ. ಆ ವ್ಯಕ್ತಿ ನಡೆಯುತ್ತಿದ್ದ ನಡೆ ಪೇತ್ರನಿಗೆ ತುಂಬ ಪರಿಚತವಾದ ನಡಿಗೆಯಂತೆ ಕಂಡುಬಂತು. ಹೌದು, ಪ್ರೇತ್ರನಿಗೆ ತಿಳಿಯಿತ್ತು ಆ ಮನುಷ್ಯ ಬೇರೆ ಯಾರು ಅಲ್ಲ, ಕ್ರಿಸ್ತನೆಂದು. ಕ್ರಿಸ್ತ ಒಂದು ದೊಡ್ಡ ಗಾತ್ರದ ಶಿಲುಬೆಯನ್ನು ಹೆಗಲೇರಿಸಿಕೊಂಡು ನಡೆಯುತ್ತಿದ್ದಾನೆ. ಆಶ್ಚರ್ಯಗೊಂಡ ಪ್ರೇತ್ರ.. ಆ ವ್ಯಕ್ತಿಯ ಬಳಿಗೆ ಹೋಗಿ "Quo vadis ಎಲ್ಲಿಗೆ ಹೋಗುತ್ತಿದ್ಯಾ?" ಎಂದು ಕೇಳಿದ. ಅದಕ್ಕೆ ಕ್ರಿಸ್ತ ನಿರ್ಭಾವಕನಾಗಿ ಉತ್ತರಿಸಿದ; "ನಾನು ರೋಮ್ ನಗರಕ್ಕೆ ಹೋಗುತ್ತಿದ್ದೇನೆ. ಅದಕ್ಕೆ ಪೇತ್ರ "ಸಾಯುವುದಕ್ಕೆ?".. "ಕೆಲವು ವರ್ಷಗಳ ಹಿಂದೆ ಅವರು ನಿನ್ನ ಕೊಲೆ ಮಾಡಲಿಲ್ಲವೇ ಪುನಃ ಶಿಲುಬೆ ಮೇಲೆ ಸಾಯಬೇಕೇ?" ಎಂದು ಕ್ರಿಸ್ತನಿಗೆ ಕೇಳಿದ ..."ನಾನು ನಿನ್ನನ್ನು ಧರ್ಮಸಭೆಯನ್ನು ನೋಡಿಕೊಳ್ಳಲು ಆರಿಸಿಕೊಂಡೆ, ಆದರೆ ನೀನು ಸಾವಿಗೆ ಹೆದರಿ ಪಲಾಯನ ಮಾಡುತ್ತಿದ್ಯಲ್ಲಾ???"
"ನನ್ನ ಪ್ರಭುವೇ ನನಗೆ ಈ ಬಗ್ಗೆ ಅರಿವಿರಲಿಲ್ಲ. ಈಗ ನಿಮ್ಮ ಶಿಲುಬೆಯನ್ನು ನನಗೆ ಕೊಡಿ. ನಿಮಗಾಗಿ ನಾನು ಸಾಯಲು ಸಿದ್ಧ" ಎಂದು ಹೇಳಿ; ಕ್ರಿಸ್ತನಿಂದ ಶಿಲುಬೆಯನ್ನು ಪಡೆದುರೋಮ್‍ನಗರಕ್ಕೆ ವಾಪಸಾದ. ಕೊನೆಗೆ ತಲೆಕೆಳಗಾಗಿ ಇರಿಸಿದ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ.
ಜನಪದರು ಏನು ಹೇಳುತ್ತಾರೆಂದು ಗೊತ್ತಾ?
ಪೇತ್ರನ ಕಣ್ಣುಗಳಿಂದ ಸುಮಾರು 30 ರಿಂದ 40 ವರ್ಷಗಳು ಕಣ್ಣೀರು ಹರಿಯುತ್ತಿತಂತೆ. ಅವನು ಬದುಕಿನ ಪೂರ್ತಿಅತ್ತು ಅತ್ತು ಕಣ್ಣುಗಳು ಸೊರಗಿ ಹೋದ್ವಂತೆ..ಈ ಕಾರಣದಿಂದಲೇ ಅವನ ಕೆನ್ನೆಯ ಮೇಲೆ ಕಣ್ಣೀರಿನ ಕಲೆ ಇರುವುದೆಂದು ಸಂಪ್ರದಾಯ ಹೇಳುತ್ತದೆ.
-----
"ಇನ್ನೊಬ್ಬರು ಇಟ್ಟಿಗೆಯನ್ನು ಎಸೆದು ನನ್ನ ಲಕ್ಷ್ಯವನ್ನು ಪಡೆದುಕೊಳ್ಳುವಷ್ಟು ವೇಗವಾಗಿರಬಾರದು ನನ್ನ ಜೀವನ"
ಯುವ ಉದ್ಯಮಿಯೊಬ್ಬ ತನ್ನ ಶ್ರಿಮಂತ ಕಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದಂತೆ... ರಸ್ತೆಯ ಎಡಬದಿಯಿಂದ ಒಂದು ಇಟ್ಟಿಗೆ ರಭಸವಾಗಿ ಅವನ ದುಬಾರಿ ಕಾರಿಗೆ ಅಪ್ಪಳಿಸಿ ಹಾನಿಮಾಡಿತ್ತು. ಕುಪಿತನಾದ ಉದ್ಯಮಿಮ್ ಕಾರಿನಿಂದ ರಭಸವಾಗಿ ಹೊರಬಂದು.. ಇಟ್ಟಿಗೆ ಎಸೆದವನನ್ನು ಹುಡುಕಲು ಪ್ರಾರಂಭಿಸಿದ. ಅಲ್ಲೇ ಇದ್ದ ಒಬ್ಬ ಚಿಕ್ಕ ಹುಡುಗ ಇವನ ಕೈಗೆ ಸಿಕ್ಕಿಕೊಂಡನು. "ನೀನು ಯಾರು? ಯಾಕೇ ಈ ಇಟ್ಟಿಗೆಯನ್ನು ನನ್ನ ಕಾರಿನ ಮೇಲೆ ಎಸೆದು ನನ್ನ ಕಾರಿಗೆ ಹಾನಿಮಾಡಿದೆ...?" ಎಂದು ಕೋಪದಿಂದ ಆ ಚಿಕ್ಕ ಹುಡುಗನನ್ನು ಗದರಿಸುತ್ತಿದ್ದಂತೆ... ಆ ಹುಡುಗ ಭಯ ತುಂಬಿದ ದನಿಯಲ್ಲಿ "ನನ್ನನ್ನು ಕ್ಷಮಿಸಿ.. ನನಗೆ ಏನು ಮಾಡಬೇಕೆ0ದು ತೋಚಲಿಲ್ಲ.. ಅದಕ್ಕೆ ಕಾರಿಗೆ ಇಟ್ಟಿಗೆ ಎಸೆದೆ" ಮುಂದುವರಿಸಿದ.. "ನನ್ನ ಅಂಗವಿಕಲ ತಮ್ಮ ಗಾಲಿಕುರ್ಚಿ(wheel chair) ನಿಂದ ಬಿದ್ದು ಗಾಯಗೊಂಡಿದ್ದಾನೆ.. ಅವನನ್ನು ಮೇಲೆತ್ತಲು ನನಗೆ ಸಾಧ್ಯವಾಗುತ್ತಿಲ್ಲ.. ರಸ್ತೆಯಲ್ಲಿ ಹೋಗುವ ಎಲ್ಲಾ ವಾಹನಗಳಿಗೆ ಕೈ ತೋರಿಸಿ ನಿಲ್ಲಿಸಲು ಹೇಳಿದೆ... ಯಾರು ನಿಲ್ಲಿಸದ ಕಾರಣ ನಾನು ಇಟ್ಟಿಗೆ ಎಸೆಯಲು ಪ್ರಾರಂಭಿಸಿದೆ.... ದಯವಿಟ್ಟು ನನ್ನ ತಮ್ಮನನ್ನು ಮೇಲೆತ್ತಲು ನನಗೆ ಸಹಾಯ ಮಾಡಿ" ಎಂದು ಬೇಡಿಕೊಳ್ಳುತ್ತಿದ್ದಂತೆ..ಯುವ ಉದ್ಯಮಿ... ಬಿದ್ದು ಗಾಲಿಕುರ್ಚಿ (wheel chair)ಗೆ ಸಿಕ್ಕಿಕೊಂಡಿದ್ದ... ಮಗುವನ್ನು ಮೇಲೆತ್ತಿ... ತನ್ನ ಕರವಸ್ತ್ರದಿಂದ ಹುಡುಗ ಹಾಗೂ ಮಗುವಿನ ಮುಖಗಳನ್ನು ಒರೆಸಿ... ಮನೆಗೆ ಕಳುಹಿಸುತ್ತಿದ್ದಂತೆ.. ಆ ಮಕ್ಕಳು ಧನ್ಯತೆಯಿಂದ ಥ್ಯಾಂಕ್ಸ್ ಎಂದು ಹೇಳಿ ತಮ್ಮ ಮನೆಯ ಕಡೆ ಹೆಜ್ಜೆ ಹಾಕಿದರು... ಉದ್ಯಮಿ ಈ ಘಟನೆಯಿಂದ ಮೂಕವಿಸ್ಮಯನಾಗಿ... ತನ್ನ ಶ್ರಿಮಂತ ಕಾರಿನಡೆಗೆ ಹೆಜ್ಜೆ ಹಾಕಿದ. ಇಟ್ಟಿಗೆ ಬಿದ್ದು ಜಖಂ (damage) ಆಗಿದ್ದ ಕಾರಿನ ಸ್ಥಳವನ್ನು ಗಮನಿಸುತ್ತಾ ...ಇದು ಈ ಘಟನೆಯ ಸ್ಮಾರಕವಾಗಿರಲಿ...."ಇನ್ನೊಬ್ಬರು ಇಟ್ಟಿಗೆಯನ್ನು ಎಸೆದು ನನ್ನ ಲಕ್ಷ್ಯವನ್ನು ಪಡೆದುಕೊಳ್ಳುವಷ್ಟು ವೇಗವಾಗಿರಬಾರದು ನನ್ನ ಜೀವನ" ಎಂದು ನೆನಪಿಸುವ ಕುರುಹು ಇದಾಗಿರಲಿ ಎಂದು ಹಾನಿಯಾದ ಕಾರಿನ ಆ ಜಾಗವನ್ನು ರಿಪೇರಿ ಮಾಡಿಸದಿರಲು ನಿಶ್ಚಿಯಿಸಿದ.
No comments:
Post a Comment