Sunday, 8 November 2020

ಗುಲಾಮಗಿರಿಯಿಂದ ಸ್ವತಂತ್ರ ಪ್ರಭುತ್ವಕ್ಕೆ

...ಎಸ್ಸೆಸ್ಸಲ್ಸಿ ಮುಗಿದ ನಂತರ ೧೩ ವರ್ಷ ಕಠಿಣ ಎನ್ನಬಹುದಾದ ತರಬೇತಿ ಪಡೆದ ನಂತರವೇ ಇವರು ಫಾದರ್‌ಗಳಾಗುವುದು. ಯಾವುದೇ ಯುನಿವರ್ಸಿಟಿಯಲ್ಲಿ ಪಡೆಯುವ ಡಿಗ್ರಿಗಳಿಗಿಂತ ಒಳೆಯ ಶಿಕ್ಷಣ ಇಲ್ಲಿ ಸಿಗುತ್ತದೆ. ವಿಪುಲವಾದ ಸಬ್ಜೆಕ್ಟುಗಳು ಆಧ್ಯಯನ ಶೀಲ ವಿಷಯಗಳಿವೆ.  ಇಲ್ಲಿರುವ ಅಧ್ಯಾಪಕರಲ್ಲಿ ಬಹಳಷ್ಟು ಮಂದಿ ಪೆದ್ದ ಪ್ರೊಫೆಸರ್ಳು ಎನ್ನುವುದನ್ನು ಬಿಟ್ಟರೆ, ಪ್ರತಿಭಾವಂತ ಅಧ್ಯಾಪಕರೂ ಇದ್ದಾರೆ, ಒಳ್ಳೆಯ ಲೈಬ್ರರಿ ಇದೆ, ಇಂಟರ್‌ನೆಟ್ ಇದೆ. ಓದಲು ಸಾಕಷ್ಟು ಸಮಯವಿದೆ. ಸೆಮಿನರಿಯಲ್ಲಿ ಅಕಾಡೆಮಿಕ್ ಆಗಿ ಬೆಳೆಯಲು ಇರುವ ಅವಕಾಶಗಳಷ್ಟೇ ಕ್ರೀಡೆ, ಸಂಗೀತ, ವಾಯ್ಸ್ ಪ್ರೊಡಕ್ಷನ್ ತರಗತಿಗಳು, ಉಪನ್ಯಾಸ, ಬೋಧನೆಗೆ ತಯಾರಿ, ಹಾಡುಗಾರಿಕೆ ಮತ್ತು ಸಂಗೀತ ವಾದ್ಯಗಳಲ್ಲಿ ತರಬೇತಿ, ಕಂಪ್ಯೂಟರ್ ತರಬೇತಿ ಎಲ್ಲವೂ ಇದೆ. ಆದರೂ ಈ ೧೩ ವರ್ಷಗಳ ನಂತರ ಇವರ್ಯಾಕೆ ಪ್ರಬುದ್ಧರಾಗಿ, ಬುದ್ದಿವಂತರಾಗಿ ಹೊರಬರಲು ಸಾಧ್ಯವಾಗುತ್ತಿಲ್ಲ?

ಉದಾರವಾದಿಗಳು ಎನಿಸಿಕೊಂಡ ಕರ್ಮಠಶಾಹಿಗಳ ಜ್ಞಾನಮಂದಿರದೊಳಗೆ ಬೆಚ್ಚಗೆ ಮುದುಡಿ ಕುಳಿತಿರುವ ಅಜ್ಞಾನ, ಬೌದ್ಧಿಕತೆಯ ದೇಗುಲದೊಳಗೆ ತುಂಬಿರುವ ಮೌಢ್ಯ, ಗುರುಕುಲದೊಳಗಿನ ಜೀತದಾಳು ಪದ್ಧತಿ, ಪ್ರಜಾಪ್ರಭುತ್ವದಲ್ಲೂ ಆಳವಾದ ಗುಲಾಮಗಿರಿ, ಅರ್ಹತೆ ಎಂಬ ಸ್ಪರ್ಧೆಯಲ್ಲಿ ಮೊದಲು ನಿಲ್ಲುವ ವಿಧೇಯತೆ, ಪ್ರೀತಿಯಿಂದ ಓಲೈಸುವಿಕೆ! ಈ ಎಲ್ಲಾ ಕಾರಣಗಳಿಂದ ಇಲ್ಲಿನ ಹುಡುಗರು ಮೊದಲ ವರ್ಷದಿಂದಲೇ ಅಪ್ರಾಮಾಣಿಕತೆ, ಹಿಪೋಕ್ರಸಿ, ನಯವಂಚಕ ಬುದ್ಧಿ, ಓಲೈಸುವ ಏಕೈಕ ನಿಷ್ಠೆಯನ್ನು ಬೆಳೆಸಿಕೊಂಡು ಬಹಳ ಎಚ್ಚರಿಕೆಯಿಂದ ೧೩ ವರ್ಷಗಳು ನೂಕುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ತಮಗರಿಯದಂತೆ, ತಾವು ತಾವಾಗದಂತೆ, ಇದ್ದಕ್ಕಿದಂತೆ ಎದ್ದು ಬರುವ ಹಣಬೆಗಳಂತೆ ಬಿಳಿ ಅಂಗಿ ತೊಟ್ಟು ಫಾದರ್ಗಳಾಗಿ ಹೊರ ನಡೆಯುತ್ತಾರೆ - ಗುಲಾಮಗಿರಿ ಮುಗಿದು ಸ್ವತಂತ್ರ ಒಡೆತನದ ಪ್ರಯತ್ನಕ್ಕೆ!

ಇಡೀ ಸೆಮಿನರಿಯಲ್ಲಿ ಒಬ್ಬೊಬ್ಬರನ್ನೇ ಖುದ್ದಾಗಿ, ಗುಟ್ಟಾಗಿ ನಿಮ್ಮ ಅಲ್ಟಿಮೇಟ್ ಆಸೆ ಏನು ಅಂದರೆ ಶೇ. ೯ರಷ್ಟು ಬದರ್ (ಅಭ್ಯರ್ಥಿಗಳು) ಹೇಳುವ ಮಾತು 'ಸರ್ವೈವಲ್', ಇದಕ್ಕಾಗಿ ಏನೆಲ್ಲಾ ತಂತ್ರಗಾರಿಕೆ ಕಲಿಯಬೇಕು, ಹಿಪೋಕ್ರಸಿ ಬೆಳೆಸಿಕೊಳ್ಳಬೇಕು, ಆತ್ಮವಂಚನೆಯಲ್ಲಿ ಬದುಕಬೇಕು ಎಂಬ ಯೋಚನೆಯಲ್ಲಿ ಲೆಕ್ಕಾಚಾರ ಹಾಕುವ ಈ ಹುಡುಗರು ಪ್ರತಿಭೆಯನ್ನರಸಿ ಹೊರಡಲು ಸಮಯವಾದರೂ ಎಲ್ಲಿದೆ?...

ಫಾದರ್ ಚಸರಾ, (ಗುಲಾಮಗಿರಿಯಿಂದ ಸ್ವತಂತ್ರ ಪ್ರಭುತ್ವಕ್ಕೆ)

ಶತ್ರುಮಿತ್ರರ ನಡುವೆ ಹಾಯಿದೋಣಿ

ಪುಟ - ೭೫


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...