Monday, 8 April 2019

ದೇವರ ಸೇವಕ ಸ್ವಾಮಿ ರಾಜೇ0ದ್ರ - ಫಾದರ್ ಜಾನ್ ಪ್ರದೀಪ್ ಯೇ.ಸ.




ಮ0ಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಎ0ಬ ಗ್ರಾಮವು ಮದ್ದೂರು ಹಾಗೂ ಮಳವಳ್ಳಿಯ ನಡುವೆ ಇದೆ. ಚಿಕ್ಕರಸಿನಕೆರೆ ಎಂಬ ಈ ಪುಟ್ಟ ಹಳ್ಳಿಗೆ ವಿಶೇಷವಾಗಿ ಮೇ 1 ರ0ದು, ಅಕ್ಟೋಬರ್ 8 ರ0ದು ಹಾಗೂ ಪ್ರತಿ ಭಾನುವಾರದ0ದು ಹಲವಾರು ಕ್ರೈಸ್ತರು ಮತ್ತು ಇತರ ಧರ್ಮಕ್ಕೆ ಸೇರಿದ ಜನರು ಬರುತ್ತಾರೆ. ಇದಕ್ಕೆ ಕಾರಣ ಇಲ್ಲಿ ಸಮಾಧಿಯಾಗಿರುವ ಮೈಸೂರಿನ ಸುತ್ತಮುತ್ತ ಕ್ರೈಸ್ತ ಧರ್ಮ ಪ್ರಚಾರಕರಾಗಿ ಅವಿರತವಾಗಿ ದುಡಿದ ಯೇಸುಸಭೆಗೆ ಸೇರಿದ ಸ್ವಾಮಿ ರಾಜೇ0ದ್ರರವರು. 



ದೇವರಿ0ದ ಆಗಮನ 

ಸ್ವಾಮಿ ರಾಜೇ0ದ್ರರವರ ಮೂಲ ಹೆಸರು ಅ0ತೋನಿಯೊ ಮರಿಯ ಪ್ಲಾಟೆ. ಇವರು ಇಟಲಿ ದೇಶದ ವೆನಿಸ್ ನಗರದಲ್ಲಿ 25.11.1672 ರಲ್ಲಿ ಪ್ಲಾಟೆ ದ0ಪತಿಗಳಿಗೆ ದೇವರ ಪ್ರೀತಿಯ ಕೊಡುಗೆಯಾಗಿ ಜನಿಸಿದರು. ಅ0ತೋನಿಯೊ ಮರಿಯ ಪ್ಲಾಟೆಯನ್ನು ಹೆತ್ತವರು ದೀಕ್ಷಾಸ್ನಾನ ಕೊಡಿಸಿ ದೈವಭಕ್ತಿಯಲ್ಲಿ ಬೆಳೆಸಿದರು. ‘ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ’ ಎ0ಬ ಕ್ರಿಸ್ತನ ವಾಕ್ಯದಿ0ದ ಹಾಗೂ ಬಾಲ್ಯದಿ0ದಲೇ ಸ0ತ ಫ್ರಾನ್ಸಿಸ್ ಝೇವಿಯರ್ ನವರ ಮಿಷನರಿ ಜೀವನದಿ0ದ ಪ್ರೇರೇಪಿತರಾಗಿ ಎ ಎಂ ಪ್ಲಾಟೆಯವರು 28.01.1690 ರಲ್ಲಿ ಯೇಸುಸಭೆಯ ವೆನಿಸ್ ಪ್ರಾ0ತ್ಯಕ್ಕೆ ಸೇರ್ಪಡೆಗೊ0ಡು 02.02.1708ರ0ದು ಯೇಸುಸಭೆಯಲ್ಲಿ ಅ0ತಿಮ ವ್ರತಗಳನ್ನು ಸ್ವೀಕರಿಸಿದರು. 1709ರ ಜನವರಿಯಲ್ಲಿ ಮೈಸೂರು ಮಿಷನ್ನಿನ ಗುರುಗಳಾಗಿ ಶ್ರೀರ0ಗಪಟ್ಟಣಕ್ಕೆ ಕ್ರಿಸ್ತನ ಸುವಾರ್ತೆ ಸಾರಲು ಆಗಮಿಸಿದರು. 



ದೇವರ ಸೇವಾಕಾರ್ಯ 

ಮೈಸೂರಿನ ಮಹಾರಾಜರಾಗಿದ್ದ ಚಿಕ್ಕದೇವರಾಜ ಒಡೆಯರ್ (1673-1704) ಆಳ್ವಿಕೆಯ ಅವಧಿಯಲ್ಲಿ ಚಿಕ್ಕರಸಿನಕೆರೆಯಲ್ಲಿ ಹಲವಾರು ಕ್ರೈಸ್ತ ಕುಟು0ಬಗಳಿದ್ದವು. ಅ0ತೋನಿಯೊ ಮರಿಯ ಪ್ಲಾಟೆಯವರು ತನ್ನ ಹೆಸರನ್ನು ಬದಲಾಯಿಸಿಕೊ0ಡು ರಾಜೇ0ದ್ರ ಸ್ವಾಮಿ ಎ0ಬ ಹೆಸರನ್ನು ಸ್ವೀಕರಿಸಲು ಆಗಿನ ಅರಸರೊ0ದಿಗೆ ಇಟ್ಟುಕೊ0ಡಿದ್ದ ಬಾ0ಧವ್ಯವೇ ಕಾರಣವೆನ್ನುತ್ತಾರೆ. ಜೆಸ್ವಿಟ್ ಗುರುಗಳಾದ ಸ್ವಾಮಿ ಚಿನ್ನಮಿ, ಮನುವೇಲ್ ದಕೂನ್ನರವರ0ತೆ ಮೈಸೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕ್ರಿಸ್ತನ ಸುಸ0ದೇಶವನ್ನು ಸಾರಿದವರಲ್ಲಿ ಸ್ವಾಮಿ ರಾಜೇ0ದ್ರರವರು ಒಬ್ಬರು. ಚಿಕ್ಕರಸಿನಕೆರೆಯಲ್ಲಿ ನೆಲೆಸಿ ಶ್ರೀರ0ಗಪಟ್ಟಣ ಹಾಗೂ ಆಸುಪಾಸಿನ ಸ್ಥಳಗಳಲ್ಲಿ ಕ್ರೈಸ್ತಭಕ್ತಾದಿಗಳ ಆಧ್ಯಾತ್ಮಿಕ ಜೀವನವನ್ನು 1719 ರವರೆಗೆ ಬಹಳ ಉತ್ಸುಕತೆಯಿ0ದ ಪಾಲನೆ ಮಾಡಿದರು. ತಮ್ಮ ಸೇವಾಕಾರ್ಯವನ್ನು ಶ್ರೀರ0ಗಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸದೆ ಜೆಸ್ವಿಟರ ಪುರಾತನ ಸುವಾರ್ತಾ ಕೇ0ದ್ರಗಳಾದ ಕನಕಪುರದ ಹಾರೋಬೆಲೆ, ಹಾಸನದ ಶೆಟ್ಟಿಹಳ್ಳಿ, ಮಗ್ಗೆ, ಗಾಡೇನಹಳ್ಳಿ ಹಾಗೂ ಮತ್ತಿತರ ಕಡೆಗಳಲ್ಲಿ ಕ್ರೈಸ್ತರ ಸೇವೆಯನ್ನು ಮಾಡಿರುವುದರ ಬಗ್ಗೆ 1709-1710ರ ಜೆಸ್ವಿಟ್ ಪತ್ರಗಳಲ್ಲಿ ಲಿಖಿತವಾಗಿದೆ. 



ದೇವರೆಡೆಗೆ ನಿರ್ಗಮನ 

ದೇವರಿ0ದ ಆಗಮಿಸಿ, ತನ್ನ ಜೀವಮಾನ ಕಾಲದಲ್ಲಿ ದೇವ-ಮಾನವರ ಸೇವೆಗೈದ ಸ್ವಾಮಿ ರಾಜೇ0ದ್ರರವರು 08.10.1719ರ0ದು ಪುನಃ ದೇವರೆಡೆಗೆ ನಿರ್ಗಮಿಸಿದರು. 07.10.1719ರ0ದು ಚಿಕ್ಕರಸಿನಕೆರೆಯಲ್ಲಿ ಕ್ರೈಸ್ತರೊ0ದಿಗೆ ಜಪಮಾಲೆರಾಣಿಯ ಹಬ್ಬವನ್ನು ವಿಜೃ0ಭಣೆಯಿ0ದ ಕೊ0ಡಾಡಿ ಮಾರನೆಯ ದಿನ 08.10.1719 ರ0ದು ದಿವ್ಯಮರಣವನ್ನು ಅಪ್ಪಿದರು. ಸ್ವಾಮಿ ರಾಜೇ0ದ್ರರವರ ದೇಹವನ್ನು ಚಿಕ್ಕರಸಿನಕೆರೆಯಲ್ಲೇ ಭೂಸ್ಥಾಪನೆ ಮಾಡಲಾಗಿದೆ. 

ಚಿಕ್ಕರಸಿನಕೆರೆಗೆ ಬ0ದು ಸ್ವಾಮಿ ರಾಜೇ0ದ್ರರವರ ಬಿನ್ನಹದ ಮೂಲಕ ಪ್ರಾರ್ಥಿಸಿದವರ ಬದುಕಿನಲ್ಲಿ ದೇವರು ಅನೇಕ ಅದ್ಭುತಕಾರ್ಯಗಳನ್ನು ಮಾಡಿದ್ದಾರೆ. ವಿಶೇಷವಾಗಿ ಮಕ್ಕಳಾಗದೇ ಎದೆಗು0ದಿದ ಅನೇಕ ದ0ಪತಿಗಳಿಗೆ ಸ0ತಾನ ಭಾಗ್ಯವು ಸ್ವಾಮಿ ರಾಜೇ0ದ್ರರವರಲ್ಲಿಟ್ಟ ಕೋರಿಕೆಯಿ0ದಾಗಿ ಈಡೇರಿದೆ. 

ಸ0ತರ ಪಟ್ಟಕ್ಕೆ ಸೇರುವ ಹಾದಿಯಲ್ಲಿರುವ ಸ್ವಾಮಿ ರಾಜೇ0ದ್ರರವರನ್ನು ಪೋಪ್ ಫ್ರಾನ್ಸಿಸ್‌‍ನವರು ಇತ್ತೀಚೆಗೆ ‘ದೇವರ ಸೇವಕ’ (Servant of God) ಎ0ಬ ಪದವಿಯನ್ನಿತ್ತು ಗೌರವಿಸಿದ್ದಾರೆ. ಮೈಸೂರು ಧರ್ಮಾಧ್ಯಕ್ಷರಾದ ಅತಿ ವ0ದನೀಯ ಡಾ. ಕೆ. ಎ. ವಿಲಿಯ0ನವರು ಇತ್ತೀಚೆಗೆ ಚಿಕ್ಕರಸಿನಕೆರೆಯನ್ನು ಸ್ವಾಮಿ ರಾಜೇ0ದ್ರರವರ ಪುಣ್ಯಕ್ಷೇತ್ರವೆ0ದು ಘೋಷಿಸಿದ್ದಾರೆ. ತಪಸ್ಸು ಕಾಲವನ್ನು ಅಚರಿಸುತ್ತಿರುವ ನಮಗೆ ಕ್ರಿಸ್ತನಿಗೋಸ್ಕರ ಹಲವಾರು ವೇದನೆ ಹಾಗೂ ಯಾತನೆಯನ್ನು ಸಹಿಸಿ ಎಲ್ಲವನ್ನೂ ದೇವರ ಉನ್ನತ ಮಹಿಮೆಗೋಸ್ಕರ ಮಾಡಿದ ಪೂಜ್ಯ ಸ್ವಾಮಿ ರಾಜೇ0ದ್ರರವರ ಸೇವಾ ಬದುಕು ಕ್ರಿಸ್ತನನ್ನು ಹಿ0ಬಾಲಿಸಲು ಸದಾ ಮಾದರಿಯಾಗಲಿ. 

ಸ್ವಾಮಿ ರಾಜೇ0ದ್ರರವರೇ ನಮಗಾಗಿ ಪ್ರಾರ್ಥಿಸಿರಿ 


———— 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...