Sunday, 8 November 2020
ಗೀತಾಂಜಲಿಯ ತುಣುಕು - ಸಿ ಮರಿ ಜೋಸೆಫ್
ಬೆಳ್ಳಂಬೆಳಗ್ಗೆಯೇ ಪಿಸುದನಿಯೊಂದುಲಿಯಿತು, ನಾನೂ ನೀನೂ ಇಬ್ಬರೇ, ದೋಣಿಯಲ್ಲಿ ಕುಳಿತು ಗೊತ್ತಿಲ್ಲದ ನಾಡಿಗೆ ಕೊನೆಯಿಲ್ಲದ ಯಾತ್ರೆಗೆ ಹೊರಡಬೇಕೆಂದು, ಜಗದ ಯಾವ ಜೀವಿಗೂ ಅದು ಗೊತ್ತಾಗಬಾರದೆಂದು.
ತೀರವಿರದ ಸಾಗರದಲ್ಲಿ, ನಿನ್ನ ಮಂದಹಾಸದ ಕೇಳುವಿಕೆಯಲ್ಲಿ, ನನ್ನ ಗಾನವದು ಇಂಚರದಲ್ಲಿ ಉಬ್ಬುವುದು, ಅಲೆಗಳೋಪಾದಿ ನಿರರ್ಗಳವಾಗಿ.
ಗಳಿಗೆಯಿನ್ನೂ ಬಂದಿಲ್ಲವೇ? ಕೆಲಸವಿನ್ನೂ ಉಳಿದಿದೆಯೇ? ನೋಡಲ್ಲಿ, ದಂಡೆಯಲ್ಲಿ ಸಂಜೆಯದು ಇಳಿದಿಹುದು, ಸಮುದ್ರವಕ್ಕಿಗಳು ಗೂಡರಸಿ ಹಾರುತಿವೆ ಬೈಗಿನಲಿ.
ಯಾರಿಗೆ ಗೊತ್ತು ಸಂಕೋಲೆಗಳು ಬಿರಿಯುವುದು ಯಾವಾಗೆಂದು, ಮತ್ತು ಆ ದೋಣಿ,
ಮುಳುಗು ಸೂರ್ಯನ ಕೊನೆಯ ಪ್ರಭೆಯಂತೆ, ನಿಶೆಯಲಿ ಮರೆಯಾಗುವುದೆಂದು?
ಟ್ಯಾಗೋರರ Early in the day it was whispered.... ಕವಿತೆಯ ಭಾವಾನುವಾದ.
-೦-೦-೦-೦-
Subscribe to:
Post Comments (Atom)
ಎತ್ತಿತೋರಿಸಲಾದ ಪೋಸ್ಟ್
ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ
ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...
-
ಡಾ. ಸಿಸ್ಟರ್ ಪ್ರೇಮ (ಎಸ್. ಎಮ್. ಎಮ್. ಐ) ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ಮಾಲಿಕೆಯಲ್ಲಿ ಸ್ವಾತಂತ್ರ್ಯಪೂರ...
-
- ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ) ಸ್ವಾತಂತ್ರ್ಯ ಪೂರ್ವದಲ್ಲಿ ಕ್ರೈಸ್ತರು: ಮಿಷನರಿಗಳ ಆಗಮನಕ್ಕೂ ಮುಂಚೆ ಅಂದರೆ ಮೂರನೇ ಶತಮಾನದಲ್ಲೇ ಕ್ರೈಸ್ತ ಧರ್ಮವನ...
-
ಸ್ಥೂಲವಾಗಿ ಹೇಳುವುದಾದರೆ, ಕ್ರೈಸ್ತರಲ್ಲಿ ಎರಡು ಪ್ರಮುಖ ಪಂಗಡಗಳಿವೆ ಎಂದು ನಾವು ಅಂದು ಕೊಂಡಿದ್ದೇವೆ. ಭಾರತೀಯರಾದ ನಮ್ಮ ತಿಳುವಳಿಕೆಯ ಆಧಾರದ ಮೇಲೆ ಕ್ರೈಸ್ತರು ಎಂದ...
No comments:
Post a Comment