ವಾಲ್ಸ್ ಎಂಬ ಕಾದಂಬರಿಯಲ್ಲಿ ವೈಕೊಮ್ ಮುಹಮದ್ ಬಸೀರ್ ಎಂಬ ಲೇಖಕ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ:
೧. ನಾನು ಏಕೆ ಸ್ವತಂತ್ರನಾಗಿರಬೇಕು?
೨. ಯಾರಿಗೆ ಸ್ವಾತಂತ್ರ್ಯ ಬೇಕು?
ಕಾದಂಬರಿಕಾರ ಇಲ್ಲಿ ಸ್ವಾತಂತ್ರ್ಯದ ಅರ್ಥಹೀನತೆಯ ಬಗ್ಗೆ ಹೇಳುತ್ತಿದ್ದಾನೆ. ಪ್ರೀತಿ ರಹಿತ ಜಗತ್ತಿನಲ್ಲಿ ಅಥವಾ ದ್ವೇಷ ತುಂಬಿದ ಮನಸಿನಲ್ಲಿ ಸ್ವಾತಂತ್ರ್ಯದ ಬೆಲೆ ಏನು? ಒಂದು ಭ್ರಾತೃತ್ವದ ಸಮುದಾಯದಲ್ಲಿ ಮಾತ್ರ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ಅರ್ಥವಿರುವುದು. ನಾವು ಪ್ರೆಂಚ್ ಕ್ರಾಂತ್ರಿಯ ಧ್ಯೇಯವಾಕ್ಯವನ್ನು ನೆನೆಸಿಕೊಳ್ಳುವುದು ಸೂಕ್ತ: ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ; ಇವುಗಳಲ್ಲಿ ಯಾವುದನ್ನೂ ಪರಸ್ಪರ ಒಂದರಿಂದ ಬೇರ್ಪಡಿಸಲಾಗದು.
ರವೀಂದ್ರನಾಥ ಠಾಕೂರರ ಕವಿತೆ;
ಎಲ್ಲಿ ಮನಸ್ಸು ನಿರ್ಭಯವೋ,
ಶಿರ ಎತ್ತರಕ್ಕೆ ನಿಮಿರಿ ನಿಂತಿದೆಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ,
ಎಚ್ಚರಗೊಳ್ಳಲಿ ನನ್ನ ನಾಡು
ಎಲ್ಲಿ ಜ್ಞಾನ ಸ್ವತಂತ್ರವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ,
ಎಚ್ಚರಗೊಳ್ಳಲಿ ನನ್ನ ನಾಡು
ಎಲ್ಲಿ ಜಗತ್ತು ಸಂಕುಚಿತವಾದ
ಮನೆಗೋಡೆಗಳಿಂದ ಒಡೆದು
ಚೂರುಚೂರಾಗಿಲ್ಲವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ
ಎಚ್ಚರಗೊಳ್ಳಲಿ ನನ್ನ ನಾಡು
ಎಲ್ಲಿ ಮನಸ್ಸನ್ನು ನೀನು ಸತತ
ವಿಸ್ತರಣಶೀಲ ವಿಚಾರ ಕ್ರಿಯೆಗಳಿಗೆ ಮುನ್ನಡೆಸುತ್ತೀಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ,
ಎಚ್ಚರಗೊಳ್ಳಲಿ ನನ್ನ ನಾಡು
===============
ದೇವರೆಂದರೆ ಸ್ವಾತಂತ್ರ್ಯ ಮತ್ತು ಬಿಡುಗಡೆ. ದೇವರು, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆಯ ಬಂಡೆಯ ಮೇಲೆ ಮನುಷ್ಯರ ಘನತೆಯನ್ನು ಸ್ಥಾಪಿಸಿದ್ದಾನೆ. ಆದ್ದರಿಂದ, ಸೃಷ್ಟಿಯ ಮೇರು ಸೃಷ್ಟಿ ಮನುಷ್ಯನ ಅಮಾನವೀಯಗೊಳಿಸುವ ಯಾವುದೇ ಕ್ರಿಯೆ, ದಬ್ಬಾಳಿಕೆ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿರುತ್ತದೆ ಮತ್ತು ಆದ್ದರಿಂದ ಅವು ದೇವರ ವಿರುದ್ಧವು ಹೌದು.
ತರಗತಿಗಳಲ್ಲಿ ಮತ್ತು ಧರ್ಮೋಪದೇಶ ಪಠ್ಯ ಪುಸ್ತಕಗಳಲ್ಲಿ ದೇವರೆಂದರೆ ಸ್ವಾತಂತ್ರ್ಯ ಎಂದು ನಾವು ಕಲಿಸುತ್ತೇವೆ, ಆದರೆ ಈ ಸ್ವಾತಂತ್ರ್ಯವು ಕೇವಲ ಅಧಿಕಾರಸ್ಥರಿಗೆ ಮಾತ್ರ ಕಾಯ್ದಿರಿಸಲಾಗಿದೆ. ಅವರು ತಮ್ಮ ಅಧೀನದಲ್ಲಿರುವವರಿಗೆ, "ನಾವು ಆದೇಶಗಳನ್ನು ಪಾಲಿಸುವವರಲ್ಲ, ನಾವು ಆದೇಶಗಳನ್ನು ಕೊಡುವವರು" ಎಂದು ತಮ್ಮ ಗರ್ವವನ್ನು ತೋರಿಸುತ್ತಾರೆ. ಹೌದು, ಬಹುಪಾಲು ಜನರಿಗೆ, ನಿಜವಾದ ಸ್ವಾತಂತ್ರ್ಯವೆಂಬುವುದು ದೂರದ ಕನಸು...
**********
No comments:
Post a Comment