ನೀವು ನನ್ನನ್ನು ಯಾರೆಂದು ಹೇಳುತ್ತೀರಿ?
ಇತಿಹಾಸ ಹಲವಾರು ರಾಜರುಗಳ, ಮಹಾತ್ಮರ ಬಗ್ಗೆ ತಿಳಿಹೇಳುತ್ತದೆ.
ಟಿಪ್ಪು ಯಾರು? ಎಂದು ಪರೀಕ್ಷೆಯಲ್ಲಿ ಬರುವ ಪ್ರಶ್ನೆಗೆ ಟಿಪ್ಪು ಹೈದರಾಲಿಯ ಮಗ ಎಂದು ಉತ್ತರಿಸುತ್ತೇವೆ. ಏಕೆಂದರೆ ಇತಿಹಾಸ ನಮಗೆ ಹೇಳಿದೆ, ಅವನು ಹೈದರಾಲಿಯ ಮಗ ಎಂದು.
ಇಂದು ಕ್ರಿಸ್ತ, ನಾನು ಯಾರೆಂದು ನೀನು ಹೇಳುತ್ತೀಯಾ? ಎಂದು ನಮ್ಮನ್ನು ಕೇಳಿದಾಗ ನಮ್ಮ ಉತ್ತರ ಏನಿರಬಹುದು? ಕ್ರಿಸ್ತನು ತಂದೆ ದೇವರ ಮಗನೆಂದು ರೆಡಿಮೇಡ್ ಉತ್ತರ ಕೊಡಬಹುದು. ಅದನ್ನು ನಮ್ಮ ಧರ್ಮ ನಮಗೆ ಕಲಿಸಿಕೊಟ್ಟಿದೆ.
ದೇವರ ಶುಭಸಂದೇಶದಿಂದ-
ನೀವು ನನ್ನನ್ನು ಯಾರೆಂದು ಹೇಳುತ್ತೀರಿ? ಎಂದು ತನ್ನ ಶಿಷ್ಯರನ್ನು ಉದ್ದೇಶಿಸಿ ಕೇಳಿದಾಗ
“ನೀವೇ ನಿಜವಾದ ಜೀವಂತ ದೇವರ ಪುತ್ರ” ಎಂದು ಪೇತ್ರ ಉತ್ತರಿಸಿದ.
ಪುನಃ ಯೇಸು “ಸೈಮನ್ ನೀನು ಭಾಗ್ಯವಂತನು. ಈ ಸತ್ಯವನ್ನು ಯಾವ ಮನುಷ್ಯನಿಂದ ನೀನು ಕಲಿತಿದ್ದಲ್ಲ. ನನ್ನ ತಂದೆಯೇ ನಿನಗೆ ಅರಿವು ಮೂಡಿಸಿದ್ದಾರೆ” ಎಂದು ಹೇಳಿದರು.
ಬದುಕಿನ ಸಂಭಾಷಣೆ
ಯೇಸು: ನೀವು ನನ್ನನ್ನು ಯಾರೆಂದು ಹೇಳುತ್ತೀರಿ?
ಕ್ರೈಸ್ತರು: ನೀವು ನಿಜವಾದ ಜೀವಂತ ದೇವರ ಪುತ್ರ
ಯೇಸು: ಹೌದಾ… ದುರದೃಷ್ಟಕರವೆಂದರೆ ಇದನ್ನು ನಶ್ವರ ಮಾನವನಿಂದ ಕಲಿತಿದ್ದೀರಿ. ನನ್ನ ತಂದೆಯು ಅದನ್ನು ನಿಮಗೆ ತಿಳಿಸಿಲ್ಲ.
ಕ್ರೈಸ್ತರು: ಹೌದು ಪ್ರಭುವೇ ನಾನು ಮೋಸ ಹೋಗಿದ್ದೇನೆ. ನಿಮ್ಮ ತಂದೆಯು ನನಗೆ ಅರಿವಾಗಿಸುವುದರ ಮೊದಲೇ ಯಾರೋ ಈ ಉತ್ತರವನ್ನು ನನಗೆ ಕಲಿಸಿಕೊಟ್ಟಿದ್ದಾರೆ. ನಿಮ್ಮ ಬುದ್ಧಿವಂತಿಕೆಯನ್ನು ಮೆಚ್ಚುತ್ತೇನೆ ಪ್ರಭು, ಏಕೆಂದರೆ ನಿನ್ನ ತಂದೆಯು ನಿನ್ನ ಬಗ್ಗೆ ಸೈಮನ್ ಗೆ ಮೊದಲು ಹೇಳುವ ತನಕ ನೀನು ಸೈಮನ್ನನಿಗೆ ಏನೂ ಹೇಳಲಿಲ್ಲ….
ನಮ್ಮ ಧರ್ಮ ಹೇಳಿದೆಯೆಂದೋ, ನಮ್ಮ ತಂದೆತಾಯಿಗಳು, ಜ್ಞಾನೋಪದೇಶದ ಗುರುಗಳು ಕಲಿಸಿದ್ದೆಂದೋ, ಕ್ರಿಸ್ತ ದೇವರೆಂದು ರೆಡಿಮೇಡ್ ಉತ್ತರ ಕೊಡಬೇಡ. ಕ್ರಿಸ್ತ ಯಾರೆಂದು ತಿಳಿಯಲು ಪ್ರಯತ್ನಿಸು… ಆಗ ತಂದೆ ದೇವರು ಅದನ್ನು ನಿನಗೆ ಗೊತ್ತಾಗದಂತೆ ನಿನಗೆ ತಿಳಿಸಿಬಿಡುವರು....
No comments:
Post a Comment