ಕ್ರಿಸ್ಮಸ್ ಹೊತ್ತು ತರುವ ಹತ್ತಾರು ಸಂದೇಶಗಳಲ್ಲಿ, ದೇವರು ಎಂದಿಗೂ ದೀನ ದಲಿತರ, ಕಡು ಬಡವರ ಆಪ್ತ ಎಂಬ ಸತ್ಯವೂ ಒಂದು. ಕ್ರಿಸ್ತನ ಜನನವು ಈ ಒಂದು ಸತ್ಯವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತದೆ. ಕ್ರಿಸ್ತ ಹುಟ್ಟಿದ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿದಾಗ ಈ ಸತ್ಯವು ನಮಗೆ ಮನದಟ್ಟಾಗದೆ ಇರದು. ಹಾಗೇ ನೋಡಿದರೆ, ಬಡವರ ಉದ್ಧಾರಕೆಂದೇ ಮನುಷ್ಯ ರೂಪ ತಾಳಿ ಈ ಜಗತ್ತಿಗೆ ಕ್ರಿಸ್ತ ಬಂದದ್ದು. ಆದ್ದರಿಂದ ದೇವರು ಎಂದೆಂದಿಗೂ ಬಡವರ ದುರ್ಬಲರ ಪರವೆಂಬ ಪ್ರಮೇಯ ಎಂದಿಗೂ ತಪ್ಪಾಗುವುದಿಲ್ಲ.
ಕ್ರಿಸ್ತನ ನಂತರ ಕ್ರೈಸ್ತ ಧರ್ಮಸಭೆಯು ಕೂಡ ಬೆಳೆದಿದ್ದು ಹರಡಿಕೊಂಡಿದ್ದು ಬಡವರಿಂದ, ಶೋಷಿತ ವರ್ಗದ ಅಚಲ ಸಂಕಲ್ಪದಿಂದ. ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಕ್ರಾಂತಿಯ ಮನಸ್ಥಿತಿಯಲ್ಲಿ ಹುಟ್ಟಿಕೊಂಡÀ ಈ ಧರ್ಮ ಆಳುವವರ ಶೋಷಕರÀ ನಿದ್ದೆಗೆಡಿಸಿದನ್ನು ನಮ್ಮ ಇತಿಹಾಸವು ಸಹ ನಿರಾಕರಿಸಲು ಸಾಧ್ಯವೇ ಇಲ್ಲ. ರಾಜರಾಜರುಗಳೇ ಕ್ರೈಸ್ತರಿಗೆ ಹೆದರಿ ಸೋತರು, ಇನ್ನೂ ಕೆಲ ರಾಜರು ಕ್ರೈಸ್ತ ತತ್ವಗಳನ್ನು ಮೆಚ್ಚಿ ತಮ್ಮ ರಾಜ್ಯಗಳಲ್ಲಿ ಅವುಗಳನ್ನು ಅನುಮೋದಿಸಿದರು. ಮತ್ತೆ ಕೆಲವರು ಹಿಂಸೆಯಿಂದ ಕ್ರೈಸ್ತರನ್ನು ಅಡಗಿಸಲು ಹೋಗಿ ಕೈ ಸುಟ್ಟುಕೊಂಡರು. ಕ್ರಿಸ್ತ ತೋರಿದ ಸಾಮಾಜಿಕ ಜವಾಬ್ದಾರಿಯನ್ನು ಅವನ ಧರ್ಮವು ಸಹ ಶತಮಾನಗಳಿಂದ ತೋರುತ್ತಾ ಬಂದಿದೆ. ಇಂತಹ ಕ್ರಾಂತಿಕಾರಿ ಹೆಜ್ಜೆಗಳಲ್ಲಿ ಧರ್ಮಸಭೆ ಅನುಭವಿಸಿದ ಹಿಂಸೆ ನೋವು ಅಷ್ಟಿಷ್ಟಲ್ಲ. ಕ್ರಿಸ್ತನ ಅನುಯಾಯಿಗಳು ಅವನಂತೆ ಘೋರವಾಗಿ ಕೊಲ್ಲಲ್ಪಟ್ಟರು. ಹತ್ತಾರು ದೇಶಗಳಲ್ಲಿ ಈ ಧರ್ಮವನ್ನೇ ನಿಷೇಧಿಸಲಾಯಿತು. ಸಾವಿರಾರು ಕ್ರೈಸ್ತ ವಿಶ್ವಾಸಿಗಳನ್ನು ಬಂಧಿಸಲಾಯಿತು. ಇಷ್ಟೆಲ್ಲಾ ಹಿಂಸೆ ನೋವುಗಳಲ್ಲೂ ಕ್ರೈಸ್ತ ಧರ್ಮಸಭೆ ಕ್ರಿಸ್ತನಂತೆ ಬಡವರ ಪರ ವಹಿಸಿ ಸೇವೆ ಮಾಡುವುದನ್ನು ಮರೆಯಲಿಲ್ಲ.
ಹೌದು,
ಇಂದು ಜಗತ್ತು
ಶ್ರೀಮಂತರ ಪರವಹಿಸುತ್ತಿದೆ. ಆಳುವ ವರ್ಗವಂತೂ ಹಣವಂತರ ಕೈಗೊಂಬೆಯಾಗಿದೆ. ಬಡವರ ದೀನದಲಿತರ ರೈತರ
ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ನ್ಯಾಯಾಲಯಗಳಲ್ಲೂ ಸಹ ಬಡವರಿಗೆ ಸಿಗಬೇಕಾದ ನ್ಯಾಯ
ಸಿಗುತ್ತಿಲ್ಲ. ಸರ್ಕಾರಗಳು ತರುತ್ತಿರುವ ಕಾಯ್ದೆಗಳು ಸಹ ಬಡರೈತರ, ಕೂಲಿಕಾರ್ಮಿಕರ ವಿರುದ್ಧವಾಗಿವೆ. ದೌರ್ಜನ್ಯ,
ದಬ್ಬಾಳಿಕೆಯ
ವಿರುದ್ಧ ದ್ವನಿ ಎತ್ತುವವರನ್ನು ಬಂಧಿಸಲಾಗುತ್ತಿದೆ. ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳನ್ನು
ತಾತ್ಸಾರದಿಂದ ಕಾಣುತ್ತಿವೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಬಡ ರಾಷ್ಟ್ರಗಳ ಮೇಲೆ ಬಲ
ಪ್ರಯೋಗಕ್ಕೆ ಹೊರಟಿವೆ. ದೇಶಗಳು ಲಿಂಗ ತಾರತಮ್ಯ, ವರ್ಣ ತಾರತಮ್ಯ, ವರ್ಗ ತಾರತಮ್ಯಗಳನ್ನು ತಮ್ಮ
ನೀತಿಯಾಗಿಸಿಕೊಂಡಿವೆ. ಈ ಎಲ್ಲಾ ದಬ್ಬಾಳಿಕೆಯ ಒಟ್ಟು ರೂಪ ಎಂಬಂತೆ ಪ್ರಸ್ತುತ ಉತ್ತರ ಪ್ರದೇಶದ
ಹತ್ರಾಸ್‍ನ ಯುವತಿಯ ಮೇಲೆ ನಡೆದ ಅಮಾನುಷ ದಾಳಿ. ಮೇಲ್ಜಾತಿಯ ಯುವಕರಿಂದ ಅತ್ಯಾಚಾರಕ್ಕೆ ಒಳಗಾದ
ಬಡಕುಟುಂಬದ ಮತ್ತು ದಲಿತ ವರ್ಗದ ಈ ಹೆಣ್ಣು ಮಗಳು ನೋವಿನಿಂದ ಅಸುನೀಗಿದ್ದನ್ನು ನಾವು
ಕಂಡಿದ್ದೇವೆ. ಸಾವು ಬದುಕಿನ ಮಧ್ಯೆ ಹೋರಾಡಿ ಸತ್ತ ಆ ಯುವತಿಯ ಮುಖವನ್ನು ಹೆತ್ತವರಿಗೂ ತೋರಿಸದೇ
ಸರ್ಕಾರವೇ ಮುಂದೆ ನಿಂತು ಮಧ್ಯರಾತ್ರಿ ಸುಟ್ಟು ಹಾಕಿತ್ತು. ಅತ್ಯಾಚಾರಿಗಳನ್ನು ಹಿಡಿದು ಬಂಧಿಸಿ, ಶಿಕ್ಷಿಸುವುದನ್ನು ಬಿಟ್ಟು, ಇಡೀ ಪ್ರಕರಣವನ್ನು
ಮುಚ್ಚಿಹಾಕಲು ಅತ್ಯಾಚಾರವಾದ ದಿನದಿಂದಲ್ಲೇ ಪ್ರಯತ್ನಿಸಿತ್ತು. ಅತ್ಯಾಚಾರಿಗಳ ವಿಕೃತಿಗೆ ಬಲಿಯಾದ
ಯುವತಿಯ ಮೇಲೆ ಹಲವಾರು ಇಲ್ಲಸಲ್ಲದ ಆಪಾದನೆಗಳನ್ನು ಮಾಡಲಾಯಿತ್ತು. ಮಗಳನ್ನು ಕಳೆದುಕೊಂಡ ತಂದೆ
ತಾಯಿಯರನ್ನು ನೋಡಲು, ಸಾಂತ್ವನ ಹೇಳಲು ಬಂದ
ಬಂಧು-ಬಾಂಧವರನ್ನು ಗ್ರಾಮದೊಳಗೆ ಬಿಡಲಿಲ್ಲ. ವರದಿ ಮಾಡಲು ಬಂದ ಕೆಲ ಮಾಧ್ಯಮದವರನ್ನು, ಸಾಮಾಜಿP,À ಮಹಿಳಾ ಸಂಘಟನೆ
ಕಾರ್ಯಕರ್ತರನ್ನು ಬಂಧಿಸಲಾಯಿತ್ತು. ಹೌದು,
ಈ ಘಟನೆಯು
ದೇಶದಲ್ಲಿರುವ ಬಡವರ ನೈಜ ಪರಿಸ್ಥಿತಿಯನ್ನು ಒತ್ತಿ ಹೇಳದೆ ಇರದು.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಕ್ರಿಸ್ತನಂತೆ
ನಾವೆಲ್ಲರೂ ಬಡವg,À ದೀನದಲಿತರ ಪರ ನಿಲ್ಲಬೇಕು.
ಪ್ರಾಣಭಯ ಬಿಟ್ಟು ದೌರ್ಜನ್ಯವನ್ನು ದಬ್ಬಾಳಿಕೆಯನ್ನು ಖಂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ
ಬುಡಕಟ್ಟು ಜನರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡುತ್ತಿರುವ 83 ವರ್ಷದ ಸಾಮಾಜಿಕ ಹೋರಾಟಗಾರ ಫಾದರ್ ಸ್ಟ್ಯಾನ್ ಮತ್ತು ಕೇಂದ್ರ ಸರ್ಕಾರದ ಪೌರತ್ವ
ತಿದ್ದುಪಡಿ ಕಾಯ್ದೆ (ಸಿ.ಎ.ಎ) ವಿರೋಧಿಸಿ ಶಹೀನ್ ಭಾಗ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ
ವಯೋವೃದ್ಧೆ ಬಿಲ್ಕಿಸ್ ಬಾನ್ ನಮಗೆ
ಪ್ರೇರಣೆಯಾಗಬೇಕು.
ಹೌದು ನಾವು ದೀನದಲಿತರ ಪರ ನಿಂತರೆ ಕ್ರಿಸ್ತ ನಮ್ಮಲ್ಲಿ
ಹುಟ್ಟಿದ್ದಾನೆ ಎಂದರ್ಥ. ಜತೆಗೆ ನಾವು ಕ್ರಿಸ್ತನ ಅನುಯಾಯಿಗಳು ಎಂಬುದಕ್ಕೆ ನಾವು ಜಗತ್ತಿಗೆ
ತೋರುವ ಪುರಾವೆಯು ಹೌದು. ಈ ಹಿನ್ನೆಲೆಯಲ್ಲಿ ಬಿಷಪ್ ಆಸ್ಕರ್ ರೊಮೆರೋ ಹೇಳಿಕೆಗಳು ತುಂಬ
ಅರ್ಥಪೂರ್ಣವೆನ್ನಿಸುತ್ತದೆ; “ದೇವರ ಆಳ್ವಿಕೆಗೆ ದಾರಿ
ಮಾಡಿಕೊಡುವಂತಹ ಕಾರ್ಯಗಳು; ಅಂದರೆ ಬಡವರ ಹಕ್ಕುಗಳನ್ನು
ರಕ್ಷಣೆ ಮಾಡದಿದ್ದಲ್ಲಿ, ನ್ಯಾಯ ಸಮ್ಮತ ಸಮಾಜವನ್ನು
ಕಟ್ಟುವ ನಿಟ್ಟಿನಲ್ಲಿ ನ್ಯಾಯ ಸಮ್ಮತ ಹೋರಾಟದಲ್ಲಿ ಭಾಗವಾಗದಿದ್ದಲ್ಲಿ ಧರ್ಮಸಭೆ ಅಂದರೆ ಚರ್ಚ್
ದೇವರ ಪ್ರೀತಿಗೆ ಹಾಗೂ ಶುಭಸಂದೇಶÀ ನಿಷ್ಠೆಗೆ ದ್ರೋಹ ಬಗೆದಂತೆ.” “ಯಾವುದೇ ರೀತಿಯ ಕಿರುಕುಳವನ್ನು ಅನುಭವಿಸದೆ ಜಗತ್ತಿನ ಸಕಲ
ಸವಲತ್ತುಗಳನ್ನು ಅನುಭವಿಸುವ ಧರ್ಮಸಭೆಯೇ ಹುಷಾರ್!ನೀನು ಕ್ರಿಸ್ತನ ನಿಜವಾದ ಧರ್ಮಸಭೆಯಲ್ಲ. ಪಾಪ
ಕೃತ್ಯಗಳನ್ನು ಎತ್ತಿತೋರಿಸದ ನಮ್ಮ ಪ್ರಬೋಧನೆಗಳು,
ಶುಭಸಂದೇಶ
ಪ್ರೇರಿತ ಬೋಧನೆಗಳಲ್ಲ. ಪಾಪಿಷ್ಠರನ್ನು ರಕ್ಷಿಸುವ ಹಾಗು ಅವರ ದುಷ್ಟತನದಲ್ಲಿ ತೃಪ್ತಿ
ಪಡೆಯುವಂತೆ ಅನುಗ್ರಹಿಸುವ ನಮ್ಮ ಪ್ರಬೋಧನೆಗಳು ಶುಭಸಂದೇಶ ಸಾರಲು ಕರೆಯಲ್ಪಟ್ಟ ಕರೆಗೆ ದ್ರೋಹ
ಬಗೆದಂತೆ.”
ಅಧಿಕಾರ ಬಯಸಿ ಶ್ರೀಮಂತರ ಮುಂದೆ ಮಂಡಿಯೂರದಿರೋಣ.
ಶ್ರೀಮಂತಿಕೆಯ ಆಸೆಗೆ ಬಡವರಿಂದ ದೂರವಾಗದಿರೋಣ. ಭವಿಷ್ಯ ಕಟ್ಟಿಕೊಳ್ಳುವ ನೆಪದಲ್ಲಿ ಅನ್ಯಾಯವ
ಪ್ರತಿಭಟಿಸದೆ ಕೂರದಿರೋಣ. ಸತ್ಯವೆಂಬ ಬಲದಿಂದ ಅಸತ್ಯವೆಂಬ ವರ್ತಮಾನವನ್ನು ಸರಿಪಡಿಸುವ ಕೆಲಸಕ್ಕೆ
ಕೈ ಹಾಕೋಣ. ಇದೇ ನಮ್ಮ ಕ್ರಿಸ್ಮಸ್.
ಕೊನೆಗೆ,
ಕ್ರಿಸ್ಮಸ್ ಎಂದರೆ
ಒತ್ತಾಯದಿಂದ
ಕೈಚಾಚುವ ಒತ್ತಾಸೆಯಲ್ಲ
ಹಿಂದು ಮುಂದು ಯೋಚಿಸದೆ
ಸಹಾಯದ ಕೈ ಚಾಚುವುದು...
ಕ್ರಿಸ್ಮಸ್ ಎಂದರೆ
ಯೋಚಿಸಿ ಯೋಜಿಸಿ
ಮಾಡುವ ಲೆಕ್ಕಚಾರದ
ಕೆಲಸಕಾರ್ಯವಲ್ಲ ಅದು
ಪ್ರೀತಿಯ ಒರತೆಯಾಗಿ
ನಮ್ಮಲ್ಲೇ ಚಿಮ್ಮುವ
ಮನುಷ್ಯತ್ವ…
ಕ್ರಿಸ್ಮಸ್,
ಗೊತ್ತು ಮಾಡಿ
ಭೇಟಿಯಾಗುವುದಲ್ಲ
ಅದೊಂದು
ಭಿನ್ನತೆಗಳ ಮರೆಸಿ
ಹೃದಯ ಹೃದಯ
ಮುಖಾಮುಖಿಯಾಗಿಸಿ
ಕೂಡಿಸುವ ಪ್ರೀತಿಯ
ಸಂಭ್ರಮ...
-------------
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು...
ಜೋವಿ
No comments:
Post a Comment