ಮನುಷ್ಯನಿಗೆ ಹಕ್ಕಿ ಹೇಳಿದ್ದು:
ನಿನ್ನ ಕೋವಿ ನಿನಗೆ ನನ್ನ ಸತ್ತ ದೇಹವನ್ನು
ಕೊಡಬಹುದಷ್ಟೆ, ನನ್ನನಲ್ಲ
---------------------
ತಿಳಿದುಕೋ
ಈ ಲೋಕವು
ದಡ ಸೇರಿಸಲು ನೀನು ಎದುರಿಸುವ
ಅಲೆಗಳ ಬಗ್ಗೆ ಕೇಳುವುದಿಲ್ಲ
ಅದು ನಿನ್ನನ್ನು ಕೇಳುವುದಿಷ್ಟೆ;
ಹಡಗನ್ನು ದಡ ಸೇರಿಸಿದ್ಯಾ ? ಎಂದು.
----------------------
ಮನುಷ್ಯನಿಗೆ ಮಂದಿರಬೇಕು
ದೇವರಿಗಲ್ಲ
ದೇವರು ಮಂದಿರದ ಗೋಡೆಗಳನ್ನು
ಮೀರಿದವನು
------------------
ಬದುಕಿನಲ್ಲಿದೆ ಎರಡು ದುರಂತಗಳು;
ಒಂದು
ಎದೆಯೊಳಗಿನ ನಿನ್ನ ಆಸೆಯನ್ನು ದಕ್ಕಿಸಿಕೊಳ್ಳುವುದು
ಇನ್ನೊಂದು
ಎದೆಯೊಳಗಿನ ಆಸೆಯು ಸಿಗದಿರುವುದು!
---------------------
ಕಾರ್ಮಿಕ ಹೇಳಿದ ಮಾತಿದ್ದು:
ತೃಪ್ತಿಯಿಲ್ಲ
ನನ್ನ ಕೆಲಸದ ಬಗ್ಗೆ ನನಗೆ
ಎಷ್ಟೂ ಶ್ರಮವಹಿಸಿದರೂ ನಾನು
ದಿನೇ ದಿನೇ
ಜಗದ ತಳಕ್ಕೆ ನೂಕಲ್ಪಡುತ್ತಿದ್ದೇನೆ!
-----------------
ಮನಸ್ಸಿನ ಕಿಟಕಿಯ ತೆರೆದುಬಿಡು
ಹೊಸಗಾಳಿಯು ಬೀಸಿ
ಬೆಳಕು ಅದಕ್ಕೆ ಸೇರಿ
ಹೊಂಗಿರಣವಾಗಿಸಿ ಬಿಡುವುದು ಬದುಕನ್ನು
ಹೊಸ ಸಾಧ್ಯತೆಯ
ಕನವರಿಕೆಯಲಿ
---------------------
ಬದುಕೆಂಬುವುದು:
ಒಂದು ಖಾಲಿ ಕಾಗದ ಹಿಡಿದು
ಏನೆನೋ ಬರೆಯಲು ಕುಳಿತು
ಕೊನೆಗೆ ಏನೂ ಬರೆಯಲಾಗದೆ
ಮನಸ್ಸಿಗೆ ಬಂದಿದ್ದನ್ನು ಗೀಚಿ ಗೀಚಿ
ಸರಿಕಾಣದೆ ಕಾಗದವನ್ನು ಹಿಂಡಿ
ಕಸದ ಬುಟ್ಟಿಗೆ ಬಿಸಾಡುವುದೇ?
- ಜೀವಸೆಲೆ
**********
No comments:
Post a Comment