Saturday, 2 February 2019

ದನಿ ರೂಪಕ

“ಆತ ಹೇಳಿದಂತೆ ಮಾಡಿ”
ತಾಯಿ ಸೇವಕರಿಗೆ, " ಆತ ಹೇಳಿದಂತೆ ಮಾಡಿ' ಎಂದು ತಿಳಿಸಿದರು. ತಾಯಿ ಹೇಳಿದಂತೆ ಸೇವಕರು ಮಾಡಿದರು. ನೀರು ದ್ರಾಕ್ಷಾರಸವಾಯಿತು. ನಮ್ಮ ಬದುಕಿನಲ್ಲಿ ಅದ್ಭುತಗಳಾಗಬೇಕೇ? ಮೊದಲು ಅವನು ಹೇಳಿದ್ದನ್ನು ಆಲಿಸಿ, ಹೇಳಿದಂತೆ ಮಾಡೋಣ. ಹಾಗಾದರೆ, ಅದ್ಭುತವೆಂದರೇನು? ಟೋನಿ ಡಿ'ಮೆಲೋರವರ ಒಂದು ಅದ್ಭುತ ಕಥೆಯಿದೆ. ಒರ್ವ ಗುರುವಿನ ಪ್ರಖ್ಯಾತಿ ಬಗ್ಗೆ ತಿಳಿಯಲು ಪ್ರಯಾಣ ಪ್ರಾರಂಭಿಸಿದ. "ನಿಮ್ಮ ಗುರುಗಳು ಪವಾಡ ಮಾಡ್ತಾರಂತೆ? ತಾನು ಬೇಟಿಯಾದ ಶಿಷ್ಯನೊಬ್ಬನನ್ನು ಪ್ರಶ್ನಿಸಿದ. ಶಿಷ್ಯ ಪ್ರತ್ಯುತ್ತರವಾಗಿ " ಹೌದು ಪವಾಡಗಳ ಮೇಲೆ ಪವಾಡಗಳು... ನಿಮ್ಮಲ್ಲಿ ನಿಮಗೆ ಬೇಕಾದದ್ದನ್ನು ದೇವರು ಕರುಣಿಸಿದರೆ ಪವಾಡವೆನ್ನುವಿರಿ. ಆದರೆ ನಮ್ಮ ನಾಡಲ್ಲಿ ಹಾಗಲ್ಲ.. ದೇವರ ಚಿತ್ತವನ್ನು ಕೇಳಿ ಅದನ್ನು ನಾವು ನೆರೆವೇರಿಸಿದರೆ ಅದನ್ನು ಪವಾಡವೆನ್ನುತ್ತೇವೆ. ಹೌದು ಅವನ ಮಾತುಗಳನ್ನು ಕೇಳಿ ಅವನ ಚಿತ್ತವನ್ನು ನೆರವೇರಿಸುವುದೇ ಪವಾಡ. ಅವನನ್ನು ಆಲಿಸೋಣ. ಅವನು ಹೇಳಿದ್ದನ್ನು ಕೇಳಿ, ಅವನ ಅಜ್ಞೆಯಂತೆ ಬಾಳಿದರೆ, ಪವಾಡಗಳು ನಮ್ಮ ಬದುಕನ್ನು ಮುತ್ತಿಕೊಳ್ಳುತ್ತವೆ. ಇದಕ್ಕೆ ಉತ್ತಮ ಉದಾಹರಣೆ ತಾಯಕರುಣೆಯ ಮದರ್ ತೆರೇಸಾ. ತನ್ನ ಕನ್ಯಾಸ್ತ್ರೀ ಮಠದಲ್ಲಿ ಆರಾಮದಾಯಕ ಬದುಕನ್ನು ಬದುಕಾಗಿಸಿಕೊಂಡಿದ್ದ ತೆರೇಸಾ ಪ್ರಯಾಣಿಸುತ್ತಿದ್ದ ಒಂದು ಸಂದರ್ಭದಲ್ಲಿ ಆತನ ಕರೆಯನ್ನು ಕೇಳುತ್ತಾಳೆ. ತನ್ನ ಬೋಧನಾ ವೃತ್ತಿಗೆ ಗುಡ್ ಬೈ ಹೇಳಿ, ಕನ್ಯಾಸ್ತ್ರೀ ಮಠದಿಂದ ಬೀದಿಗಿಳಿಯುತ್ತಾಳೆ. ನಾಲ್ಕುಗೋಡೆಗಳ ಮಧ್ಯದಲ್ಲೇ ಬದುಕಿದ್ದ ಹೆಣ್ಣುಮಗಳು ಅಪರಿಚಿತ ಬೀದಿಗಳಲ್ಲಿ ನಡೆದಾಡಲು ಪ್ರಾರಂಭಿಸುತ್ತಾಳೆ. ಬರಿಗೈಯಲ್ಲಿ ದೀನದಲಿತರ ನಿರ್ಗತಿಕರ, ಹಿರಿಯರ, ಅನಾಥರಿಗೆ ತಾಯಾಗಲು ಮನಸ್ಸು ಮಾಡಿ ಸೇವೆ ಆರಂಭಿಸುತ್ತಾಳೆ. ಇವೊತ್ತು ಸುಮಾರು 4500 ಕನ್ಯಾಸ್ತ್ರೀಯರ ಮಠ 133ಕ್ಕಿಂತ ಹೆಚ್ಚು ದೇಶಗಳಲ್ಲಿ ತೆರೇಸಾರವರ ಸೇವೆ ಮುಂದುವರಿಯುತ್ತಿದೆ. ಇದೇ ಪವಾಡ. ತೆರೇಸಾರವರ ಬದುಕೇ ಪವಾಡವಾಗಿ ಹಲವಾರು ಪವಾಡಗಳ ತಾಯಿಬೇರಾಯಿತು. ಹೌದು ಆತ ಹೇಳಿದಂತೆ ಮಾಡೋಣ ಪವಾಡಗಳನ್ನು ನಮ್ಮ ಬದುಕಾಗಿಸಿಕೊಳ್ಳೋಣ....




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...