ಘಟನೆ 1
ಜನಾಂಗೀಯ ದ್ವೇಷ, ಹಗೆತನಗಳಿಂದಾಗಿ ತತ್ತರಿಸಿದ ದೇಶದಲ್ಲಿ ನಡೆದ ಘಟನೆ ಇದು. ವರ್ಣಬೇಧನೀತಿ ವಿರುದ್ಧ ಸಿಡಿದೆದ್ದು ಹೋರಾಡಿದ ಕಪ್ಪು ಜನರು ತಮ್ಮದೇ ಸರ್ಕಾರವನ್ನು ಸ್ಥಾಪಿಸಿಕೊಳ್ಳುವುದರಲ್ಲಿ ಸಫಲರಾಗುತ್ತಾರೆ. ಶತಮಾನಗಳಿಂದ ಹಗೆತನ,ಅನಾದಿಕಾಲದಿಂದ ದ್ವೇಷವನ್ನು ಸಾಧಿಸಿಕೊಂಡು ಬಂದ ಕಪ್ಪು ಮತ್ತು ಬಿಳಿ ಜನಾಂಗಳ ನಡುವೆ ಸಾಮರಸ್ಯವನ್ನು ಸಾಧಿಸಲುಶಾಂತಿಸಂಧಾನಎಂಬ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ. ಸರ್ಕಾರ ಪ್ರಾಯೋಜಿತ ಈPeace talkನಲ್ಲಿ ಒಂದು ಘಟನೆ ನಡೆಯುತ್ತದೆ.ಅವಳು ಕಪ್ಪು ಜನಾಂಗದ ಮಹಿಳೆ. ತನ್ನ ಮಗನನ್ನು ಕೊಂದು ಸುಟ್ಟು ಭಸ್ಮಮಾಡಿದ ಬಿಳಿ ಜನಾಂಗಕ್ಕೆ ಸೇರಿದ ವ್ಯಕ್ತಿಯ ಮುಂದೆ ಮುಖಾಮುಖಿಯಾಗಿ ಕುಳಿತ್ತಿದ್ದಾಳೆ. ಮಗನನ್ನು ಜನಾಂಗೀಯ ಗಲಭೆಯಲ್ಲಿ ಕಳೆದುಕೊಂಡ ದುಃಖ ಮುಖದಲ್ಲಿ ಮಡುಗಟ್ಟಿದೆ. ಸಂಧಾನ ಸಭೆಯನ್ನು ಆಯೋಜಿಸಿದವರು ಮಹಿಳೆಯನ್ನು ಅವಳ ದೂರನ್ನು ಪ್ರಸ್ತಾಪಿಸಲು ಕೇಳಿಕೊಳ್ಳುತ್ತಾರೆ. ಆಗ ಆ ತಾಯಿ ಕಣ್ಣೀರಿಡುತ್ತಾ ತನ್ನ ಮಗನನ್ನು ದ್ವೇಷದಿಂದ ಕೊಂದವನಿಗೆ ಒಂದು ಮಾತನ್ನು ಹೇಳುತ್ತಾಳೆ"ನಾನು ನಿನ್ನನ್ನು ಎರಡು ಶರತ್ತುಗಳ ಮೇಲೆ ಕ್ಷಮಿಸುತ್ತೇನೆ;ಒಂದು ನೀನು ನನ್ನ ಮಗನನ್ನು ಸುಟ್ಟು ಹಾಕಿದ ಸ್ಥಳವನ್ನು ತೋರಿಸಬೇಕು,ಎರಡನೇಯದು ಇನ್ನು ಮುಂದೆ ನೀನು ನನ್ನ ಮಗನಾಗಿರಬೇಕು.
ಘಟನೆ 2
ಯೋಗೇಂದ್ರ ಯಾದವ್‍ರವರ ಬದುಕಿನಲ್ಲಿ ನಡೆದ ಒಂದು ಆಘಾತದ ಘಟನೆ ಇದು. ಕ್ರಿ.ಶ 1936ರ ಸಮಯ. ಈಗಿನ ಹರಿಯಾಣಾದ ಹಿಸಾರ್ ಎನ್ನುವ ಪಟ್ಟಣದಲ್ಲಿ ರಾಮ್ ಸಿಂಗ್ ಎಂಬವರು ಒಂದು ಶಾಲೆಯ ಶಿಕ್ಷಕರಾಗಿದ್ದರು. ಸ್ವಾತಂತ್ರಪೂರ್ವದ ಸಮಯ. ಅಲ್ಲಲ್ಲಿ ಕೋಮು-ಗಲಭೆಯ ದುಳ್ಳರಿ ಉರಿಯುತ್ತಿದ್ದವು. ರಾಮ್ ಸಿಂಗ್ ಅವರು ಶಿಕ್ಷಕರಾಗಿದ್ದ ಶಾಲೆಗೆ ಕೋಮು ಗಲಭೆಯನ್ನೆಬ್ಬಿಸುತ್ತ ಮುಸಲ್ಮಾನ ಗುಂಪೊಂದು ಬಂದು ಅಲ್ಲಿದ್ದ ಮಕ್ಕಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಆದೇಶಿಸಿತು. ಮಕ್ಕಳನ್ನು ಮುಟ್ಟುವುದಕ್ಕಿಂತ ಮುಂಚೆ ಮೊದಲು ನನ್ನನ್ನು ನೋಡಿಕೊಳ್ಳಿ ಎಂದು ರಾಮ್ ಸಿಂಗ್. ತಮ್ಮ ಕರ್ತವ್ಯ ಪಾಲಿಸಲು ಮುಂದಾದಾಗ ಗಲಭೆಕೋರರು ಅವರ ಕುತ್ತಿಗೆಯನ್ನು ಕುಡಗೋಲಿನಿಂದ ಸೀಳಿಯೇ ಬಿಟ್ಟರು. ಏಳು ವರ್ಷದ ಬಾಲಕನಾದ ದೇವೇಂದ್ರ ಸಿಂಗ್,ಕೊಲೆಗೀಡಾದ ತನ್ನ ಅಪ್ಪನಾದ ಶಿಕ್ಷಕ ರಾಮ್‍ಸಿಂಗ್ ರವರಿಗಾದ ಸ್ಥಿತಿಯನ್ನು ನೋಡುತ್ತಾ ನಿಂತಿದ್ದ. ತನ್ನ ಕಣ್ಣೆದುರೇ ನಡೆದ ತಂದೆಯ ಕೊಲೆಯು ಆ ಬಾಲಕನ ಮೇಲೆ ಏನೆಲ್ಲ ಪರಿಣಾಮ ಬೀರಿತೋ ಏನೋ. ತನ್ನ ತಂದೆಯನ್ನು ತನ್ನ ಕಣ್ಣೆದುರಿಗೇ ಕೊಂದ ಮುಸಲ್ಮಾನರನ್ನು ದ್ವೇಷಿಸಲು ಅವರಿಗೆ ಸಾಕಷ್ಟು ಕಾರಣಗಳಿದ್ದವು. ಆ ಬಾಲಕ ಬೆಳೆಯುತ್ತಿರುವ ಸಮಯ ಸ್ವಾತಂತ್ರ ಸಂಗ್ರಾಮದಕಾಲವಾಗಿತ್ತು. ಗಾಂಧಿಜೀಯವರುಸತ್ಯಾಗ್ರಹಗಳಮತ್ತುಹಿಂದು-ಮುಸ್ಲಿಂ ಏಕತೆಗಾಗಿ ಜೀವ ತೇಯುತ್ತಿದ್ದಕಾಲ. ಆಗ ಎಲ್ಲೆಡೆ ಧ್ವನಿಸುತ್ತಿದ್ದ "ನಾನು ಹಿಂದೂಆಗದೆಮುಸಲ್ಮಾನನೂ ಆಗದೆಓರ್ವಮನುಷ್ಯನಾಗುವೆ"ಎನ್ನುವ ಮಾತುಗಳನ್ನು ಕೇಳಿದ ದೇವೇಂದ್ರ ಸಿಂಗ್, ತನ್ನಜೀವನದಲ್ಲಿ ದ್ವೇಷದ ಯಾವಪರಿಣಾಮವೂ ಉದ್ಭವಿಸಲುಅವಕಾಶ ನೀಡಲಿಲ್ಲ.ಕಾಲ ಸರಿದಂತೆಮುಂದೆ ಬೆಳೆದು ಅರ್ಥಶಾಸ್ತ್ರದ ಪ್ರಾಧ್ಯಪಕರಾದ ದೇವೇಂದ್ರ ಸಿಂಗ್,ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರನ್ನುನೀಡಲು ನಿರ್ಧರಿಸಿದರು. ತನ್ನ ತಂದೆಯನ್ನು ತನ್ನೆದುರಿಗೆ ಕೊಂದ ಸಮುದಾಯದವರ ಹೆಸರನ್ನು ನೀಡುವ ನಿರ್ಧಾರಕ್ಕೆ ಬಂದರು. ಮೊದಲ ಮಗುವಿಗೆ ನಜ್ಮಾ ಎಂದು ಹೆಸರಿಡುವಾಗ ಅವರ ಹೆಂಡತಿ"ಮಗಳಿಗೆಈ ಹೆಸರುಬೇಡ,ಮುಂದೆ ಗಂಡು ಮಗುವಾದಾಗನಿಮ್ಮ ಇಚ್ಛೆಯಂತೆಯೇ ಹೆಸರಿಡುವ,ಹೆಣ್ಣು ಮಗಳ ಮೇಲೆ ಬೇಡ,ಮುಂದೆ ಮದುವೆಗೆ ಸಮಸ್ಯೆಯಾಗುತ್ತದೆ"ಎಂದಳು. ಹಾಗಾಗಿ ಆ ಹೆಣ್ಣು ಮಗುವಿಗೆ ನೀಲ ಎಂದು ನಾಮಕರಣ ಮಾಡಲಾಯಿತು.ಆ ಬಳಿಕಗಂಡು ಮಗುವಾದಾಗ ಸಲೀಂ ಎನ್ನುವ ಹೆಸರನ್ನಿಟ್ಟರು.ರಾಜಸ್ಥಾನದ ಒಂದು ಹಳ್ಳಿಯಲ್ಲಿ ಶಾಲೆಗೆ ಹೋಗುತ್ತಿದ್ದ ಆ ಬಾಲಕನ ಶಾಲೆಯಲ್ಲಿ ಯಾವ ಮುಸಲ್ಮಾನ ಮಕ್ಕಳೂ ಇರಲಿಲ್ಲ. ಹಾಗಾಗಿ ಎಲ್ಲ ಮಕ್ಕಳಿಗೂ ಇವನ ಬಗ್ಗೆ ಕುತೂಹಲ."ನೀನ್ಯಾರು ನಿನ್ನನ್ನು ದತ್ತು ತೆಗೆದುಕೊಂಡಿದ್ದಾರಾ?ಮುಸಲ್ಮಾನರು ಹೇಗಿರುತ್ತಾರೆ?"ಎಂದೆಲ್ಲಾ ಪೀಡಿಸಲಾರಂಭಿಸಿದರು. ತಂದೆ ದೇವೇಂದ್ರ ಜಾತ್ಯತೀತತೆಯ ಬಗ್ಗೆ ಆ ಪುಟ್ಟ ಮಗು ಸಲೀಂನಿಗೆ ಏನೆಲ್ಲಾ ಹೇಳಿದರೂ ಅವನಿಗೆಅದರತಲೆಬುಡ ಅರ್ಥವಾಗಲಿಲ್ಲ. ಒಂದು ದಿನ ಮನೆಗೆ ಬಂದ ಬಾಲಕ"ಇಲ್ಲ ನನ್ನ ಹೆಸರನ್ನು ಬದಲಾಯಿಸಿ,ಇಲ್ಲವಾದರೆ ಇನ್ನು ಮುಂದೆ ನಾನು ಶಾಲೆಗೆ ಹೋಗುವುದಿಲ್ಲ'ಎಂದುಹೇಳಿದ. ಆಗ ಸಲೀಂ ಅಂತ ಇದ್ದ ಹೆಸರು ಯೋಗೇಂದ್ರ ಯಾದವ್ ಎಂದಾಯಿತು. (ಕೃಪೆwww. Naanugauri.com)
ಸಂಧಾನ /ಹೊಂದಾಣಿಕೆ ಅನಿವಾರ್ಯ
ಮೇಲಿನ ಎರಡು ಘಟನೆಗಳು ಸಹ reconciliation ಅಥವಾ ಸಂಧಾನ, ಸಾಮರಸ್ಯದ ಬಗ್ಗೆ ಕಣ್ಣಿಗೆ ಕಟ್ಟುವಂತೆ ಹೇಳುತ್ತವೆ. ಈ ದಿನಗಳಲ್ಲಿ ಸಂಧಾನದ ಕಾರ್ಯಗಳು ಹೆಚ್ಚು ಹೆಚ್ಚು ಕೈಗೊಳ್ಳಬೇಕಾದ ಅನಿವಾರ್ಯತೆ ನಮಗಿದೆ. ಜಾತಿ ಧರ್ಮ,ಭಾಷೆ,ದೇಶ ಅಧಾರಗಳ ಮೇಲೆ ಒಡೆದು ನುಚ್ಚುನೂರಾಗುತ್ತಿರುವ ನಮ್ಮ ದೇಶಕ್ಕೆ ಸಾಮರಸ್ಯ ಜೀವನ ಅವಶ್ಯವಾಗಿ ಬೇಕಾಗಿದೆ. ಉಗ್ರವಾದ ಬಲಪಡೆದುಕೊಳ್ಳುತ್ತಿದೆ,ದಲಿತರ ಮತ್ತು ಶೋಷಿತರ ಮೇಲಿನ ದೌರ್ಜನ್ಯಗಳು ಸರ್ವೆಸಾಮಾನ್ಯವಾಗಿಬಿಟ್ಟಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಒಪ್ಪಿತವಾಗಿಬಿಟ್ಟಿವೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಮನುಷ್ಯನ ದುರಾಸೆಯಗುಣ ಪರಿಸರವನ್ನೇ ನಂಗುತ್ತಿದೆ. ರಾಷ್ಟ್ರ ರಾಷ್ಟ್ರಗಳು ವೈರತ್ವದಿಂದ ನಾಶಗೊಳ್ಳುತ್ತಿವೆ;ಮಾನವ ಹಕ್ಕುಗಳ ಉಲ್ಲಂಘನೆಅತಿರೇಕಕ್ಕೆ ತಲಪಿವೆ. ಈ ವಿಷಮ ಪರಿಸ್ಥಿತಿಯಲ್ಲಿ ಸಂಧಾನ ಪ್ರಕ್ರಿಯೆ ಅಥವಾ reconciliation ಅಗತ್ಯವೆನಿಸಿದ ಮೌಲ್ಯವಾಗಿದೆ. ಹಗೆತನ ದ್ವೇಷಗಳ ಹುಚ್ಚಾಟಿಕೆಯಿಂದ ಮನಕುಲವನ್ನು ರಕ್ಷಿಸಲು ಸಾಧ್ಯವಿಲ್ಲ. ಹಗೆತನ, ದ್ವೇಷ, ಹಿಂಸೆ, ಯುದ್ಧ ಇವೆಲ್ಲವು ಮನುಷ್ಯನ ದೌರ್ಬಲ್ಯಗಳು; ಬುದ್ದಿ ಪ್ರೀತಿಯ ಕೊರತೆಯ ಫಲಗಳು. ಆದ್ದರಿಂದ ಪ್ರೀತಿಯ ಸಂಬಂಧಗಳು ರೂಪುಗೊಳ್ಳಬೇಕಾಗಿದೆ.
Reconciliationಅಥವಾ ಸಂಧಾನ ಎಂದರೇನು?
Reconciliation ಅಥವಾ ಸಂಧಾನ ಎಂದರೇನು?ಎಂಬ ಪ್ರಶ್ನೆ ನಮ್ಮನ್ನು ಕಾಡಬಹುದು. ಹಗೆತನ ಅಥವಾ ದ್ವೇಷ ವೈಮನಸ್ಸಿನಿಂದಾಗಿ ಕಂಗೆಟ್ಟ ಸಂಬಂಧವನ್ನು ಪ್ರೀತಿಯ ಸಂಬಂಧವಾಗಿ ಪುನರ್ ಸ್ಥಾಪಿಸುವುದೇ ಸಂಧಾನ ಅಥವಾ reconciliation ಎನ್ನಬಹುದು. ವ್ಯಕ್ತಿ ಅಥವಾ ಸಮುದಾಯ ಅಥವಾ ಗುಂಪಿನ ನಡುವೆ ಕೆಟ್ಟಿರುವ ಸಂಬಂಧವನ್ನು ಉತ್ತಮ ಹಾಗೂ ಪ್ರೀತಿಯದ್ಯೋತಕವಾಗಿ ಬದಲಾಯಿಸುವುದೇ reconciliationನ ಮುಖ್ಯಗುರಿ. ಈ ಪ್ರಕ್ರಿಯೆಯನ್ನು ಕ್ರಿಸ್ತ ಹೇಳಿದ ದುಂದುಗಾರ ಮಗನ ಸಾಮತಿಯಲ್ಲಿ ಕಾಣುತ್ತೇವೆ. ಹೌದು, ಒಡಕು ಹುಟ್ಟಿಸುವುದು ಅತಿ ಪ್ರಾಚೀನ ಮತ್ತು ನಿರಂತರವಾದ ವ್ಯಾಧಿ. ಈ ರೋಗವು ಎಷ್ಟೋ ಜನಾಂಗಗಳನ್ನು ನಿರ್ನಾಮ ಮಾಡಿರುವ ಶೋಚನೀಯ ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ಈ ಸಂಧಾನ ಎಂಬ ಉದಾತ್ತ ಕಾರ್ಯವು ನಿರಂತರವಾಗಿ ನಡೆಯುತ್ತಿರಬೇಕು. ಆದರೆ ಇದು ಸುಲಭದ ಕೆಲಸವಲ್ಲ. ರಾಜಕೀಯವಾಗಿ ಅಧಿಕಾರವನ್ನು ಗಳಿಸುವ ಸುಲಭ ಮಾರ್ಗವೇ Divide and Rule.ಈ ಕಾರಣದಿಂದಲ್ಲೇ ಸಮಾಜವನ್ನು ವಿಭಾಗಿಸುತ್ತಲೇ ಅಧಿಕಾರವನ್ನು ಪಡೆಯುವಪ್ರವೃತ್ತಿಯು ದಟ್ಟವಾಗಿಜಗತ್ತಿನಾದ್ಯಂತಹರಡುತ್ತಿದೆ. ಇನ್ನೊಂದು ಕಡೆ,ವಿಭಜನೆಯ ಹುನ್ನಾರದಿಂದಲೇ ಲಾಭಗಳಿಸುವ capitalism ಮತ್ತು fascism ಒಟ್ಟಾಗಿ ಸೇರಿ ಸಂಧಾನ ಕಾರ್ಯವನ್ನು ಮತ್ತಷ್ಟು ಕಠಿಣಗೊಳ್ಳಿಸಿವೆ. ಆದರೂ ನಮ್ಮ ಪ್ರಯತ್ನವನ್ನು ಬಿಡಬಾರದು. ಶತ್ರುಗಳನ್ನು ಪ್ರೀತಿಯ ಮನೋಧರ್ಮದಿಂದಬಂಧಿಸಿದಾಗ ನಾವು ಶಕ್ತಿಶಾಲಿಗಳಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ.
ಸಂಧಾನ ಕಾರ್ಯ ಪರಾಕಾಷ್ಟೆ ತಲಪಿದ್ದು ಕ್ರಿಸ್ತನಲ್ಲಿ
ಸಂಧಾನದ ಅಗತ್ಯತೆಯ ಬಗ್ಗೆ ಅದರ ರೂಪುರೇಷೆಗಳ ಬಗ್ಗೆ ಬೈಬಲ್ಲಿನಲ್ಲಿ ನಾವು ಓದುತ್ತೇವೆ. ಹಳೆ ಮತ್ತು ಹೊಸ ಒಡಂಬಡಿಕೆಗಳಲ್ಲಿ ಅನೇಕ ಪ್ರವಾದಿಗಳು ಮಾಡಿದ್ದು ಈ ಸಂಧಾನ ಕಾರ್ಯವನ್ನೇ. ಆವಾಗಾವಾಗದೇವರಿಂದ ದೂರವಾಗುತ್ತಿದ್ದ ಜನರನ್ನು ಎಚ್ಚರಿಸಿ ದೇವರ ಬಳಿಗೆ ಕೆರೆದು ವಾಪಸ್ಸು ತರುತ್ತಿದಿದ್ದವರೇ ಪ್ರವಾದಿಗಳು. ಅಷ್ಟು ಮಾತ್ರವಲ್ಲ,ಸಮಾಜದಲ್ಲಿ ಬಲಹೀನರ ಮೇಲೆ ದೌರ್ಜನ್ಯ ಎಸಗುತ್ತಿದ್ದವರನ್ನು ಖಂಡಿಸಿ ಸಮ ಸಮಾಜದ ಸ್ಥಾಪನೆಗೆ ಪಣತೊಟ್ಟವರು ಪ್ರವಾದಿಗಳು. ಆದರೆ ಎಲ್ಲಾ ಪ್ರವಾದಿಗಳ ಸಂಧಾನ ಕಾರ್ಯ ಪರಾಕಾಷ್ಟೆ ತಲಪಿದ್ದು ಕ್ರಿಸ್ತನಲ್ಲಿ. ಪಾಪಿಷ್ಠರನ್ನು ಬಹಿಷ್ಕೃತಗೊಂಡವರನ್ನು ದೇವರ ಕ್ಷಮೆಗೆ ಅರ್ಹರಾಗಿಸಿ ಅವರ ಮತ್ತು ದೇವರ ಸಂಬಂಧವನ್ನು ಉತ್ತಮಪಡಿಸಿದ. ಶುದ್ಧ ಅಶುದ್ಧಗಳ ಅಧಾರಗಳ ಮೇಲೆ ಶ್ರೇಣೀಕೃತಗೊಂಡಿದ್ದ ಸಮಾಜವನ್ನು ಪ್ರೀತಿಯ ಬಂಧದಿಂದ ಸಮಗೊಳಿಸಿದ. ಅವನಲ್ಲಿ ಎಲ್ಲರೂ ಸಮನಾದರು,ಎಲ್ಲರೂ ದೇವರ ಮಕ್ಕಳೆನ್ನಿಸಿಕೊಂಡರು. ಅಷ್ಟು ಮಾತ್ರವಲ್ಲ,ಜನರ ಆಂತರಿಕ ಸಂಧಾನಕ್ಕೂ ಕೈಹಾಕಿದ ಕ್ರಿಸ್ತ ಅವರಲ್ಲಿದ್ದ ಸಂಕೋಚ,ಅವಮಾನಗಳು,ಮೂಢನಂಬಿಕೆಗಳು,ಶಾಪಪ್ರಜ್ಞೆ,ಪಾಪಪ್ರಜ್ಞೆಗಳನ್ನು ಜಾಡಿಸಿ ಹೊರಹಾಕಿ`ನಾವು ದೇವರ ಮಕ್ಕಳು'ಎಂಬ ಅರಿವು ಅವರಲ್ಲಿ ಮೂಡಿಸಿದ. ಇದಕ್ಕೆ ಉತ್ತಮ ಉದಾಹರಣೆ ಜಕ್ಕಾಯ. ದೇವರ ಮತ್ತು ಮನುಷ್ಯರ ನಡುವೆ ಮತ್ತು ಮನುಷ್ಯ ಮನುಷ್ಯರ ನಡೆವೆ ಬಿರುಕುಬಿಟ್ಟ ಸಂಬಂಧಕ್ಕೆ ಮೂಲಕಾರಣ ಪಾಪ ಎಂದು ತಿಳಿದು ಜನರ ಪಾಪಗಳನ್ನು ಹೊತ್ತು ಕಲ್ವಾರಿ ಬೆಟ್ಟದ ಏರಿ ಶಿಲುಬೆಮೇಲೆ ತನ್ನ ಪ್ರಾಣವನ್ನು ಬಲಿಕೊಡುವುದರ ಮೂಲದ ಜಗತ್ತಿನ ಶ್ರೇಷ್ಠ ಸಂಧಾನಕಾರ ಎನ್ನಿಸಿಕೊಂಡ.
ಸಂಧಾನ ಕಾರ್ಯ ನಾಲ್ಕು ರೀತಿಯದು;
ಸಂಧಾನ ಕಾರ್ಯವನ್ನುವಿಭಾಗವನ್ನಾಗಿಸಿನೋಡಿದಾಗ ಆ ಕಾರ್ಯದಲ್ಲಿ ನಾಲ್ಕುಭಾಗಗಳನ್ನು ಕಾಣಬಹುದು;ದೇವರೊಂದಿಗೆ,ಇತರರೊಂದಿಗೆ,ಪ್ರಕೃತಿಯೊಂದಿಗಿನ ಕೊನೆಗೆ ಸ್ವತಃ ತನ್ನೊಂದಿಗಿನ ಸಂಧಾನ ಕಾರ್ಯವನ್ನು ಸೂಚಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ದೇವರೊಂದಿಗಿನ,ಇತರರೊಂದಿಗಿನ,ಪ್ರಕೃತಿಯೊಂದಿಗಿನ ಸಂಧಾನ ಬಹಿರಂಗ ಸಂಧಾನವಾದರೆ ಸ್ವತಃ ತನ್ನೊಂದಿಗೆ ಏರ್ಪಡುವ ಸಂಧಾನ ಅಂತರಂಗದ್ದು. ಅಂತರಂಗದ ಸಾಮರಸ್ಯ ಬಹು ಮುಖ್ಯವಾದುದು. ಮನುಷ್ಯ ಮೊದಲು ತನ್ನ ಬಳಿ ಸಂಧಾನ ಮಾಡಿಕೊಳ್ಳಬೇಕು. ತನ್ನಲ್ಲಿರುವ ವಿರೋಧಾಭಾಸಗಳನ್ನು,ಅಸಮಾನತೆಗಳನ್ನು ತೊಡೆದು ಸಾಮರಸ್ಯವನ್ನು ರೂಪಿಸಿಕೊಳ್ಳಬೇಕು. ಇದು ಇತರ ಎಲ್ಲಾ ಹೊಂದಾಣಿಕೆ ಅಥವಾ ಸಾಮರಸ್ಯ ಜೀವನಕ್ಕೆ ಬುನಾದಿ ಎಂದೇ ಹೇಳಬಹುದು.Reconciled with self leads to reconciliation with God, Society and nature. ಈ ಕಾರಣಕ್ಕಾಗಿ ತನ್ನೆಲ್ಲಾ ನ್ಯೂನತೆಗಳನ್ನು,ದೌರ್ಬಲ್ಯವನ್ನುಒಪ್ಪಿಕೊಂಡು ಅವುಗಳನ್ನು ಕಡಿಮೆಗೊಳ್ಳಿಸುವಪ್ರಾಮಾಣಿಕ ಪ್ರಯತ್ನಮಾಡಬೇಕು. ತನ್ನೆಲ್ಲಾ ಸೋಲುಗಳನ್ನು ಒಪ್ಪಿಕೊಂಡು ತನ್ನನ್ನೇ ಕ್ಷಮಿಸಿಕೊಳ್ಳಬೇಕು. ತನ್ನನ್ನು ಕ್ಷಮಿಸಿಕೊಂಡವನು ಮಾತ್ರ ಇತರರನ್ನು ಕ್ಷಮಿಸಲು ಸಾಧ್ಯ. ಇವೆಲ್ಲಕ್ಕಿಂತ ಮುಖ್ಯವಾಗಿ ತನ್ನನ್ನು ಪ್ರೀತಿಸಲು ಕಲಿಯಬೇಕು. ಸಂಕೋಚ, ಅವಮಾನಗಳು, ಮೂಢನಂಬಿಕೆಗಳು, ಶಾಪಪ್ರಜ್ಞೆ, ಪಾಪಪ್ರಜ್ಞೆಗಳನ್ನು ಜಾಡಿಸಿ ತನ್ನಿಂದ ಹೊರಹಾಕಬೇಕು. ಹೌದು ತನ್ನಲ್ಲೇ ತಾನು ಸ್ಥಾಪಿಸಿಕೊಳ್ಳುವ ಈ ಸಾಮರಸ್ಯ ಮನೋಭೂಮಿಕೆ ಅಥವಾ ಹೊಂದಾಣಿಕೆಯು ಕೊನೆಗೆ ದೇವರೊಂದಿಗಿನ ಸಂಬಂಧದಲ್ಲಿ, ಸಮಾಜ ಮತ್ತು ಪರಿಸರ ಜತೆಗಿನ ಸಂಬಂಧಗಳಲ್ಲಿ ಬಹಿರಂಗಗೊಳ್ಳುತ್ತಾ,ನಮ್ಮನ್ನು ಜಗತ್ತಿನಲ್ಲಿ ಮುಖ್ಯ ಸಂಧಾನಕಾರರನ್ನಾಗಿಸಿ ಬಿಡುತ್ತದೆ. ನಮ್ಮ ಈ ಉದಾತ್ತ ಕಾರ್ಯದಿಂದ ನಾವು ಭಾಗ್ಯವಂತರಾಗಿ ದೇವರ ಮಕ್ಕಳೆನಿಸಿಕೊಳ್ಳುವೆವು.
-------------
-------------
No comments:
Post a Comment