ಜಗತ್ತಿನಾದ್ಯಂತ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಪೋಪ್‌ರವರ ಉತ್ತರ...
ನಿಮಗೇನಾದರೂ ಪೋಪ್ ಫ್ರಾನ್ಸಿಸ್‌ರವರಿಗೆ ಪ್ರಶ್ನೆ ಕೇಳುವ ಅವಕಾಶ ಸಿಕ್ಕರೆ ಯಾವ ಪ್ರಶ್ನೆಗಳನ್ನು ಕೇಳುತ್ತೀರಿ?
ವಯಸ್ಕರಂತೆ ಮಕ್ಕಳಲ್ಲೂ ಅನೇಕ ಪ್ರಶ್ನೆಗಳಿವೆ, ಸಮಸ್ಯೆಗಳಿವೆ. ಆದರೆ ಇಂತಹ ಪ್ರಶ್ನೆಗಳನ್ನು ಕೇಳಲು ಅವರಿಗಿರುವ ಅವಕಾಶಗಳು ಕಡಿಮೆ, ಡಿಯರ್ ಫ್ರಾನ್ಸಿಸ್ ಎಂಬ ಪುಸ್ತಕದಲ್ಲಿ ಪೋಪ್ ಫ್ರಾನ್ಸಿಸ್‌ರವರು ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಕೊಟ್ಟಿದಲ್ಲದೆ, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿತ್ತಾ, ಮಕ್ಕಳಲ್ಲಿರುವ ಆಧ್ಯಾತ್ಮಿಕ ಆಳವನ್ನು ಕಂಡು ಸಂಭ್ರಮಿಸುತ್ತಾರೆ. ಹೌದು, ಕೆಲವೊಂದು ಪ್ರಶ್ನೆಗಳು ತಮಾಶೆಯಿಂದ ಕೂಡಿವೆಯಾದರೂ, ಇನ್ನೂ ಕೆಲವು ಗಂಭೀರವಾದಂತಹವುಗಳು, ಮತ್ತೂ ಕೆಲವು ನಮ್ಮ ಹೃದಯಗಳನ್ನು ಕಲುಕುವಂಥವು. ಆದರೆ ಎಲ್ಲ ಪ್ರಶ್ನೆಗಳು ಮಕ್ಕಳಿಂz ಕೇಳಲ್ಪಟ್ಟ ಪ್ರಶ್ನೆಗಳೇ; ಅವು ದೇವರ ಅನುಪಮ ಪ್ರೀತಿಗೆ ಅರ್ಹರಾಗಿರುವ ಮುಗ್ಧ ಮಕ್ಕಳ ಪ್ರಶ್ನೆಗಳು.
ಜೊವೊ (Joāo)
ವಯಸ್ಸು - ೧೦, ಪೊರ್ಚುಗಲ್
ಡಿಯರ್ ಪೋಪ್ ಫ್ರಾನ್ಸಿಸ್ ನಿಮ್ಮನ್ನು ನಾನು ಸೈಂಟ್ ಪೀಟರ್ ಸ್ಕ್ವೇರ್‌ನಲ್ಲಿಕಂಡಾಗ ನೀವು ನನ್ನನ್ನು ಗಮನಿಸಿ ನೋಡಿದನ್ನು ತಿಳಿದು ತುಂಬಾ ಸಂತೋಷವಾಯಿತ್ತು. ನಿಮ್ಮ ಸುತ್ತಮುತ್ತಲಿರುವ ಮಕ್ಕಳನ್ನು ಕಂಡಾಗ ನಿಮಗೇನಿಸುತ್ತದೆ? ನೀವು ನನ್ನನ್ನು ಗಮನಿಸಿ ನೋಡಿದಕ್ಕೆ ನಿನಗೆ ಧನ್ಯವಾದಗಳು.
ಪೋಪ್ ಫ್ರಾನ್ಸಿಸ್: ಪ್ರೀತಿಯಜೊ॒ವೊ
ನೀವು ಮಕ್ಕಳನ್ನು ಕಂಡಾಗ ನಿಮಗೆ ಏನೇನಿಸುತ್ತದೆ ಎಂಬ ಪ್ರಶ್ನೆಯನ್ನು ನೀನು ಕೇಳಿರುವೆ. ಹೌದು ನಾನು ಅನೇಕ ಮಕ್ಕಳನ್ನು ನೋಡುತ್ತಿರುತ್ತೇನೆ. ನಾನು ಅವರನ್ನು ಕಂಡು ಅವರಿಗೆ ಕಿರುನಗೆ ಬೀರುತ್ತೇನೆ. ಅವರನ್ನು ತಬ್ಬಿಕೊಳ್ಳುತ್ತೇನೆ ಮತ್ತು ಕಾರಿನಿಂದ ಅವರಿಗೆ ಚುಂಬನದ ಸನ್ನೆ ಮಾಡಿ ಮುದ್ದಿಸುತ್ತೇನೆ. ನೀನು ನಿನ್ನ ಕೈಯಾರೆ ಬಿಡಿಸಿ ನನಗೆ ಕಳಿಸಿರುವ ಚಿತ್ರದಲ್ಲಿ ನಾನು ಕಾರನ್ನು ಚಾನೆ ಮಾಡುವಂತಿದ್ದರೂ, ನನ್ನ ಕೈಗಳು ಯಾವಾಗಲೂ ಫ಼್ರೀ ಇರುವ ಕಾರಣ ಇವೆಲ್ಲಾ ಮಾಡಲು ನನಗೆ ಸಾಧ್ಯ.
ಮಕ್ಕಳನ್ನು ಕಂಡಾಗ ನಾನು ಸಂತೋಷಗೊಳ್ಳುತ್ತೇನೆ. ಅವರಿಗಾಗಿ ನನ್ನ ಮನಸ್ಸು ಪ್ರೀತಿಯಿಂದ ತುಂಬಿಕೊಳ್ಳುತ್ತದೆ. ಮುಖ್ಯವಾಗಿ ನಿನ್ನಂತಹ ಮಕ್ಕಳನ್ನು ಕಂಡಾಗ ನನ್ನ ಹೃದಯದಲ್ಲಿ ಭರವಸೆ ಹುಟ್ಟಿಕೊಳ್ಳುತ್ತದೆ. ಏಕೆಂದರೆ ನನಗೆ ಮಕ್ಕಳನ್ನು ಕಾಣುವುದೆಂದರೆ ಭವಿಷ್ಯವನ್ನು ಕಾಣುವಂತದ್ದು. ಹೌದು ಭರವಸೆ ನನ್ನಲ್ಲಿ ತುಂಬಿಕೊಳ್ಳುತ್ತದೆ ಏಕೆಂದರೆ ಪ್ರತಿಯೊಂದು ಮಗುವು ಮುಂದಿನ ಭವಿಷ್ಯದ ಮಾನವಕುಲಕ್ಕೆ ನಮ್ಮ ಭರವಸೆ.
ಎಮಿಲ್ ವಯಸ್ಸು ೯, ಡೊಮಿನಿಕಾನ್ ರಿಪಬ್ಲಿಕ್
ಪ್ರೀತಿಯ ಪೋಪ್ ಫ್ರಾನ್ಸಿಸ್, ಸತ್ತ ನಮ್ಮ ಸಂಬಂಧಿಕರು ಸ್ವರ್ಗದಿಂದ ನಮ್ಮನ್ನು ನೋಡಬಹುದಾ?
ಪೋಪ್ ಫ್ರಾನ್ಸಿಸ್: ಹೌದು, ಇದರ ಬಗ್ಗೆ ನಿನಗೆ ಖಚಿತತೆ ಇರಲಿ. ನೀನು ಸ್ವರ್ಗದಲ್ಲಿರುವ ನಿನ್ನ ಸಂಬಂಧಿಕರ ಬಗ್ಗೆ ಯೋಚಿಸುತ್ತಿರುವೆ. ನೀನು ಅವರನ್ನು ಕಾಣಲಾಗುತ್ತಿಲ್ಲ, ಆದರೆ ದೇವರ ಅನುಮತಿಯ ಮೇರೆಗೆ ಅವರು ನಿನ್ನನ್ನು ಸ್ವರ್ಗದಿಂದ ನೋಡಬಹುದು. ಕನಿಷ್ಠಪಕ್ಷ, ನಿನ್ನ ಬದುಕಿನ ಕೆಲವೊಂದು ಕ್ಷಣಗಳಲ್ಲಿ ನಿನ್ನನ್ನು ಅವರು ನೋಡುತ್ತಿರುತ್ತಾರೆ. ನಿನಗೆ ಗೊತ್ತಾ? ಅವರು ನಮ್ಮಿಂದ ದೂರವಿಲ್ಲ. ಅವರು ನಮಗಾಗಿ ಪ್ರಾರ್ಥಿಸುತ್ತಾರೆ ಮತ್ತು ಪ್ರೀತಿಯಿಂದ ನಮ್ಮನ್ನು ಆರೈಕೆ ಮಾಡುತ್ತಾರೆ. ಇದು ಮುಖ್ಯವಾದ ವಿಷಯ.
ನಿನ್ನ ಸತ್ತ ಸಂಬಂಧಿಕರನ್ನು ಈ ರೀತಿಯಾಗಿ ನೀನು ಕಲ್ಪಿಸಿಕೊಳ್ಳಬಹುದು; ಸ್ವರ್ಗದಿಂದ ನಿನ್ನನ್ನು ನೋಡುತ್ತಾ ನಗುತ್ತಿದ್ದಾರೆ, ನಿನ್ನ ಸುತ್ತಾ ಹಾರಡುವಂತೆ ನೀನು ನಿನ್ನ ಚಿತ್ರದಲ್ಲಿ ಚಿತ್ರಿಸಿರುವೆ, ಆದರೆ ಅವರು ನಿನ್ನ ಪಕ್ಕದಲ್ಲೆ ಹಾರಾಡುತ್ತಿರುತ್ತಾರೆ. ಅವರ ಪ್ರೀತಿಯ ಆರೈಕೆಯೊಂದಿಗೆ ನಿನ್ನ ಜೊತೆಗೂಡಿ ಸದಾಕಾಲ ನಿನ್ನೊಂದಿಗೆ ನಡೆಯುತ್ತಿರುತ್ತಾರೆ.
-----
ಅನು
-----
No comments:
Post a Comment