Friday, 18 December 2020

ಕೊನೆಯ ಮಾತು

 ಕ್ರಿಸ್ಮಸ್ ನಲ್ಲಿ ಕಾಡಿದ ಕೆಲವು ಪ್ರಶ್ನೆಗಳು !!!



ಪ್ರೀತಿಯ ಅನು

ದೇವರು ಮನುಷ್ಯನನ್ನು ಸಂಧಿಸಿದ ಅಪೂರ್ವ ಘಟನೆಯ ಸ್ಮರಣೆಯೇ ಕ್ರಿಸ್ಮಸ್. ದೈವ ಪದವಿಯನ್ನು ತ್ಯಜಿಸಿ ಮನುಷ್ಯನಲ್ಲಿ ಒಂದಾಗಿ, ಮನುಷ್ಯನನ್ನು ದೇವರಲಿ ಕೂಡಿಸಿದ ಕ್ರಿಸ್ತನ ಜನ್ಮದ ಸವಿನೆನಪೇ ಕ್ರಿಸ್ಮಸ್. ಕ್ರಿಸ್ತ ಜಯಂತಿ  ಹಬ್ಬದ ಮುನ್ನಾದಿನ ವ್ಯಕ್ತಿಯೊಬ್ಬ ಈ ಹಬ್ಬದ ವಿಶೇಷತೆಯ ಬಗ್ಗೆ ಗಾಢ ಯೋಚನೆಯಲ್ಲಿ ಮುಳುಗಿದ್ದ. ದೇವರು ಮನುಷ್ಯ ರೂಪವನ್ನು ತಾಳುವುದರಲ್ಲಿ ಅರ್ಥವೇ ಇಲ್ಲ ಎಂಬುವುದು ಅವನ ವಾದವಾಗಿತ್ತು. ಸರ್ವಶಕ್ತರಾದ ದೇವರು ನಮ್ಮಂತಹ ದುರ್ಬಲ ಮನುಜರಾಗುವ ಅಗತ್ಯವಾದರು ಏನು? ಒಂದು ವೇಳೆ ಅಂತಹ ಅಗತ್ಯ ಬಂದರೂ ಅವರು ಬಡವರಾಗಿ ಕೊಟ್ಟಿಗೆಯಲ್ಲಿ ಏಕೆ ಜನಿಸಬೇಕು? ಇಲ್ಲ, ಇದರಲ್ಲಿ ಅರ್ಥವೇ ಇಲ್ಲ. ಖಂಡಿತವಾಗಿಯೂ ದೇವರಿಗೆ ಮಾನವನ ಮಧ್ಯೆ ಬರಲು ಮನಸ್ಸಿದಿದ್ದರೆ ಬೇರೆ ಯಾವ ಅವತಾರದಲ್ಲಾದರೂ ಬರಬಹುದಾಗಿತ್ತು ಎಂಬುವುದು ಅವನ ತರ್ಕವಾಗಿತ್ತು.

ತಕ್ಷಣ ಪಕ್ಕದಲ್ಲಿ ಆದ ಯಾವುದೋ ಸದ್ದು ಆತನ      ಯೋಚನೆಗೆ ಕಡಿವಾಣ ಹಾಕಿತು. ಆತ ಕಿಟಕಿಯ ಹೊರಗೆ ಕಣ್ಣಾಯಿಸಿದಾಗ ಚಳಿ ಹಾಗು ಭಯದಿಂದ ನಡುಗುತ್ತಿದ್ದ ಕೋಳಿಮರಿಗಳ ಗುಂಪೆÇಂದು ಅವನ ಕಣ್ಣಿಗೆ ಬಿತ್ತು. ಅವುಗಳ ಮೇಲೆ  ಕನಿಕರ ಪಟ್ಟು ಅವುಗಳನ್ನು ತನ್ನ ಮನೆಯೊಳಗಿನ ಬೆಚ್ಚಗಿನ ಜಾಗಕ್ಕೆ ಒಯ್ಯಲು ಆತನು ಪ್ರಯತ್ನಿಸಿದನು. ಆದರೆ ಅವನು ಎಷ್ಟೇ ಪ್ರಯತ್ನಪಟ್ಟರೂ ಕೋಳಿಮರಿಗಳು ಅವನ ಹತ್ತಿರ ಬರದೆ ಹೆದರತೊಡಗಿದವು. ‘ನಾನೊಂದು ಕ್ಷಣ ಕೋಳಿಯಾಗಿ ಅದರ ಭಾಷೆಯನ್ನು ಅರಿತು, ಅದರ ಭಾಷೆಯಲ್ಲಿಯೇ ಆ ಮರಿಗಳೊಡನೆ ಮಾತನಾಡಿದರೆ?’ ಎಂಬ ಯೋಚನೆಗಳು ಅವನಲ್ಲಿ ಹರಿಯುತ್ತಿದ್ದಂತೆ, ಕ್ರಿಸ್ತ ಜಯಂತಿಯು ರಹಸ್ಯದ ಬೇಲಿಯನ್ನು ದಾಟಲಾರಂಭಿಸಿತ್ತು.

 

ಕೊನೆಗೆ, ಈ ಆಚರಣೆಯ ಸಂದರ್ಭದಲ್ಲಿ ಕಾಡಿದ ಕೆಲವು ಪ್ರಶ್ನೆಗಳ ಸಾಲುಗಳನ್ನು ಬರೆಯುತ್ತಿದ್ದೇನೆ?.

 

ಅಲ್ಲಿ ಇಲ್ಲಿ ಎಲ್ಲೆಲ್ಲೂ ಹೋಗಿ

ಬೇಕಾಗಿದ್ದು, ಬೇಡವಾಗಿದ್ದು,

ಬೇಡಿ ಕಾಡಿ ತಡಕಾಡಿ ತಂದು

ಕಟ್ಟಿದೆ ಕೊಟ್ಟಿಗೆ

ಪ್ರಕಟಿಸಲೆಂದು ಕ್ರಿಸ್ತನ ಜನನವ.

ಕೊನೆಗೆ,

ನಿರುತ ನನ್ನ ಕಾಡಿದ್ದು ಒಂದು ಪ್ರಶ್ನೆ ಮಾತ್ರ;

ಕ್ರಿಸ್ತ ನಿಜವಾಗಿ ಹುಟ್ಟಿದ್ನಾ, ಹುಟ್ಟ ಬೇಕಾದ ನನ್ನ ಶ್ರೀಮಂತ ಕೊಟ್ಟಿಗೆಯಲ್ಲಿ ?

 

ಬೀದಿ ಬೀದಿ ಮನೆ ಮನೆಗೆ ಹೋದೆ

ಮನೆಮಂದಿಯ ಬೇಡಿಕೆಯ ಲೆಕ್ಕಿಸಿ.

ಹಾಡುತ ಸಾರುತ

ಕ್ರಿಸ್ತನ ಜನನವ

ಕೈಕುಲುಕುತ್ತಾ ಶುಭಾಶಯ ಹೇಳುತ್ತಾ..

ಸಾಂತ’ನ ಜತೆ ಕುಣಿಯುತ್ತಾ

ಕೊನೆಗೆ,

ನಿರುತ ನನ್ನ ಕಾಡಿದ್ದು ಒಂದು ಪ್ರಶ್ನೆ ಮಾತ್ರ:

ಮನಸ್ಸನು ಬೆಸಯುವ ಕ್ರಿಸ್ತನ ಮನಸ್ಸಿತ್ತಾ ಹಾಡಿದ ನನ್ನ ಮನಸ್ಸಿನಲ್ಲಿ..?

 

ಆ ಪುಸ್ತಕ ಈ ಪುಸ್ತಕ

ಹತ್ತಾರು ಪುಸ್ತಕಗಳ ಓದಿ

ನೂರಾರು ಪದಗಳ ಜೋಡಿಸಿ

ಬರೆದೆ ಸಾಲು ಸಾಲು ವಚನವ ನೋಡಿ

ಕ್ರಿಸ್ಮಸ್ ದಿನದಂದು ಮೋಡಿ ಮಾಡಬೇಕಾದ ಪ್ರವಚನವ ಕೋರಿ

ಕೊನೆಗೆ,

ಮಾತು ನಿರತ ನನ್ನ ಕಾಡಿದ್ದು ಒಂದು ಪ್ರಶ್ನೆ ಮಾತ್ರ:

ಕ್ರಿಸ್ತನ ಮಾತಿತ್ತೇ ನಾನು ಬರೆದ ಪ್ರವಚನದಲ್ಲಿ..?

 

ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು

ಇಂತಿ ನಿನ್ನ

ಆನಂದ್

(oಟಿಣiಟಿueoಟಿ ಠಿಚಿge #)

(oಟಿಣiಟಿueಜ ಜಿಡಿom ಠಿಚಿge #)

ಕೊನೆಯ ಮಾತು

ಕ್ರಿಸ್ಮಸ್ ನಲ್ಲಿ ಕಾಡಿದ ಕೆಲವು ಪ್ರಶ್ನೆಗಳು !!!

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...