ನಮ್ಮ ರಾಜಕೀಯ ನಾಯಕರಿಂದ ಇನ್ನೂ ಹೆಚ್ಚು ಡಿಮ್ಯಾಂಡ್ ಮಾಡಿ. ನಮಗೆ ಅವರ ವಾಕ್‍ಚಾತುರ್ಯ ಬೇಕಾಗಿಲ್ಲ, ಮೋಡಿ ಮಾಡುವ ಮಾಂತ್ರಿಕ ಶಕ್ತಿ ಬೇಕಾಗಿಲ್ಲ, ಎಲ್ಲರ ಗಮನವನ್ನು ಒಮ್ಮೆಲೇ ಹಿಡಿದಿಟ್ಟುಕೊಳ್ಳುವ ಶೈಲಿ ಕೂಡ ನಮಗೆ ಬೇಡ. ಖಾಲಿ ಘೋಷಣೆಗಳೂ ಬೇಡ. ನಮಗೆ ಬೇಕಾಗಿರುವುದು ಒಳ್ಳೆಯ ವ್ಯಕ್ತಿತ್ವ, ಶುದ್ಧ ಮನಸ್ಸು, ಘನತೆ, ಗಾಂಭೀರ್ಯ, ದೂರದೃಷ್ಟಿಯ ಅಭಿವೃದ್ಧಿಯ ಕಾರ್ಯಕ್ರಮಗಳು.
ನಮ್ಮ ಓದಿನಿಂದಲೂ ನಾವು ಹೆಚ್ಚು ಡಿಮಾಂಡ್ ಮಾಡಬೇಕು. ಸುಳ್ಳು ಸುದ್ದಿಗಳ ಹಬ್ಬಿಸಿ, ಅಂತೆ ಕಂತೆಗಳನ್ನು ಹೊತ್ತು ತರುವ ನಿಯತಕಾಲಿಕೆಗಳು/ ಮ್ಯಾಗಜೀನ್ಸ್/ ಪತ್ರಿಕೆಗಳನ್ನು ಬಿಟ್ಟು ನಮ್ಮನ್ನು ಒಳ್ಳೆಯದಕ್ಕೆ ಪ್ರೇರೇಪಿಸುವ, ನಮಗೆ ಸ್ಪೂರ್ತಿ ತುಂಬುವ, ನಮ್ಮ ಮೇಲೆ ಗಾಢವಾದ ಪ್ರಭಾವ ಬೀರುವ ಅಷ್ಟೇ ಅಲ್ಲ, ನಮ್ಮನ್ನು ಕಾರ್ಯಪ್ರವೃತರಾಗಿಸುವ ಪುಸ್ತಕಗಳ ಓದು ನಮ್ಮದಾಗಬೇಕು.
ಎಲ್ಲಕ್ಕಿಂತಲ್ಲೂ ಹೆಚ್ಚಾಗಿ, ನಮ್ಮಿಂದಲೂ ನಾವು ಹೆಚ್ಚು ಡಿಮ್ಯಾಂಡ್ ಮಾಡಬೇಕು:
ಮಾಡುವ ಕೆಲಸ ಕಾರ್ಯಗಳು ಉನ್ನತ ಗುಣಮಟ್ಟದ್ದಾಗಿರಬೇಕು
ನಿರಂತರವಾಗಿ ನಮ್ಮ ವ್ಯಕ್ತಿತ್ವ ವಿಕಾಸಗೊಳ್ಳಬೇಕು
ಬ್ರಿಲಿಯಂಟ್ ಕೆಲಸ ಕಾರ್ಯಗಳು ನಮ್ಮಿಂದಾಗಬೇಕು
ಗಾಢವಾಗಿ ಪ್ರಭಾವಿಸುವ ವ್ಯಕ್ತಿತ್ವ ನಮ್ಮದಾಗಬೇಕು
ಹೌದು, ವಿಳಂಬವೇಕೆ? ಇಂದೇ ಪ್ರಾರಂಭಿಸೋಣ.....
ಜೋಹಾರಿ ಕಿಟಕಿ
ಅಮೇರಿಕದ ಮನೋವಿಜ್ಞಾನಿಗಳಾದ ಜೋಸೆಫ್ ಲುಫ್ ಹಾಗೂ ಹ್ಯಾರಿ-ಇಂಗ್-ಹ್ಯಾಮ್ ನವರು ೧೯೫೦ರಲ್ಲಿ ಈ ‘ಕಿಟಕಿ’ಯನ್ನು ತಯಾರಿಸಿದರು. ಇದನ್ನು ಆತ್ಮ ಪ್ರಜ್ಞೆ, ವ್ಯಕ್ತಿತ್ವ ನಿರ್ಮಾಣ, ಸಮೂಹ ಪ್ರಗತಿ ಹಾಗೂ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಬಳಸಲಾಗುತ್ತದೆ.
1 ಕಿಟಕಿ
ತೆರೆದ ವಲಯ
2 ಕಿಟಕಿ
ಕುರುಡು ವಲಯ
3 ಕಿಟಕಿ
ಗುಟ್ಟಾದ ವಲಯ
4 ಕಿಟಕಿ
ಗೊತ್ತಿರದ ವಲಯ
ಜೋಹ್ಯಾರಿ ಕಿಟಕಿಯ ನಾಲ್ಕು ಭಾಗಗಳು-
೧. ವ್ಯಕ್ತಿಗೆ ತನ್ನ ಬಗ್ಗೆ ಗೊತ್ತಿರುವುದು ಇತರರಿಗೂ ಗೊತ್ತಿರುವ ಅಂಶಗಳು- ತೆರೆದ ವಲಯ, ತೆರೆದ ವ್ಯಕ್ತಿತ್ವ / ಬಯಲಾದ ವ್ಯಕ್ತಿತ್ವ
೨. ವ್ಯಕ್ತಿಗೆ ತನ್ನ ಕುರಿತಾಗಿ ತನಗೆ ಗೊತ್ತಿಲ್ಲದಿದ್ದು, ಇತರರಿಗೆ ಗೊತ್ತಿರುವ ಅಂಶಗಳು - ಕುರುಡು ವಲಯ, ಕುರುಡು ವ್ಯಕ್ತಿತ್ವ ಅಥವಾ ಕುರುಡು ಮೂಲೆ
೩. ತನ್ನ ಬಗ್ಗೆ ತನಗೆ ಗೊತ್ತಿದ್ದು ಇತರರಿಗೆ ಗೊತ್ತಿರದ ಅಂಶಗಳು- ಗುಟ್ಟಾದ ವಲಯ, ಗುಟ್ಟಾದ ವ್ಯಕ್ತಿತ್ವ, ಉದಾಸೀನ ಮಾಡಿದ ವ್ಯಕ್ತಿತ್ವ.
೪. ತನಗೂ ಇತರರಿಗೂ ತನ್ನ ಬಗ್ಗೆ ಗೊತ್ತಿರದ ಅಂಶಗಳು- ಗೊತ್ತಿರದ ವ್ಯಕ್ತಿತ್ವ ಅಥವಾ ಗೊತ್ತಿರದ ಆತ್ಮ.
ಬನ್ನಿ ಈ ಜೋಹ್ಯಾರಿ ಕಿಟಕಿಯನ್ನು ಉಪಯೋಗಿಸಿಕೊಂಡು, ಸ್ವಜ್ಞಾನವನ್ನು ಪಡೆದುಕೊಳ್ಳೋಣ

No comments:
Post a Comment