¨ ಸಂಗ್ರಹ ಇನ್ನಾ
ಪಂಡಿತನಿಗೆ ಸತ್ಯವು ಸಿಗಲಾರದು
ವ್ಯಾಪಾರಿ ಕೋಳಿ ಮೊಟ್ಟೆಗಳನ್ನು ಮಾರಿ ಜೀವನ ಸಾಗಿಸುತ್ತಿದ್ದ. ಒಂದು ದಿನ ಒಬ್ಬ ಗಿರಾಕಿ ಅವನ ಅಂಗಡಿಗೆ ಬಂದು “ನನ್ನ ಕೈಯಲ್ಲಿ ಏನಿದೆ ಎಂದು ಹೇಳು“ ಎಂದು ವ್ಯಾಪಾರಿಯನ್ನು ಕೇಳಿದ. ನನಗೆ ಒಂದು ಸುಳಿವು ಕೊಟ್ರೆ ಹೇಳ್ತೀನಿ” ಎಂದ ವ್ಯಾಪಾರಿ. “ಬೇಕಾದಷ್ಟು ಕೊಡುವೆ. ಅದಕ್ಕೆ ಮೊಟ್ಟೆಯ ಆಕಾರವಿದೆ, ಮೊಟ್ಟೆಯ ತೂಕವಿದೆ, ಅದು ಮೊಟ್ಟೆಯಂತೆ ಕಾಣುತ್ತದೆ. ಅದಕ್ಕೆ ಮೊಟ್ಟೆಯಂಥ ರುಚಿಯಿದೆ. ಮೊಟ್ಟೆಯಂಥ ವಾಸನೆಯಿದೆ. ಅದರೊಳಗೆ ಹಳದಿ ಮತ್ತು ಬಿಳಿ ಬಣ್ಣಗಳಿವೆ, ಬೇಯಿಸುವ ಮೊದಲು ಅದು ದ್ರವವಾಗಿದ್ದು ಬೇಯಿಸಿದಾಗ ಘನವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಕೋಳಿಯು ಅದನ್ನು ಇಡುತ್ತದೆ. ”
“ಆಹಾ! ನನಗೆ ಗೊತ್ತು” ಎಂದನು ವ್ಯಾಪಾರಿ, “ಅದು ಒಂದು ಬಗೆಯ ಕೇಕ್!”
ಪಂಡಿತನಿಗೆ ಸತ್ಯವು ಸಿಗಲಾರದು.
-೦-
“ಮಾಂಸದ ಚೂರನ್ನು ಕಳೆದುಕೊಂಡೆ, ಆದರೆ ಈ ಪ್ರಶಾಂತ ಆಕಾಶವನ್ನು ಪಡೆದೆ”
ಒಮ್ಮೆ ಒಂದು ಕಾಗೆ ತನ್ನ ಕೊಕ್ಕಿನಲ್ಲಿ ಮಾಂಸದ ಚೂರನ್ನು ಇಟ್ಟುಕೊಂಡು ಆಕಾಶದಲ್ಲಿ ಹಾರುತ್ತಿತ್ತು. ಇತರ ಇಪ್ಪತ್ತು ಕಾಗೆಗಳು ಅದನ್ನು ತೀವ್ರವಾಗಿ ಬೆನ್ನಟ್ಟಿ ಕ್ರೂರವಾಗಿ ಆಕ್ರಮಣ ಮಾಡಿದವು. ಕೊನೆಗೆ ಕಾಗೆ ಮಾಂಸವನ್ನು ಕೆಳಗೆ ಬೀಳಿಸಿತು. ಹಿಂಬಾಲಿಸುತ್ತಿದ್ದ ಉಳಿದ ಕಾಗೆಗಳು ಅದನ್ನು ಒಂಟಿಯಾಗಿ ಬಿಟ್ಟು ಮಾಂಸದ ಚೂರನ್ನು ಬೆನ್ನಟ್ಟಿ ಕಿರುಚುತ್ತಾ ಹಾರಿಹೋದವು.
ಕಾಗೆ ಹೇಳಿತು “ನಾನು ಮಾಂಸವನ್ನು ಕಳೆದುಕೊಂಡೆ. ಆದರೆ ಈ ಪ್ರಶಾಂತ ಆಕಾಶವನ್ನು ಪಡೆದೆ. ”
ಝೆನ್ ಭಿಕ್ಷುವೊಬ್ಬ ಹೇಳಿದನು, “ನನ್ನ ಮನೆಯು ಉರಿದು ಹೋದ ಬಳಿಕ ನಾನು ರಾತ್ರಿ ಚಂದ್ರನನ್ನು ನಿರಾಂತಕವಾಗಿ ನೋಡಿದೆ”
No comments:
Post a Comment