ಬೈಬಲ್ ಧರ್ಮಗ್ರಂಥದಲ್ಲಿನÀ ದೇವರ ಹತ್ತು ಆಜ್ಞೆಗಳ ಆಧಾರದ ಮೇಲೆ ಕ್ರೈಸ್ತ ಧರ್ಮಸಭೆ ಆರು ಮುಖ್ಯ ನಿಯಮಗಳನ್ನು ಕ್ರೈಸ್ತರ ಮೇಲೆ ಔಪಚಾರಿಕವಾಗಿ ಹೇರಿದೆ. ಅದರಲ್ಲಿ ಪಾಪ ನಿವೇದನೆಯೂ ಒಂದು. ಭಾನುವಾರಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಬಲಿಪೂಜೆಯಲ್ಲಿ ಕ್ರೈಸ್ತರು ಕಡ್ಡಾಯವಾಗಿ ಭಾಗವಹಿಸಬೇಕೆಂಬದು ಮೊದಲನೆಯ ನಿಯಮವಾದರೆ, ಪಾಪ ನಿವೇದನೆ ಎರಡನೇಯದು. ವರ್ಷಕ್ಕೊಮ್ಮೆಯಾದರೂ ಪಾಪ ನಿವೇದನೆ ಮಾಡಬೇಕೆಂದು ಹೇಳುತ್ತದೆ ಎರಡನೆಯ ನಿಯಮ. ಕೆಟ್ಟ ಭಾವನೆಗಳಿಂದ, ಸ್ವಾರ್ಥ ಚಿಂತನೆಗಳಿಂದ, ದುಶ್ಚಟಗಳಿಂದ, ದುಂಡಾವರ್ತನೆಗಳಿಂದ, ರೂಢಿಗತ ಪ್ರವೃತ್ತಿಗಳಿಂದ ಮತ್ತು ಪ್ರಾಪಂಚಿಕ ವಿಷಯಗಳಿಂದ ಮಲಿನಗೊಂಡಿರುವ ದೋಷಪೂರಿತ ಮನಸ್ಸುಗಳÀನ್ನು ತೊಳೆದುಕೊಂಡು ಆತ್ಮಶುದ್ಧಿ ಹೊಂದುವುದಕ್ಕೆ ಪಾಪ ನಿವೇದನೆ ಒಂದು ಸೂಕ್ತ ವೇದಿಕೆ ಕಲ್ಪಿಸುತ್ತದೆ. ಅಭಿಷಿಕ್ತಗೊಂಡ ಕ್ರಿಸ್ತನ ಪ್ರತಿನಿಧಿ ಬಳಿ ತನ್ನೆಲ್ಲ ತಪ್ಪುಗಳನ್ನು ಒಪ್ಪಿಕೊಂಡು ಅವುಗಳನ್ನು ಮುಚ್ಚುಮರೆಯಿಲ್ಲದೆ ಮುಕ್ತ ಮನಸ್ಸಿನಿಂದ ಹೇಳಿಕೊಂಡು ಅವರಿಂದ ಕ್ಷಮೆ ಪಡೆಯುವುದೇ, ಈ ಪಾಪ ನಿವೇದನೆ ಸಂಸ್ಕಾರ. ಧರ್ಮಸಭೆ ರಚಿಸಿರುವ ವಿಹಿತರೀತಿ ಕ್ರಮದಡಿ ಕ್ರೈಸ್ತರನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಆಜ್ಞಾಪೂರ್ವಕವಾಗಿ ಧರ್ಮನಿಷ್ಠೆಯಲ್ಲಿ ನೆಲೆಗೊಳಿಸಲು ರೂಪಿಸಿರುವ ಧರ್ಮಸೂತ್ರವೇ, ಪಾಪ ನಿವೇದನೆ. ಈ ಪಾಪ ನಿವೇದನೆ, ಗುರು ಮತ್ತು ಭಕ್ತನ ನಡುವೆ ಭಹಿರಂಗವಾಗಿ, ಏಕತಾನವಾಗಿ ಪಿಸುಮಾತಿನ ಗುಪ್ತ ಸಂಭಾಷಣೆಯಲ್ಲಿ ಜರುಗುವ ಒಂದು ಪ್ರಕ್ರಿಯೆ. ಈ ಪಾಪ ನಿವೇದನೆ ಕ್ರಮವನ್ನು ಕಥೋಲಿಕ ಪಂಗಡದರು ಹಾಗು ಕೆಲವು ಆರ್ಥೋಡಾಕ್ಸ್ ಪಂಗಡದವರು ಅನುಸರಿಸಿದರೆ, ಪ್ರಾಟಸ್ಟಂಟ್ ಪಂಗಡದವರಲ್ಲಿ ಪಾಪ ನಿವೇದನೆ ಇಲ್ಲ, ಪಾಪ ಕ್ಷಮೆಯೂ ಇಲ್ಲ. ಎಲ್ಲರೂ ಪ್ರಾರ್ಥನೆಯ ಮೂಲಕ ನೇರವಾಗಿ ಕ್ರಿಸ್ತನಿಗೇ ಅರಿಕೆ ಮಾಡಿಕೊಳ್ಳುವ ಧಾರ್ಮಿಕ ಸಿದ್ದಾಂತ ಅವರದು.
ಏಳು-ಎಂಟು ವರ್ಷ ವಯಸ್ಸಿನ ಹರೆಯದ ಅಜ್ಞಾತ ಬಾಲಕನೊಬ್ಬನ ಪ್ರಥಮ ಪಾಪ ನಿವೇದನೆಯ
ಪ್ರಸಂಗವಿದು. ಹರೆಯದ ಇನ್ನೂ ಪ್ರಾಪಂಚಿಕ ಅರಿವು ಮೂಡದ ಮಕ್ಕಳ ಮೇಲೆ ಹಿರಿಯರು ಹೇರುವ
ಒತ್ತಡಗಳಿಂದ ಮಕ್ಕಳ ಮನಸ್ಸಿನ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳು, ಪ್ರತಿಕಾರ ಮನೋಭಾವನೆಗಳು, ತವಕ ತಲ್ಲಣಗಳÀ ಬಗ್ಗೆ ಲೇಖನ ಪ್ರಖರವಾದ ಬೆಳಕು ಚೆಲ್ಲುತ್ತದೆ.
ಎಂಟು ವರ್ಷದ ಬಾಲಕ ಜಾಕ್ಲಿನ್ ಪ್ರಥಮ ಪರಮ ಪ್ರಸಾದದ ಸ್ವೀಕಾರಕ್ಕಾಗಿ ಧರ್ಮೋಪದೇಶ
ತರಗತಿಯ ಶಿಕ್ಷಕಿಯೊಬ್ಬಳಿಂದ ಧಾರ್ಮಿಕ ಶಿಕ್ಷಣ ಪಡೆಯುತ್ತಾನೆ. ಆಕೆ ಅವನನ್ನು ಪ್ರಥಮ ಪಾಪ
ನಿವೇದನೆಗೆ ತಯಾರು ಮಾಡಲು ನೀಡಿದ ಧಾರ್ಮಿಕ ಬೋಧನೆಯು ಮುಗ್ದ ಬಾಲಕನ ಮನಸ್ಸಿನಲ್ಲಿ ಉದ್ವಿಗ್ನತೆಯ
ತಳಮಳವನ್ನು ಉಂಟುಮಾಡಿ ಅವನನ್ನು ಭಯದ ಕೂಪದಲ್ಲಿ ದೂಡಿ ಬಿಡುತ್ತದೆ. ಬಾಲಕನಿಗೆ ನರಕದ ಬಗ್ಗೆ
ಶಿಕ್ಷಕಿ, ‘ಅಲ್ಲಿ ಬರೀ ಬೆಂಕಿ, ಉರಿ, ಕೊತ ಕೊತ ಕುದಿಯೋ ನೀರು, ನಿಗಿ ನಿಗಿ ಅನ್ನೋ ಬೆಂಕಿ, ದಿನದ ಇಪ್ಪತ್ತನಾಲ್ಕು ಗಂಟೆ
ನಿರಂತರ ಕುದಿತಾ ಇರೋ ಕುಲುಮೆಯೊಳಗೆ
ಜನ್ಮಜನ್ಮಾಂತರ ಸುಡಿಸಿಕೊಳ್ಳಬೇಕು. ನಿಗಿ ನಿಗಿ ಬೆಂಕಿಯೊಳಗೆ ಬರಿ ಒದ್ದಾಡೋದೇ ಒದ್ದಾಡೋದು.
ಅಲ್ಲಿನ ಕಷ್ಟಗಳಿಗೆ ಮುಕ್ತಾಯ ಅನ್ನೋದೇ ಇಲ್ಲ. ನಮ್ಮ ಜೀವನ ಹೀಗೆಯೇ ಮುಗಿದು ಹೋಗುತ್ತದೆ. ಈ
ಭೂಮಿ ಮೇಲೆ ನಾವೇನು ಅನುಭವಿಸುತ್ತೇವೆಯೋ ಆ ಕಷ್ಟನಷ್ಟಗಳು, ಏನೇನೂ ಇಲ್ಲ. ನರಕದೊಳಗಿನ ಕಷ್ಟಗಳಿಗೆ ಹೋಲಿಸಿದರೆ, ಭೂಮಿ ಮೇಲಿನ ಕಷ್ಟಗಳು ಸಮುದ್ರದ ಒಂದು ಹನಿಗೆ ಸಮ’ ಎಂದು ಹೇಳುತ್ತಿದ್ದಳು. ಇನ್ನು ಪೂರ್ತಿ
ಪಾಪ ನಿವೇದನೆ ಮಾಡದೆ, ಪಾಪಗಳನ್ನು ಮುಚ್ಚಿಡುವ
ಕುರಿತು ಮತ್ತು ಅದರಿಂದ ಉಂಟಾಗುವ ಮಾನಸಿಕ ಘರ್ಷಣೆ ಮತ್ತು ತುಮುಲಗಳ ಬಗ್ಗೆ ಆಕೆ ಬಾಲಕನಲ್ಲಿ
ಅತ್ಯಂತ ಭೀತಿ ಹುಟ್ಟಿಸುವಂತ ಭಯಾನಕ ಘಟನೆಯನ್ನು ಬಾಲಕನಿಗೆ ವಿವರಿಸುತ್ತ, “ಫಾದರ್ ಅಂದು ರಾತ್ರಿ ಊಟ
ಮುಗಿಸಿ ತಮ್ಮ ಕೊಠಡಿಯಲ್ಲಿ ನಿದ್ರಿಸುತ್ತಿದ್ದರು. ಅವರಿಗೆ ಮಧ್ಯರಾತ್ರಿ ಏಕಾಏಕಿ ಎಚ್ಚÀರವಾಯಿತು. ಹಾಸಿಗೆ ಹತ್ತಿರ ಯಾರೋ ಒಬ್ಬರು ನಿಂತಿದ್ದರು. ಒಂದು ಕ್ಷಣ ಫಾದರ್‍ಗೆ ಜೀವ
ಹೋದದಂತಾದರೂ, ಸಾವರಿಸಿಕೊಂಡು, ನಿಂತಿದ್ದ ವ್ಯಕ್ತಿಯನ್ನು ‘ಯಾರು ನೀನು,
ಏತಕ್ಕೆ ಬಂದಿದ್ದೀಯಾ? ಎಂದು ಕೇಳಿದರು. ವ್ಯಕ್ತಿ ತುಂಬ ವಿಧೇಯತೆಯಿಂದ ತಾನು ಪಾಪ ನಿವೇದನೆ ಮಾಡಲು ಬಂದಿರುವುದಾಗಿ
ಹೇಳಿದ. ಅದಕ್ಕೆ ಫಾದರ್, ‘ನೋಡಿ, ಪಾಪ ನಿವೇದನೆಗೆ ಇದು ಸಮಯವಲ್ಲ, ಇಂತಹ ಮಧ್ಯ ರಾತ್ರಿಯಲ್ಲಿ
ಪಾಪ ನಿವೇದನೆ ಕೇಳುವುದಿಲ್ಲ, ನೀವು ಬೆಳಿಗ್ಗೆ ಬನ್ನಿ’
ಎಂದರು. ಅದಕ್ಕೆ ಅವನು, ’ಫಾದರ್ ನನ್ನನ್ನು ದಯವಿಟ್ಟು
ಕ್ಷಮಿಸಬೇಕು, ನಾನು ಹಿಂದೊಮ್ಮೆ ಬಂದು
ನಿಮ್ಮ ಬಳಿ ಪಾಪ ನಿವೇದನೆ ಮಾಡಿದ್ದೆ. ಅದರೆ ನಾನು ಆಗ ಒಂದು ಪಾಪವನ್ನು ಹೇಳಿರಲಿಲ್ಲ. ಅದನ್ನು
ಹೇಳುವುದಕ್ಕೆ ನನಗೆ ನಾÀಚಿಕೆಯಾಗಿತ್ತು. ಪಾಪವನ್ನು
ಮುಚ್ಚಿಟ್ಟದ್ದರಿಂದ ತುಂಬ ಕಷ್ಟಗಳನ್ನು ಎದುರಿಸಬೇಕಾಗಿ ಬಂತು.’ ಎಂದು ವಿನೀತನಾಗಿ ಗುರುಗಳ
ಮುಂದೆ ತನ್ನ ಸಮಸ್ಯೆಯನ್ನು ತೋಡಿಕೊಂಡ. ಫಾದರ್‍ನ ಮನಸ್ಸು ಕರಗಿತು. ವ್ಯಕ್ತಿ ಯಾವುದೋ ದೊಡ್ಡ
ತಪ್ಪು ಮಾಡಿರಬಹುದು, ಪಾಪ ನಿವೇದನೆಗೆ ಅವಕಾಶ
ಕೊಡೋಣ ಎಂದುಕೊಂಡು ಎದ್ದು ಹೋಗಿ ಅವರು ಉಡುಪು ಧರಿಸಿ ಬರುವಷ್ಟರಲ್ಲಿ ವ್ಯಕ್ತಿ ಅಲ್ಲಿರಲಿಲ್ಲ.
ಆದರೆ ಅವರ ಹಾಸಿಗೆಯ ಮೇಲೆ ಎರಡು ಕೈಗಳು ಸುಟ್ಟ ಗುರುತು ಕಂಡು ಬಂದವು. ಅಷ್ಟರಲ್ಲಿ
ಕಟ್ಟಿಗೆಯನ್ನು ಸುಟ್ಟ ದಟ್ಟ ವಾಸನೆ ಕೊಠಡಿಯಲ್ಲಿ ಆವರಿಸಿಕೊಂಡಿತು. ಹಾÀಸಿಗೆಯ ಮೇಲೆ ಕಂಡ ಕೈ ಗುರುತುಗಳು ಸುಟ್ಟುಹೋಗುವಾಗ ಅವು ಕ್ಷಮಿಸು ಎಂದು ಕೇಳಿದ ಕೈಗಳ
ಗುರುತಾಗಿತ್ತು. ನೋಡು ಮಗುವೇ, ನಮ್ಮ ಪಾಪ ನಿವೇದನೆಯಲ್ಲಿ
ಏನಾÀದರೂ ಹೆಚ್ಚು ಕಡಿಮೆ
ಗುಲಗಂಜಿಯಷ್ಟು ತಪ್ಪಾದರೂ ನಮಗೆಂತಹ ಕಠಿಣ ಶಿಕ್ಷೆ ಕಾದಿರುತ್ತೆ, ಗೊತ್ತಾಯ್ತಾ? ಎಂದು ಬಾಲಕನಿಗೆ ದಿಗಿಲು
ಹುಟ್ಟಿಸುವಂತ ಭಯಾನಕ ಕಥೆಗಳನ್ನು ಹೇಳಿ ಅವನನ್ನು ಆತಂಕದ ಸ್ಥಿತಿಗೆ ದೂಡಿಬಿಟ್ಟಿದ್ದಳು, ಆ ಶಿಕ್ಷಕಿ.
ಮನೆಯಲ್ಲೂ ಬಾಲಕನ ಅಜ್ಜಿ, ಮತ್ತು ಅಕ್ಕ ಅವನನ್ನು
ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ತಂದೆ ಒಬ್ಬ ಕುಡುಕನಾಗಿ ಇದ್ದುದ್ದೆಲವನ್ನು ಕಳೆದುಕೊಂಡು
ಸತ್ತು, ಕುಟುಂಬವನ್ನು ಅನಾಥರನ್ನಾಗಿ
ಮಾಡಿ ಹೋಗಿದ್ದ. ಬಾಲಕನ ತಾಯಿಗೆ ತನ್ನ ವಯಸ್ಸಾದ ಅತ್ತೆ ಮತ್ತು ಇಬ್ಬರು ಮಕ್ಕಳನ್ನು ಸಾಕುವ
ಜವಾಬ್ದಾರಿ ಅವಳ ಹೆಗಲಿಗೆ ಬಂದಿತ್ತು. ಅವಳು ಅಲ್ಲಿ ಇಲ್ಲಿ ಮನೆ ಕೆಲಸಗಳನ್ನು ಮಾಡುತ್ತ
ಮಕ್ಕಳನ್ನು ಸಾಕುತ್ತಿದ್ದಳು. ಬಾಲಕನ ಅಕ್ಕ,
ಒಬ್ಬ ಉಂಡಾಡಿ
ಸ್ವಾರ್ಥಿ. ಅವಳು ತನ್ನ ಅಜ್ಜಿಯನ್ನು ಒಲಿಸಿಕೊಂಡು ಅವಳಿಂದ ಖರ್ಚಿಗೆ ಹಣ ಕಸಿಯುತ್ತಿದ್ದಳು.
ಇದ್ದ ತನ್ನ ಒಬ್ಬ ತಮ್ಮನನ್ನು ಸರಿಯಾಗಿ ನೋಡಿಕೊಳ್ಳದೆ ಅವನನ್ನು ತಿರಸ್ಕಾರದಿಂದ
ಕಾಣುತ್ತಿದ್ದಳು. ಅಜ್ಜಿಯ ಅನಾದರ ಮತ್ತು ಅವಳ ಈ ತಾರತಮ್ಯ ಧೋರಣೆ ಬಾಲಕನ ಮನಸ್ಸಿನ ಮೇಲೆ ತೀವ್ರ
ವ್ಯತಿರಿಕ್ತ ಪರಿಣಾಮ ಉಂಟು ಮಾಡಿತ್ತು. ಮನಸ್ಸಿನಲ್ಲಿ ಪ್ರತೀಕಾರದ ಭಾವನೆ ಕುದಿಯುತ್ತಿತ್ತು.
ಪಾಪ ನಿವೇದನೆಗೆ ಎಲ್ಲಾ ಮಕ್ಕಳು ಸಿದ್ಧವಾಗಿದ್ದರೆ, ಜಾಕ್ಲಿನ್‍ಗೆ ಮಾತ್ರ ಅದೇನೋ, ಸಂಕೋಚ, ಭಯವೇ ಅವನಲ್ಲಿ ಹೆಚ್ಚಾಗಿ ಮುತ್ತಿಕೊಂಡಿತ್ತು. ಬಾಲಕ ಏನಾದರೊಂದು ನೆಪವೊಡ್ಡಿ ಪಾಪ
ನಿವೇದನೆಯಿಂದ ತಪ್ಪಿಸಿಕೊಳ್ಳುತ್ತಿದ್ದ. ಅಜ್ಜಿ ತನ್ನ ಮೊಮ್ಮಗಳಿಗೆ ಆಗಾಗ್ಗೆ ಕಾಸು
ಕೊಡುತ್ತಿದ್ದರೆ, ಜಾಕ್ಲಿನ್‍ಗೆ ಒಂದು
ಬಿಡಿಗಾಸೂ ಸಿಗುತ್ತಿರಲಿಲ್ಲ. ಆಕೆ ತನ್ನ ತಮ್ಮನನ್ನು ನೋಡಿಕೊಳ್ಳುವ ಬದಲು ಅವನನ್ನು ಗೋಳು
ಹೊಯ್ದುಕೊಳ್ಳಲು ಹೊಸ ಹೊಸ ಅಸ್ತ್ರಗಳನ್ನು ಹುಡುಕುತ್ತಿದ್ದಳು. ಜಾಕ್ಲಿನ್‍ಗೆ ಅಕ್ಕನನ್ನು ಕಂಡರೆ
ಅಷ್ಟಕ್ಕಷ್ಟೆ. ಅವಳ ಮಾತುಗಳನ್ನು ಕೇಳುತ್ತಿರಲಿಲ್ಲ,
ಅವಳ ಮೇಲೂ
ಕೋಪ ಕುದಿಯುತ್ತಿತ್ತು.
ದಿನಗಳು ಕಳೆದವು. ಎಷ್ಟು ದಿನ ಅವನು ಹೀಗೆ ಪಾಪ ನಿವೇದನೆ ಮಾಡದೆ ತಪ್ಪಿಸಿಕೊಳ್ಳಲು
ಸಾಧ್ಯ? ಒಂದು ದಿನ ಅವನ ಅಕ್ಕ
ಬಲವಂತದಿಂದ ಅವನನ್ನು ಪಾಪ ನಿವೇದನೆಗೆ ಕರೆದುಕೊಂಡು ಹೋದಳು. ಅಶಕ್ತ ರೋಗಿಯನ್ನು ಆಸ್ಪತ್ರೆಗೆ
ಒಯ್ದಂತೆ, ಬಲಿ ಕುರಿಮರಿಯನ್ನು ಕಟ್ಟಿ
ಎಳೆದೊಯ್ದಂತೆ ಜಾಕ್ಲಿನ್ ಅವಳೊಂದಿಗೆ ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿದ. ದಾರಿಯಲ್ಲಿ ಅವಳು, ‘ಇಂದು ನೀನು ಗುರುಗಳ ಬಳಿ ಸರಿಯಾಗಿ ಪಾಪ ನಿವೇದನೆ
ಮಾಡಬೇಕು. ಇಲ್ಲದಿದ್ದರೆ, ನಿನ್ನನ್ನು ಬಿಷಪ್ ಕಡೆಗೆ
ಕಳುಹಿಸಿ ಬಿಡುತ್ತಾರೆ’ ಎಂದೆಲ್ಲ ಅವನನ್ನು ಹೆದರಿಸಿದಳು. ಚರ್ಚ್‍ನಲ್ಲಿ ಪಾಪ ನಿವೇದನೆ ಮಾಡುವವರ
ಸಾಲು ತುಸು ಉದ್ದವಾÀಗಿಯೇ ಇತ್ತು. ತಮ್ಮನನ್ನು
ಪಾಪ ನಿವೇದನೆ ಮಾಡುವವರ ಸಾಲಿನಲ್ಲಿ ನಿಲ್ಲಿಸಿದಳು. ಬಾಲಕ ತನ್ನ ಅಕ್ಕನ ಕಣ್ಣು ತಪ್ಪಿಸಿ
ಅಲ್ಲಿಂದ ಪರಾರಿಯಾಗಲು ಯತ್ನಿಸಿದ. ಅವನನ್ನು ತಡೆದು ‘ನೀನು ಇಷ್ಟು ಉಡಾಳ ಎಂದು ಗೊತ್ತಿರಲಿಲ್ಲ, ನಮ್ಮ ಮನೆತನದ ಮರ್ಯಾದೆಯನ್ನೇ ತೆಗೆದುಬಿಟ್ಟೆ’ ಎಂದು ಕೋಪದಿಂದ ಅವನ ಕಪಾಳಕ್ಕೆ ಚಟಾರನೆ
ಭಾರಿಸಿಬಿಟ್ಟಳು. ಬಿದ್ದ ಏಟಿಗೆ ಬಾಲಕನ ಕಿವಿ,
ಗಲ್ಲ
ಮರಗಟ್ಟಿಹೋಗಿ ವಿಪರೀತ ನೋವಿನಿಂದ ಚೀರಿಬಿಟ್ಟ. ಕನ್‍ಫೆಷನ್ ಬಾಕ್ಸ್‍ನಲ್ಲಿ ಕುಳಿತಿದ್ದ ಫಾದರ್
ಹುಡುಗನ ಚೀರಾಟದ ಶಬ್ದ ಕೇಳಿ ಎದ್ದು ಬಂದರು. “ಏನದು ಗದ್ದಲ, ಯಾರು ನೀನು, ಹುಡುಗನನ್ನ ಏಕೆ ಹೊಡೆದೆ? ಎಂದು ಹುಡುಗನ ಪಕ್ಕದಲ್ಲಿ ನಿಂತಿದ್ದ ಅವನ ಅಕ್ಕನನ್ನು ತರಾಟೆಗೆ ತೆಗೆದುಕೊಂಡರು. ಫಾದರ್
ಬಾಲಕನ ಮುಖ ನೋಡಿ, ‘ಏನು ಮಗು ನೀನು ಪಾಪ
ನಿವೇದನೆ ಮಾಡಲು ಬಂದಿರುವೆಯಾ? ಎಂದು ಕೇಳಿದರು. ‘ಹೌದು
ಫಾದರ್’ ಎಂದು ಗದ್ಗದಿತನಾಗಿಯೇ ಹೇಳಿದ. ಫಾದರ್ ಅವನನ್ನು ಕೈಹಿಡಿದು ಕರೆದುಕೊಂಡು ಹೋಗಿ ಬೆಂಚಿನ
ಮೇಲೆ ಕೂರಿಸಿ ಮತ್ತೆ ಕನ್‍ಫೆಷನ್ ಬಾಕ್ಸ್‍ನಲ್ಲಿ ಕುಳಿತರು. ಸ್ವಲ್ಪ ಸಮಯದ ನಂತರ ಫಾದರ್ ಹೊರಗೆ
ಬಂದು ಜಾಕ್ಲಿನ್‍ನನ್ನು ಕರೆದುಕೊಂಡು ಹೋಗಿ ಅವನನ್ನು ಪಾಪ ನಿವೇದನೆಯ ಬಾಕ್ಸ್ ಬಳಿ ನಿಲ್ಲಿಸಿ
ತಾವು ಆ ಕಡೆ ಕೂತರು.
‘ಈಗ ಹೇಳು ಮಗು, ಮನೇಲಿ ನಿನ್ನನ್ನು ಏನಂತ ಕರೀತಾರೇ?
‘ಜಾಕಿ’,
ಅಂತ ಫಾದರ್’
‘ಏನು ನಿನ್ನ ಗಲಾಟೆ, ಯಾವ ಯಾವ ಪಾಪಗಳನ್ನು ಮಾಡಿದ್ದೀಯಾ?’
ಎಂದರು
ಫಾದರ್.
ಫಾದರ್ ಸಂಯಮದಿಂದ ಕೇಳಿದ್ದರಿಂದ ಅವನೊಳಗೆ ಕುದಿಯುತ್ತಿದ್ದ ಸಂಗತಿಗಳನ್ನು ಅವರ ಬಳಿ
ಹೊರಹಾಕಿದ. ‘ಮನೆಯಲ್ಲಿ ನನ್ನ ಅಜ್ಜಿ ಮತ್ತು
ಅಕ್ಕ, ನನಗೆ ವಿಪರೀತ ತೊಂದರೆ
ಕೊಡುತ್ತಾರೆ, ಫಾದರ್. ಅಜ್ಜಿ ನನ್ನ
ಅಕ್ಕನಿಗೆ ಕೇಳ್ದಂಗೆ ಕಾಸು ಕೊಡುತ್ತಾಳೆ,
ಆದರೆ ನನಗೆ
ಕೊಡೋದಿಲ್ಲ, ಅವರಿಬ್ಬರೂ ಯಾವಾಗಲೂ ಒಂದೇ.
ಅಜ್ಜಿ ನನ್ನನ್ನು ಕಂಡರೆ ಉರಿದು ಬೀಳುತ್ತಾಳೆ.್ಲ ಅವಳ ಮುಖ ಕಂಡರೆ ನನಗಾಗದು. ಅಜ್ಜಿಯನ್ನು
ಕೊಂದುಬಿಡಬೇಕೆಂದು ತೀರ್ಮಾನಿಸಿದ್ದೆ’ ಎಂದ. ‘ಹಾಂ ! ’ ಫಾದರ್ ಒಂದು ಕ್ಷಣ ವಿಚಲಿತರಾದರು.
ಮತ್ತೆ ಕೇಳಿದರು. ‘ಅಲ್ಲ ಮಗು ನಿನ್ನಂತಹ ಸಣ್ಣ ಹುಡುಗರ ತಲೆಯಲ್ಲಿ ಅಂತಹ ಕೆಟ್ಟ ವಿಚಾರ
ಬರಬಾರದಲ್ಲ, ಯಾಕೆ ನೀನು ಹಾಗೆ ಯೋಚಿಸಿದೆ?’
‘ನಮ್ಮ ಅಜ್ಜಿ ತುಂಬ ಕೆಟ್ಟವಳು ಫಾದರ್, ಆಕೆ ಕುಡಿತಾಳೆ. ನನ್ನ ತಾಯಿ ಒಂದು ಸಲ ಅವಳ ಕುಡಿತದ ಚಟದ ಬಗ್ಗೆ ಹೇಳುತ್ತ, ಅದೊಂದು ದೊಡ್ಡ ಪಾಪ ಎಂದು ಹೇಳಿದ್ದಳು.’
‘ಹೌದಾ?’
ಫಾದರ್
ಆಶ್ಚರ್ಯಪಟ್ಟರು.
‘ಅಷ್ಟೇ ಅಲ್ಲ ಫಾದರ್, ಅವಳು ನಶ್ಯ ಕೂಡ ಏರಿಸ್ತಾಳೆ. ನನ್ನ ಅಕ್ಕನಿಗೆ ಮಾತ್ರ ಕೇಳಿದಷ್ಟುÀ ದುಡ್ಡು ಕೊಡುತ್ತಾಳೆ. ನನಗೆ ನಯಾಪೈಸೆ ಕೊಡಲ್ಲ. ಅಜ್ಜಿ ಅಕ್ಕ ಸೇರಿ ನನಗೆ ಏನೇನೋ ತೊಂದರೆ
ಕೊಟ್ಟಿದ್ದಾರೆ. ಅದಕ್ಕೆ ನನ್ನ ಮೈ ಉರಿದು ಅವಳನ್ನು ಮುಗಿಸಿಬಿಡಬೇಕೆಂದು ತೀರ್ಮಾನಿಸಿದ್ದೆ”
‘ಕೊಂದ ಮೇಲೆ, ಸತ್ತ ದೇಹವನ್ನು ಏನು ಮಾಡುತ್ತಿದ್ದಿ?’
ಫಾದರ್
ಆಸಕ್ತಿಯಿಂದ ಕೇಳಿದರು.
‘ದೇಹವನ್ನು ತುಂಡು ತುಂಡು ಮಾಡಿ, ನನ್ನ ಎರಡು ಗಾಲಿ ಚಕ್ರದಲ್ಲಿ ತುಂಬಿಕೊಂಡು ಹೋಗಿ ದೂರ ಎಸೆಯ ಬೇಕೆಂದುಕೊಂಡಿದ್ದೆ’
‘ಅಯ್ಯೋ ಮಗು, ಎಷ್ಟೆಲ್ಲ ಕೆಟ್ಟ ಕೆಟ್ಟ ಆಲೋಚನೆ ಮಾಡಿರುವೆಯಲ್ಲ? ಹಾಗಿದ್ದರೆ, ನಿಜವಾಗಿಯೂ ನೀನೊಬ್ಬ ಕೆಟ್ಟ
ಹುಡುಗ’
‘ಹೌದು ಫಾದರ್, ನಾನೊಬ್ಬ ಕೆಟ್ಟ ಹುಡುಗ ಅಂತ ನನಗೆ ಗೊತ್ತಿದೆ. ಅದಷ್ಟೇ ಅಲ್ಲ ನನ್ನ ಅಕ್ಕ ಜೂಡಿಯನ್ನು ಕೂಡ
ಬ್ರೆಡ್ ಕತ್ತರಿಸುವ ಚಾಕುವಿನಿಂದ ಇರಿದು ಕೊಲ್ಲಬೇಕೆಂದು ಮಾಡಿದ್ದೆ.’
‘ಜೂಡಿ ಅಂದರೆ, ಇದೇ ಈಗ ನಿನಗೆ ಹೊಡೆದಳಲ್ಲ, ಆ ಹುಡುಗಿ, ಅವಳೇನಾ?’
‘ಹೌದು ಫಾದರ್’
‘ಅವಳನ್ನು ನೋಡಿದರೆ ಹಾಗೆಯೇ ಅನಿಸುತ್ತದೆ ಬಿಡು.
ನಿನ್ನನ್ನು ನೋಡಿದರೆ, ತುಂಬ ಧೈರ್ಯವಂತ ಹುಡುಗನಂತೆ
ಕಾಣಿಸುತ್ತೀಂiÀi. ನಿನ್ನನ್ನು ನೋಡಿದಾಗಲೇ
ನನಗೆ ಖಾತ್ರಿಯಾಯಿತು. ನಿನ್ನ ಮನಸ್ಸಿನಲ್ಲಿ ಹೇಗೆ ಅವರಿಬ್ಬರನ್ನು ಮುಗಿಸಿಬಿಡಬೇಕು
ಎಂದುಕೊಂಡಿದ್ದೀಯೋ, ನನಗೂ ಕೂಡ ಅನೇಕ ಸಲ
ಅನ್ನಿಸಿದೆ. ಎಷ್ಟೋ ಜನರಿಗೆ ನಾನು ಪಾಠ ಕಲಿಸಬೇಕಿತ್ತು. ಆದರೆ ಏನು ಮಾಡೋದು? ಪೋಲೀಸರು ಮತ್ತು
ನ್ಯಾಯಾಲಯದವರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ,
ಗಲ್ಲಿಗೇರಿಸುತ್ತಾರೆ.
ಕೊರಳಿಗೆ ಹಗ್ಗ ಬಿಗಿದು ಸಾಯಿಸುವುದನ್ನು ನೆನೆಸಿಕೊಂಡರೆ, ತುಂಬ ಭಯವಾಗುತ್ತದೆ’
‘ಹೌದಾ ಫಾದರ್, ಗಲ್ಲಿಗೇರಿಸುವುದರ ಬಗ್ಗೆ ನನಗೆ ಬಹಳಷ್ಟು ಕುತೂಹಲವಿತ್ತು. ಅದನ್ನು ನೋಡಬೇಕೆಂಬ ಆಸೆಯೂ
ಇತ್ತು. ಆದರೆ ಯಾರ ಎದುರೂ ಹೇಳಿರಲಿಲ್ಲ. ಫಾದರ್ ನೀವು ಯಾರಿಗಾದರೂ ಹಗ್ಗ ಬಿಗಿದು
ಸಾಯಿಸುವುದನ್ನು ನೋಡಿದ್ದೀರಾ?
“ಓಹ್ ! ಬೇಕಾದಷ್ಟು ಸಲ ನೋಡಿದ್ದೇನೆ. ಅವರೆಲ್ಲ
ಸಾಯುವಾಗ ದುಃಖದಿಂದ ಜೋರಾಗಿ ಅರಚುವುದನ್ನು ನನ್ನಿಂದ ನೋಡಲಾಗಲಿಲ್ಲ, ಅವರ ರೋದನವನ್ನು ಸಹಿಸಲಾಗಲಿಲ್ಲ.’
‘ಹೌದಾ ಫಾದರ್ !’ ನನಗೆ ತುಂಬಾ ಹೆದರಿಕೆಯಾಯಿತು.
‘ಹೌದು ಮಗು ಅಂತಹ ಸಾವು ಯಾರಿಗೂ ಬರಬಾರದು.
ಗಲ್ಲಿಗೇರಿಸಲ್ಪಟ್ಟವರಲ್ಲಿ ಕೆಲವರು ತಮ್ಮ ಅಜ್ಜಿಯನ್ನು ಕೊಂದು ಬಂದಿದ್ದವರಿದ್ದರು. ಅವರು
ಸಾಯುವಾಗ ಹೇಳಿದ್ದು, “ಅಜ್ಜಿಯನ್ನು ಕೊಲ್ಲುವಂತ
ಕೆಲಸ ನಾವು ಮಾಡಬಾರದಿತ್ತು” ಅಜ್ಜಿಯನ್ನು ಕೊಂದಿದ್ದಕ್ಕೆ ಅವರು ತುಂಬ ಪಶ್ಚಾತ್ತಾಪ ಪಟ್ಟರು.’
ಫಾದರ್ ಬಾಲಕನೊಂದಿಗೆ ಬಹಳ ಹೊತ್ತು ತುಂಬ ಶಾಂತವಾಗಿ ಮಾತನಾÀಡಿದರು. ಸುಮಾರು ಇಪ್ಪತ್ತು ನಿಮಿಷ ಕಳೆದದ್ದೇ ಗೊತ್ತಾಗಲಿಲ್ಲ. ಫಾದರ್ ಅವನನ್ನು ಬೀಳ್ಕೊಡಲು
ಹೊರಗಡೆ ಕಾರಿಡಾರ್‍ವರೆಗೆ ಬಂದರು. ಅಷ್ಟು ಬೇಗ ಅಲ್ಲಿಂದ ನಿರ್ಗಮಿಸುವುದು ಅವನಿಗೆ ಬೇಕಿರಲಿಲ್ಲ.
ಸ್ವಲ್ಪ ಸಮಯದಲ್ಲೇ ಬಾಲಕ ಅವರನ್ನು ಹೆಚ್ಚು ಹಚ್ಚಿಕೊಂಡು ಬಿಟ್ಟಿದ್ದ. ಫಾದರ್ ಅವನಿಗೆ ಒಬ್ಬ
ವಿಶಿಷ್ಟ ವ್ಯಕ್ತಿಯಾಗಿ ಕಂಡರು. ಧರ್ಮೋಪದೇಶದ ಶಿಕ್ಷಕಿ ಹೇಳಿದಂತೆ, ತನ್ನ ಪಾಪಕ್ಕಾಗಿ ತಾನು ರಾತ್ರಿ ಹೊತ್ತು ಸಾಯುವುದಿಲ್ಲವೆಂದು ಅವನಿಗೆ ಖಾತ್ರಿಯಾಗಿತ್ತು.
ಅಕಸ್ಮಾತ್ ತಾನು ಹಾಗೆ ಸತ್ತಿದ್ದರೆ, ತನ್ನ ತಾಯಿಯ ಮಂಚದ ಮೇಲೆ
ಸುಟ್ಟ ಗುರುತುಗಳು ಕಾಣಿಸಿಕೊಂಡು ಅವಳು ಮತ್ತಷ್ಟು ಹೆದರಿ ಬಿಡುತ್ತಿದ್ದಳಲ್ಲ, ಸದ್ಯ ಅದು ಹೇಗೋ ತಪ್ಪಿತಲ್ಲ ಎಂದು ಸಮಾಧಾನಗೊಂಡ.
No comments:
Post a Comment