ಪವಿತ್ರ ತಾಯಿ ಧರ್ಮಸಭೆ ಡಿಸೆಂಬರ್ 26 ರಂದು ತನ್ನ ಚೊಚ್ಚಲ ರಕ್ತಸಾಕ್ಷಿಯಾದ ಸ್ತೇಫನರನ್ನು ಸ್ಮರಿಸುತ್ತದೆ. ಗ್ರೀಕ್ ಭಾಷೆಯಲ್ಲಿ 'ಸ್ತೇಫನ ' ಎಂದರೆ 'ಕಿರೀಟ ಅಥವಾ ‘ಮುಕುಟ’ ಎಂಬ ಅರ್ಥವಿದೆ. ಡೆನ್ಮಾರ್ಕ್, ಜರ್ಮನಿ, ಫಿನ್ಲ್ಯಾಂಡ್ ಹಾಗೂ
ಐಲೆರ್ಂಡ್ ಗಣರಾಜ್ಯದಂತಹ ವಿಶ್ವದ ಕೆಲವು ಭಾಗಗಳಲ್ಲಿ ಈ ದಿನವನ್ನು ಸಾರ್ವಜನಿಕ ರಜಾ ದಿನವೆಂದು
ಪರಿಗಣಿಸಲಾಗುತ್ತದೆ. ಸ್ತೇಫನರನ್ನು ಧರ್ಮಾಧಿಕಾರಿಗಳ, ಪೀಠ ಸೇವಕರ ಪಾಲಕರು ಎಂದು ಕರೆಯುತ್ತಾರೆ. ಈ ವಿಶೇಷ ದಿನದಂದು ಸ್ತೇಫನರು ನಡೆದು ಬಂದ ಕ್ರೈಸ್ತ
ಸುವಾರ್ತಾ ವಿಶ್ವಾಸದ ಹಾದಿಯನ್ನು ಅವಲೋಕಿಸಿ ಅವರ ಅಚಲ ವಿಶ್ವಾಸದ ಪರಿಯನ್ನು ಮೆಲುಕುಹಾಕುವುದು
ಸಮಂಜಸವೆನಿಸುತ್ತದೆ.
1.
ಸಹಾಯಕ ಸೇವಾ
ಜೀವನ
ಪವಿತ್ರ ಗ್ರಂಥದ ಪ್ರಕಾರ ಆದಿ ಧರ್ಮಸಭೆಯ ಆರಂಭದ
ದಿನಗಳಲ್ಲಿ, ದಿನದಿಂದ ದಿನಕ್ಕೆ ಭಕ್ತ
ವಿಶ್ವಾಸಿಗಳ ಸಂಖ್ಯೆ ಹೆಚ್ಚುತ್ತಾ ಬಂದಿತು. ಆಗ ಗ್ರೀಕ್ ಭಾಷೆ ಮಾತನಾಡುತಿದ್ದವರ ಹಾಗೂ ಸ್ಥಳೀಯ
ಭಾಷೆ ಮಾತನಾಡುತಿದ್ದವರ ನಡುವೆ ಉಟೋಪಚಾರದ ವಿಷಯದಲ್ಲಿ ಬಿನ್ನಾಭಿಪ್ರಾಯ ಉಂಟಾಯಿತು. ಆಗ
ಹನ್ನೆರಡು ಮಂದಿ ಪ್ರೇಷಿತರು ಭಕ್ತವಿಶ್ವಾಸಿಗಳ ಸಭೆ ಕರೆದು ಭಕ್ತ ವಿಶ್ವಾಸಿಗಳ ಉಟೋಪಚಾರ
ಸೇವೆಗಾಗಿ ಏಳು ಮಂದಿ ಸಪ್ತ ಸಹಾಯಕರನ್ನು ನೇಮಿಸಿದರು. ಆ ಏಳು ಮಂದಿ ವಿಶೇಷ ವ್ಯಕ್ತಿಗಳಲ್ಲಿ ಈ
ಸ್ತೇಫನರು ಅಗ್ರ ಗಣ್ಯರು. ಸ್ತೇಫನರು ಅಗಾಧ ವಿಶ್ವಾಸವುಳ್ಳವರೂ, ಪವಿತ್ರಾತ್ಮಭರಿತರೂ ಆಗಿದ್ದರು. "ದೈವಾನುಗ್ರಹದಿಂದಲೂ, ಶಕ್ತಿಯಿಂದಲೂ ತುಂಬಿದ್ದರು. ಜನರ ಮದ್ಯೆ ಅದ್ಭುತಗಳನ್ನೂ, ಸೂಚಕಕಾರ್ಯಗಳನ್ನೂ ಮಾಡತ್ತಿದ್ದರು". (ಪ್ರೇಷಿತರ ಕಾರ್ಯಕಲಾಪಗಳು 6:8)
2.
ಶತ್ರುಗಳ ಉಗಮ
- ದೈವ ದೂಷಣೆ ಅಪವಾದ
ಸ್ತೇಫನರ ಜನಪ್ರಿಯತೆ ಯೆಹೂದ್ಯರಲ್ಲಿ ದ್ವೇಷವನ್ನು
ಹುಟ್ಟು ಹಾಕಿತು. ಬಿಡುಗಡೆ ಹೊಂದಿದವರು ಎಂಬ ಪ್ರಾರ್ಥನಾ ಮಂದಿರಕ್ಕೆ ಸೇರಿದ ಸೀರೇನ್ ಮತ್ತು
ಅಲೆಕ್ಸ್ಜಂಡ್ರಿಯ ಹಾಗೂ ಸಿಸಿಲಿಯಾ ಮತ್ತು ಏಷ್ಯಾದ ಯೆಹೂದ್ಯರು ಸ್ತೇಫನರೊಂದಿಗೆ ವಾಗ್ವಾದಕ್ಕೆ
ಇಳಿದರು. ಸ್ತೇಫನರ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ, ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲು ಅವರಿಂದ ಆಗಲಿಲ್ಲ. (ಪ್ರೇಷಿತರ ಕಾರ್ಯಕಲಾಪಗಳು 6:10) ಇದು ಸ್ತೇಫನರ ಶತ್ರುಗಳಲ್ಲಿ ಮತ್ತಷ್ಟು ಹಗೆತನವನು
ಹುಟ್ಟುಹಾಕಿತು. ಅವರ ವಿರೋಧಿüಗಳು ‘ಸ್ತೇಫನರು ಮೋಶೆ ಹಾಗೂ ದೇವರ ವಿರುದ್ದ ಧರ್ಮ ನಿಂದನೆ ಮಾಡುತ್ತಾರೆ’ ಎಂಬ ಆರೋಪ
ಹೊರಿಸಿ ನ್ಯಾಯ ವಿಚಾರಣೆ ಸಭೆಯ ಮುಂದೆ ನಿಲ್ಲಿಸಿದರು.
3.
ನ್ಯಾಯ
ವಿಚಾರಣೆ - ಸ್ತೇಫನರ ಸುದೀರ್ಘ ವ್ಯಾಖ್ಯಾನ
ಸ್ತೇಫನರನ್ನು ಪ್ರಧಾನ ಯಾಜಕರು ‘ನಿನ್ನ ಮೇಲೆ
ಹೊರಿಸಿರುವ ಆಪಾದನೆ ಸತ್ಯವೋ’ ಎಂದು ಕೇಳಿದಾಗ,
ಅವರು ಪಿತಾಮಹ
ಅಬ್ರಹಾಂನಿಂದ ಹಿಡಿದು ಸೋಲೋಮೋನ್ ಅರಸನವರೆಗೆ ಇಸ್ರಾಯೇಲ್ ಇತಿಹಾಸ ಹಾಗೂ ದೇವರು ತಾನು
ಆರಿಸಿಕೊಂಡ ಜನಾಂಗದ ಮೇಲೆ ನೀಡಿದ ಆಶೀರ್ವಾದಗಳ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತಾರೆ. ಪ್ರೇಷಿತರ
ಕಾರ್ಯಕಲಾಪಗಳು 7 - 1:50 ರಲ್ಲಿ ಅವರ ಸುದೀರ್ಘ
ಭಾಷಣದ ವ್ಯಾಖ್ಯಾನ ಇದೆ.
4.
ಪ್ರಭು
ಯೇಸುವಿನ ಹಾಗೆ ನಿಷ್ಠುರವಾಗಿ ಟೀಕಿಸಿದ ಸ್ತೇಫನರು
ಪ್ರಭು ಯೇಸು ತಮ್ಮ ಸುವಾರ್ತಾ ಜೀವನದಲ್ಲಿ ಹೇಗೆ
ಫರಿಸಾಯರನ್ನು ಹಾಗೂ ಧರ್ಮಶಾಸ್ತ್ರಿಗಳನ್ನು ನೇರವಾಗಿ ಟೀಕಿಸಿದರೋ ಹಾಗೆಯೇ ಸ್ತೇಫನರು
ಯೆಹೂದ್ಯರನ್ನು ‘ನೀವು ಕಠಿಣ ಹೃದಯಿಗಳು ದೇವರ ಸಂದೇಶಕ್ಕೆ ಕಿವುಡರು, ನಿಮ್ಮ ಪೂರ್ವಜರಂತೆ ನೀವೂ ಸಹ ಪವಿತ್ರಾತ್ಮರನ್ನು ಪ್ರತಿಭಟಿಸುತ್ತೀರಿ. ನಿಮ್ಮ ಪೂರ್ವಜರು
ಪ್ರವಾದಿಗಳನ್ನು ಕೊಲೆಮಾಡಿದರು. ನೀವಾದರೋ ಸತ್ಯಸ್ವರೂಪನಾದ ದೇವಕುಮಾರನನ್ನು ಹಿಡಿದು ಕೊಟ್ಟು
ಕೊಲೆ ಮಾಡಿಸಿದಿರಿ’.(ಪ್ರೇಷಿತರ ಕಾರ್ಯಕಲಾಪಗಳು 7,51:53)ಹೀಗೆ ಸ್ತೇಫನರು ಅವರನ್ನು
ನೀವು ಕಾನೂನನ್ನು ಪಡೆದು ಅದನ್ನು ಪಾಲಿಸಲಿಲ್ಲ,
ಹೀಗೆ
ಅವಿಧೇಯರಾಗಿ ನಡೆದಿರಿ ಎಂದು ಕಟುವಾಗಿ ಟೇಕಿಸುತ್ತಾರೆ. ದೇವರ ಕರುಣೆ ಮತ್ತು ಅನುಗ್ರಹದ
ಹೊರತಾಗಿಯೂ ಇಸ್ರಾಯಲ್ ಹೀಗೆ ವಿಧೇಯರಾದರು ಎಂಬುದರ ಬಗ್ಗೆ ತೀವ್ರವಾಗಿ ಖಂಡಿಸಿದರು.
5.
ಸಾವಿನಲ್ಲೂ
ಪ್ರಭುವನ್ನು ಅನುಕರಿಸಿ - ಸಂಯಮ ತೋರಿ ಹುತಾತ್ಮರಾದ ಸ್ತೇಫನರು
ಸ್ತೇಫನರ ನೇರ ಮತ್ತು ನಿಷ್ಠುರ ನುಡಿಗಳಿಂದ ಕೋಪೋದ್ರಿತರಾದ
ನ್ಯಾಯಸಭೆಯ ಸದಸ್ಯರು ಅವರ ಮೇಲೆ ಕಟ ಕಟನೆ ಹಲ್ಲು ಕಡಿದರು. ಸ್ತೇಫನರು ಪವಿತ್ರಾತ್ಮಭರಿತರಾಗಿ
ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಅವರ
ಬಲಪಾರ್ಶದಲ್ಲಿ ನಿಂತಿದ್ದ ಯೇಸುವನ್ನು ಕಂಡು ನ್ಯಾಯಸಭೆಯವರಿಗೆ ತಿಳಿಸಿದಾಗ ಅವರು ಸ್ತೇಫನರನ್ನು
ಪಟ್ಟಣದಿಂದ ಹೊರಕ್ಕೆ ದೂಡಿ ಅವರ ಮೇಲೆ ಕಲ್ಲು ತೂರಿದರು.
6. ಕೊನೆಯುಸಿರಲ್ಲೂ ಪ್ರಾರ್ಥನೆ, ಕ್ಷಮೆ ಮತ್ತು ಕರುಣೆಯ ಉಸಿರಾಡಿದ ಸ್ತೇಫನರು ಕ್ರಿಸ್ತನ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು
ನಡೆದರು..
ಸ್ತೇಫನರು ತನ್ನ ಮೇಲೆ ಕಲ್ಲು ಎಸೆಯುತಿದ್ದಾಗ ಪ್ರಭು
ಯೇಸು ಹೇಗೆ ತಮ್ಮ ತಂದೆಯಲ್ಲಿ ಪ್ರಾರ್ಥಿಸಿದರೋ ಹಾಗೆಯೇ ಇವರು ಪ್ರಭು ಯೇಸುವಿನಲ್ಲಿ ತಮ್ಮ
ಆತ್ಮವನ್ನು ಸ್ವೀಕರಿಸಿ ಎಂದು ಪ್ರಾರ್ಥಿಸಿದರು. ಕೊನೆಗೆ ಮೊಣಕಾಲೂರಿ ಅವರನ್ನು ಕೊಲ್ಲುವವರಿಗಾಗಿ
ಪ್ರಾರ್ಥಿಸಿದರು. ಈ ಪಾಪವನ್ನು ಅವರ ಮೇಲೆ ಹೊರಿಸಬೇಡಿ ಎಂದು ತಮ್ಮ ಪ್ರಾಣತ್ಯಾಗ ಮಾಡಿದರು..
============
Well researched and organised article ... Good one
ReplyDeleteWell researched and organised article ... Good one
ReplyDelete