Sunday, 9 September 2018

ಹರಿಹರಪುರವಾಸಿನಿ ಉಘೇ ಉಘೇ

ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ವರಸುತನ ಹೆತ್ತ ಮಹಿಮಾಮಯಿ, ಹರಸೆಮ್ಮ ತಾಯೆ
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ಪಿತಸರ್ವೇಶ್ವರನ ಮಾತನು ಶಿರಸಾವಹಿಸಿ ಪಾಲಿಪೆ ತಾಯೆ
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ಸ್ಪಿರಿತುಸಾಂಕ್ತುವಿನಿಂದ ಫಲಿತಳಾದ ಕನ್ಯಾಮಾತೆಯೆ
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ದೇವಸುತನ ಹೆತ್ತುಹೊತ್ತು ಸಲುಹಿದ ಮಹಾತಾಯೆ
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ಜಗದಪಾಪ ನೀಗಬಂದ ದೇವಸುತಗೆ ತಾಯಾದತಾಯೆ
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ಹರಿವ ಹೊಳೆಯಲಿ ಮುಳುಗುವಾತನ ರಕ್ಷಿಸಿದ ತಾಯೆ
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ವಿಪ್ರನ ಉಳಿಸಿ ಬದುಕನು ಕೊಟ್ಟ ಮಹಿಮಾ ತಾಯೆ        
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ವಿಪ್ರನ ಮನೆಮನದಲಿ ಉಲ್ಲಾಸವ ತುಂಬಿದ ತಾಯೆ
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ಅರಸುತ ಬಂದವರ ಹರಸುತ ಸತ್ಯಮ್ಮಳಾದ ತಾಯೆ
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ಹರಕೆ ಹೊತ್ತವರಿಗೆ ಆರೋಗ್ಯವನು ಕರುಣಿಪ ತಾಯೆ
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ಹರಿಹರಪುರವಾಸಿನಿ, ಆರೋಗ್ಯಮಾತೆಯಾದ ತಾಯೆ 
ಹರಿಹರಪುರವಾಸಿನಿ, ತುಂಗಭದ್ರೆಯ ದಡದಿ ವಿಹರಿಪ ತಾಯೆ
ಕರುಣಿಸು ಸಕಲರಿಗೂ ಆಯುರಾರೋಗ್ಯವ ತಾಯೆ

                                                                                                   ¨ ಫ್ರಾನ್ಸಿಸ್. ಎಂ.ಎನ್.        

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...