ಎಲ್ಲ ದನಿಗಳನ್ನು ಆಸಕ್ತಿಯಿಂದ
ಕೇಳುವ ನನ್ನ ಕಿವಿಗಳು
ನನ್ನದೆ ದನಿಗೆ ಅಪರಿಚಿತವಾಗಿರುವುದು
ಎಂತಹ ವಿಪರ್ಯಾಸ!
--------------
ಮನದ ಕಿಟಕಿ ತೆರೆದರೆ
ಕಿಟಕಿಗಳು ತೆರದ ಕೋಣೆಯಷ್ಟೇ
ಬೆಳಕು!
-----------------
ಸತ್ಯದ ದನಿಗೆ ಬಲವಿದಷ್ಟು
ಇದಿದ್ದರೆ ಸುಳ್ಳಿಗೆ
ನಾಶವಾಗಿಬಿಡುತ್ತಿತ್ತು
ಇಡೀ ಜಗತ್ತು
------------
ಬಂಗಾರ ಪಡೆದು
ಬೆಳ್ಳಿಯನಾದರೂ ಕೊಡುವಷ್ಟು ಉದಾರತೆ
ತೋರದ ಜಿಪುಣ ನನ್ನ ಬದುಕು
---------
ಸತ್ಯ ಹೇಳಿದರೆ ಶಿಕ್ಷಿಸುವ ಜನರು
ಹೆಚ್ಚಿರುವ ಈ ಜಗದ ಲೆಕ್ಕಚಾರದಲ್ಲಿ
ಸತ್ಯ ಹೇಳುವ ಬೆರಳೆಣಿಕೆ ಜನರ ಬಲಕ್ಕೆ
ಸರಿಸಾಟಿಯಿಲ್ಲವಲ್ಲ!
No comments:
Post a Comment