Saturday, 2 February 2019

'ನಾನು ಸತ್ಯದ ಪ್ರತಿವಾದಕನಾಗಲು ಬಯಸುತ್ತೇನೆ!'


'ನಾನು ಸತ್ಯದ ಪ್ರತಿವಾದಕನಾಗಲು ಬಯಸುತ್ತೇನೆ!'

'ನಾನು ಸತ್ಯದ ಪ್ರತಿವಾದಕನಾಗಲು ಬಯಸುತ್ತೇನೆ!'

'ಹೌದಾ! ಹಾಗಾದರೆ ನಲವತ್ತೈದು ವರ್ಷಗಳ ತನಕ ಅಪಹಾಸ್ಯ, ನಿರ್ಲಕ್ಷ್ಯ ನಿಂದನೆಗಳನ್ನು ಅನುಭವಿಸಲು ತಯಾರಾಗಿದ್ದೀಯಾ?'

'ನಾನು ರೆಡಿ... ಆದರೆ ನಲವತ್ತೈದು ವರ್ಷಗಳ ನಂತರ ಏನಾಗಬಹುದು?'

'ಏನಿಲ್ಲ, ಅಷ್ಟೊತ್ತಿಗೆ ನೀನು ಅವುಗಳಿಗೆ ಒಗ್ಗಿಬಿಟ್ಟಿರುತ್ತೀಯ!!!'

●●●

ಮನುಷ್ಯನಾಗಿ ಬಾಳುವುದೇ ಶ್ರೇಷ್ಠ ಸಾಧನೆ.''ನಾನು ನಿಮ್ಮ ಹಾಗೆ ಶ್ರೇಷ್ಠ ಮನುಷ್ಯನಾಗಬಹುದು ಹೇಗೆ?'

'ಶ್ರೇಷ್ಠ ಮನುಷ್ಯ?', ಗುರು ಹೇಳಿದರು; 'ಸದ್ಯ ಮನುಷ್ಯನಾಗಿ ಬಾಳುವುದೇ ಶ್ರೇಷ್ಠ ಸಾಧನೆ.'

●●●

ಒಂದು ಕ್ಷಣ ಕಾಯಬೇಕಂತೆ

ಮುಲ್ಲಾನಸ್ರುದ್ದೀನ ತೀಕ್ಷ್ಣ ಬುದ್ಧಿಯವನಾದ್ದರಿಂದ ಸುತ್ತ ಮುತ್ತಲಿನ ಜನರಿಗೆ ತನ್ನ ಸಲಹೆ, ತಿಳಿವುಗಳನ್ನು ಹಂಚುತ್ತ ಬದುಕು ಸಾಗಿಸುತ್ತಿದ್ದ. ಜನ ಅವನನನ್ನು ಸೂಫಿಯೆಂದೂ, ಭಗವಂತನೊಂದಿಗೆ ಹತ್ತಿರದ ಸಂಬಂಧವನ್ನಿಟ್ಟುಕೊಂಡವನೆಂದೂ ತಿಳಿದು ತಮ್ಮ ಸಮಸ್ಯೆ, ಪ್ರಶ್ನೆಗಳೊಂದಿಗೆ ಅವನನ್ನು ನೋಡಲು ಬರುತ್ತಿದ್ದರು. ಒಂದು ದಿನ ಒಬ್ಬ ಧಾರ್ಮಿಕ ಮನುಷ್ಯ ಅವನನ್ನು ಪರೀಕ್ಷಿಸಲು ಬಂದ.

"ನಸ್ರುದ್ದೀನ್, ಜನ ನಿನ್ನ ಸಂತ ಎಂದು ಹೇಳುತ್ತಾರೆ, ಅಲ್ಲಾಹ್ನ ಜೊತೆ ಮಾತನಾಡುವವ ಎಂದು ಹೇಳುತ್ತಾರೆ. ಅಲ್ಲಾಹ್‌ನ ದೃಷ್ಟಿಯಲ್ಲಿ 1000 ಸಾವಿರ ವರ್ಷ ಎಂದರೆ ಎಷ್ಟು? ಕೇಳಿ ಹೇಳುವೆಯಾ?"

ಉತ್ತರ ಕೊಡುವ ಮೊದಲು, ಮುಲ್ಲಾ ತಲೆಯನ್ನು ಎತ್ತಿ ಆಕಾಶವನ್ನೊಮ್ಮೆ ನೋಡಿದ, ಅಲ್ಲಾಹನ ಜೊತೆ ಯಾವದೋ ಭಾಷೆಯಲ್ಲಿ ಮಾತನಾಡಿದ. ಅನಂತರ,

"ಒಂದು ಕ್ಷಣ" ಮುಲ್ಲಾ ಉತ್ತರಿಸಿದ.

"ಅಲ್ಲಾಹ್ನ ಪ್ರಕಾರ ಒಂದು ಸಾವಿರ ಬಂಗಾರದ ನಾಣ್ಯಗಳ ಮೌಲ್ಯ ಎಷ್ಟು?" ಆ ಮನುಷ್ಯ ತಿರುಗಿ ಪ್ರಶ್ನೆ ಮಾಡಿದ. ಈ ಬಾರಿ ಮುಲ್ಲಾ ತಕ್ಷಣ ಉತ್ತರಿಸಿದ, "ಒಂದು ತಾಮ್ರದ ನಾಣ್ಯದಷ್ಟು"

"ಹಾಗಾದರೆ ಓ ಸಂತ ಶ್ರೇಷ್ಠ, ಆ ಒಂದು ತಾಮ್ರದ ನಾಣ್ಯವನ್ನು ನನಗೆ ಕೊಡಲು ಅಲ್ಲಾಹ್‌ನಿಗೆ ಹೇಳುವೆಯಾ" ಆ ಮನುಷ್ಯ ಕುಹಕದಿಂದ ಕೇಳಿದ.

ನಸ್ರುದ್ದೀನ ಮತ್ತೊಮ್ಮೆ ಆಕಾಶ ದಿಟ್ಟಿಸಿ ಬಳಿಕ ಉತ್ತರಿಸಿದ. "ಒಂದು ತಾಮ್ರದ ನಾಣ್ಯ ನಿಮಗೆ ಕೊಡಲು ಅಲ್ಲಾಹ್‌ನಿಗೆ ಯಾವ ತೊಂದರೆಯೂ ಇಲ್ಲವಂತೆ, ಆದರೆ ಒಂದು ಕ್ಷಣ ಕಾಯಬೇಕಂತೆ"
- ಸಂಗ್ರಹ - ಇನ್ನಾ

●●●



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...