Friday, 18 December 2020

ಕ್ರಿಸ್ಮಸ್



 ಕ್ರಿಸ್ಮಸ್ ಎಂಬುವುದು

ನಮ್ಮ

ದಿನನಿತ್ಯದ ಬದುಕಾದಾಗ

ಶಾಂತಿ’ಎಂಬ

ಹಕ್ಕಿಯ ಗೂಡಾಗಿಬಿಡುವುದು

ಈ ಜಗತ್ತು!

--------------

ಕ್ರಿಸ್ಮಸ್ ಎಂಬುವುದು

ದಿನಗಳು ಕೂಡಿ ಬರುವ

ವರ್ಷದ ಕಾಲವಲ್ಲ

ಅದೊಂದು

ಭವದ ಅನುಭಾವ.....

-------------

ಕ್ರಿಸ್ಮಸ್ ಎಂಬುವುದು

ಕ್ಯಾಲೆಂಡರ್‍ನಲ್ಲಿ

ಕಾಣ ಸಿಗುವ ತಾರೀಖಲ್ಲ

ನಮ್ಮ ನಿಮ್ಮಲ್ಲಿ ಮೂಡುವ

ಒಲವಿನ ಮನಸ್ಥಿತಿ...

-------------

ಕ್ರಿಸ್ಮಸ್ ಎಂದರೆ

ಯಜಮಾನ

ಪ್ರೀತಿಗೋಸ್ಕರ ದಾಸನಾದ

ಬಾಳ

ವಿಚಿತ್ರ ಕಥೆ!

-------------

ಸಮುದ್ರ ಸೇರಿದ

ನದಿಗೆಲ್ಲಿ ‘ನಾನು’

ಎನ್ನುವ ಅಸ್ತಿತ್ವ ?

-------------

ಕ್ರಿಸ್ತನನ್ನು

ಕಾಣಲು ಹೋದ

ನಮಗೆ

ಗೋದಲಿ ಮಾತ್ರ

ಕಾಣುವುದೇಕೆ?

-------------

ಕ್ರಿಸ್ಮಸ್

ಎನ್ನುವುದು

ನಿರ್ಗತಿಕರಿಗೆ ಮತ್ತಷ್ಟು ಕೊಡುವುದು!

ಬಹಿಷ್ಕೃತರನ್ನು ತಬ್ಬಿ ಮುತ್ತಿಕ್ಕುವುದು

 - ಜೀವಸೆಲೆ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...