Tuesday, 10 November 2020

ಸ್ವಾಮಿ ಅಂತಪ್ಪ, ಕನ್ನಡ ಕ್ರೈಸ್ತರ ನಾಡೋಜ - ಶ್ರೀಸ್ವಾಮಿ,


ಕನ್ನಡದಿ ಪರಿಚಯಿಸಿ ಆದರುತ್ತಮನುವಾದಕ;                                                                                              

ಸನ್ನಡತೆ, ಶುಭನುಡಿಯ ಬೈಬಲ್ ಶ್ರೀಗ್ರಂಥವನು

ಕನ್ನಡದಿ ಪರಿಚಯಿಸಿ ಆದರುತ್ತಮನುವಾದಕ;

ಹಿನ್ನಡೆಯಾದರೂ ಕಂಗೆಡದೆ ಸಾಧಿಸಿ ಗುರಿಯನು

ಚೆನ್ನುಡಿಯಲಿ ಪ್ರಕಟಿಸಿ  ಗೈದರು ಬದುಕು ಸಾರ್ಥಕ.


ಕರುನಾಡ ಮಣ್ಣಲಿಹ ಕ್ರೈಸ್ತ ಹೆಜ್ಜೆ ಗುರುತುಗಳ 

ಪರಿಪರಿಯಿಂ  ಶೋಧಿಸಿ, ದಾಖಲಿಸಿದರಿತಿಹಾಸ;                                            

ಹಿರಿದಾದ ಶ್ರಧ್ಧೆಯಿಂ ಲೆಕ್ಕಿಸದನೇಕ ವಿಘ್ನಗಳ                                              

 ಗುರುತರದಿಗೈದ ಸಾಧನೆ ಹಿರಿದೊಂದು  ಸಾಹಸ. 


ಬೆಂಗಳೂರಲಿ ಕನ್ನಡ ಹಿನ್ನಡೆದಿರೆ  ಧಾರ್ಮಿಕ ರಂಗದೊಳು                                              

ಭಂಗವುಂಟಾದರೂ ಅವಿರತದಿಂ ನಡೆಸಿ ಹೋರಾಟ;                                             

 ವ್ಯಂಗ್ಯ ನುಡಿ, ಅವಮಾನವೆಲ್ಲವ ಸಹಿಸಿ ಮನದೊಳು                                              

ತ್ತುಂಗ  ಸ್ಥಾನವದಕೆ  ಗಳಿಸಿಕೊಟ್ಟ ಗುರುಸಾಮ್ರಾಟ. 

ನೇಮ, ನಿಷ್ಥೆ ಮೇಣ್ ಶಿಸ್ತು, ಶ್ರಮ, ಶ್ರಧ್ಧೆಗಳ ಓಜ

ಸ್ವಾಮಿ ಅಂತಪ್ಪ,  ಕನ್ನಡ ಕ್ರೈಸ್ತರ ನಾಡೋಜ.  


--------------

ಶ್ರೀಸ್ವಾಮಿ, 

ಸಾಹಿತಿ, ಬೆಂಗಳೂರು

-------------- 


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...