ಬಿಟ್ಟುಬಿಡು,ಹಾಡುಪಾಡು
ಭಜನೆಯನುಮಣಮಣಮಣಮಂತ್ರವನು!
ಬಾಗಿಲುಬಡಿದಡಿಯತ್ತಲ
ಮೊಡಕಿನಲಿಳಿತು ನೀ ಪೂಜಿಸುವೆ ಯಾರನ್ನು?
ಕಣ್ದೆರೆದುನೋಡುನಿನ್ನೆದುರುವರಿಲ್ಲ.
ಅವನಿದ್ದಾನೆ ಗಟ್ಟಿನೆಲವ ಬಗೆವನ ಬಳಿ,
ರಸ್ತೆ ಮಾಡಲು ಬಂಡೆಯೊಡೆಯುವನ ಬಳಿ.
ಬಿಸಿಲಲ್ಲಿ ಮಳೆಯಲ್ಲಿ ವಸನವದು ಮಣ್ಣಾಗಿ ದೇವನಿಹನು ಅವರ ಬಳಿ.
ಬಿಸುಟು ನಿನ್ನ ಪವಿತ್ರ ಮೇಲ್ವಸ್ತ್ರವ ಈಗಿಂದೀಗ ಕೆಳಗಿಳಿದು ಬಾರಾ ಮಣ್ಣಿಗೆ.
ಧ್ಯಾನವನ್ನು ಬಿಟ್ಟು ಬಾ,ಹೂವು ಗಂಧ ತೊರೆದು ಬಾ!
ಬಟ್ಟೆ ಹರಿದುಹೋದರೇನು,ಳೆಯು ಮೆತ್ತಿಕೊಂಡರೇನು?
ಭೆಟ್ಟಿಯಾಗು ಅವನನುಸರೀಕನಾಗು ದುಡಿತದಿ,ಹಣೆಯು ಬೆವರ ಸುರಿಯಲಿ.
(ರವೀಂದ್ರನಾಥ ಟ್ಯಾಗೋರರ ಗೀತಾಂಜಲಿಯಿಂದ Leave this chanting and singing and telling of beads’ ಪದ್ಯದ ಭಾವಾನುವಾದ.ಸಿ ಮರಿಜೋಸೆಫ್ ನವರಿಂದ)
No comments:
Post a Comment