---------------------------
ಒಮ್ಮೆ ಈ ರೀತಿ, ಮನುಷ್ಯ ಕುಲ ಹುಟ್ಟುವ ಮುನ್ನವೆ ಜಾತಿ ಅನ್ನೋ ಪದ ಉಗಮಿಸಿತ್ತೇ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಎಲ್ಲರ ಉತ್ತರ ಮೌನವೇ ಸರಿ. ಆದರೂ ಸಹ ಎಲ್ಲರೂ ಅವರವರ ಭಾವನೆಗಳಿಗೆ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಹಾಗೆ ಜಾತಿಗಳನ್ನು ಇಟ್ಕೊಂಡಿದಾರೆ. ಜಾತಿ ಗೀತಿ ಯಾವುದೂ ಇಲ್ಲ ಅಂತ ನಾವೇನಾದರೂ ವಾದಿಸಿದರೆ ನಮ್ಮನ್ನು ದಡ್ಡ ಹುಚ್ಚ ಎಂದೆಲ್ಲ ಜಗಳಕ್ಕೆ ಬಾಗಿಲು ತೆರೆಯುತ್ತಾರೆ.

----------------------------
2019ರ ಜನವರಿ 26ಕ್ಕೆ ಸಂವಿಧಾನ ಜಾರಿಗೊಂಡು ಸುಮಾರು 69 ವರ್ಷಗಳೇ ಕಳೆದರೂ ದೀನದಲಿತರು ಶೋಷಿತರಾಗುತ್ತಿದ್ದಾರೆ ಎನ್ನುವುದಕ್ಕಿಂತ ಅವರನ್ನು ಬೇರೆ ಯಾರೋ ಶೋಷಣೆಗೆ ಒಳಪಡಿಸುತ್ತಲೇ ಇದ್ದಾರೆ ಅನ್ನೋದು ಸರಿಯಾದ ಚಿಂತನೆ. ಮನುಷ್ಯ ಮನುಷ್ಯನ ಮೇಲೆ ಮಾಡುವ ಶೋಷಣೆˌ ದಬ್ಬಾಳಿಕೆˌ ಜಾತಿ-ನೀತಿಯಂತ ಕೆಟ್ಟ ಪರಿಸ್ಥಿತಿಯನ್ನು ಇನ್ನೂ ಎಷ್ಟು ದಿನಗಳ ಕಾಲ ಅಂತ ಸಹಿಸಿಕೊಳ್ಳಬೇಕು.
ಒಬ್ಬ ವ್ಯಕ್ತಿ ತಾನು ಹುಟ್ಟುವ ಮೊದಲು ತಾನು ಹುಟ್ಟುತ್ತಾನೆ ಅನ್ನೋದನ್ನು ಯಾರೂ ಕೂಡ ಅರಿತಿರಲು ಸಾಧ್ಯವಿಲ್ಲ. ಒಂದು ಮಗುವಿನ ಜನನದ ನಂತರ ಅದಕ್ಕೆ ಏನನ್ನು ಕಲಿಸುತ್ತೇವೇಯೋ ಅದನ್ನೇ ಕಲಿಯುತ್ತದೆ. ಯಾವ ಭಾಷೆˌ ಯಾವ ಆಹಾರˌ ಯಾವ ಆಚಾರ ವಿಚಾರˌ ನಡೆ ನುಡಿ ಸಂಪ್ರದಾಯˌ ಒಳ್ಳೇದು ಕೆಟ್ಟದ್ದುˌ ತಪ್ಪು ಸರಿˌ ಹೀಗೆ ಬದುಕಲಿಕ್ಕೆ ಸಂಬಂಧಪಟ್ಟಂತೆಯೇ ಇನ್ನೂ ಏನೇನು ಇವೆಯೋ ಅವೆಲ್ಲವನ್ನೂ ಮುಖ್ಯವಾಗಿ ತಂದೆ ತಾಯಿ ಸಮಾಜ ಕಲಿಸಿದಂತೆಯೇ ಅದು ಕಲಿಯತೊಡಗುತ್ತದೆ. ಒಂದು ವೇಳೆ ಅದಕ್ಕೆ ಏನೂ ಕಲಿಸದೇ ಇದ್ದರೆ ತಾನಾಗಿಯೇ ಅದು ಏನನ್ನೂ ಕಲಿಯಲು ಸಾಧ್ಯವಿಲ್ಲ. ಅಷ್ಟೇ ಏಕೆ ಒಂದು ಮಗುವಿಗೆ ಹುಟ್ಟಿನಿಂದ ಮಾತನ್ನು ಕಲಿಸದೆ ಹಾಗೆಯೇ ಬಿಟ್ಟರೆ ಅದು ಸಾಯೋವರೆಗೂ ಮೂಕ ಪ್ರಾಣಿಯಂತೆ ಇರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಆದರೆ ಇವೊತ್ತಿನ ಜನ ತಾವೆಲ್ಲ ಮಂಗನಿಂದ ಮಾನವರಾಗಿದ್ದಾರೆ ಅನ್ನೋದನ್ನು ಮರೆತುˌ ಜಾತಿ ಧರ್ಮ ಭೇದ—ಭಾವ ಮೇಲು ಕೀಳು ಅನ್ನೋ ಅನರ್ಥಗಳಿಗೆ ಅರ್ಥ ಕೊಟ್ಟಿದ್ದಾರೆ.
ಒಮ್ಮೆ ಈ ರೀತಿ, ಮನುಷ್ಯ ಕುಲ ಹುಟ್ಟುವ ಮುನ್ನವೆ ಜಾತಿ ಅನ್ನೋ ಪದ ಉಗಮಿಸಿತ್ತೇ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಎಲ್ಲರ ಉತ್ತರ ಮೌನವೇ ಸರಿ. ಆದರೂ ಸಹ ಎಲ್ಲರೂ ಅವರವರ ಭಾವನೆಗಳಿಗೆ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಹಾಗೆ ಜಾತಿಗಳನ್ನು ಇಟ್ಕೊಂಡಿದಾರೆ. ಜಾತಿ ಗೀತಿ ಯಾವುದೂ ಇಲ್ಲ ಅಂತ ನಾವೇನಾದರೂ ವಾದಿಸಿದರೆ ನಮ್ಮನ್ನು ದಡ್ಡ ಹುಚ್ಚ ಎಂದೆಲ್ಲ ಜಗಳಕ್ಕೆ ಬಾಗಿಲು ತೆರೆಯುತ್ತಾರೆ.
ಆದ್ರೆ ಒಂದಂತು ಸತ್ಯ ಮನುಷ್ಯನು ತಾನು ಜಾತಿ ಅಂತ ಗುರುತಿಸಿದಾಗಿನಿಂದ ಶೋಷಣೆˌ ದಬ್ಬಾಳಿಕೆಗಳು ಶುರುವಾಗಿವೆ. ಅದಕ್ಕೆ ಇಂದಿನ ಜಾತಿವ್ಯವಸ್ಥೆಯೇ ಉದಾಹರಣೆ. ಮೇಲು ಕೀಳು ಅನ್ನೋ ವ್ಯತ್ಯಾಸ ಕಾಣತೊಡಗಿದ್ದೆ ಅಲ್ಲಿಂದ. ದಲಿತ ದಮನಿತ ಅಂತ ಕಂಡುಬಂದಿದ್ದೆ ಈ ಜಾತಿ ಅನ್ನೋ ಸೋಂಕಿನಿಂದ. ಒಮ್ಮೆ ಸಾಂವಿಧಾನಿಕವಾಗಿ ಹೇಳೋದಾದ್ರೆ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರೆಲ್ಲರೂ ದಲಿತರೆ. ನಮ್ಮ ಹೆಮ್ಮೆಯ ಭಾರತ ಸಂವಿಧಾನವು ಹಿಂದುಳಿದವರ ಸಂಖ್ಯೆಗನುಗುಣವಾಗಿ ಅವರವರ ಯೋಗ್ಯತೆಗೆ ತಕ್ಕಂತೆ ಮೀಸಲಾತಿಯನ್ನು ಕೊಟ್ಟಿರುವುದು ನಮನ್ನೆಲ್ಲ ಸನ್ಮಾಸಿರುವಂತಿದೆ ಎನ್ನುವುದರಲ್ಲಿ ತಪ್ಪಿಲ್ಲ.
ಸ್ವಾತಂತ್ರ್ಯ ಸಿಕ್ಕು 70ವರ್ಷ ಕಳೆದರೂ ಸಂವಿಧಾನ ಜಾರಿಯಾಗಿ 70ವರ್ಷಗಳೇ ಮುಗಿದರೂ ಸಹಿತ ಸರಿಯಾದ ಮೀಸಲಾತಿ ಯಾರಿಗೆ ಹೆಚ್ಚು ಸಿಕ್ಕಿದೆ ಎಷ್ಟು ಸಿಕ್ಕಿದೆ ಅಂತ ಅರಿತುಕೊಳ್ಳುವದರಲ್ಲಿ ಇಂದಿನ ಸಾಕಷ್ಟು ಯುವಕ ಯುವತಿಯರು ವಿಫಲರಾಗಿದ್ದಾರೆ. ಅವರ ತಪ್ಪು ಕಲ್ಪನೆಯ ಅಂಗಳದಲ್ಲಿ ಮೀಸಲಾತಿ ಅನ್ನೋದು ಕೇವಲ ಎಸ್ಸಿ-ಎಸ್ಟಿಗೆ ಮಾತ್ರ ಇದೆ ಎಂದು ತಪ್ಪಾಗಿ ಅರಿತುಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಎಸ್ಸಿ-ಎಸ್ಟಿಗಳವರು ಮಾತ್ರವೇ ಎಲ್ಲಾ ಸೌಲಭ್ಯಗಳ ಫಲಾನುಭವಿಗಳಾಗಿದ್ದಾರೆ ಎಂಬುದಾಗಿ ಮೇಲ್ವರ್ಗದವರಿಂದ ಕೇಳಿಸಿಕೊಂಡಂತ ಮಾತು ನನ್ನನ್ನು ಪ್ರಚೋದನೆಗೆ ಇಳಿಯುವಂತೆ ಮಾಡಿದೆ. ಬಹುಶಃ ನಮ್ಮ ಬಾಬಾ ಸಾಹೇಬ ಅಂಬೇಡ್ಕರರು ತನ್ನ ಜನಾಂಗವನ್ನಷ್ಟೆ ಆಧಾರವಾಗಿಕೊಟ್ಟು ಸಂವಿಧಾನ ರಚನೆ ಮಾಡಿದ್ದರೆ ಇಷ್ಟೊತ್ತಿಗಾಗಲೇ ತನ್ನ ಜನಾಂಗದವರಾರು ಬಡವರಾಗಿರುತ್ತಿರಲಿಲ್ಲ. ಇಂದಿನ ರಾಜಕೀಯ ಚುಕ್ಕಾಣಿ ಹಿಡಿದು ದೇಶದ ಎಲ್ಲ ಕ್ಷೇತ್ರದಲ್ಲೂ ಅವರೆ ಶಾಸಕ ಮಂತ್ರಿಗಳಾಗಿ ಹೊರ ಹೊಮ್ಮುತ್ತಿದ್ದರು. ಆದರೆ ಬಾಬಾ ಸಾಹೇಬ ಅಂಬೆಡ್ಕರರು ಎಲ್ಲಾ ಜನಾಂಗದ ಹಿತಕ್ಕಾಗಿ ದುಡಿದು ಸಂಖ್ಯೆಗನುಗುಣವಾಗಿ ಸಂವಿಧಾನದಲ್ಲಿ ಸರಿಯಾದ ಸ್ಥಾನಮಾನಗಳನ್ನು ನೀಡಿದರು.
ವಿಪರ್ಯಾಸವೆಂದರೆ ಇಂದು ಸಾಮಾನ್ಯ ವರ್ಗದ ಶೇಕಡಾ 50ರಷ್ಟು ಮೀಸಲಾತಿಯಲ್ಲಿ ಶೇಕಡಾ 10ರಷ್ಟನ್ನು ದೇಶದಲ್ಲಿ ಶೇಕಡಾ 3ರಷ್ಟಿರುವ ಜನಸಂಖ್ಯೆಗೆ ಹಂಚಿದ್ದಾರೆ. ಇದೊಂದು ಪಕ್ಷಕ್ಷಾತೀತವಾಗಿ ನಡೆದ ಒಳ ರಹಸ್ಯ ಎಂದೇ ಹೇಳಬಹುದು. ಕಾರಣ ಇಷ್ಟೇ, ಸಾಮಾನ್ಯ ವರ್ಗದಲ್ಲಿ ಬ್ರಾಹ್ಮಣರಿಗಿಂತ ಹಿಂದುಳಿದ ಶೇಕಡಾ 18ರಷ್ಟು ಜನಸಂಖ್ಯೆ ಇರುವವರಿಗೆ ಶೇಕಡಾ 5ರಷ್ಟು ಮೀಸಲಾತಿ ನೀಡಿ, ಕೇವಲ ಶೇಕಡಾ 3ರಷ್ಟಿರುವ ಜನಸಂಖ್ಯೆ ಹೊಂದಿರುವವರಿಗೆ ಶೇಕಡಾ 10 ಮೀಸಲಾತಿ ನೀಡುರುವುದೆಂದರೆ ಬಹಳ ಮೋಸದ ವಿಚಾರವಾಗಿದೆ.
ಮೀಸಲಾತಿಯನ್ನು ವಿರೋದಿಸುತ್ತಿದ್ದವರೇ ಇಂದು ಮೀಸಲಾತಿಯ ದಾಸರಾಗಿದ್ದಾರೆ. ಸಂವಿಧಾನವನ್ನು ವಿರೋಧಿಸುತ್ತಿದ್ದವರಿಗೆ ಇಂದು ಸಂವಿಧಾನವೇ ಆಶ್ರಯ ನೀಡಿದೆ.
¨ ಶಿವಮೂರ್ತಿ ಕೆ. ಗುಡದಿನ್ನಿ
●●●
No comments:
Post a Comment