Sunday, 8 November 2020

ಕೊನೆಗೂ ಸಿಕ್ಕಿತು ಬಯಸಿದ ಹುದ್ದೆ, ಆದರೆ. . . . . ! - ಎಲ್.ಚಿನ್ನಪ್ಪ, ಬೆಂಗಳೂರು

  ಜೀವನ ನಿರ್ವಹಣೆಗೆ ಬುದ್ದಿಶಕ್ತಿ ಹಾಗು ದೈಹಿಕ ಶ್ರಮದಿಂದ ಮಾಡುವ ಕಾಯಕಕ್ಕೆ ಉದ್ಯೋಗವೆನ್ನುತ್ತಾರೆ. ಒಬ್ಬ ಉದ್ಯೋಗಿಗೆ  ಸಮಾಜದಲ್ಲಿ ಸುಖ ಮತ್ತು ಗೌರವದಿಂದ ಬಾಳುವ ಅವಕಾಶವಿದೆ. ಉದ್ಯೋಗಂ ಪುರುಷಲಕ್ಷಣಂ ಎಂಬ ಮಾತಿನಂತೆ ಮಾನವ ಎನಿಸಿಕೊಂಡವನು ಏನಾದರೊಂದು ಉದ್ಯೋಗ ಮಾಡಲೇಬೇಕು. ಪ್ರಯತ್ನಪಟ್ಟು ಮಾಡುವ ಕೆಸಗಳು ಕೈಗೂಡದೆ ಹೋದರೂ ಮರಳಿ ಪ್ರಯತ್ನ ಮಾಡುವುದರಲ್ಲಿ ನಷ್ಟವೇನೂ ಇಲ್ಲ. ಏಕೆಂದರೆ ಸೋಲೇ ಗೆಲುವಿನ ಸೋಪಾನ. ಸೋಲಿನಲ್ಲಿ ಗೆಲುವೂ ಇದೆ. ದೇವರಲ್ಲಿ ನಂಬಿಕೆ ಇರಬೇಕೆ ಹೊರತು ಅದೃಷ್ಟದ ಮೇಲಲ್ಲ. ಅದೃಷ್ಟವನ್ನೇ ನೆಚ್ಚಿಕೊಂಡವನು ಮೂರ್ಖ. ತನ್ನಲ್ಲಿರುವ ಬುದ್ದಿಶಕ್ತಿ ಸಾಮರ್ಥ್ಯವನ್ನು ಬಳಸಿಕೊಂಡವನು ಜೀವನದಲ್ಲಿ ಸಫಲತೆ ಕಾಣಬಹುದು. 

     ಇಂದಿನ ಜಾಗತೀಕರಣದ ಭರಾಟೆಯಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ, ಉದ್ಯೋಗಾಕಾಂಕ್ಷಿಗಳು ಇದ್ದಾರೆ, ನಿರುದ್ಯೋಗಿಗಳೂ ಇದ್ದಾರೆ. ವಿದ್ಯಾರ್ಹತೆಗೆ ತಕ್ಕಂತೆ ಗೌರವಾನ್ವಿತ ಉದ್ಯೋಗವನ್ನು                 ಆಯ್ಕೆಮಾಡಿಕೊಳ್ಳುವುದು ಅಂದಿನ ಕಾಲದ ಪ್ರತಿಷ್ಠೆಯಾಗಿತ್ತು. ಆದರೆ ಬದಲಾದ ಜಾಗತೀಕರಣದಿಂದ, ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಗಳು ಸಿಗುವುದು ಇಂದು ತುಸು ಕಷ್ಟವೇ. ಪ್ರಬಲ ಜಾತಿಗಳು ಕಬಳಿಸಿರುವ ಮೀಸಲಾತಿ ಸೌಲಭ್ಯಗಳಿಂದ (ಖeseಡಿveಜ quoಣಚಿ) ಸಾಮಾನ್ಯ ವರ್ಗದವರಿಗೆ ಉದ್ಯೋಗಾವಕಾಶಗಳು ಕಡಿಮೆ. ಸರ್ಕಾರಿ ವಲಯದಲ್ಲಿ ಅವರಿಗೆ ಕೆಲಸಗಳೇ ಸಿಗುತ್ತಿಲ್ಲ. ಉದರ ನಿಮಿತ್ತ ಏನಾರೊಂದು ಕೆಲಸ ಮಾಡಬೇಕಾದ ಪರಿಸ್ಥಿತಿ. ಅಂತಹ ಒಂದು ವಾಸ್ತವ ಘಟನೆಯನ್ನೇ ಇಲ್ಲಿ ಮೂಲ ವಸ್ತುವನ್ನಾಗಿಟ್ಟುಕೊಂಡು ಇದನ್ನು ವಿವರಿಸಿದ್ದೇನೆ.  

     ಸರಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ಒಮ್ಮೆ ಕೆವೊಂದು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಸಾವಿರಾರು ಉದ್ಯೋಗಿಗಳು, ನಿರುದ್ಯೋಗಿಗಳು, ವ್ಯಾಸಂಗ ಮಾಡುತ್ತಿದ್ದವರು ಅರ್ಜಿಗಳನ್ನು ಲ್ಲೀಸಿದರು. ಗುಮಾಸ್ತ ಹುದ್ದೆಗೆ (ಅಟeಡಿiಛಿಚಿಟ Posಣ) ಕನಿಷ್ಠ ವಿದ್ಯಾರ್ಹತೆ, P.U.ಅ. ತೇರ್ಗಡೆ, ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ತೇರ್ಗಡೆಯಾಗಿರಬೇಕೆಂಬ ನಿಯಮವಿತ್ತು. ಅರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಗುಜರಾಯಿಸಿದ್ದರು. ಆಯ್ಕೆ ಪ್ರಕ್ರಿಯೆ ಪ್ರಾರಂಭಗೊಂಡು ಅರ್ಜಿ ಹಾಕಿದವರಲ್ಲಿ ಹೆಚ್ಚು ಅಂಕ ಪಡೆದಿದ್ದವರಿಗೆ ಮಾತ್ರ ಹುದ್ದೆ ಸಿಕ್ಕಿತು. ಬಾಕಿ ಹುದ್ದೆಗಳು ಮೀಸಲಾತಿ ಸೌಲಭ್ಯದವರ ಪಾಲಾದುವು. ಮಧ್ಯಮ ಕ್ರಮಾಂಕದಲ್ಲಿ ಅಂಕ ಗಳಿಸಿದ್ದವರ ಅರ್ಜಿಗಳು ಪ್ರಾರಂಭದಲ್ಲೇ ತಿರಸ್ಕೃತಗೊಂಡವು.  

     ಶ್ರೀನಿವಾಸ, ಸಾಮಾನ್ಯ ವರ್ಗದಲ್ಲಿ  (ಉeಟಿeಡಿಚಿಟ ಒeಡಿiಣ) ಕ್ಲ್ಲಾರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಅವನಿಗೆ ಕ್ಲ್ಲಾರ್ಕ್  ಹುದ್ದೆ ಸಿಗಲಿಲ್ಲ. ಆದರೆ ಡ್ರೈವರ್ ಹುದ್ದೆಗೂ ಅರ್ಜಿ ಹಾಕಿದ್ದರಿಂದ ಅವನಿಗೆ ಡ್ರೈವರ್ ಹುದ್ದೆ ಸಿಕ್ಕಿತು. ಪ್ರೊಬೇಷನರಿ     ಅವಧಿಯನ್ನು ಮುಗಿಸಿದ ಮೇಲೆ ಅವನ ಉದ್ಯೋಗ ಖಾಯಂ ಗೊಂಡಿತು(ಅoಟಿಜಿiಡಿm). ಡ್ರೈವರ್ ಕೆಲಸ ಇಷ್ಟವಿಲ್ಲದಿದ್ದರೂ ಅದನ್ನೇ ಮಾಡಬೇಕಾಗಿ ಬಂದಿತ್ತು. ಹೀಗೆ ಹತ್ತು ವರ್ಷಗಳು ಕಳೆದವು. ಒಂದು ದಿನ ಕೆಸ ಮುಗಿಸಿಕೊಂಡು ಮನೆಗೆ ಹಿಂತಿರುತ್ತಿದ್ದಾಗ  ರಸ್ತೆಯಲ್ಲಿ ಅಫಘಾತ ಸಂಭವಿಸಿತು. ಮೋಟಾರ್ ಬೈಕ್ ಹಿಂದಗಡೆ ಕುಳಿತಿದ್ದ ಶ್ರೀನಿವಾಸನ ಎಡಗೈ ಟ್ರಕ್‌ನಡಿ ಸಿಕ್ಕಿ ನಜ್ಜುಗುಜ್ಜಾಯಿತು. ಆಸ್ಪತ್ರೆಯಲ್ಲಿ ಅವನ ಎಡಗೈ ಬುಜದಿಂದ ಪೂರ್ತಿ ಕತ್ತರಿಸಿ ತೆಗೆದಿದ್ದರು. (ಂmಠಿuಣeಜ) ಅದೃಷ್ಟವಶಾತ್ ಪ್ರಾಣಕ್ಕೆ ಅಪಾಯವಾಗಲಿಲ್ಲ. ಸರ್ವಾಂಗಭರಿತನಾಗಿದ್ದವನು ಈಗ ಅಂಗ ವೈಕಲ್ಯನಾದ. ಅಪಘಾತದಲ್ಲಿ ಜೀವ ಉಳಿದರೂ, ಅವನೊಂದು ಕೈ ಕಳೆದುಕೊಂಡಿದ್ದ. ಮನೆಯಿಂದ ಬೈಕ್ ಅಥವಾ ಇನ್ನಾವುದೇ ವಾಹನವೇರಿ ರಸ್ತೆಗಿಳಿದವರು ಸುರಕ್ಷಿತವಾಗಿ ಮನೆಗೆ ಮರಳುತ್ತಾರೆಂಬ ಭರವಸೆಯನ್ನು ಹೊಸಕಿಹಾಕಿರುವ ವೈಪರೀತ್ಯ, ಇಂದಿನ ಬೆಳೆಯುತ್ತಿರುವ ನಗರದ ಕೊಡುಗೆಯಾಗಿದೆ. ವಾಹನ ಚಾಲಕರಲ್ಲದೆ ಮತ್ತಿತರು ಸಹ ತಮ್ಮದಲ್ಲದ ತಪ್ಪಿಗೆ ಪ್ರಾಣತೆರುವಂತಾಗಿದೆ. ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕ ಪರ್‍ಯಾಯ ಕೆಲಸ ಕೊಡುವಂತೆ ತನ್ನ           ಮೇಲಾಧಿಕಾರಿಗಳನ್ನು ಕೇಳಿಕೊಂಡ. ಇನ್ನು ಮುಂದೆ ನಿನ್ನಿಂದ ಯಾವ ಕೆಲಸ ಮಾಡಲು ಆಗದು, ಮೆಡಿಕಲ್ ಸರ್ಟಿಪಿಕೇಟ್ ಲಗತ್ತಿಸಿ, ವಾಲಂಟರಿ ರೆಟೈರ್‌ಮೆಂಟ್‌ಗೆ ಬರೆದುಕೊ, ನಿನಗೆ ಕೊಡಬೇಕಾದ ಮೊತ್ತವನ್ನು ಪಾವತಿಸಿ ಸಂಸ್ಥೆಯಿಂದ ನಿನ್ನನ್ನು ಬಿಡುಗಡೆಮಾಡುತ್ತೇವೆ. ನಿನಗೆ ಅಪಘಾತ ಸಂಭವಿಸಿರುವುದು ನಿನ್ನ ಸ್ವಂತ ವಾಹನದಿಂದ ಹಾಗು ಡ್ಯೂಟಿ ಮುಗಿದ ಮೇಲೆ. ಆದ್ದರಿಂದ ಸಂಸ್ಥೆಯ ನಿಯಮಾವಳಿ ಪ್ರಕಾರ ನೀನು ಯಾವ ಸೌಲಭ್ಯಕ್ಕೂ ಅರ್ಹನಲ್ಲ. ಎಂದು ಹೇಳಿದರು. ಶ್ರೀನಿವಾಸನಿಗೆ ದಿಕ್ಕೇ ತೋಚದಾಗಿ ಕಣ್ಣು ಕಣ್ಣು ಬಿಡುವಂತಾಯಿತು. ಉದ್ಯೋಗವನ್ನು ನಂಬಿ ಕಟ್ಟಿಕೊಂಡ ಸಂಸಾರ ಮತ್ತು ಮಕ್ಕಳು, ಬೀದಿಗೆ ಬೀಳುವಂತಾಯಿತು. ಮುಂದಕ್ಕೆ ಸಂಸಾರ ನಡೆಸುವುದಾದರೂ ಹೇಗೆ, ಮಕ್ಕಳನ್ನು ಸಾಕುವುದಾದರೂ ಹೇಗೆ ಎಂಬ ಚಿಂತೆಯಲ್ಲಿ ಬಿದ್ದ. ಒಂದು ವೇಳೆ ತಾನು ಅಪಘಾತದಲ್ಲಿ ಸತ್ತುಹೋಗಿದ್ದರೆ ಎಷ್ಟೋ ಮೇಲಿತ್ತು ಎಂದು ಕೂಡ ಅವನಿಗೆ ಅನಿಸದಿರಲಿಲ್ಲ. ಈಗ ತಾನು ಅಸಮರ್ಥ.  ಯಾವ ಕೆಲಸ ಮಾಡಲು ಆಗುತ್ತಿಲ್ಲ ಎಂದು ಕೊರಗುತ್ತ ತನ್ನ ನೋವನ್ನು ತಾನೇ ನುಂಗಿದ. 

     ಆದರೂ ಶ್ರೀನಿವಾಸ ದೃತಿಗೆಡಲಿಲ್ಲ. ತನಗೆ ಪರ್‍ಯಾಯ ಉದ್ಯೋಗ ನೀಡಲೇಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ನಾಲ್ಕಾರು ತಿಂಗಳು ಪ್ರಧಾನ ವ್ಯವಸ್ಥಾಪಕರ ಕಚೇರಿಗೆ ಅಲೆದಾಡಿದ. ಒಮ್ಮೆ ಪತ್ನಿ ಮಕ್ಕಳನ್ನೂ ಸಹ ಅವರ ಮುಂದೆ ಪೆರೇಡ್ ಮಾಡಿಸಿದ. ಅವನ ಪ್ರಯತ್ನವೆಲ್ಲ ವಿಫಲವಾಯಿತು, ಅಧಿಕಾರಿಯ ಮನಸ್ಸು ಕರಗಲಿಲ್ಲ್ಲ ಸಂಸ್ಥೆವತಿಯಿಂದ ಬರಬೇಕಾಗಿರುವ ಆರ್ಥಿಕ ಸೌಲಭ್ಯ (P.ಈ.& ಉಡಿಚಿಣuiಣಥಿ) ಈ ಕೂಡಲೆ ನಿಮಗೆ ಕೊಡಿಸುತ್ತೇನೆ. ನೀವು ಬೇರೆ ಯಾವುದಾದರೂ ಬಿಸಿನೆಸ್ ಮಾಡಬಹುದು. ಆದರೆ ನಿಮ್ಮ ದೈಹಿಕ ಅರ್ಹತೆಗೆ ತಕ್ಕಂತೆ ನಮ್ಮಲ್ಲಿ ಯಾವ ಉದ್ಯೋಗವೂ ಇಲ್ಲ ಎಂದು ಹೇಳಿ ಕೈ ತೊಳೆದುಕೊಂಡರು.


ಬದುಕಿನ ಬವಣೆ ಹರಿವ ನೀರಿನಂತೆ


ಆಸೆ, ನಿರಾಸೆ, ಗೆಲುವು ಸೋಲು ಹಗಲು ರಾತ್ರಿಗಳಂತೆ ನಿನ್ನೆ ಮತ್ತು ನಾಳೆ ಇನ್ನಾರದ್ದೋ ಇರುವ ಗಳಿಗೆ ಮಾತ್ರ ನಮ್ಮದು.

    ಜೀವನೋಪಾಯಕ್ಕಾಗಿ ಏನಾದರೊಂದು ಕೆಲಸಮಾಡುವ ಅಗತ್ಯವಿದ್ದು, ಅಂತಹ ಯಾವುದೇ ಅವಕಾಶ ಶ್ರೀನಿವಾಸನಿಗೆ ಸಿಗದೆ ಹೋಯಿತು. ನಿರಾಶೆಯ ಕಾರ್ಮೋಡಗಳು ಕವಿಯತೊಡಗಿದವು. ಹೀಗೆಯೇ ಎರಡು-ಮೂರು ತಿಂಗಳು ಕಳೆದವು. ಈ ನಡುವೆ ಕನಸೋ ಎಂಬಂತೆ  ಜವಾನ ಹುದ್ದೆ ನೀಡುವ ಕುರಿತು ಸಂಸ್ಥೆಯಿಂದ ಒಂದು ಪತ್ರ ಬಂತು. ಶ್ರೀನಿವಾಸನಿಗಾದ ಆನಂದಕ್ಕೆ ಪಾರವೇ ಇಲ್ಲ. ಕಳೆದ ಎಂಟು ತಿಂಗಳಿನಿಂದ ತನಗೆ ಪರ್‍ಯಾಯ ಹುದ್ದೆ ದೊರಕುವುದೆಂಬ ನಿರೀಕ್ಷೆಯಲ್ಲೇ ಇದ್ದವನಿಗೆ ಅದು ಇಂದಿಗೆ ನನಸಾಯಿತು. ಅವನ ಕಷ್ಟಕೋಟಲೆಯ ದಿನಗಳು ದೂರವಾದವು. ಮಸುಕು ಕವಿದಿದ್ದ ಅವನ ಬದುಕಿನಲ್ಲಿ ಬದುಕುವ ಭರವಸೆ ಮೂಡಿತು. ಕೊಟ್ಟ ಉದ್ಯೋಗವನ್ನು ಸ್ವೀಕರಿಸಿ ತನ್ನ ಪತ್ನಿ ಮತ್ತು ಮಕ್ಕಳಿಗೆ ಆಸರೆಯಾದ. ಭವಿಷ್ಯದ ಬಗ್ಗೆ ಕಟ್ಟಿಕೊಂಡಿದ್ದ ಅವನ ಕನಸುಗಳು ಮತ್ತೆ ಚಿಗುರತೊಡಗಿದವು. 

       ಕಾಲ ಉರುಳಿತು, ಜೀವನ ಎಂಬುದು ನಾನಾ ತಿರುವುಗಳಿಂದ ಕೂಡಿದ ಒಂದು ದೊಡ್ಡ ಸಾಗರ. ಅಫಘಾತದಲ್ಲಿ ಕಳೆದುಕೊಂಡಿದ್ದ ಒಂದು ಕೈ ನಷ್ಟದ ಪರಿಹಾರವಾಗಿ ಕೋರ್ಟ್ ತೀರ್ಪಿನಂತೆ ಅವನ ಕೈಗೊಂದು ದೊಡ್ಡ ಮೊತ್ತವೇ ಸೇರಿತು. ಮನುಷ್ಯನ ಕೈಗೆ ಹಣ ಸಿಕ್ಕರೆ ಅವನ ಗ್ರಹಗತಿಗಳೇ ಬದಲಾಗುವುದಂತೆ. ಪ್ರತಿಯೊಬ್ಬನ ಆಸೆಯೂ ವಿಭಿನ್ನ, ಅವರವರ ಆಸೆಗನುಗುಣವಾಗಿ ಹೊಸ ಕನಸುಗಳು ಚಿಗುರುತ್ತವೆ. ಈ ಕನಸುಗಳಿಂದ ಕೂಡಿದ ಆಸೆಗಳೇ ಜೀವನದ ಪಯಣಕ್ಕೆ ದಿಕ್ಸೂಚಿಗಳು. ಶ್ರೀನಿವಾಸನ ಕೈಗೆ ಸಿಕ್ಕ ಹಣದಲ್ಲಿ ಮಕ್ಕಳ ಮತ್ತು ಪತ್ನಿಯ ಭವಿಷ್ಯಕ್ಕಾಗಿ ಒಂದಿಷ್ಟು ಹಣವನ್ನು ಬ್ಯಾಂಕ್‌ನಲ್ಲಿ ಉಳಿತಾಯ ಮಾಡಬಹುದಿತ್ತು. ಆದರೆ ಅವನ ಇಚ್ಛೆ ಬೇರೆಯೇ ಆಗಿದ್ದು ಆತ ಆ ಹಣದಲ್ಲಿ ಒಂದು ಹೊಸ ಕಾರ್ ಕೊಂಡುಕೊಂಡ. ಬಹುಶಃ ಹೆಂಡತಿ ಮಕ್ಕಳನ್ನು ಕಾರಿನಲ್ಲಿ ಕೂರಿಸಿಕೊಂಡು ಒಡಾಡುವ ಆಸೆಯೇನೋ?  ಕಾರ್ ಓಡಿಸಲು ಡ್ರೈವರ್ ಬೇಕಲ್ಲವೆ? ಮಾಡುವುದು ಜವಾನಗಿರಿ, ತನ್ನ ಕಾರ್‌ಗೆ ಡ್ರೈವರ್ ಇಟ್ಟುಕೊಳ್ಳಲು ಸಾಧ್ಯವೆ? ಸ್ವತಃ ಕಾರ್ ಓಡಿಸಲು ಒಂದು ಕೈ ಇಲ್ಲ. ಅದೊಂದು ದೇಹದ ಮುಖ್ಯ ಅಂಗವೈಕಲ್ಯ ವಾಹನ ಚಲಾಯಿಸುವುದಕ್ಕೆ  ಕೈ ಕಾಲುಗಳು ಕಣ್ಣು, ತಲೆ ಪಾದರಸದಷ್ಟು ಚುರುಕಾಗಿ ಕೆಲಸ ಮಾಡಬೇಕು, ಮೈ ಎಲ್ಲಾ ಕಣ್ಣಾಗಿರಬೇಕು. ಕಾರ್ ಓಡಿಸುವುದೆಂದರೆ ಪದೇ ಪದೇ ಗೇರ್‌ಗಳನ್ನು ಬದಲಾಯಿಸ ಬೇಕು. ಈ ಕಾರ್ಯ ನಿರ್ವಹಿಸುವುದು ಎಡಗೈಯಲ್ಲವೆ? ಅದೂ ಅಲ್ಲದೆ, ವಾಹನದ ಮುಖ್ಯ ಭಾಗ ಸ್ಟೀರಿಂಗನ್ನು ನಿಯಂತ್ರಿಸಲು ಎಡಗೈನ ಸಹಾಯ ಬೇಕೇ ಬೇಕು. 

ದೇವರು ಪ್ರತಿಯೊಬ್ಬರಿಗೂ ಒಂದೊಂದು ಪ್ರತಿಭೆ ಕೊಟ್ಟಿರುತ್ತಾನಂತೆ. ಅಂತಹವರು ತಮ್ಮ ಕಾರ್ಯಕ್ಷೇತ್ರದಲ್ಲಿ ಅಸಾಧಾರಣ ನೈಪುಣ್ಯ ಮೆರೆದಿದ್ದಾರೆ. ಅಂಥಹವರ ಕೌಶಲ್ಯವನ್ನು ಕಂಡಾಗ, ಸರ್ವವಿಧದಲ್ಲೂ ಸಂಪೂರ್ಣರಾಗಿರುವ ನಮಗೆ ಅಚ್ಚರಿ ಮೂಡುವುದರಲ್ಲಿ ಸಂದೇಹವಿಲ್ಲ. ಶ್ರೀನಿವಾಸ ತನ್ನ ಒಂದೇ ಕೈಯ ಸಹಾಯದಿಂದ ಕಾರನ್ನು ಚಲಾಯಿಸತೊಡಗಿದ. ಗೇರ್‌ಗಳ ಬದಲಾವಣೆ, ಸ್ಟೀರಿಂಗ್ ತಿರುಗಿಸುವುದು ಹಾಗು ಇಂತಹ ಬೃಹತ್ ಟ್ರ್ಯಾಪಿಕ್ ನಗರಿಯಲ್ಲಿ ಕಾರನ್ನು ಓಡಿಸುವುದು ಅಷ್ಟು ಸುಲಭವಲ್ಲ. ಶ್ರೀನಿವಾಸ ಅಂಗವಿಕಲನಾಗಿದ್ದರೂ ಕಾರನ್ನು ಒಂದೇ ಕೈಯಲ್ಲಿ ಓಡಿಸತೊಡಗಿದ. ಪೊಲೀಸರಿಗೆ ತನ್ನ ಅಂಗವೈಕಲ್ಯ ಕಾಣಕೂಡದೆಂದು ಕಾರ್ ಡ್ರೈವ್ ಮಾಡುವಾಗ ತನ್ನ ಎಡಗೈ ಮುಚ್ಚುವಂತೆ ಶಾಲು ಹೊದ್ದುಕೊಳ್ಳುತ್ತಿದ್ದ. ಆಡಿiviಟಿg is ಚಿಟಿ ಚಿಡಿಣ ಎಂಬಂತೆ ಅವನ ಡ್ರೈವಿಂಗ್ ಪ್ರತಿಭೆ ಎಂಥಹವರನ್ನೂ ಅಚ್ಚರಿಗೊಳಿಸುವಂತಿತ್ತು.    ಕಛೇರಿಯಲ್ಲಿಯೂ ಅವನದು ಒಪ್ಪ ಓರಣದ ಕೆಲಸ. ಇಂತಹ ಫೈಲು ಬೇಕೆಂದರೆ ಸ್ಟೋರ್ ರೂಮ್‌ನಲ್ಲಿನ ನೂರಾರು ಫೈಲ್‌ಗಳ ನಡುವೆ ಕೇಳಿದ ಫೈಲನ್ನು ಕ್ಷಣಮಾತ್ರದಲ್ಲಿ ಹುಡುಕಿ ಕೊಡುತ್ತಿದ್ದ. ಅದೂ ತನ್ನ ಒಂದೇ ಕೈಯಲ್ಲಿ. ಅವನಲ್ಲಿ ಅಗಾದ ನೆನಪಿನ ಶಕ್ತಿಯೂ ಇತ್ತು. ನಾವು ಫೈಲನ್ನು ತೆರೆದು ನೋಡುವ ಮುನ್ನವೆ, ಕಂಪ್ಯೂಟರ್‌ನಷ್ಟು ವೇಗವಾಗಿ ಅವನ ತಲೆ ತೆರೆದುಕೊಳ್ಳುತ್ತಿತ್ತು. ಫೈಲನ್ನು ಕೊಡುತ್ತ ಅದರ ವಿವರವನ್ನೆಲ್ಲ ನಮಗೆ ಮುಂಚಿತವಾಗಿಯೇ ಹೇಳಿಬಿಡುತ್ತಿದ್ದ.  

ಗುಮಾಸ್ತನ ಹುದ್ದೆಗೆ ಬಡ್ತ

     ಶ್ರೀನಿವಾಸನ ಕಾರ್ಯಕ್ಷಮತೆಯನ್ನು ಮೆಚ್ಚಿದ      ಅಧಿಕಾರಿ, ಅವನಿಗೆ ಜವಾನ ಹುದ್ದೆಯಿಂದ ಗುಮಾಸ್ತ ಹುದ್ದೆಗೆ (ಅಟeಡಿiಛಿಚಿಟ Posಣ)  ಭಡ್ತಿ ನೀಡಿದರು. ಶ್ರೀನಿವಾಸ ಈಗ ಕ್ಲ್ಲಾರ್ಕ್. ಅವನಿಗೆ ಎಂದೋ ಸಿಗಬೇಕಾಗಿದ್ದ ಗುಮಾಸ್ತ ಹುದ್ದೆ ಇಂದು ಸಿಕ್ಕಿದೆ, ಅದು ಹನ್ನೆರಡು ವರ್ಷಗಳ ಬಳಿಕ, ಒಂದು ಕೈಯನ್ನು ಕಳೆದುಕೊಂಡ ಮೇಲೆ ! 

**********



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...