Saturday, 2 February 2019

ನಡೆದುದು ಸಾವಿರಾರು ಹೆಜ್ಜೆಗಳಾದರೂ



ನಡೆದುದು ಸಾವಿರಾರು ಹೆಜ್ಜೆಗಳಾದರೂ

ನೆನಪಿಗೆ ಸವಾಲೊಡ್ಡಿ ನಿಲ್ಲೋದು 

ಪರ ಒಳಿತಿಗೆ ಸವೆದ ಹೆಜ್ಜೆಗಳ ಇತಿಹಾಸ ಮಾತ್ರ

●●●

ಬುದ್ಧ ಕ್ರಿಸ್ತ ಬಸವಣ್ಣ 

ಕೂಡುವ ಮನೆಯೊಂದಿದ್ದರೆ

ಅದು ಮನುಷ್ಯತ್ವದ ಮನೆಯೊಂದೇ

●●●

ತೋರಿಕೆಯ ಜಗತ್ತಿನಲ್ಲಿ

ನಾನೊಂದು ಹಗಲು ನಕ್ಷತ್ರ

ಕಾಣಿಸಿಕೊಳ್ಳಲು ಹಿಂಜರಿಯುವ ಅತಂತ್ರ

●●●

ಧರ್ಮವೆಂಬುವುದು

ಬೇಕು ಬೇಡಗಳ ಪಟ್ಟಿಯಲ್ಲ

ಶುದ್ಧ ಅಶುದ್ಧಗಳ ಆಚರಣೆಗಳಲ್ಲ

ನನ್ನನೇ ಮೀರಿ ಉಕ್ಕುವ ಒಡನಾಟದ

ಜೀವ ಝರಿ

●●●

ಜೋತಿಷಿಗಳು ಹುಡುಕಿದ್ದು

ಕ್ರಿಸ್ತ ಎನ್ನುವ ಒಳದನಿಯ

ಸಿಕ್ಕ ಮೇಲೆ ಅಹಂ ದನಿಯು

ಸ್ತಬ್ಧವಾಗಿ ಒಳದನಿಯಾಗಿಬಿಡುವುದು

●●●

ಸಂತೋಷವಾಗಿರಬೇಕಾದರೆ

ತನ್ನಲ್ಲಿರುವುದೆಲ್ಲವ ಕೊಟ್ಟುಬಿಡು

ಕೊಡುವುದು ನಿನ್ನ ಕೊಡದ 

ಕೈಗೂ ಗೊತ್ತಾಗದಿರಲಿ

●●●

ನಿನ್ನಲ್ಲಿರುವುದೆಲ್ಲವು ದ್ವಿಗುಣವಾಗಬೇಕಾದರೆ

ನೀನು ಮಾಡಬೇಕಾಗಿರುವುದಿಷ್ಟೇ

ಎಲ್ಲವನ್ನು ಪರರ ಒಳಿತಿಗೆ ವಿನಿಯೋಗಿಸು

ವಿನಿಮಯ ಬೆಲೆ ಗೊತ್ತಾಗದಂತೆ ಬಾನಿಗೇರಿಬಿಡುವುದು



- ಜೀವಸೆಲೆ



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...