ಭಗ್ನ ಹೃದಯಗಳ ಮೌನ
ಹಸಿವಿನ ಮೌನ
ಪದಗಳ ನಡುವಿನ ಮೌನ
ಪರ್ವತ ಕಣಿವೆಯೊಡಲಿನ ಮೌನ
ಕಡಲಿನ ಅಲೆಗಳ ನಡುವಿನ ಮೌನ
ಹಕ್ಕಿಯ ಮೌನ
ಕಥೆಗಳೊಳಗಿನ ಮೌನ
ರಾಗ ಆಲಾಪನೆಗಳ ಮೌನ
ಮಿಡಿದ ತಂತಿಯ ಮೌನ
ಈ ಎಲ್ಲಾ ಮೌನಗಳಲ್ಲೂ
ಮಾತನಾಡುವುದೊಂದೇ
ಅದೇ ಆತ್ಮ ಮೌನ
ಮೌನವ ಬಯಸುವೆಯಾ?
ಮೌನವ ಬಯಸುವೆಯಾ?
ಮಾರುಕಟ್ಟೆಯ ಮಂಡಿಯಲ್ಲಿ
ಜನಜಂಗುಳಿಯ ಹಾದಿಬೀದಿಗಳಲ್ಲಿ
ಒತ್ತಡ ಕೆಲಸಕಾರ್ಯಗಳಲ್ಲಿ
ಬಯಸಿ ಮೌನದಿಂದಿರು
ಆದರೆ
ಅನ್ಯಾಯವು ನ್ಯಾಯವ
ಕಟ್ಟಿ ಬಡಿಯುವಾಗ
ಮೌನವಹಿಸಬೇಡ
ಹಾಗಾಗಿದ್ದಲ್ಲಿ ನಿನ್ನೆಲ್ಲಾ
ದಿವ್ಯಮೌನಕ್ಕೆ
ಅರ್ಥವಿರದು
¨ ಜೀವಸೆಲೆ
No comments:
Post a Comment