ಕ್ರಿಸ್ತನ ಬೋಧನೆಗೆ ಕೊನೆಯುಂಟೇ?
ಕ್ರಿಸ್ತ ತನ್ನ ಬದುಕನ್ನು ದೇವರ ರಾಜ್ಯ ಬಗೆಗಿನ ಬೋಧನೆಗೆ ಮುಡುಪಾಗಿಸಿದ. ಅವನ ಕೊನೆದಿನಗಳನ್ನು ಸಹ ಬೋಧನೆಯಲ್ಲೇ ಕಳೆದ. ಹೌದು ಪ್ರಮಾಣಿಕ ಬೋಧನೆಯ ಪರಿಣಾಮ ಎಷ್ಟೆಂದು ಕ್ರಿಸ್ತನಿಗೆ ಗೊತ್ತಿತ್ತು. ಧಾರ್ಮಿಕ ಅಧಿಕಾರಿಗಳಿಗೂ ಬೋಧನೆಯ ಶಕ್ತಿಯ ಬಗ್ಗೆ ತಿಳಿದಿತ್ತು. ಸಾಕ್ರಟೀಸ್ ಯುವಕರಿಗೆ ಬೋಧಿಸಲು ಅಥೆನ್ಸ್‍ನ ಅಧಿಕಾರಿಗಳು ಅವನನ್ನು ಬಿಡಲಿಲ್ಲ. ಪಾಲೆಸ್ತೀನ್‍ನ ಧಾರ್ಮಿಕ ಮತ್ತು ರಾಜಕೀಯ ನಾಯಕರಿಗೆ ಕ್ರಿಸ್ತನ ಬೋಧನೆ ನುಂಗಲಾರದ ತುತ್ತಾಯಿತು. ಕ್ರಿಸ್ತನು ಬೋಧಿಸುವುದನ್ನು ನಿಲ್ಲಿಸಬೇಕೆಂದು ಅಜ್ಞೆಕೊಟ್ಟರು. ನಿಲ್ಲಿಸಲು ಸರ್ವಪ್ರಯತ್ನ ಮಾಡಿದರು. ಕಾರಣವಿಷ್ಟೇ. ಕ್ರಿಸ್ತನ ದೇವಿರಾಜ್ಯದ ಬೋಧನೆ ಆಗಿನ ಧಾರ್ಮಿಕ ಮತ್ತು ರಾಜಕೀಯ ಅಧಿಕಾರಿಗಳ ತತ್ವಗಳಿಗೆ ವಿರುದ್ಧವಾಗಿತ್ತು.
ಸಾಕ್ರಟೀಸ್‍ನನ್ನು ಬೋಧಿಸುವುದರಿಂದ ನಿಲ್ಲಿಸಬಹುದೇ?
ಇಲ್ಲ
ಕ್ರಿಸ್ತನ ಬೋಧನೆಗೆ ಕೊನೆಯುಂಟೇ?
ಇಲ್ಲ
ಸಾಕ್ರಟೀಸ್ ಅಥವಾ ಕ್ರಿಸ್ತನನ್ನು ಕೊಲ್ಲಬಹುದು. ಆದರೆ ಅವರ ಬೋಧನೆ ಕಾರ್ಯವನ್ನು ಎಂದಿಗೂ ನಿಲ್ಲಿಸಲು ಸಾಧ್ಯವಿಲ್ಲ.
ಮಾತು ಕತ್ತಿಗಿಂತ ಹರಿತವಾದುದ್ದು..
----
ಭಕ್ತನನ್ನು ಮತ್ತೊಬ್ಬ ಕ್ರಿಸ್ತನಾಗಿಸುವುದೇ ಬಲಿಪೂಜೆಯ ಅರ್ಥ
ಕ್ರಿಸ್ತನಿಗೂ ಬುದ್ಧನಿಗೂ ಇರುವ ವ್ಯತ್ಯಾಸವೇನು? ಈ ಪ್ರಶ್ನೆಯನ್ನು ಓಶೋ ರಜನೀಶ್‍ಗೆ ಕೇಳಿದಾಗ ಅವನು ಒಂದು ಕಥೆಯನ್ನು ಹೇಳಿದ. ಬುದ್ಧನು ಸಾಯುವ ವೇಳೆ. ಅವನ ಶಿಷ್ಯರು ಅವನನ್ನು ಸುತ್ತುವರಿದು ನಿಂತರು. ಬುದ್ಧನು ಸಾಯುವುದಿಲ್ಲ ಎಂದು ನಂಬಿದ್ದ ಶಿಷ್ಯರಿಗೆ ಬುದ್ಧನ ಸಾವಿನಿಂದ ಹತ್ತಾಶೆಯಾಗಿತ್ತು.ಮುಖ್ಯ ಶಿಷ್ಯನಾಗಿದ್ದ ಆನಂದ ಬುದ್ಧನಿಗೆ ಹೇಳಿದ. "ಗುರುಗಳೇ ನೀವು ಸಾಯುತ್ತಿದ್ದೀರಿ ನಿಮ್ಮ ನೆನಪು ಸದಾ ನಮ್ಮಲ್ಲಿರುವಂತೆ ಮಾಡಲು ನೀವು ಏನಾದರೂ ನಮಗೆ ಕೊಡಿ" ಎಂದು ಬೇಡಿಕೊಂಡ. ಬುದ್ಧ ಕೆಲವೊತ್ತು ಕಣ್ಣುಮುಚ್ಚಿ ನಂತರ ಒಂದು ಹೂವನ್ನು ಆನಂದನಿಗೆ ಕೊಟ್ಟ. ಹೂವನ್ನು ಕೊಡುವಾಗ ಬುದ್ಧ ಹೇಳಿದ "ಇದನ್ನು ನನ್ನ ನೆನಪಿಗೆ ಇಟ್ಟುಕೋ.. ಗುರುಗಳು ಕೊಟ್ಟ ಹೂವನ್ನು ಗುಡಾರದಲ್ಲಿ ಜೋಪಾನವಾಗಿ ಇಟ್ಟ. ಅದು ಗುರುವಿನ ಪರಿಮಳ ಹೂವಾಗಿ ಗುಡಾರದಲ್ಲೇ ಇತ್ತು. ಬುದ್ಧ ಸತ್ತನು. ಆ ಹೂವು ಕೂಡ ಬಾಡಿ ಸತ್ತುಹೋಯಿತು. ಗುರುವಿನ ನೆನಪು ಕೂಡ ಶಿಷ್ಯರಲ್ಲಿ ಮಾಸಿಹೋಯಿತು. ಕಿಸ್ತ ಸಾಯುವ ಹಿಂದಿನ ದಿನ ಶಿಷ್ಯರು ಕೂಡ ಅವನ ಸುತ್ತ ನೆರೆದರು. ಕ್ರಿಸ್ತನ ಸಾವಿನಿಂದ ಅವರು ಕೂಡ ನಿರಾಶರಾಗಿದ್ದರು. ಅವರಿಗೂ ಕೂಡ ಕ್ರಿಸ್ತನ ಬಗ್ಗೆ ಅನೇಕ ನೀರಿಕ್ಷೆಗಳಿದ್ದವು. ಅವರೆಲ್ಲಾರ ಕನಸುಗಳು ನುಚ್ಚುಚೂರಾದವು. ಪೇತ್ರ ಕ್ರಿಸ್ತನನ್ನು ಕೇಳಿದ
ನೀವು ಸಾಯುತ್ತಿರುವಿರಿ. ನಿಮ್ಮ ಜ್ಞಾಪಕಕೊಸ್ಕರ ನಮಗೆ ಏನಾದರೂ ಕೊಡಿ.
ಕ್ರಿಸ್ತ ಪೇತ್ರನ ಕೈಗಳಿಗೆ ರೊಟ್ಟಿಯನ್ನು ಕೊಡುವಾಗ ಹೇಳಿದ
ಇದು ನನ್ನ ಶರೀರ ಇದನ್ನು ನೀವು ನನ್ನ ಸ್ಮರಣೆಗೊಸ್ಕರ ಭುಜಿಸಿರಿ..
ಕ್ರಿಸ್ತ ಶಿಲುಬೆಯ ಮೇಲೆ ಮರಣಹೊಂದಿದನು. ಪೇತ್ರ ಕ್ರಿಸ್ತನ ರೊಟ್ಟಿಯನ್ನು ತಿಂದನು. ಅದು ಅವನ ಅಸ್ತಿತ್ವದಲ್ಲಿ ಸಮೀಕರಣಗೊಂಡಿತು. ಅವನ ಬದುಕಿನ ಅವಿಭಾಜ್ಯ ಅಂಗವಾಯಿತು. ಅವನ ನರನಾಡಿಗಳಾದವು. ಮೂಳೆಮಾಂಸಗಳಾಯಿತು. ಅದು ಅವನ ಬದುಕಿನ ಸಂಗೀತವಾಯಿತು, ನೃತ್ಯವಾಯಿತು. ಗುರುವಿನ ಅರಿವಾಯಿತು, ನೆನಪಾಯಿತು. ಪೇತ್ರನ ಬದುಕು ವಿಕಸಗೊಳ್ಳಲಾರಂಭಿಸಿತು.. ಹೊಸಜೀವಿಯಾದ. ರೋಮ್‍ನಲ್ಲಿ ಶಿಲುಬೆಯ ಮೇಲೆ ತಲೆಕೆಳಗಾಗಿ ಜಡಿಯಲ್ಪಟ್ಟ.
ಭಕ್ತನನ್ನು ಮತ್ತೊಬ್ಬ ಕ್ರಿಸ್ತನಾಗಿಸುವುದೇ ಬಲಿಪೂಜೆಯ ಅರ್ಥ..
No comments:
Post a Comment