ಕೇಳುಸುತ್ತಿದೆ ಬಾಗಿಲು ಬಡಿಯುವ ಸದ್ದು
ಆರಂಭವಾಗಿದ್ದು ಸದ್ದು ಸದ್ದಾಗಿ
ಅದು ಮೆಲ್ಲ ಮೆಲ್ಲನೆ ಸದ್ದಿನ ಮಿತಿಮೀರಿ
ತಾಳ್ಮೆ ಕಳೆದುಕೊಳ್ಳುತ್ತಿದೆ
ಬಡಿಯುವವನ ಮನಸ್ಥಿತಿಯ ಗರಡಿಯಲ್ಲಿ
ಬಾಗಿಲ ಬಡಿಯುವ ಸದ್ದನ್ನು ಕೇಳಿ ಕೇಳಿ
ಗೊಂದಲಗೊಂಡಿದ್ದೇನೆ ನಾನು ಭಯದ ತಳದಿ
ಏನೋ, ಯಾರೋ, ಹೇಗೋ, ಯಾಕೋ
ಪ್ರಶ್ನೆಗಳ ಬಡಿತದಿಂz,À ಕೊನೆಗೆ
ಹೆದರುತ್ತಿದ್ದೇನೆ ಬಾಗಿಲು ತೆರೆದು ಒಳಕರೆಯಲು
ಬಾಗಿಲು ತಟ್ಟುತ್ತಿರುವವರು ಯಾರೆಂದು
ತಿಳಿಯುತ್ತಿಲ್ಲ, ತಿಳಿಯುವಷ್ಟೂ ಪರಿಚಿತತೆ
ತಟ್ಟುವ ಆ ರೀತಿಗಿಲ್ಲ
ಅದು ಹುಳುಕಿನ ನನ್ನ ಮನಸ್ಥಿತಿಗೂ ಬೇಕಾಗಿಲ್ಲ.
ತಟ್ಟುವಿನ ಶಬ್ದದಲ್ಲೇ ಕಾರಣ ಗುರುತಿಸುವ
ಜಾಣ್ಮೆ ಅಂತೂ ನನ್ನಲಿಲ್ಲ
ಕೊನೆಗೆ ತಟ್ಟುವವರ ಅಸಹಾಯಕತೆ ಮೀರುತ್ತಿದ್ದರೂ
ಬಾಗಿಲು ತೆರೆಯದಿರಲು ನಿಶ್ಚಯಿಸಿ
ಮಲಗಿದೆ, ಮಲಗಿದಂತೆ ನಟಿಸಿದೆ
ಅಲ್ಪಸ್ವಲ್ಪ ಭರಸೆಯಿಂದ ಬಾಗಿಲು sಸತತ ಬಡಿದು
ಚರ್ಚ್‍ನಲ್ಲಿ ಕೇಳಿ ಬೇಡಿ ಪ್ರಾರ್ಥಿಸಿ
ಏನು ಸಿಗದೆ ವಾಪಾಸ್ಸಾದ ಭಕ್ತನಂತೆ ಹೋಗಿಬಿಟ್ಟನೇ
ಇನ್ನೂ ಎಂದೂ ಈ ಕಡೆ ಬಾರದೆಂದೂ!
ತಿಳಿಯದು
ನಿರಾಳವು ನನ್ನ ಮನದ ಮನೆಯಲ್ಲಿ ಮಲಗಲಾರಂಭಿದರೂ
ನಿದ್ದೆ ಬರುತ್ತಿಲ್ಲ
ತಟ್ಟುವ ಸದ್ದು ಇನ್ನೂ ಬಿಟ್ಟಿಲ್ಲ
ಏನೇನೋ ನನ್ನ ಪ್ರಶ್ನೆಗಳು, ಉತ್ತರಗಳು ಮುಖಾಮುಖಿಯಾದರೂ
ತಟ್ಟುವ ಸದ್ದು ಇನ್ನೂ ಬಿಟ್ಟಿಲ್ಲ
ಬೇಡವೆಂದರೂ ನನ್ನನ್ನು ಬಿಡುತ್ತಿಲ್ಲ…
- ಜೀವಸೆಲೆ
**********
No comments:
Post a Comment