ಹೇಗೆ ನಿಲ್ಲಿಸುವುದೆಂದು ಮರೆತು ಬಿಟ್ಟಿದ್ದೆ
ಆಂಡ್ರ್ಯೂ ಕಾರ್ನೆಗಿ ಪ್ರಪಂಚದಲ್ಲಿ ಅತೀ ಶ್ರೀಮಂತರಲ್ಲಿ ಒಬ್ಬ. ಅವನನ್ನು ಒಮ್ಮೆ ಈ ರೀತಿ ಪ್ರಶ್ನಿಸಲಾಯಿತ್ತು; ನಿಮ್ಮಲ್ಲಿ ಸಾಕಷ್ಟು ಆಸ್ತಿ ಇತ್ತು, ಕನಿಷ್ಠ ನಿಮ್ಮ ಬದುಕಿನ ಕೊನೆದಿನಗಳಾದರೂ ಎಲ್ಲವನ್ನು ಬಿಟ್ಟು ನೆಮ್ಮದಿಯಿಂದ ಬಾಳಬಹುದಿತ್ತಲ್ಲ? ಹೌದು, ನಿಜ ಆದರೆ ನಾನು ಸಂಪಾದಿಸುವ ನನ್ನ ಚಟವನ್ನು ನಿಲ್ಲಿಸಲಾಗಲಿಲ್ಲ, ಹೇಗೆ ನಿಲ್ಲಿಸುವುದೆಂದು ಮರೆತು ಬಿಟ್ಟಿದ್ದೆ!
-----------
ದೇಶ ಕಟ್ಟುವ ಪುಣ್ಯಕೆಲಸವನ್ನು ಮಾಡ್ತಿದ್ದೀನಿ
ಮಟ ಮಟ ಮಧ್ಯಾಹ್ನದ ಬಿಸಿಲಿನಲ್ಲಿ ಬಿಸಿ ಬಿಸಿ ಸುಡುತ್ತಿದ್ದ ಇಟ್ಟಿಗೆಯನ್ನು ಹೊತ್ತುಕೊಂಡು ಕಾರ್ಮಿಕರು ಓಡಾದುತ್ತಿದ್ದರು. ಅಲ್ಲಿಗೆ ಬಂದ ಸನ್ಯಾಸಿಯೊಬ್ಬರು, ನೀನು ಏನು ಮಾಡ್ತಾ ಇದ್ದೀಯಾ? ಎಂದು ಕೆಲಸಗಾರನೊಬ್ಬನನ್ನು ಕೇಳಿದರು. ಅದಕ್ಕೆ ಅವನು ನೋಡಿದ್ರೆ ಗೋತ್ತಾಗಲ್ವ ಕಲ್ಲುಮಣ್ಣು ಹೋರ್ತಿದೀನಿ ಎಂದ. ಅದೇ ಪ್ರಶ್ನೆಯನ್ನು ಪಕ್ಕದಲ್ಲಿದ್ದ ಇನ್ನೊಬ್ಬನನ್ನು ಸನ್ಯಾಸಿ ಕೇಳಿದ. ಅದಕ್ಕೆ ಅವನು ನಾನು ಕೂಲಿಗಾಗಿ ನನ್ನ ಸಂಸಾರಕ್ಕೆ ಆಹಾರವನ್ನು ಸಂಪಾದಿಸುತ್ತಿದ್ದೀನಿ ಎಂದ. ಸನ್ಯಾಸಿ ಮತ್ತೊಬ್ಬನೊಂದಿಗೆ ನೀನು ಏನು ಮಾಡ್ತಾ ಇದ್ದೀಯಾ? ಎಂದು ಅದೇ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಆ ಮೂರವನೆಯವನು ನಾನು ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆಯ ಕಟ್ಟಡವನ್ನು ಕಟ್ಟುತ್ತಿದ್ದೇನೆ ಎಂದು ಉತ್ತರಿಸಿದ. ಇದೇ ಪ್ರಶ್ನೆಯನ್ನು ಕೇಳಿದ ಇನ್ನೊಬ್ಬನ ಉತ್ತರ, ದೇಶ ಕಟ್ಟುವ ಪುಣ್ಯಕೆಲಸವನ್ನು ಮಾಡ್ತಿದ್ದೀನಿ.
-------------
ನ್ಯೂರಟಿಕ್ ಮಗು
ಪುಟ್ಟ ಮೇರಿ ತನ್ನ ತಾಯಿಯೊಂದಿಗೆ ಸಮುದ್ರ ತೀರದಲ್ಲಿದ್ದಳು. ಅಮ್ಮ ನಾನು ಮರಳಿನಲ್ಲಿ ಆಡಬಹುದೇ? ಪುಟ್ಟ ಮೇರಿ ತಾಯಿಯನ್ನು ಕೇಳಿದಳು. ಬೇಡ ಬೇಡ ನಿನ್ನ ಸ್ವಚ್ಛವಾದ ಬಟ್ಟೆ ಕೊಳೆಯಾಗುತ್ತದೆ ಎಂದು ಮಗಳನ್ನು ತಡೆದಳು. ಮತ್ತೊಮ್ಮೆ ಅಮ್ಮ ನಾನು ನೀರಿನಲ್ಲಿ ಆಟವಾಡಬಹುದೇ? ಮೇರಿ ಅಮ್ಮಳನ್ನು ಗೊಗರೆದಳು. ಬೇಡ ಮೇರಿ ನಿನ್ನ ಬಟ್ಟೆಗಳು ಒದ್ದೆಯಾಗುತ್ತದೆ ಮತ್ತು ನಿನಗೆ ಶೀತ ನೆಗಡಿ ಬರಬಹುದು ಮತ್ತೊಮ್ಮೆ ನೀರಿನಲ್ಲಿ ಆಟವಾಡಕೆಂಬ ಆಸೆಯಿಂದ ಇದ್ದ ಮೇರಿಯನ್ನು ತಾಯಿ ತಡೆದಳು. ನಾನು ಇತರ ಮಕ್ಕಳೊಂದಿಗೆ ಆಡಬಹುದೇ? ಮೇರಿ ಅಮ್ಮಳನ್ನು ವಿನಂತಿಸಿದಳು. ಬೇಡ ನೀನು ಜನಸಂದಣಿಯಲ್ಲಿ ಕಳೆದುಹೋಗುವೆ ಎಂದು ತಾಯಿ ಹೇಳಿದಳು. ಕೊನೆಗೆ ಅಮ್ಮ ನನಗೆ ಐಸ್‌ಕ್ರಿಮ್ ಕೊಡಿಸಿ ಎಂದು ಬೇಡಿಕೊಂಡಳು. ಅದಕ್ಕೆ ತಾಯಿ ಬೇಡ ಬೇಡ ಅದು ನಿನ್ನ ಗಂಟಲಿಗೆ ಒಳ್ಳೆಯದಲ್ಲ ಎಂದು ಹೇಳಿದಳು. ಮೇರಿ ಒಮ್ಮಲೇ ಜೋರಾಗಿ ಅಳಲು ಪ್ರಾರಂಭಿಸಿದಳು. ತಾಯಿ ತನ್ನ ಪಕ್ಕ ನಿಂತಿದ್ದ ತನ್ನ ಗೆಳತಿಯ ಕಡೆ ತಿರುಗಿ ಅಬ್ಬಾ ಇಂಥ ತೆಲೆಕೆಟ್ಟ ನ್ಯೂರಟಿಕ್ ಮಗುವನ್ನು ನೀವು ಎಂದಾದರೂ ನೋಡಿದ್ದೀರಾ? ಎಂದ ಹೇಳತೊಡಗಿದಳು.
------------
ಸಂಗ್ರಹ ಅನುವಾದ - ಇನ್ನಾ
No comments:
Post a Comment