ಇಪ್ಪತ್ತನೇ ಶತಮಾನಕ್ಕೂ 2020ನೇ ಇಸ್ವಿಗೂ ಅದ್ಯಾವ ರೀತಿ ಸಂಬಂಧ ಇದಿಯೋ ನಾ ಅರಿಯೆ; ಆದರೆ ಎರಡರ ಕಾಲಘಟ್ಟದಲ್ಲಿ ನಡೆದ ಘಟನೆಗಳು ಮಾತ್ರ ಅತ್ಯಂತ ಘೋರ ಎಂತಲೇ ಹೇಳಬಹುದು. 20 ಶತಮಾನದಲ್ಲಿ ಮನುಷ್ಯ ಮನುಷ್ಯನ ನಡುವೆ ನಡೆದ ಮಹಾಯುದ್ಧಗಳಲ್ಲಿ ಕೋಟ್ಯನುಕೋಟಿ ಅಮಾಯಕರ ಬಲಿಗೆ ಕಣ್ಣೀರು ಸುರಿಯದವರಿಲ್ಲ. ಆರ್ಥಿಕ ಸೋಲಿಗೆ ಕಣ್ಣೀರು ಸುರಿಯದ ದೇಶದ ನಾಯಕರುಗಳೇ ಇಲ್ಲ. ಇಂದಿಗೂ ಮಹಾಯುದ್ದಗಳ ಕಥನದ ಕುರಿತು ಇತಿಹಾಸ ಅರಿಯಲು ಇಚ್ಛಿಸುವ ವ್ಯಕ್ತಿಗಳಿಗೆ ಭಯದ ಭೀತಿ ಬಿಡುವುದಿಲ್ಲ. ಅಂತಹ ಅಮಾನುಷ ಘಟನೆ 20ನೇ ಶತಮಾನಕ್ಕೆ ಸಾಕ್ಷಿಯಾಗಿದೆ.
ಅಂತೆಯೇ 2020ರ ಇಸ್ವಿಯ ಮನ ಕಲುಕುವ
ದೃಶ್ಯವೊಂದು ಜಗತ್ತಿನಾದ್ಯಂತ ನಡುಕ ಹುಟ್ಟಿಸಿದೆ. ಕೊವಿಡ್-19 ಎನ್ನುವಂತಹ ಸೋಂಕು ಎಂತವರನ್ನೂ ಧೈರ್ಯ ಹೀನರನ್ನಾಗಿ ಮಾಡುತ್ತದೆ. ಕೇವಲ ಮನುಷ್ಯನ ಉಸಿರಿನ
ಗಾಳಿಗೆ ಇನ್ನೊಬ್ಬ ಮನುಷ್ಯನ ಬಲಿಯಾಗುವ ಕಾಲ, ಅಂಥದ್ದೊಂದು ಗಳಿಗೆ ಬರುತ್ತದೆ ಎಂದು ಯಾರೂ ಕೂಡ ಊಹಿಸಿರಲು ಸಾಧ್ಯವಿರಲಿಕ್ಕಿಲ್ಲ.
ಬಡವ-ಶ್ರೀಮಂತ, ದೊಡ್ಡವ-ಸಣ್ಣವ, ಎಂಬ ಯಾವ ಭೇದ- ಭಾವವನ್ನು ನೋಡದ ಆ ಸೋಂಕುವೊಂದು ಎಲ್ಲರನ್ನೂ ಸಮಾನ ರೀತಿಯಲ್ಲಿ
ಉಪಚರಿಸುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.
ಅಂದು ದೇಶ ಬಿಟ್ಟು ವಿದೇಶಗಳಿಗೆ ಹೊರಟ ಸಹೋದರ
ಸಹೋದರಿಯರಿಗೆಲ್ಲ ಇಂದು ಮತ್ತೆ ನಮ್ಮ ಭಾರತ ದೇಶ ನೆನಪಾಗಿದೆ. ತಾಯಿ ಭಾರತಾಂಬೆಯು, ದೇಶ ಬಿಟ್ಟು ಹೋದ ಮೂಲ ಭಾರತೀಯರೂ ಕೂಡ ನನ್ನ ಮಕ್ಕಳೆ ಎಂದು ವಾಪಸು ಕರೆಯಿಸಿ
ಎದೆಗಪ್ಪಿಕೊಂಡಿದ್ದಾಳೆ. ಕೊವಿಡ್-19 ಗಿಂತ ಮುಂಚೆ ಭಾರತದ ಮೇಲಿನ
ಅವರಿಗಿರುವ ಪ್ರೀತಿ ಭಾಂಧವ್ಯ ನಮಗೆ ತಿಳಿದಿರಲಿಲ್ಲ. ನನಗೂ ಭಾರತಕ್ಕೂ ಸಂಬಂಧವಿಲ್ಲ ಎಂದು
ಕಟುವಾಗಿ ವಕ್ರವಾಗಿ ಮಾತಾಡಿದ ಚತುರರೆಲ್ಲ ಇಂದು ಭಾರತ ಮಾತೆಯ ಮಡಿಲ ಕೂಸುಗಳಾಗಿದ್ದಾರೆ. ಅವರ
ತಪ್ಪಿನ ಅರಿವಾಗಿ ಪ್ರಸ್ತುತ ಅವರೆಲ್ಲ ತಾಯಿಯ ಸೆರಗಲ್ಲಿ ಆಸರೆ ಪಡೆದು ಬೆಚ್ಚಗೆ
ನಿದ್ರಿಸುತ್ತಿದ್ದಾರೆ. ವಾಸ್ತವ ಏನೇ ಇರಲಿ ಇವತ್ತಿನ ದಿನ ಕೊವಿಡ್-19 ಕೂಡ ಒಂದು ರೀತಿ ತಾಯಿ ಮಕ್ಕಳ ಸಂಬಂಧದ ಬೆಲೆ ತಂದಿದೆ ಎನ್ನಬಹುದು. ಎಲ್ಲ ಕುಟುಂಬದ
ಸದಸ್ಯರು ಒಂದಡೆ ಸೇರಿ ಎಲ್ಲರೂ ಒಟ್ಟಿಗೆ ಕಾಲ ಕಳೆಯುವ ಗಳಿಗೆಯನ್ನು ಕೂಡ ತಂದುಕೊಟ್ಟಿದೆ
ಅನ್ನೋದು ಕೂಡ ಒಂದು ಧನಾತ್ಮಕ ಅಭಿಪ್ರಾಯ. ಕೊವಿಡ್-19 ನಿಂದ ನಾವು ಕಲಿತ ಪಾಠಗಳು
ಅದರಿಂದ ನಮಗಾದ ಅನುಕೂಲ, ಶಿಕ್ಷೆಗಳು ಏನೇ ಇರಲಿ.
ಆದರೆ ನಾವೀಗ ಕಳೆದ ಘಟನೆಗಳ ವಿಚಾರಕ್ಕಿಂತ ಹೆಚ್ಚಾಗಿ ಸುಸ್ಥಿರ ಅಭಿವೃದ್ಧಿಯ ಕುರಿತ ಚಿಂತನೆ
ಮಾಡಬೇಕಾಗಿದೆ. ಅದಕ್ಕೆ ಪರ್ಯಾಯ ಉಪಾಯವೊಂದನ್ನು ಕಂಡುಕೊಂಡು ದೇಶದ ಆರ್ಥಿಕತೆ ವ್ಯವಸ್ಥೆಯನ್ನು
ಉತ್ತಮ ಸ್ಥಿತಿಗೆ ಕೊಂಡೊಯ್ಯಲೇಬೇಕಾಗಿದೆ. ಕೊವಿಡ್-19 ಪಿಡುಗಿನಿಂದಾದ ನಷ್ಟ ಒಂದಲ್ಲ ಎರಡಲ್ಲ. ಅದರ ನಷ್ಟ ಭರಿಸುವ ಸಾಮಥ್ರ್ಯವು ಕೂಡ
ಸದ್ಯಕ್ಕೆ ಯಾರ ಹತ್ತಿರವೂ ಸುಳಿಯುವಂತೆ ಕಾಣುತ್ತಿಲ್ಲ. ದೇಶದ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿ
ಗೊಳಿಸುವುದು ಇಡೀ ದೇಶಕ್ಕೆ ಅದೊಂದು ಭಾರಿ ಮೊತ್ತದ ಸವಾಲಾಗಿ ಪರಿಣಮಿಸಿದೆ. ದೇಶಕ್ಕಾದ ಆರ್ಥಿಕ
ನಷ್ಟ ವೂ ಜನರನ್ನ ಮತ್ತು ಜನ ನಾಯಕರನ್ನ ನಿದ್ದೆಗೆಡಿಸಿಬಿಟ್ಟಿದೆ. ಇಷ್ಟು ದಿನವೂ ಕೊವಿಡ್-19 ಸೋಂಕಿಗೆ ಭಯಭೀತರಾಗಿದ್ದ ಜನರೆಲ್ಲ ಇಂದು ಅದಕ್ಕೆ ಹೊಂದಿಕೊಳ್ಳುವ ವಿಚಾರವನ್ನು
ಕೈಗೆತ್ತಿಕೊಂಡಿದ್ದಾರೆ. ಎಷ್ಟು ದಿನ ಅಂತ ಭಯದ ಬಾಗಿಲಲ್ಲೇ ನಿಲ್ಲೋದು? ಒಂಚೂರು ಧೈರ್ಯ ಮಾಡಿ ಅದನ್ನ ಹೆದರಿಸೋಣ ಎಂದು ಜನಸಾಮಾನ್ಯರೆಲ್ಲ ಇಂದು ಭಯವನ್ನ ಒಂದೆಡೆ
ಕಟ್ಟಿಟ್ಟು ಒಗ್ಗೂಡಿ ಅದರ ವಿರುದ್ಧ ಹೋರಾಡಲು ಹೊರಟಿದ್ದಾರೆ. ಅದೇ ನಿಟ್ಟಿನಲ್ಲಿ ಸಾಮಾಜಿಕ ಅಂತರ, ಮುಖಗವಸು, ಸ್ಯಾನಿಟೈಜರ್ ಬಳಸುವಂತೆ
ಸರ್ಕಾರ ಸಾರ್ವಜನಿಕರಿಗೆ ಕೆಲ ನಿಯಮಗಳನ್ನು ಹಾಕಿ ಮತ್ತು ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲು ಪೆÇಲೀಸ್ ಅಧಿಕಾರಿಗಳಿಗೆ ಸೂಚಿಸಿ ಸೋಂಕಿನಿಂದ ಎಚ್ಚರಿಕೆ ವಹಿಸುವಂತೆ ಜನರಿಗೆ ಕಿವಿಮಾತನ್ನ
ತಿಳಿಸಿದೆ.
ಇನ್ನು ಆರ್ಥಿಕ ಸ್ಥಿತಿಯ ವಿಚಾರಕ್ಕೆ ಬಂದರೆ ತುಂಬಾ
ಶೋಚನೀಯವಾಗಿದೆ. ಈಗಾಗಲೇ ನಮ್ಮ ದೇಶ ಆರ್ಥಿಕ ವ್ಯವಸ್ಥೆಯ ಸುಧಾರಣೆಯತ್ತ ಮುಖ ಮಾಡಿದ್ದರೂ ಈ
ಕೊವಿಡ್-19 ನಿಂದಾಗಿ ಆರ್ಥಿಕ
ವ್ಯವಸ್ಥೆ ಬಹಳ ಅಪಾಯಕಾರಿ ಪರಿಣಾಮ ಅನುಭವಿಸುತ್ತಿದೆ ಎಂದು ಆರ್.ಬಿ.ಐ. ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ
ತ್ರೈಮಾಸಿಕದಲ್ಲಿ ಆರ್ಥಿಕ ವ್ಯವಸ್ಥೆಯು ಶೇಕಡ -23.9 ರಷ್ಟು ಕುಸಿತ ಕಂಡಿದ್ದು
ದೇಶದ ಒಟ್ಟಾರೆ ಜಿಡಿಪಿ -9.5 ರಷ್ಟು ಕುಸಿತ ಕಾಣಲಿದೆ
ಎಂದು ಆರ್.ಬಿ.ಐ. ಅಂದಾಜಿಸಿದ್ದು, ದೇಶವನ್ನ ಚಿಂತೆಗೀಡು ಮಾಡಿದೆ. ಒಟ್ಟಾರೆ ದೇಶದ ಆರ್ಥಿಕತೆ ಹದಗೆಟ್ಟಿರುವ ಹಿನ್ನೆಲೆಯನ್ನು
ಆಧಾರವಾಗಿಟ್ಟುಕೊಂಡು ಭಾರತ ಸರ್ಕಾರವು "ಆತ್ಮ ನಿರ್ಭರ ಭಾರತ" ಎಂಬ ಪರಿಕಲ್ಪನೆಯನ್ನು
ಜಾರಿ ತಂದು ಸ್ವಾವಲಂಬಿ ಅಭಿಯಾನವನ್ನ ಪ್ರಾರಂಭಿಸಲು ಹೊರಟಿದೆ. ಇತರ ದೇಶಗಳ ಆಮದು ವಸ್ತುಗಳನ್ನ
ಕಡಿಮೆ ಮಾಡಿಕೊಂಡು ಸ್ಥಳೀಯ ಉತ್ಪಾದನೆಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುವುದು ಈ "ಆತ್ಮ ನಿರ್ಭರ ಭಾರತದ" ಮುಖ್ಯ ಉದ್ದೇಶವಾಗಿದೆ. ನಮ್ಮ
ಗಮನಕ್ಕೆ ಬಂದಿರುವ ಹಾಗೆ ಭಾರತವು ಹಳ್ಳಿಗಳ ನಾಡು. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ
ಎಂಬುವುದು ಮೊದಲಿಂದನೂ ಚರ್ಚೆಗೊಳಗಾದ ಸಂಗತಿ. ಇಷ್ಟಾದರೂ ನಮ್ಮ ಹಳ್ಳಿಗಳಲ್ಲಿ ಸಾಕಷ್ಟು ಕಡೆ ಮೂಲ
ಸೌಕರ್ಯಗಳ ವ್ಯವಸ್ಥೆಯೇ ಇಲ್ಲದಿರುವುದು ಖಂಡನೀಯ. ರೈತ ತಾನು ಬೆವರು ಸುರಿಸಿ ಇಡೀ ದೇಶಕ್ಕೆ ಅನ್ನ
ನೀಡುತ್ತಿದ್ದಾನೆ ಆದರೆ ಅವನ ಸಂಕಷ್ಟಕ್ಕೆ ಇನ್ನಾದರೂ ಒಂದೊಳ್ಳೆ ಸಹಕಾರ, ಪರಿಹಾರಗಳನ್ನು ಸರ್ಕಾರಗಳು ನೀಡುವಲ್ಲಿ ವಿಫಲವಾಗಿವೆ. ಪುರಾತನ ಕಾಲದಿಂದಲೂ ಆತನ ಅಳಲನ್ನು
ಕೇಳುವ ಒಬ್ಬ ನಾಯಕನು ಇಲ್ಲಿಯವರೆಗೂ ಬಂದಿಲ್ಲ ಮುಂದೇನೂ ಬರುವನೋ ಬರದಿರುವನೋ ನಾ ಕಾಣೆ. ಆದರೆ
ಅವನ ಬೆಳೆದ ಬೆಳೆಗಾರರು ಒಂದಷ್ಟು ಉತ್ತಮ ಬೆಲೆ ಕೊಡಿಸುವುದರಲ್ಲಿ ಜನ ನಾಯಕರು ವಿಫಲರಾಗಿದ್ದಾರೆ.
ರೈತರನ್ನು ಸಂಕಷ್ಟದ ಕೂಪಕೆ ತಳ್ಳುವುದರಿಂದ ಅವರಿಗೆ ಸಿಗುವ ಖುಷಿಯ ಫಲವಾದರು ಏನು? ಎಂಬುದು ಇಂದಿಗೂ ತಿಳಿಯದ ವಿಚಾರ. ಚುನಾವಣೆ ಸಂದರ್ಭದಲ್ಲಿ ರೈತರಿಗೆ ಅವರು ನೀಡುವ
ಆಶ್ವಾಸನೆಗಳು ಮತ್ತು ಅವರು ಕೊಡುವ ಭರವಸೆಯ ಶೌರ್ಯ ಚುನಾವಣೆಯ ನಂತರ ನಮ್ಮ ರಾಜಕಾರಣಿಗಳ
ಮುಖದಲ್ಲಿ ಇರುವುದಿಲ್ಲ. ಇದೊಂದು ನಮ್ಮ ರಾಜಕಾರಣಿಗಳ ವೈಫಲ್ಯವೆಂದೇ ಹೇಳಬಹುದು.
ಒಬ್ಬರಿಂದೊಬ್ಬರು ಒಬ್ಬರಿಂದೊಬ್ಬರು ಎಂಬುವಂತೆ ಹೇಳಿದ್ದನ್ನೇ ಹೇಳುತ್ತಾ ನೀಡಿದ ಆಶ್ವಾಸನೆಗಳನ್ನ
ನೀಡುತ್ತಾ ರೈತನಲ್ಲಿರುವ ಕೊಂಚ ನಂಬಿಕೆಯನ್ನೂ ಸಹ ಕೊಳ್ಳೆ ಒಡೆದು ಅವನ ಆತ್ಮವಿಶ್ವಾಸವನ್ನೇ
ಕಿತ್ತುಕೊಳ್ಳುತ್ತಿದ್ದಾರೆ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಸ್ವತಃ ನಮ್ಮ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೇ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಹೀಗೊಂದು
ಮಾತನ್ನ ನಾವು ವಿಮರ್ಶಿಸಬಹುದು; ಹಳ್ಳಿಗಳ ಅಭಿವೃದ್ಧಿಯೇ
ದೇಶದ ಅಭಿವೃದ್ಧಿ, ಆದರೆ ಆ ಹಳ್ಳಿಗಳ
ಅಭಿವೃದ್ಧಿಯು ರೈತನ ಅಭಿವೃದ್ಧಿಯಿಂದ ಮಾತ್ರ ಸಾಧ್ಯ ಎನ್ನುವುದು ನಮ್ಮ ಮನಸ್ಸಿಗಿನ್ನಾದರು ಇಳಿಯದ
ವಿಚಾರವಾಗಿದೆ. ಈ ಆತ್ಮನಿರ್ಭರ ಭಾರತದ ಪರಿಕಲ್ಪನೆಯಲ್ಲಾದರು ಆತನಿಗೊಂದು ಅವಕಾಶ ಕೊಟ್ಟು, ಆತನ ಸ್ವಾಭಿಮಾನದ ಬದುಕಿಗೆ ಸ್ವಾವಲಂಬನೆಯ ಶ್ರಮಕ್ಕೆ, ಆತ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಿ ರೈತನ ಮುಖದಲ್ಲೊಂದು ಕಿರು ನಗೆ ತಂದರೆ ಅಷ್ಟಕ್ಕೇ
ಸಾಕು ಇಡೀ ದೇಶವೇ ಕಿರುನಗೆಯತ್ತ ವಾಲುತ್ತದೆ. ಆಗ ಇಡೀ ದೇಶದ ಆರ್ಥಿಕ ವ್ಯವಸ್ಥೆಯು ಒಂದಷ್ಟು
ಬೆಳೆದು ಜಾಗತಿಕವಾಗಿ ದೇಶ ಹೆಸರುವಾಸಿಯಾಗಲು ಅವಕಾಶ ದೊರೆತಂತಾಗುತ್ತದೆ. ಒಬ್ಬ ಸಾಮಾನ್ಯ ರೈತನೂ
ಕೂಡ ತನ್ನ ಪಾಲಿಗಿರುವ ಅಲ್ಪಸ್ವಲ್ಪ ಹೊಲದಲ್ಲಿಯೂ ಸಹ ಎಂದರು ಸಾವಿರಾರು ಜನಕ್ಕಾಗುವಷ್ಟು
ಆಹಾರವನ್ನ ಬೆಳೆಯುತ್ತಾನೆ.
ಕೊವಿಡ್ ಎಂಬ ಪಿಡುಗು ಮನುಷ್ಯನ ಜೀವನದ ಮೇಲೆ ಸಾಕಷ್ಟು
ಕಷ್ಟನಷ್ಟಗಳನ್ನು ಮಾಡಿರುವುದರ ಜೊತೆಗೆ ಮಾರಣಾಂತಿಕ ಹೊಡೆತ ನೀಡಿ ಭಾರತವನ್ನು ಗಣನೆಗೆ
ತೆಗೆದುಕೊಂಡು ಜಾಗತಿಕಮಟ್ಟದಲ್ಲೂ ಸಹ ದೇಶದ ಆರ್ಥಿಕತೆಯನ್ನು ಜರ್ಝರಗೊಳಿಸಿ, ದೇಶದ ಆತಂಕವನ್ನ ಹೆಚ್ಚು ಮಾಡಿದೆ. ಜಗತ್ತಿನ ವಿವಿಧ ದೊಡ್ಡ ದೇಶಗಳ ಪೈಕಿ ನಮ್ಮ ಭಾರತವು
ಒಂದಾಗಿದ್ದು, 2020-21ನೇ ಸಾಲಿನ ಅರ್ಥಿಕ ವರ್ಷದ
ಮೊದಲ ತ್ರೈಮಾಸಿಕದಲ್ಲಿ ಒಟ್ಟು ದೇಶಿಯ ಉತ್ಪಾದನೆ (ಜಿ.ಡಿ.ಪಿ) ಯ ಪ್ರಮಾಣ ಮತ್ತು ಬೆಳವಣಿಗೆ
ಗಣನೀಯವಾಗಿ ಶೇಕಡ 23.9 ರಷ್ಟು ಕುಗ್ಗಿರುವುದು
ನಮಗೀಗಾಲೇ ಆರ್ಥಿಕ ಇಲಾಖೆಗಳಿಂದ ತಿಳಿದು ಬಂದಿದೆ. ಸುಮಾರು ತಿಂಗಳುಗಳ ಕಾಲ ಲಾಕ್‍ಡೌನ್‍ನ
ಪರಿಣಾಮವಾಗಿ ಇಡೀ ದೇಶವೇ ಬಂದಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಿಂದ ಹಿಡಿದು ಸಣ್ಣ ವ್ಯಾಪಾರಿಗಳ
ಕೆಲಸಗಳಿಗೆಲ್ಲ ಕೇಂದ್ರ ಸರ್ಕಾರ ನಿಬರ್ಂಧವೇರಿತ್ತು. ಇಡೀ ದೇಶವೇ ಬೆಂದು ಬಳಲಿ ನಲುಗುತ್ತಿರುವ
ಸಂದರ್ಭದಲ್ಲಿ ದೇಶವನ್ನು ಕೈ ಹಿಡಿದು ಮೇಲಕ್ಕೆತ್ತಿ ದೇಶದ ಜಿ.ಡಿ.ಪಿ ಗೆ ಶೇಕಡ 3.4 ರಷ್ಟು ಆದಾಯ ನೀಡಿ ಕೃಷಿ ಕ್ಷೇತ್ರ ಬೆಳವಣಿಗೆ
ದಾಖಲಿಸಿದೆ, ಇದರಿಂದ ಕೃಷಿ ಮತ್ತು ರೈತನ
ಸಾಮಥ್ರ್ಯವನ್ನು ಇಡೀ ದೇಶದ ಜನತೆಗೆ ರೈತನೂ ಸಾಧಿಸಿ ತೋರಿಸಿದ್ದಾನೆ. ಅಂತೆಯೇ ಕೃಷಿಯ
ಪ್ರಾಮುಖ್ಯತೆಯನ್ನ ಸರಕಾರಕ್ಕೂ ಮತ್ತು ದೇಶದ ಜನತೆಗೆ ತಿಳಿಸಿ, ಎಚ್ಚರಿಕೆ ನೀಡಿದ್ದಾನೆ ಎನ್ನುವುದು ನಾಡಿನ ಜನತೆಗೆ ಬಹಳ ಸ್ಪಷ್ಟವಾಗಿ ಅರ್ಥವಾಗಿದೆ ಎನಿಸುತ್ತದೆ.
ಇಂದಿನಿಂದಾದರು ರೈತನು, ಆತ ಬೆಳೆದ ಬೆಳೆಗೆ ಸರಿಯಾದ
ಬೆಲೆ ನೀಡಿ ಅತನ ಬೆನ್ನಿಗೆ ಆಸರೆಯಾಗಿ ಸರ್ಕಾರ ಮತ್ತು ನಾಡಿನ ಜನತೆ ಕೈ ಜೋಡಿಸಲೆಂದು ಮನವಿ
ಮಾಡಿಕೊಳ್ಳೋಣ.
============
No comments:
Post a Comment