Sunday, 8 November 2020

ದೇಶಕ್ಕಾಗಿ ಮರುಕಪಡಿ



(ಖ್ಯಾತ ಚಿಂತಕ ಖಲೀಲ್ ಗಿಬ್ರಾನ್ ಅವರ ಮೂಲ `ಪಿಟಿ ದ ನೇಷನ್ ಕವನದ ಹೆಸರನ್ನೇ ಇಲ್ಲಿ ಬಳಸಲಾಗಿದೆ.)

----------------------------

ಪ್ರಜೆಗಳು ಕುರಿಗಳಾಗಿರುವ ದೇಶಕ್ಕಾಗಿ ಮರುಕಪಡಿ

ಮತ್ತೆ ಕುರುಬರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ

ದೇಶದ ಸುಳ್ಳುಬುರಕ ನಾಯಕರಿಗಾಗಿ ಮರುಕಪಡಿ

ಅಲ್ಲಿನ ಮೇಧಾವಿಗಳು ಬಾಯಿ ಮುಚ್ಚಿಕೊಂಡಿದ್ದಾರೆ

ಮತ್ತೆ ಮತಾಂಧರು ನಕ್ಷತ್ರಕರಂತೆ ಕಾಡುತ್ತಿರುವರು


ಅನ್ಯಾಯದ ವಿರುದ್ಧ ದನಿ ಎತ್ತದ ದೇಶಕ್ಕಾಗಿ ಮರುಕಪಡಿ

ಮತ್ತೆ ಮತ್ತೆ ಹೊಗಳು ಭಟ್ಟಂಗಿ ಯುದ್ಧಾಳುಗಳಿಗಾಗಿ,

ಎಂತಾದರಾಗಲಿ, ಹಿಂಸೆಯಿಂದಲಿ, ದೌರ್ಜನ್ಯದಿಂದಲಿ 

ಜಗವನ್ನೇ ತುಳಿದು ಆಳುವ ಉದ್ದೇಶ ಹೊಂದಿದವರನು

ಜಗಳಗಂಟ ಹಿಂಸಕರನ್ನು ಸಾಹಸವೀರರೆಂದು ಶ್ಲಾಘಿಸಿ


ತನ್ನ ಭಾಷೆಯೊಂದನ್ನೆ ಅರಿತ ದೇಶಕ್ಕಾಗಿ ಮರುಕಪಡಿ

ಮತ್ತೆ ಮತ್ತೆ ಅದಕ್ಕೆ ಬೇರೆ ಬೇರೆ ಭಾಷೆಗಳ ಅರಿವೇ ಇಲ್ಲ,

ಮತ್ತೆ ಬೇರೆ ಸಂಸ್ಕೃತಿಗಳ ಗಂಧಗಾಳಿಯೂ ಗೊತ್ತಿಲ್ಲ


ಹಣವೇ ಉಸಿರೆಂದುಕೊಂಡಿರುವ ದೇಶಕ್ಕಾಗಿ ಮರುಕಪಡಿ

ಮತ್ತೆ ಹೊಟ್ಟೆಬಿರಿ ತುಂಬಿದವರ ನಿದ್ರೆಯಂತೆ ನಿದ್ರಿಸುವುದಕ್ಕೆ


ದೇಶಕ್ಕಾಗಿ ಮರುಕಪಡಿ, ದೇಶದ ಜನತೆಗಾಗಿ ಮರುಕಪಡಿ

ತಮ್ಮೆಲ್ಲ ಹಕ್ಕಗಳ ನಾಶಕ್ಕೆ ಅನುವು ಮಾಡಿಕೊಟ್ಟವರಿಗಾಗಿ

ಮತ್ತೆ ಇಷ್ಟರಲ್ಲೇ ಅವರ ಸ್ವಾತಂತ್ರ್ಯವೂ ಹರಣವಾಗಲಿದೆ

ಸಿಹಿ ಸವಿಯ ಸ್ವಾತಂತ್ರ್ಯದ ಉಸಿರಿನ ಭೂಮಿ

ನನ್ನಿಯ ನಾಡು ನಿಮಗಾಗಿ ಕಣ್ಣೀರಿಡುತ್ತಿದೆ

  ----------------------              

 *ಲಾರೆನ್ಸ್ ಫೆರ್ಲಿಂಗ್ಟಿ

ಅನುವಾದ - ಪ್ರಾನ್ಸಿಸ್ ಎಂ. ನಂದಗಾವ್

-------------------------------

*ಲಾರೆನ್ಸ್ ಫೆರ್ಲಿಂಗ್ಟಿ (೧೯೧೯) ಅಮೆರಿಕದ ಕವಿ, ಚಿತ್ರ ಕಲಾಕಾರ, ಸ್ವತಂತ್ರ ಹೋರಾಟಗಾರ. ಸಿಟಿ ಲೈಟ್ಸ್ ಬುಕ್ ಸೆಲ್ಲೆರ್ ಆಂಡ್ ಪಬ್ಲಿಷರ್‍ಸ್ ಸಂಸ್ಥೆಯ ಸಹ ಸಂಸ್ಥಾಪಕ. ಅವರ ಪ್ರಸಿದ್ಧ ಕವನ ಸಂಕಲನ `ಎ ಕೋನಿ ಐಲ್ಯಾಂಡ್ ಆಫ್ ದ ಮೈಂಡ್ (ನೂಯ್ಯಾರ್ಕ ನೂವ್ ಡೈರೆಕ್ಷನ್ಸ್,೧೯೫೮) ಇದುವರೆಗೂ ಒಟ್ಟು ಒಂಬತ್ತು ಭಾಷೆಗಳಿಗೆ ಅನುವಾದಗೊಂಡಿದೆ. ಅದರ ೧ ಮಿಲಿಯನ್‌ಗೂ ಅಧಿಕ ಪ್ರತಿಗಳು ಮಾರಾಟವಾಗಿವೆ. ಅದೊಂದು ಪ್ರಮುಖ ದಾಖಲೆ

-------------------------





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...