ಭೇಟಿಯಾದೊಡನೆ ನನ್ನಿರುವು ಹುಟ್ಟಿಸುವುದವರಲಿ ದಿಗಿಲುಗಳು
ನಾನೊಳ ಬಂದೊಡನೆ ಮುಚ್ಚುವರವರು ಕಿಟಕಿಬಾಗಿಲುಗಳು
ಅತಿಥಿಗಳ ಸಾಗಹಾಕುವರು ಲಗುಬಗನೇ
ನನ್ನ ಮಾತವರಿಗೆ ಬೇಡ ಸುಕಾಸುಮ್ಮನೆ
ಅತ್ತಿತ್ತ ನೋಡಿ ಬಾಯಿ ಹೊಲಿದುಕೊಳುವರು ಆತಂಕದಿಂದ
ನನ್ನ ತೊಲಗಿಸುವ ಉಪಾಯ ಹೂಡುವರು ಧಾವಂತದಿಂದ
ಮೊಬೈಲ್ ಸಂದೇಶ ಕಳಿಸುವರವರು ಮೇಜಿನಡಿಯಿಂದ
ನಾ ಬಂದೆನೆಂದು ತಿಳಿಸುವರಾರಿಗೋ ದೇವರೇ ಬಲ್ಲ
ಫೆÇೀಟೋ ಕ್ಲಿಕ್ಕಿಸುವರು
ನನ್ನೊಂದಿಗೆ
ಓಡಿಹೋಗುವರು ಸೆಲ್ಫೀಯೊಂದಿಗೆ
ನನ್ನ ದನಿ ಅವರಿಗೆ ವಿಚಿತ್ರ ಕಿರುಲು
ತಲೆಯ ಮೇಲೆನ್ನ ಕೊಂಬು ಮೂಡಿಸಿಹರು
ವಿಚಿತ್ರಮೃಗದಂತೆ ನನ್ನ ಬದಲಿಸಿಹರು
No comments:
Post a Comment