ನಾವು, ಎದೆಯೊಳಗೆ ಬಯಲು
ತುಂಬಿಕೊಂಡವರು
ಅನಂತ ಅವಕಾಶಕ್ಕೆ
ಸವಾಲೊಡ್ಡಿದವರು
ನಿಮ್ಮ ಬೊಗಸೆಯಲ್ಲಿ ಭೂಮಿ
ಇದು ಕಟ್ಟು ಕಥೆಯಲ್ಲ
ಕಲ್ಪನೆಯ ಭಾವಚಿತ್ರವಲ್ಲ;
ಒಂದುಗೂಡಿದ ಕೈಗಳಿಗೆ
ಬೆಸೆದುಕೊಂಡ ಮನಗಳಿಗೆ
ಭುವಿಯ ಹೊರುವುದು ಭಾರವಲ್ಲ
ನಿಮ್ಮ ಅಂಗೈ ಅಂಗಳದಲ್ಲಿದೆ ಭೂಮಿ
ಈಗ ನಮಗೆ ಗಡಿಗಳ ಮಿತಿಯಿಲ್ಲ
ಭಾಷೆ ಧರ್ಮಗಳ ತೊಡರಿಲ್ಲ
ಲಿಂಗ ಭಾವಗಳ ಭೇದವಿಲ್ಲ
ಇಡೀ ಜಗವೇ ಹೊತ್ತು ನಿಂತಿದ್ದೇವೆ
ಮತ್ತು ಮನಗಂಡಿದ್ದೇವೆ.
ನಮ್ಮ ಹೊರತು, ಸಕಲರ ಪೊರೆವ
ಈ ಭುವಿಗೆ ಬೇರೆ ರಕ್ಷಕರಿಲ್ಲ
ಹಾಗೆಂದೇ ಈಗ,
ನಿಮ್ಮ ಬೊಗಸೆಯಲ್ಲಿ ಭೂಮಿ!
**********
No comments:
Post a Comment