ಅವಿಜಿತ್ ಪಥಕ್‍ರವರ Teachers as healers ಲೇಖನ ಆಧಾರಿತ ಬರಹ
==========
ಕೋವಿಡ್‍ನಿಂದಾಗಿ ಇಡೀ ಜಗತ್ತೇ ತಲ್ಲಣಗೊಂಡಿದೆ. ಈ ಸಾಂಕ್ರಮಿಕ ರೋಗವು ಹುಟ್ಟಿಸಿರುವ ಹತ್ತಾರು ಸಮಸ್ಯೆಗಳಿಗೆ ನಮ್ಮ ಮತ್ತು ನಮ್ಮ ಸರ್ಕಾರಗಳ ಅದಕ್ಷತೆಯಿಂದ ಮತ್ತಷ್ಟು ಸಮಸ್ಯೆಗಳು ಉಲ್ಬಣಗೊಂಡು ಪರಿಸ್ಥಿತಿ ಕೈಮೀರುತ್ತಿದೆ. ಹೌದು, ಇಡೀ ಜಗತ್ತೇ ಭಯಭೀತಿಗೊಂಡಿದೆ. ಇಂತಹ ಗಂಭೀರವಾದ ಸ್ಥಿತಿಯಲ್ಲಿ ಶಿಕ್ಷಕರಾದ ನಾವು ಎಂತಹ ಪಾತ್ರವನ್ನು ವಹಿಸಬಹುದು? ಖಾಲಿ ಪಠ್ಯಾಧಾರಿತ ಜ್ಞಾನವು (ಪುಸ್ತಕದ ಬದನಿಕಾಯಿ) ಅರ್ಥವನ್ನು ಕಳೆದುಕೊಂಡಿರುವಂತಹ ಈ ಸಂದರ್ಭದಲ್ಲಿ ಶಿಕ್ಷಕರಾದ ನಾವು ಮಾಡಬೇಕಾದುದಾದರೂ ಏನು?
ನಿಜ, ನಾವು ವೃತ್ತಿಪರರು, ಸಂಬಳ ಎಣಿಸುವ ಉದ್ಯೋಗಿಗಳು. ಆದ್ದರಿಂದ ನಮ್ಮ ಉದ್ಯೋಗದಾತರು ಅಜ್ಞಾಪಿಸುವುದನ್ನು ವಿನಯದಿಂದ ಪಾಲಿಸುಬೇಕಾಗಿದುದ್ದು ನಮ್ಮ ಕರ್ತವ್ಯ. ನಮ್ಮ ಶಾಲಾ ಕಾಲೇಜುಗಳ, ವಿಶ್ವವಿದ್ಯಾಲಯಗಳ ಪ್ರಾಂಶುಪಾಲರು, ಉಪಕುಲಪತಿಗಳು ಅಜ್ಞಾಪಿಸುವುದನ್ನು ಚಾಚು ತಪ್ಪದೆ ಪಾಲಿಸುವುದು ನಮ್ಮ ವೃತ್ತಿಧರ್ಮವೂ ಹೌದು. ನಿಜ, ನಮಗೆ ನಿಯೋಜಿತಕೊಂಡÀ ಕರ್ತವ್ಯಗಳನ್ನು ಮತ್ತು ನಾವು ವಹಿಸಬೇಕಾದ ಪಾತ್ರಗಳನ್ನು ಮತ್ತಷ್ಟು ಎಚ್ಚರಿಕೆಯಿಂದ ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತಿರುವ ಬಗ್ಗೆ ನಾವು ಅಶ್ಚರ್ಯಪಡಬೇಕಾಗಿಲ್ಲ. ನಾವು ಅನ್‍ಲೈನ್ ತರಗತಿಗಳನ್ನು ನಡೆಸುತ್ತಾ ಅಧಿಕೃತ ಪಠ್ಯಕ್ರಮವನ್ನು (sಥಿಟಟಚಿbus) ಮುಗಿಸುವ ಜರೂರಿನಲ್ಲಿದ್ದೇವೆ. ಅಲ್‍ಲೈನ್ ತರಗತಿಗಳ ಜತೆಗೆ ಹತ್ತಾರು ಮನೆಪಾಠಗಳನ್ನು (ಚಿssigಟಿmeಟಿಣs) ವಿದ್ಯಾರ್ಥಿಗಳಿಗೆ ಕೊಟ್ಟು ಅವುಗಳನ್ನು ಆನ್‍ಲೈನ್ ಮೂಲಕವೇ ನಮಗೆ ಕಳುಹಿಸಿಕೊಡಲು ದಿನಾಂಕಗಳನ್ನು ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ದಂಬಾಲು ಬಿದ್ದಿದ್ದೇª.É ಅಷ್ಟು ಮಾತ್ರವಲ್ಲದೆ, ಮಕ್ಕಳಿಗೆ ಸಾಪ್ತಾಹಿಕ ಮತ್ತು ಮಾಸಿಕ ಪರೀಕ್ಷೆಗಳನ್ನು ಕೂಡ ಪ್ರಾಮಾಣಿಕತೆಯಿಂದ ನಡೆಸುತ್ತಿದ್ದೇವೆ. ಶಿಕ್ಷಕರಾಗಿ, ಉದ್ಯೋಗಿಗಳಾಗಿ ಇವೆಲ್ಲವನ್ನು ಚಾಚೂ ತಪ್ಪದೆ ಅತೀ ಪ್ರ್ರಾಮಾಣಿಕತೆಯಿಂದ ನಿರ್ವಹಿಸುತಿದ್ದೇವೆ. ಇದ್ದರಿಂದ ಸಾಂಕ್ರಮಿಕ ಇರಲಿ ಅಥವಾ ಇಲ್ಲದೇ ಇರಲಿ ಎಲ್ಲವೂ ಎಂದಿನಂತೆ ಸುಸೂತ್ರವಾಗಿ ನಡೆಯಬೇಕೆಂಬ ನಮ್ಮವರÀ ಹಠಕ್ಕೆ ನಾವು ಎದ್ದು ಬಿದ್ದು ಬದ್ಧರಾಗಿ ವಿಧಿಯಿಲ್ಲದೆ ಆಗ್ರಹಿಸಿದನ್ನೆಲ್ಲಾ ಮಾಡುತ್ತಿದ್ದೇವೆ. ಜಗತ್ತಿನ ಪರಿಸ್ಥಿತಿ ನಮ್ಮ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಎಂದಿನಂತೆ ಅದೇ ಹಳೇ ಪಠ್ಯಪುಸ್ತಕಗಳ ಪಾಠಗಳನ್ನು ಮಕ್ಕಳಿಗೆ ಅನ್‍ಲೈನ್ ಮೂಲಕ ಯಾಂತ್ರಿಕವಾಗಿ ಕಲಿಸುತ್ತಿದ್ದೇವೆ.
ಹೌದು, ನಮ್ಮ ಮಧ್ಯೆ ಸಂಭವಿಸುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಸಾಂಕ್ರಮಿಕ ಹರಡುವಿಕೆಯು ಕಾಡ್ಗಿಚ್ಚಿನಂತೆ ಜಗತ್ತಿಗೆಲ್ಲಾ ಹರಡುತ್ತಿದೆ. ನಮ್ಮ ದೇಶದ ಅರ್ಥಿಕತೆ ತಳ ಸೇರುತ್ತಿದೆ. ಸಾವಿರಾರು ಜನರು ಉದ್ಯೋಗಗಳನ್ನು ಕಳೆದುಕೊಂಡು ಹತಾಶರಾಗಿದ್ದಾರೆ. ಅತ್ಮಹತ್ಯೆಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಬಡವರು ಹಸಿವಿನಿಂದ ಸಾಯುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ನಾವು ಏನೂ ಆಗದಂತೆ ಎಲ್ಲವೂ ಸರಿಯಿದೆ ಎಂದು ನಮ್ಮ ಅನ್‍ಲೈನ್ ತರಗತಿಗಳ ಮೂಲಕ ನಾಟಕವಾಡುತ್ತಾ ನಮ್ಮ ಟೊಳ್ಳುತನವನ್ನು ಬಹಿರಂಗಗೊಳಿಸುತ್ತಿದ್ದೇವೆ. ಗಣಿತ ಪಠ್ಯದ ಕೆಲವೊಂದು ಆಧ್ಯಾಯಗಳನ್ನು ಒಮ್ಮೆಲೇ ಮುಗಿಸಬೇಕೆಂದು, ಮೊಘಲ್ ಸಾಮ್ರಾಜ್ಯದ ಅವನಿತಿಗೆ ಹತ್ತು ಕಾರಣಗಳನ್ನು ಬಾಯಿಪಾಠ ಮಾಡಿ ಒಪ್ಪಿಸಬೇಕೆಂದು ವಿದ್ಯಾರ್ಥಿಗಳ ಹಿಂದೆ ಬಿದ್ದಿದ್ದೇವೆ. ಇನ್ನೊಂದು ಕಡೆ ಬಡವಿದ್ಯಾರ್ಥಿಗಳು ಅನ್‍ಲೈನ್ ತರಗತಿಗಳನ್ನು ಇಂಟರ್ನೆಟ್ ಸಂಪರ್ಕದ ಕೊರತೆಯಿಂದಾಗಿ ವೀಕ್ಷಿಸಲಾಗದೆ ವ್ಯಥೆಪಡುತ್ತಿದ್ದಾರೆ. ಕೇರಳದಲ್ಲಿ ಈ ಕಾರಣಕ್ಕಾಗಿಯೇ ಒಬ್ಬ ಬಡ ವಿದ್ಯಾರ್ಥಿಯು ನೊಂದು ಅತ್ಮಹತ್ಯೆ ಮಾಡಿಕೊಂಡ ವರದಿ ಇನ್ನೂ ನಮ್ಮ ಮನಸ್ಸಿನಿಂದ ಮಾಸಿ ಹೋಗಿಲ್ಲ.
ಆದಾಗ್ಯೂ, ಈ ಡಿಜಿಟಲ್ ಯುಗದಲ್ಲಿ ನಮ್ಮ ಶಿಕ್ಷಣವು ಮತ್ತು ಬೋಧನ ಪ್ರಕ್ರಿಯೆಯು ಸುಗಮವಾಗಿ ನಡೆಯುತ್ತಿದೆ ಎಂದು ನೀತಿ ನಿರೂಪಕರು, ಶೈಕ್ಷಣಿಕ ಮೇಲಧಿಕಾರಿಗಳು ಸರ್ಕಾರಕ್ಕೆ ತುಂಬು ಭರವಸೆ ನೀಡುತ್ತಿದ್ದಾರೆ. ಹೌದು, ಬೋಧನಾ ವೃತ್ತಿಯನ್ನು ಒಂದು ಕರೆಯೆಂದೂ, ಉದಾತವೃತ್ತಿಯೆಂದೂ ಸ್ವೀಕರಿಸಿರುವ ನಾವೆಲ್ಲರೂ, ಈಗ ನಡೆಯುತ್ತಿರುವ ವಿದ್ಯಾಭ್ಯಾಸದ ಪ್ರಕ್ರಿಯೆಯ ನಕಲಿತನವನ್ನು ಬಹಿರಂಗಪಡಿಸಬೇಕಾಗಿದೆ. ಜತೆಗೆ ವಿದ್ಯಾರ್ಥಿಗಳ ಆಪ್ತರಾಗಿ, ಸ್ನೇಹಿತರಾಗಿ, ಸಂವಹನಕಾರರಾಗಿ, ಗುಣಪಡಿಸುವವರಾಗಿ ನಮ್ಮ ಬೋಧನಾ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ನಿಜ, ನಾವೆಲ್ಲರೂ ವೃತ್ತಿಪರರು, ನಾವು ಮಾಡುವಂತಹ ವೃತ್ತಿಗೆ ಸಂಬಳ ಪಡೆಯುತ್ತೇವೆ. ಆದರೆ ಶಿಕ್ಷಕರಾಗಿ, ನಾವು ಪಠ್ಯ ಮತ್ತು ವಿದ್ಯಾರ್ಥಿಗಳ ನಡುವಿನ ಕೇವಲ ಮಧ್ಯವರ್ತಿಗಳು ಮಾತ್ರವಲ್ಲ; ನಾವು ಅನುಭವಿಸುತ್ತಿರುವ ವಾಸ್ತವ ಮತ್ತು ಅಸ್ತಿತ್ವದ ಬಿಕ್ಕಟ್ಟಿನ ಬಗ್ಗೆ ತಿಳಿದಿರುವ ಸಂವೇದಿ ಶಿಕ್ಷಕರಾಗಿದ್ದೇವೆ. ಈ ಕಾರಣಕ್ಕಾಗಿ, ನಾವು ಅನುಭವಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ನಮ್ಮ ನೋವಿನ ಕಥೆಗಳನ್ನು, ದುಃಖದುಮ್ಮಾನಗಳನ್ನು ನಮ್ಮ ಬೋಧನೆಯ ಭಾಗವಾಗಿಸಿಕೊಳ್ಳÀಬೇಕು. ಜತೆಗೆ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆಯು ಕೂಡ ಮಕ್ಕಳಿಗೆÀ ತಿಳಿ ಹೇಳಬೇಕು. ಆದ್ದರಿಂದ ಕೇವಲ ಪಠ್ಯಕ್ರಮವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸಮಾಡದೆ, ವಾಸ್ತವಿಕ ಪರಿಸ್ಥಿತಿಯನ್ನು ಪಠ್ಯವಾಗಿಸಿಕೊಂಡು ಬೋಧಿಸುವ ಅನಿವಾರ್ಯತೆಯೂ ನಮಗಿದೆ. ಇಂತಹ ಒಂದು ಬೋಧನೆ, ಶಿಕ್ಷಣ ಅರ್ಥಭರಿತವಾಗಿರುತ್ತದೆ, ಮೌಲ್ಯಭರಿತವಾಗಿರುತ್ತದೆ.
ಈ ಸನ್ನಿವೇಶದಲ್ಲಿ ನಾನು ಎರಡು ಅಂಶಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಮೊದಲಿಗೆ ನಾವು ತಾಂತ್ರಿಕ ಪ್ರÀಶ್ನೆಯನ್ನು ಮೀರಿ ಅಥವಾ ಅದರ ಚೌಕಟ್ಟಿನಿಂದ ಹೊರಬಂದು ಶಿಕ್ಷಣವನ್ನು ಗ್ರಹಿಸಿಕೊಳ್ಳಬೇಕಾಗಿದೆ. ಶಿಕ್ಷಣವೆಂದರೆ ಸಾಪ್ಟ್‍ವೇರ್ ವ್ಯವಹಾರವಲ್ಲ. ಇದು ಟೆಕ್ನೋ ಮ್ಯಾನೇಜಿರಿಯಲ್ ಒದಗಿಸುವ ಪರಿಹಾರವೂ ಅಲ್ಲ. ಇದು ‘ಜೂಮ್’ನ ಪವಾಡ ಬಗ್ಗೆಯೂ ಅಲ್ಲ. ಇಲ್ಲಿ ನಿಜವಾದ ಪ್ರಶ್ನೆಯೆಂದರೆ ಸಾವುಗಳು ಕೇವಲ ಅಂಕಿಅಂಶಗಳಾಗಿರುವ, ಒಬ್ಬರು ಇನ್ನೊಬ್ಬರನ್ನು ಮುಖಾಮುಖಿಯಾಗಿ ಭೇಟಿಯಾಗಲು ಭಯಪಡುತ್ತಿರುವ ಹಾಗೂ ಭಯವು ಸಾರ್ವತ್ರಿಕಕೊಂಡಿರುವ ಈ ದುಃಸ್ಥಿತಿಯಲ್ಲಿ ನಾವು ಹೇಗೆ ಮತ್ತು ಏನನ್ನು ಬೋಧಿಸುತ್ತೇವೆ? ವಿದ್ಯಾರ್ಥಿಗಳ ಜತೆ ಹೇಗೆ ಸಂವಾದಿಸುತ್ತೇವೆ? ಎಂಬ ಪ್ರಶ್ನೆಗಳು ಇಲ್ಲಿ ಮುಖ್ಯವೆನ್ನಿಸುತ್ತದೆ.
ಕರೋನ ಎಂಬ ಮಹಾಮಾರಿಯು ನಮ್ಮ ವಿದ್ಯಾರ್ಥಿಗಳ ಮತ್ತು ಅವರ ಕುಟುಂಬಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲವೆಂದು ನಮ್ಮ ಪಾಠ, ಬೋಧನೆಗಳನ್ನು ನಾವು ಮುಂದುವರಿಸಿದ್ದೇ ಆದಲ್ಲಿ ನಮ್ಮಂತಹ ಕಪಟಿಗಳು ಬೇರೆ ಯಾರು ಇಲ್ಲವೆಂದೇ ಹೇಳಬಹುದು. ಇಂತಹ ಕಪಟತನದಿಂದ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿರುವ ವಾಸ್ತವವನ್ನು ಮರೆಮಾಡಲಾಗುವುದಿಲ್ಲ. ವಿದ್ಯಾರ್ಥಿನಿಯೊಬ್ಬಳು ತಮ್ಮ ಚಿಕ್ಕಮ್ಮನು ಕೊರೋನಾ ವೈರಸ್‍ನಿಂದ ಸೋಂಕಿತರಾಗಿದ್ದಾರೆ ಎಂದು ಹೇಳಿದಾಗ ಶಿಕ್ಷಕನಾಗಿ ನಾನೇನು ಮಾಡಬೇಕು? ಲ್ಯಾಪ್ಟಾಪ್ ಮುಂದೆ ಕುಳಿತುಕೊಂಡು ನನ್ನ ಪಾಠಗಳನ್ನು ಕೇಳಲೇಬೇಕೆಂದು ಅವಳನ್ನು ಒತ್ತಾಯಿಸಲೇ, ಆಗ್ರಹಿಸಲೇ? ಅಥವಾ ನಾನು ಅವಳೊಟ್ಟಿಗೆ ಆತ್ಮೀಯ ಸಂವಾದ ಆರಂಭಿಸಿ, ನೋವು ಸಂಕಟ, ಪ್ರಾರ್ಥನೆ, ವಿಮೋಚನೆ, ತಾಳ್ಮೆ ಮತ್ತು ಸಹಿಷ್ಣುತೆಯ ಬಗ್ಗೆ ಮಾತನಾಡಬೇಕೇ?
ಇನ್ನೊಂದು ಕಡೆ ಇನ್ನೊಬ್ಬ ವಿದ್ಯಾರ್ಥಿಯ ತಂದೆ ಉದ್ಯೋಗ ಕಳೆದುಕೊಂಡು ಹತಾಶೆಯಲ್ಲಿದ್ದಾರೆ. ಇದ್ದರಿಂದ ಇಡೀ ಕುಟುಂಬವೂ ಮಾನಸಿಕವಾಗಿಯೂ ಭಾವನಾತ್ಮಕವಾಗಿಯೂ ಪ್ರಕ್ಷುಬ್ದತೆಯನ್ನು ಅನುಭವಿಸುತ್ತಿದೆ. ಜತೆಗೆ ವಿದ್ಯಾರ್ಥಿಯೂ ಕೂಡ ಮಾನಸಿಕವಾಗಿ ಭೀತಿಕೊಂಡಿದ್ದಾನೆ, ನೊಂದಿದ್ದಾನೆ. ಇಂತಹ ಸಂದರ್ಭದಲ್ಲಿ ಆ ವಿದ್ಯಾರ್ಥಿಗೆ ಮೂಲಭೂತ ಹಕ್ಕುಗಳ ಬಗ್ಗೆ ಒಂದು ಅಸೈನ್ಮೆಂಟ್ (Assignments) ಬರೆದು ಅಪೆÇ್ಲೀಡ್ ಮಾಡಲು ಆಗ್ರಹಿಸಿ, ಆ ವಿದ್ಯಾರ್ಥಿಯಿಂದ ಆ ಮನೆಪಾಠವನ್ನು ಮಾಡಿ ಮುಗಿಸುವಷ್ಟು ತಾಳ್ಮೆಯನ್ನು ನಾವು ನಿರೀಕ್ಷಿಸಬಹುದೇ? ಒಂದು ವೇಳೆ ಆ ವಿದ್ಯಾರ್ಥಿಯು ಮನೆಪಾಠಮಾಡಲು ವಿಫಲವಾದರೆ ಅವನನ್ನು ಅನುತ್ತೀರ್ಣಗೊಳಿಸುವುದು ಸಮಂಜಸವೇ? ಅಥವಾ ಅವನಿಗೆ ಒಂದು ಅತ್ಮೀಯ ಪತ್ರವನ್ನು ಬರೆದು ಅವನನ್ನು ಹುರಿದುಂಬಿಸಿ, ಅವನಿಗಾದ ಅನುಭವದ ಹಿನ್ನಲೆಯಲ್ಲಿ ಸಾಂವಿಧಾನಿಕ ಆದರ್ಶಗಳು ಮತ್ತು ಹಕ್ಕುಗಳು, ದಬ್ಬಾಳಿಕೆ, ಶೋಷಣೆ ಹೀಗೆ ಈ ವಿಷಯಗಳನ್ನು ಪಠ್ಯವಾಗಿಸಿ ತರಗತಿಯಲ್ಲಿ ಮಕ್ಕಳಿಗೆ ತಿಳಿ ಹೇಳಿ ಈ ವಿಷಯಗಳ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಬಹುದೇ? ಹೌದು ಲಾಕ್‍ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಶೋಷಿಸಿದ ರೀತಿನೀತಿ ನಮ್ಮ ಕಣ್ಣ ಮುಂದೆ ಇವತ್ತಿಗೂ ಜೀವಂತವಾಗಿವೆ. ಇಂತಹ ಶೋಷಣಾತ್ಮಕ ಘಟನೆಗಳನ್ನು ಆಧರಿಸಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಿದಾಗ, ಪಾಠದ ಪರಿಣಾಮವೂ ಎಷ್ಟೂ ಗುಣಾತ್ಮಕವಾಗಿರುತ್ತದೆ ಎಂಬ ಸತ್ಯ ನಮ್ಮ ಅರಿವಿಗೆ ಬಾರದಿರುವುದಿಲ್ಲ.
ನಮ್ಮ ವಿದ್ಯಾರ್ಥಿಗಳ ಜತೆ ಅತ್ಮೀಯವಾಗಿ ಸಂವಾದಿಸಬೇಕು, ಅವರ ಕಷ್ಟಸುಖಗಳನ್ನು ಆಲಿಸುವ ಸೌಜನ್ಯ ನಮಗೆ ಬೇಕೇ ಬೇಕು; ಜತೆಗೆ ವಿಮೋಚನೆಯ ಹಾದಿಯನ್ನು ಅವರೇ ಕಂಡುಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಆದ್ದರಿಂದ ನಮ್ಮ ಬದುಕೇ ನಮ್ಮ ಕಲಿಕೆಯ ಪಠ್ಯವಾಗಬೆಕು. ಹೌದು ವಿಮೋಚನಾತ್ಮಕ ಶಿಕ್ಷಣದ ಅಗತ್ಯತೆ ನಮಗೆ ತುಂಬಾ ಇದೆ. ಈ ದಿಕ್ಕಿನಲ್ಲಿ ನಮ್ಮ ವಿದ್ಯಾರ್ಥಿಗಳು ನಮ್ಮ ಬುಕಿಷ್ ಉಪನ್ಯಾಸಗಳ ಸರಣಿಯನ್ನು ತಪ್ಪಿಕೊಂಡರೂ ಯಾವುದೇ ಹಾನಿಯಾಗುವುದಿಲ್ಲ ಎಂಬ ಸತ್ಯ ನಮಗೆ ಮನವರಿಕೆಯಾಗಬೇಕು.
ಎರಡನೆಯದಾಗಿ, ನಮ್ಮ ಬೋಧನಾ ವೃತ್ತಿಯೊಂದು ‘ವಿಶಿಷ್ಟÀ ಕರೆ’ ಎಂಬ ಸತ್ಯವನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿರುವ ಕಾಪೆರ್Çೀರೇಟ್‍ಗಳ ಮನಸ್ಸುಗಳನ್ನು ಮತ್ತು ಅವರ ಷಡ್ಯಂತ್ರಗಳನ್ನು ಬಯಲು ಮಾಡಬೇಕಾಗಿದೆ. ಪಾಲೋ ಫ್ರೆಯರೆ (Pಚಿuಟo ಈಡಿeiಡಿe) ಶಿಕ್ಷಕರಿಗೆ ಸಂವಾದಾತ್ಮಿಕಗಳಾಗಲು ಕರೆಕೊಟ್ಟರೆ, ಮಾರ್ಟಿನ ಬುಬರ್ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ‘ಅನುಬಂಧ’ ಎಂದು ಬಣ್ಣಿಸುತ್ತಾನೆ. ಜಿಡ್ಡು ಕೃಷ್ಣಮೂರ್ತಿಯವರು ಶಿಕ್ಷಕರನ್ನು ವಿದ್ಯಾರ್ಥಿಗಳ ಆಂತರಿಕ ಅರಳುವಿಕೆಯನ್ನು ಮೂಡಿಸುವ ಪ್ರವರ್ತಕರು (ಛಿಚಿಣಚಿಟಥಿsಣ) ಎಂದು ಪರಿಗಣಿಸುತ್ತಾರೆ. ಹೌದು ನಮ್ಮ ಟೆಕ್ನೋ ಮ್ಯಾನೇಜರ್ಗಳು, ನೀತಿ ನಿರೂಪಕರು ಈ ಆದರ್ಶಗಳನ್ನು ಕೇಳಿ ನಮ್ಮನ್ನು ಗೇಲಿ ಮಾಡಬಹುದು. ಇವರೆಲ್ಲಾ ಸೇರಿ ಆಗಾಗಲೇ ಈ ಒಂದು ಕಲಿಕೆ ಪ್ರಕ್ರಿಯೆಯ ಯಂತ್ರದಲ್ಲಿ ನಮ್ಮನೆಲ್ಲಾ ಗಾಲಿಹಲ್ಲು (cog) ಮಾಡಿಬಿಟ್ಟಿದ್ದಾರೆ. We are robbed of our agency and reflexivity. ಈಗ ನಾವು ಕೇವಲ ಪಠ್ಯಕ್ರಮವನ್ನು ಪೂರ್ಣಗೊಳ್ಳಿಸುವ ಯಂತಗಳಾಗಿಬಿಟ್ಟಿದ್ದೇವೆ. ಈ ದಿನಗಳಲ್ಲಂತೂ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳನ್ನು ಮತ್ತು ಶ್ರೇಣಿಯನ್ನು ಪಟ್ಟಿಮಾಡಿ ಅಂಕಿ ಅಂಶಗಳನ್ನು ಪೆÇರೈಸುವ ಪೂರೈಕೆದಾರರಾಗಿಬಿಟ್ಟಿದ್ದೇವೆ. ಸಾಪ್ಟ್‍ವೇರ್ ತಜ್ಞರು, ರಾಜಕೀಯವಾಗಿ ನೇಮಕಗೊಂಡ ಉಪಕುಲಪತಿಗಳು, ಕಾರ್ಪೂರೇಟ್ ಗಣ್ಯರು, ಮತ್ತು ಎನ್.ಜಿ.ಒ(ಓಉಔ)ಗಳು ಸಹ ನಮ್ಮ ಮೇಲೆ ‘ಪ್ರಯೋಗ’ ಆರಂಭಿಸಿದ್ದಾರೆ. ಅವರು ನಾವು ಏನು ಕಲಿಸಿಕೊಡಬೇಕು, ಹೇಗೆ ಕಲಿಸಿಕೊಡಬೇಕು ಮತ್ತು ಹೇಗೆ ಸ್ಮಾರ್ಟ್ ಮತ್ತು ದಕ್ಷ ‘ಮಾರುಕಟ್ಟೆಸ್ನೇಹಿ’ ಶಿಕ್ಷಕರಾಗಬಹುದೆಂದು ನಮಗೆ ಕಲಿಸಿಕೊಡುತ್ತಿದ್ದಾರೆ. ನಿಜ, ಈ ದಿನಗಳಲ್ಲಿ ಶಿಕ್ಷಣವು ಒಂದು ವ್ಯಾಪಾರ ಕುದುರಿಸುವ ಉದ್ಯಮವಾಗಿಬಿಟ್ಟಿದೆ. ಈ ಕಾರಣದಿಂದಾಗಿ ಇಂತಹ ಕ್ಷುಲಕ ಸಂದರ್ಭದಲ್ಲೂ ಅನ್‍ಲೈನ್ ತರಗತಿ ಮತ್ತು ಪಠ್ಯಕ್ರಮವನ್ನು ಪೂರ್ಣಗೊಳ್ಳಿಸುವ ಅಧಿಕೃತ ಕರ್ತವ್ಯವನ್ನು ಮೀರಿ ಶಿಕ್ಷಣವನ್ನು ಪರಿಭಾವಿಸಲು ನಾವು ವಿಫಲರಾಗುತ್ತಿದ್ದೇವೆ.
================
No comments:
Post a Comment