ಎಲ್ಲರೂ ಹಣದಾಹಿಗಳೇ. ಹಣಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಣಮಾಡುವುದೇ ಮುಖ್ಯ ಗುರಿಯನ್ನಾಗಿಸಿಕೊಂಡವರಿಗೆ ಸಮಾಜದಲ್ಲಿ ನಾನಾ ಅವಕಾಶಗಳೂ ಇವೆ. ಇನ್ನೊಬ್ಬರ ಬದುಕು ಹಾಳಾದರೂ ಪರವಾಗಿಲ್ಲ, ತಮ್ಮ ಬಾಳು ಹಸನಾಗಬೇಕೆಂಬುದೇ ಎಲ್ಲರ ಹೆಬ್ಬಯಕೆ. ನ್ಯಾಯರೀತಿಯಲ್ಲಿ ಹಣಗಳಿಸುವ ನಾನಾ ಮಾರ್ಗಗಳಿದ್ದರೂ ಅಂದುಕೊಂಡಷ್ಟು ಸುಲಭವಾಗಿ ಹಣಗಳಿಸಲು ಆಗುತ್ತಿಲ್ಲ. ಕತ್ತೆ ದುಡಿತ ಮಾಡಿದರೂ ಹಣವೆಂಬುದು ಕನಸಿನ ಗೋಪುರವೇ. ಇದಕ್ಕಾಗಿ ಕೆಲವರು ವಾಮ ಮಾರ್ಗಗಳನ್ನೇ ಅನುಸರಿಸುತ್ತಾರೆ. ಹಣಗಳಿಸಿದಷ್ಟೂ ಇನ್ನೂ ಹೆಚ್ಚು ಹಣ ಗಳಿಸಬೇಕೆಂಬ ಹಪಾಪಿ. ಎಲ್ಲಾ ದಾಹಕ್ಕಿಂತ ಹಣದ ದಾಹವೇ ದೊಡ್ಡದು. ಎಷ್ಟೇ ಹಣ ಗಳಿಸಿದರೂ ಮನ ತಣಿಯದು, ಜೀವನ ಸಂತೃಪ್ತಿಯಾಗದು. ಇಂದಿನ ದಿನಗಳಲ್ಲಿ ದೇವರ ಹೆಸರಿನಲ್ಲಿ ಹಣಗಳಿಸುವ ನಾನಾ ದಂಧೆಗಳು ಹುಟ್ಟಿಕೊಂಡಿವೆ. ಸುಂದರವಾದ ದೇವಸ್ಥಾನಗಳನ್ನು ನಿರ್ಮಿಸಿ ಸ್ವಾಮಿ ಕಾರ್ಯ ಸ್ವಕಾರ್ಯಗಳೊಂದಿಗೆ ಹಣ ಮಾಡುವವರಿದ್ದಾರೆ. ಭಕ್ತರು ಅರಸಿಕೊಂಡ ಕೋರಿಕೆಗಳು ನೆರವೇರುತ್ತವೆಯೋ ಇಲ್ಲವೋ, ಆದರೆ ಅವರ ಮೂಲಕ ದೇವಸ್ಥಾನದ ಹುಂಡಿಗಳು ಹಣದಿಂದ ತುಂಬುತ್ತಿವ. ಕ್ರೈಸ್ತ ಧರ್ಮವೂ ಇದಕ್ಕೆ ಹೊರತಾಗಿಲ್ಲ. ಧರ್ಮಪ್ರಚಾರಕ್ಕೆಂದೇ ಯಥೇಚ್ಚವಾಗಿ ಹಣ ನೀಡುವವರಿದ್ದಾರೆ. ಹೀಗೆ ಖರ್ಚು ಮಾಡಿದ ಹಣ ಹೇಗಾದರೂ ಕಾಣಿಕೆ ರೂಪದಲ್ಲಿ ವಾಪಸ್ ಬರುವುದೆಂಬ ನಂಬಿಕೆ ಅವರದು.(ಒoಟಿeಥಿ bಚಿಛಿಞ ಠಿoಟiಛಿಥಿ) ಪ್ರಾಟಸ್ಟಂಟ್ ಪಂಗಡದವರಲ್ಲಿ ಕೆಲವರು ಕ್ರಿಸ್ತನ ಶುಭ ಸಂದೇಶ ಸಾರುವುದನ್ನೇ ಒಂದು ದೊಡ್ಡ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ ಎಂದರೆ ತಪ್ಪಾಗದು.
ಸಾಮಾನ್ಯವಾಗಿ ಕ್ರೈಸ್ತ ಧರ್ಮದವರಲ್ಲಿ ಅದರಲ್ಲೂ ಪ್ರಾಟಸ್ಟಂಟ್ ಪಂಗದಡವರು ಧರ್ಮಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಅಲ್ಲಲ್ಲಿ ಬೈಬಲ್ ಕನ್ವೆಂಶನ್, ಗಾಸ್ಪಲ್ ಕೂಟಗಳು, ರೋಗಸೌಖ್ಯ ಕೂಟಗಳು ಜರುಗುತ್ತಲೇ ಇರುತ್ತವೆ. ದೇವರನ್ನು ಸ್ತುತಿಸುವ ಅಲ್ಲೇಲೂಯಾ, ಪ್ರೈಸ್‌ದ ಲಾರ್ಡ್ ಉದ್ಘೋಷಣೆಗಳು ಕೂಟಗಳಲ್ಲಿ ಮುಗಿಲು ಮುಟ್ಟುತ್ತವೆ. ಆವೇಶಭರಿತರಾದ ಪ್ರೇಕ್ಷಕ ಭಕ್ತರು ಮೈಮರೆತು ನರ್ತಿಸುತ್ತ ಕೈಗಳನ್ನು ತಟ್ಟುತ್ತ ಜೋರಾಗಿ ದನಿ ಗೂಡಿಸುತ್ತಾರೆ. ಕೆಲವೊಮ್ಮೆ ಅದ್ಭುತ ಪವಾಡಗಳು ಸಂಭವಿಸುವುದೂ ಉಂಟು. ಮನ ಮುಟ್ಟುವ ಬೋಧನೆಗಳು, ಇಂಪಾದ ಗಾನಗಳು ಭಕ್ತರನ್ನು ಭಕ್ತಿಯ ಪರಕಾಷ್ಠೆಗೆ ಕೊಂಡೊಯುತ್ತದೆ. ಮನಸೋತ ಪ್ರೇಕ್ಷಕರು ಮನಪರಿವರ್ತನೆ ಹೊಂದುತ್ತಾರೆ. ಯಥೇಚ್ಚವಾಗಿ ಕಾಣಿಕೆ ನೀಡುತ್ತಾರೆ. ಇದನ್ನೇ ಮೂಲಭೂತ ಆಧಾರವನ್ನಾಗಿಟ್ಟುಕೊಂಡು ಟ್ರ್ಯಾನ್ಸ್ ಎಂಬ ಮಲಯಾಳಂ ಚಲನಚಿತ್ರವನ್ನು ತಯಾರಿಸಿದ್ದಾರೆ. ಇದರಲ್ಲಿ ಅಂತಹುದೇ ಸನ್ನಿವೇಶಗಳು ಧಾರಾಳವಾಗಿ ಸೃಷ್ಟಿಯಾಗಿವೆ. ಕ್ಯಾನ್ಸರ್ ರೋಗಿಗಳನ್ನು ಗುಣಪಡಿಸುವುದು, ಊರುಗೋಲಿನಿಂದ ನಡೆಯುತ್ತಿದ್ದ ಮಹಿಳೆಯ ಕೋಲನ್ನು ಕಿತ್ತೆಸೆದು ಸ್ಟೇಜ್ ಮೇಲೆ ನಡೆಯುವಂತೆ ಮಾಡುವುದು, ಹತ್ತೊಂಭತ್ತು ವರ್ಷಗಳಿಂದ ಕಣ್ಣು ಕಾಣಿಸದಿದ್ದ ಮಹಿಳೆಗೆ ಕಣ್ಣು ಕಾಣುವಂತೆ ಮಾಡುವುದು, ಸೊಂಟದ ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದವನಿಗೆ ಬಾಗಿ ಏಳುವಂತೆ ಮಾಡುವುದು ಮುಂತಾದ ಪವಾಡಗಳು ವ್ಯವಸ್ಥಿತವಾಗಿ ಜರುಗುತ್ತವೆ. ಉive ಚಿಟಿಜ ಥಿou shಚಿಟಟ ಡಿeಛಿeive ಮಾತಿಗೆ ಭಕ್ತರಿಂದ ಹಣದ ಹೊಳೆಯೇ ಹರಿಯುತ್ತದೆ. ಆಯೋಜಕರ ಬೊಕ್ಕಸ ತುಂಬಿ ಭರ್ತಿಯಾಗುತ್ತದೆ.
ಸಾಲೊಮನ್ ಡೇವಿಸ್ ಹಾಗು ಐಸಾಕ್ ಥಾಮಸ್ ಎಂಬುವವರು ಸಂಯುಕ್ತ ಸಂಸ್ಥೆಯೊಂದರ ಪದಾಧಿಕಾರಿಗಳು. ಸಂಸ್ಥೆಯನ್ನು ಆರ್ಥಿಕವಾಗಿ ಮತ್ತಷ್ಟು ಸಂಪನ್ನಗೊಳಿಸಲು ಅವರು ಕಂಡುಕೊಂಡ ಮಾರ್ಗ ಶುಭಸಂದೇಶದ ಪ್ರಚಾರ. ವಿಜುಪ್ರಸಾದ್ ಎಂಬ ನಿರೀಶ್ವರವಾದಿಯೊಬ್ಬನನ್ನು ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಬಳಸಿಕೊಳ್ಳಲು ಆತನಲ್ಲಿದ್ದ ಪ್ರೇರೇಕ ಭಾಷಣದ ನೈಪುಣ್ಯಗೆ ನೀರೆರೆದು ಕ್ರೈಸ್ತಧರ್ಮದ ಬೋಧನೆಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅವನಿಗೆ ಬೋಧನೆಯಲ್ಲಿ ತರಬೇತಿ ನೀಡಿ ಅದ್ಭುತ ಪವಾಡಗಳ ಕರ್ತೃ (ಒiಡಿಚಿಛಿಟe Woಡಿಞeಡಿ) ವನ್ನಾಗಿ ಮಾಡುತ್ತಾರೆ. ಅವನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಮೊತ್ತವನ್ನು ನೀಡಲು ಒಪ್ಪಿಕೊಳ್ಳುತ್ತಾರೆ. ಅಪ್ಪಟ ನಾಸ್ತಿಕನಾಗಿದ್ದ ವಿಜುಪ್ರಸಾದ್ ಒಬ್ಬ ಕ್ರೈಸ್ತ ಧರ್ಮದ ಬೋಧಕನಾಗಿ ಬದಲಾಗುತ್ತಾನೆ. ಮುಂದೆ ಅವನ ಹೆಸರು ಪಾಸ್ಟರ್ ಜೋಶುವ ಕಾರ್‍ಲ್‌ಟನ್.
ಚಿತ್ರದ ಕಿರು ಪರಿಚಯ
ಇದೊಂದು ಮನೋವೈಜ್ಞಾನಿಕ ಕಥಾಹಂದರವುಳ್ಳ ಚಲನಚಿತ್ರ. ಅನ್ವರ್ ರಶೀದ್ ನಿರ್ದೇಶನ ಹಾಗು ನಿರ್ಮಾಣದಲ್ಲಿ ಚಿತ್ರ ತೆರೆಕಂಡಿದ್ದು ಇದರ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದವರು ವಿನ್ಸೆಂಟ್ ವಡಕನ್. ಮುಖ್ಯ ಪಾತ್ರದಲ್ಲಿ ಫಹಾದ್ ಫಾಸಿಲ್, ಪೋಷಕ ಪಾತ್ರಗಳಲ್ಲಿ ದಿಲೀಶ್ ಪೋತನ್, ಗೌತಮ್ ಮೆನನ್, ಚೆಂಬನ್ ವಿನೋದ್ ಜೋಸ್, ನಸ್ರಿಯ ನಜೀಮ್, ಸೌಬಿನ್ ಶಾಹಿರ್ ಹಾಗು ವಿನಾಯಕನ್ ಇದ್ದಾರೆ. ಅಮಲ್ ನೀರದ್ ಛಾಯಾಗ್ರಾಹಕರಾಗಿ ಹಾಗು ಹೊಸಬ ವಿಜಯನ್ ಜಾಕ್ಸನ್ ಚಿತ್ರದ ಹಾಡುಗಳನ್ನು ಸಂಯೋಜಿಸಿದ್ದಾರೆ. ಜಾಕ್ಸನ್ ವಿಜಯನ್ ಹಾಗು ಶುಶೀನ್ ಶ್ಯಾಮ್‌ರವರಿಂದ ಹಿನ್ನಲೆ ಸಂಗೀತವಿದೆ. ಚಿತ್ರದ ಎಡಿಟಿಂಗ್, ಪ್ರವೀಣ್ ಪ್ರಭಾಕರ್. ಚಿತ್ರದ ಕಾಲಾವಧಿ ೨ ಗಂಟೆ ೪೮ ನಿಮಿಷಗಳು. ಚಿತ್ರದಲ್ಲಿನ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ತಕ್ಕಂತೆ ನ್ಯಾಯ ಒದಗಿಸಿದ್ದಾರೆ.
ಇದೊಂದು ವಿಜು ಪಸಾದ್ ಎಂಬ ಹತಾಶ ಯುವಕನ ಜೀವನದಲ್ಲಿ ಘಟಿಸಿದ ಕಥಾವಸ್ತು (Pಟoಣ). ಆತ ಮೂಲತಃ ಕನ್ಯಾಕುಮಾರಿ ನಿವಾಸಿಯಾಗಿದ್ದು, ಹವ್ಯಾಸಿ ಪ್ರೇರಕ ಭಾಷಣಾಕಾರನಾದ ಅವನೊಬ್ಬ (ಒoಣivಚಿಣioಟಿಚಿಟ Sಠಿeಚಿಞeಡಿ) ಅಪ್ಪಟ ನಾಸ್ತಿಕ. ಮುಂದೆ ಸಂಯುಕ್ತ ಸಂಸ್ಥೆಯೊಂದು ಅವನನ್ನು ಒಬ್ಬ ಕ್ರಿಶ್ಚಿಯನ್ ಪಾಸ್ಟರ್ ಆಗಿ ಕೆಲಸಮಾಡಲು ಬಾಡಿಗೆಗೆ ಪಡೆಯುತ್ತದೆ. ಇದರ ಚಿತ್ರೀಕರಣವು ಜುಲೈ ೨೦೧೭ರಲ್ಲಿ ಪ್ರಾರಂಭಗೊಂಡು ಸೆಪ್ಟೆಂಬರ್ ೨೦೧೯ರಲ್ಲಿ ಮುಗಿದಿತ್ತು. ಫೆಬ್ರುವರಿ ೨೦ರಂದು ಚಿತ್ರವು ಕೇರಳದಾದ್ಯಂತ ಬಿಡುಗಡೆಯಾಗಿ ಪ್ರದರ್ಶನಗೊಳ್ಳುತ್ತಿರುವಾಗಲೇ ಕರೋನ ಸೋಂಕಿನ ಹಿನ್ನಲೆಯಲ್ಲಿ ಪ್ರದರ್ಶನಗಳು ರದ್ದಾಗಿ ಎಲ್ಲಾ ಚಲನಚಿತ್ರ ಮಂದಿರಗಳು ಮುಚ್ಚಿಕೊಂಡವು.
ಚಿತ್ರಕಥೆ
ವಿಜುಪ್ರಸಾದ್‌ಗೆ ಕುಂಜನ್ ಎಂಬ ಮಾನಸಿಕ ಅಸ್ವಸ್ಥ ಕಿರಿಯ ಸಹೋದರನಿದ್ದು ಆತ ಆತ್ಮಹತ್ಯೆ ಮಾಡಿಕೊಂಡ ಮೇಲೆ ವಿಜು ಹತಾಶನಾಗಿ ಮುಂಬಯಿಗೆ ಬಂದು ನೆಲೆಸುತ್ತಾನೆ. ಈ ಹಿಂದೆ ಕನ್ಯಾಕುಮಾರಿಯಲ್ಲಿದ್ದಾಗ ಪರಿಚಿತ ಕ್ಯಾಸ್ಟಿಂಗ್ ಡೈರೆಕ್ಟರ್ ಮೂಲಕ ವಿಜುವಿಗೆ ಮುಂಬಯಿಯಲ್ಲಿ ಪ್ರಸಿದ್ದ ಉದ್ಯಮಿಗಳಾದ ಸಾಲೋಮನ್ ಡೇವಿಸ್ ಹಾಗು ಐಸಾಕ್ ಥಾಮಸ್‌ರವರ ಭೇಟಿಯಾಗುತ್ತದೆ. ಆತನಲ್ಲಿದ್ದ ಭಾಷಣಾ ಪಾಂಡಿತ್ಯವನ್ನು ಗುರುತಿಸಿ ಅವರು ವಿಜುವನ್ನು ಒಬ್ಬ ಕ್ರಿಶ್ಚಿಯನ್ ಬೋಧಕನಾಗಿ ಕೆಲಸ ಮಾಡಲು ಬಾಡಿಗೆಗೆ ಪಡೆಯುತ್ತಾರೆ. ಅವನಿಗೆ ಧರ್ಮ ಪ್ರಚಾರದ ಬಗ್ಗೆ ತರಬೇತಿ ನೀಡಲು ಕೊಚ್ಚಿಗೆ ಕಳುಹಿಸುತ್ತಾರೆ. ಅವನಿಗೆ ಬೋಧನೆ ಬಗ್ಗೆ ತರಬೇತಿ ನೀಡಲು ಅವರ್‌ಚನ್ ಎಂಬ ವ್ಯಕ್ತಿ ನಿಯೋಜಿತನಾಗುತ್ತಾನೆ. ಮೊದಲಿಗೆ ತರಬೇತಿ ಪಡೆಯಲು ವಿಜುಪ್ರಸಾದ್ ಹಿಂಜರಿದರೂ ಬಳಿಕ ಆತ ತನ್ನ ಉದ್ದೇಶಿತ ಪಾತ್ರದಲ್ಲಿ ಸಫಲನಾಗುತ್ತಾನೆ. ನಂತರ ವಿಜುಪ್ರಸಾದ್ ಪಾಸ್ಟರ್ ಜೋಶುವ ಕಾರ್‍ಲ್‌ಟನ್ ಆಗಿ ಬದಲಾಗುತ್ತಾನೆ. ಜಾಗತಿಕ ಮಟ್ಟದಲ್ಲಿ ಅವನ ಧರ್ಮಬೋಧನೆಗಳು ಶುಕ್ಲ ಪಕ್ಷದ ಚಂದ್ರನಂತೆ ವಿಜೃಂಭಿಸತೊಡಗುತ್ತವೆ. ಒಬ್ಬ ನಿಜವಾದ ಕ್ರಿಶ್ಚಿಯನ್ ಧರ್ಮದ ಬೋಧಕನಂತೆ ಸಾವಿರಾರು ಭಕ್ತರ ಹೃದಯವನ್ನು ಸೂರೆಗೊಂಡು ಒಬ್ಬ ಜನಪ್ರಿಯ ಪಾಸ್ಟರ್ ಹಾಗು ಪವಾಡಗಳನ್ನು ಮಾಡುವ ಮಾಂತ್ರಿಕನೇ ಆಗುತ್ತಾನೆ. ಸಾಲೋಮನ್ ಹಾಗು ಐಸಾಕ್‌ರವರ ಉದ್ಯಮವು ಜಾಗತಿಕ ಮಟ್ಟದಲ್ಲಿ ಹೆಸರುಗಳಿಸುತ್ತವೆ. ಅವರ ಸಂಸ್ಥೆ ಗಮನಾರ್ಹ ರೀತಿಯಲ್ಲಿ ಬೆಳೆಯತೊಡಗುತ್ತದೆ.
ಪಾಸ್ಟರ್ ಜೋಶುವನ ಖ್ಯಾತಿ ಉತ್ತುಂಗಕ್ಕೇರಿ, ಅವರು ಅಪಾರ ಹಣ ಆಸ್ತಿಗಳ ಒಡೆಯನಾಗುತ್ತಾನೆ. ಈ ನಡುವೆ ಮ್ಯಾಥ್ಯೂಸ್ ಎಂಬ ಟಿ.ವಿ.ವರದಿಗಾರ ಅವನನ್ನು ಸಂದರ್ಶನಕ್ಕೆ ಆಹ್ವಾನಿಸುತ್ತಾನೆ. ಆನ್‌ಲೈನ್‌ನಲ್ಲಿ ಸಂದರ್ಶನ ಪ್ರಸಾರಗೊಳ್ಳುತ್ತಿರುವಾಗಲೇ ಮ್ಯಾಥ್ಯೂಸ್ ಒಂದು ಪವಾಡ ಮಾಡುವ ಬೇಡಿಕೆಯನ್ನು ಅವನ ಮುಂದಿಡುತ್ತಾನೆ. ಸಂದರ್ಶನದ ನಡುವೆ ಕಮರ್ಷಿಯಲ್ ಬ್ರೇಕ್ ಸಿಕ್ಕಾಗ ಜೋಶುವ ಮ್ಯಾಥ್ಯೂಸ್‌ಗೆ ರಹಸ್ಯವಾಗಿ ಡ್ರಗ್ಸ್ ನೀಡಿ ಕ್ಯಾಮೆರಾ ಮುಂದೆಯೇ ಕುಸಿಯುವಂತೆ ಮಾಡುತ್ತಾನೆ. ಮೊದಲಿಗೆ ಇದೊಂದು ಪವಾಡವಾಗಿಯೇ ಕಂಡು ಬಂದರೆ ನಂತರ ಆಸ್ಪತ್ರೆಯಲ್ಲಿ ಜರುಗಿದ ಅವನ ರಕ್ತ ಪರೀಕ್ಷೆಗಳಿಂದ ಆತ ಡ್ರ್ರಗ್ಸ್ ಪ್ರಭಾವದಿಂದ ಕುಸಿದು ಬಿದ್ದದ್ದು ಎಂದು ಸಾಬೀತಾಗುತ್ತದೆ. ಸುದ್ಧಿ ವ್ಯಾಪಕವಾಗಿ ಬಿತ್ತರಗೊಳ್ಳುತ್ತದೆ. ಸಂಸ್ಥೆಗೆ ಕುಂದುಂಟಾಗಿ ಉದ್ಯಮವು ತನ್ನ ವರ್ಚಸ್ಸು ಕಳೆದುಕೊಂಡು ತೊಂದರೆಗೆ ಸಿಲುಕುತ್ತದೆ. ಇದನ್ನು ಸಹಿಸದೆ ಕುಪಿತರಾದ ಸಾಲೋಮನ್ ಡೇವಿಸ್ ಹಾಗು ಐಸಾಕ್ ರವರು ಜೋಶುವನ ಮೇಲೆ ಆಕ್ರಮಣ ಮಾಡುತ್ತಾರೆ. ತಲೆಗೆ ಬಿದ್ದ ಗಂಭೀರ ಪ್ರಮಾಣದ ಪೆಟ್ಟುಗಳಿಂದ ಜೋಶುವ ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗುತ್ತಾನೆ. ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲೇ ಇರುತ್ತಾನೆ. ಮುಂದೆ ಸಾಲೋಮನ್ ಡೇವಿಸ್ ಹಾಗು ಐಸಾಕ್‌ರವರು ತಮಗೆ ಸಂಭವಿಸಬಹುದಾದ ತೊಂದರೆಗಳಿಂದ ಪಾರಾಗಲು ಅವನನ್ನು ಆಸ್ಪತ್ರೆಯಲ್ಲೇ ಮುಗಿಸಿಬಿಡಲು ನಿರ್ಧರಿಸುತ್ತಾರೆ. ಆದರೆ ಎರಡು ದಿನ ಕೋಮಾಸ್ಥಿತಿಯಲ್ಲಿದ್ದ ಜೋಶುವನಿಗೆ ಮೂರನೇ ದಿನ ಆಶ್ಚರ್ಯಕರ ರೀತಿಯಲ್ಲಿ ಪ್ರಜ್ಞೆ ಮರಳುತ್ತದೆ. ಅವನ ದೇಹ ಚಲಿಸಲಾರಂಭಿಸಿ, ಆತ ತನ್ನ ಬೆಡ್ ಪಕ್ಕದಲ್ಲಿದ್ದ ಗ್ಲಾಸ್‌ನ್ನು ಒಡೆದುಕೊಂಡು ಹೊರಬಂದು ಅದ್ಭುತ ರೀತಿಯಲ್ಲಿ ಗುಣವಾಗುತ್ತಾನೆ. ಸಾಲೋಮನ್ ಮತ್ತು ಐಸಾಕ್‌ರವರೊಂದಿಗಿದ್ದ ಒಪ್ಪಂದವನ್ನು ಪುನರ್ವಿಮರ್ಶಿಸಿ ತನಗೆ ಶೇ. ೮೦% ರಷ್ಟು ಪಾಲು ನೀಡುವಂತೆ ಅವರೊಂದಿಗೆ ಸಂಧಾನ ನಡೆಸುತ್ತಾನೆ. ಜೋಶುವನ ತಲೆಗೆ ಬಿದ್ದ ಭಾರಿ ಪೆಟ್ಟುಗಳಿಂದ ಅವನು ಮಾನಸಿಕ ಸೀಮಿತ ಕಳೆದುಕೊಂಡು ಹೀಗೆ ವರ್ತಿಸುತ್ತಿದ್ದಾನೆಂದು ಭಾವಿಸಿದ ಅವರು ಅವನು ಮುಂದಿಟ್ಟ ಕೋರಿಕೆಯನ್ನು ನಿರಾಕರಿಸದೆ ಒಪ್ಪಿಕೊಳ್ಳುತ್ತಾರೆ. ಈ ನಡುವೆ ಅವರು ಎಸ್ತೆರ್ ಲೋಪೆಜ್ ಎಂಬ ಲೈಂಗಿಕ ಕಾರ್ಯಕರ್ತೆಯೊಬ್ಬಳನ್ನು ನೇಮಿಸಿ ಜೋಶುವಾನ ವರ್ತನೆ ನಾಟಕೀಯವೇ ಅಥವಾ ಮಾನಸಿಕ ಅಸ್ಥಿರತೆಯಿಂದಲೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಎಸ್ತರ್ ಈ ಮೊದಲೇ ಯಾವುದೋ ಸಂಬಂಧದಲ್ಲಿ ವಂಚಿತಳಾಗಿದ್ದು ಮಗುವೊಂದಕ್ಕೆ ಜನ್ಮ ನೀಡಿ ಮಾನಸಿಕವಾಗಿ ನರಳಿದ್ದವಳು. ನಂತರ ಹೇಗೋ ಚೇತರಿಸಿಕೊಂಡು ತನ್ನ ವೃತ್ತಿಗೆ ಮರಳಿದ್ದಳು. ಕ್ರಮೇಣ ಎಸ್ತರ್ ಜೋಶುವನತ್ತ ಆಕರ್ಷಿತಳಾಗಿ ಅವನಿಗೆ ನಿಕಟಳಾಗುತ್ತಾಳೆ. ಕೊನೆಗೆ ಜೋಶುವ ಒಬ್ಬ ಮಾನಸಿಕ ವ್ಯಕ್ತಿ ಎಂದು ಅವಳಿಗೆ ಮನದಟ್ಟಾದ ಮೇಲೆ ವಿಷಯವನ್ನು ಸಾಲೋಮನ್ ಮತ್ತು ಐಸಾಕ್‌ಗೆ ತಿಳಿಸುತ್ತಾಳೆ. ಅವರು ತಕ್ಷಣ ಅವಳನ್ನು ವಾಪಸ್ ಕರೆದುಕೊಳ್ಳುತ್ತಾರೆ. ನನಗೆ ತಿಳಿದ ಮಟ್ಟಿಗೆ ಎಸ್ತರ್ ಒಂದು ಕಟ್ಟುಕಥೆ ಎಂದು ಅವರ್‌ಚನ್ ಜೋಶುವಾನನ್ನು ಒಪ್ಪಿಸಲು ಪ್ರಯತ್ನಿಸುತ್ತಾನೆ.
ಈ ನಡುವೆ ಜೋಶುವಾನ ಅನುಯಾಯಿ ಥಾಮಸ್ ಎಂಬ ಬಡ ವ್ಯಕ್ತಿ ಜ್ವರ ಪೀಡಿತಳಾದ ತನ್ನ ಪುಟ್ಟ ಹೆಣ್ಣುಮಗಳನ್ನು ಕರೆದು ತಂದು ಪ್ರಾರ್ಥನೆ ಹಾಗು ಪವಾಡದ ಮೂಲಕ ಗುಣಪಡಿಸುವಂತೆ ಜೋಶುವಾನನ್ನು ಕೇಳಿಕೊಳ್ಳುತ್ತಾನೆ. ಕೊನೆಗೂ ಅವನ ಹೆಣ್ಣು ಮಗು ಗುಣವಾಗದೆ ಕಾಯಿಲೆಗೆ ಬಲಿಯಾಗುತ್ತಾಳೆ. ಜೋಶುವ ಹತಾಶನಾಗುತ್ತಾನೆ. ತಾನೊಬ್ಬ ನಿಜವಾದ ಪಾಸ್ಟರ್ ಅಲ್ಲ, ಅದ್ಭುತ ಪವಾಡ ಮಾಡುವವನೂ ಅಲ್ಲ, ಇದರ ಹಿನ್ನಲೆಯಲ್ಲಿ ಸಾಲೋಮನ್-ಐಸಾಕ್‌ರವರೇ ಮುಖ್ಯ ಪಾತ್ರಧಾರಿಗಳು ಎಂದು ಥಾಮಸ್ ಮುಂದೆ ಸತ್ಯಾಂಶವನ್ನು ಬಯಲು ಮಾಡುತ್ತಾನೆ. ಇದೇ ವಾಸ್ತವಾಂಶವನ್ನು ಟಿ.ವಿ. ಪ್ರತಿನಿಧಿ ಮ್ಯಾಥ್ಯೂಸ್‌ಗೆ ಮನದಟ್ಟು ಮಾಡಲು ಒಂದು ಪಶ್ಚಾತ್ತಾಪದ ವಿಡಿಯೋವನ್ನು ತಯಾರಿಸಿ ಅದನ್ನು ಮ್ಯಾಥ್ಯೂಸ್‌ಗೆ ಕಳುಹಿಸುತ್ತಾನೆ. ಇದನ್ನು ಹೇಗೋ ತಿಳಿದ ಸಾಲೋಮನ್ ಮ್ಯಾಥ್ಯೂಸ್‌ನ್ನು ಹತ್ಯೆ ಮಾಡಿಸುತ್ತಾನೆ. ಆದರೆ ಮ್ಯಾಥ್ಯೂಸ್ ಸಾಯುವ ಕ್ಷಣದಲ್ಲಿ ವೀಡಿಯೋ ಪ್ರಸಾರಗೊಳ್ಳುವಂತೆ ಮಾಡುತ್ತಾನೆ. ಅದು ಸಾರ್ವತ್ರಿಕವಾಗಿ ಪ್ರಸಾರಗೊಂಡಾಗ ಅವರ್‌ಚನ್ ಮಾರಣಾಂತಿಕ ಆಘಾತಕ್ಕೆ ತುತ್ತಾಗುತ್ತಾನೆ. ಈ ನಡುವೆ ತನ್ನ ಮಗಳ ಸಾವಿನ ಹಗೆಯನ್ನು ತೀರಿಸಿಕೊಳ್ಳಲು ಥಾಮಸ್, ಸಾಲೋಮನ್-ಐಸಾಕ್ ಇಬ್ಬರನ್ನೂ ಹತ್ಯೆ ಮಾಡುತ್ತಾನೆ.
ಜೋಶುವ ತನ್ನ ಮಾನಸಿಕ ಅಸ್ಥಿರತೆಯ ಕಾರಣಗಳಿಂದ ಅಪರಾಧಮುಕ್ತನಾಗಿ ಪುನರ್ವಸತಿ ಕೇಂದ್ರದಲ್ಲಿ ಸಮಯ ಕಳೆಯುತ್ತಾನೆ. ಸ್ವಸ್ಥನಾದ ಬಳಿಕ, ಎಸ್ತರ್ ಒಬ್ಬಳೇ ಪ್ರಾಮಾಣಿಕಳು ಎಂಬ ಅರಿವಾಗುತ್ತದೆ. ಆ ವೇಳೆಗೆ ಆಕೆ ಆಮ್ಸ್‌ಟರ್‌ಡ್ಯಾಂನಲ್ಲಿರುವುದನ್ನು ತಿಳಿದು ಜೋಶುವಾ ಅಲ್ಲಿಗೆ ತೆರಳುತ್ತಾನೆ. ಅಲ್ಲಿ ಆಕೆ ಕೆಂಪು ದೀಪದ ಪ್ರದೇಶವೊಂದರಲ್ಲಿ ಕಾಣಸಿಕೊಂಡು ಇಬ್ಬರೂ ಪರಸ್ಪರ ಮುಖ ನೋಡಿ ಆಕೆ ಅವನತ್ತ ಧಾವಿಸಿ ಬರುವಷ್ಟರಲ್ಲಿ ಅವಳ ಮುಂದಿದ್ದ ಕನ್ನಡಿ ಒಡೆದು ಚೂರುಚೂರಾಗುತ್ತದೆ. ಕಪ್ಪು ಪರದೆ ಮೂಡಿ ಬಂದು ಚಲನಚಿತ್ರ ಕೊನೆಗೊಳ್ಳುತ್ತದೆ. ಚಲನಚಿತ್ರವನ್ನು ಯೂ ಟ್ಯೂಬ್ ಹಾಗು ತಮಿಳ್ ರಾಕರ್‍ಸ್.ಕಾಂನಲ್ಲಿ ವೀಕ್ಷಿಸಬಹುದು.
========================
No comments:
Post a Comment