Saturday, 9 May 2020

ಏಕೆಂದರೆ ಒಬ್ಬನಿಗಿಂತ ಇಬ್ಬರು ಲೇಸು..

ಒಂದೇ ದಿನದಲ್ಲಿ ನಮ್ಮೆಲ್ಲಾ ಗುರಿಗಳನ್ನು ಸಾಧಿಸಬಿಡಬಹುದೇ?

ಒಂದೇ ದಿನದಲ್ಲಿ ನಮ್ಮೆಲ್ಲಾ ಗುರಿಗಳನ್ನು ಸಾಧಿಸಿಬಿಡಬಹುದೇ? ನಮಗೆ ಗೊತ್ತು; ಕೇವಲ 24 ಗಂಟೆಗಳಲ್ಲಿ ನಮ್ಮೆಲ್ಲಾ ಕನಸುಗಳು ನನಸಾಗುವುದಿಲ್ಲ ಎಂದು. ಕೆಲವೇ ಸೆಕೆಂಡ್‍ಗಳಲ್ಲಿ ಒಂದು ಬಹೃತ್ ಮನೆಯನ್ನು ಕಟ್ಟಲು ನಮಗೆ ಸಾಧ್ಯವೇ? ಮನೆಯನ್ನು ಕಟ್ಟಲು ಅತ್ಯಾವಶ್ಯಕವಾಗಿ ಬೇಕಾಗಿರುವ ದುಡ್ಡನ್ನು ಕೆಲವೇ ನಿಮಿಷಗಳಲ್ಲಿ ಕೂಡಿಕರಿಸಲು ಸಾಧ್ಯವೇ? ಮೂರು ವರ್ಷ ಅವಧಿಯ ಕೋರ್ಸನ್ನು ಪೂರ್ಣಗೊಳಿಸಲು ಮೂರಕ್ಕಿಂತ ಹೆಚ್ಚು ಕಾಲವಾಕಾಶವು ನಮಗೆ ಬೇಕು. ವ್ಯವಹಾರ, ಉದ್ಯಮ, ಉದ್ಯಾವನ ಬಹು ಮುಖ್ಯವಾಗಿ ಆತ್ಮೀಯ ಸಂಬಂಧ, ಗೆಳೆತನ ಹೀಗೆ ಇವುಗಳೆಲ್ಲಾವನ್ನು ಕ್ಷಣಮಾತ್ರದಲ್ಲಿ ಗಳಿಸಿಬಿಡಲು ಸಾಧ್ಯವಿಲ್ಲ. ತ್ವರಿತ ಫಲಿತಾಂಶಗಳನ್ನು ಬಯಸುವ ಜಗತ್ತಿಗೆ ನಮ್ಮ ಪ್ರಯತ್ನಗಳು ಫಲಪ್ರದವಾಗಲು ಹೆಚ್ಚು ಸಮಯ ತೆಗೆದುಕೊಂಡಾಗ ನಿರಾಶಾದಾಯಕವಾಗುತ್ತದೆ. ಆದರೆ ನಾವು ಹೆಜ್ಜೆ ಹೆಜ್ಜೆಗೂ ನಿಧಾನವಾಗಿ ಪ್ರಗತಿಯನ್ನು ಸಾಧಿಸಬಹುದು. ಹೌದು, ಪ್ರತಿದಿನ ಸಂಕಲ್ಪತೊಟ್ಟು ಮೆಲ್ಲ ಮೆಲ್ಲನೇ ನಮ್ಮ ಪ್ರಯತ್ನವನ್ನು ಮುಂದುವರಿಸಿದರೆ, ಖಂಡಿತವಾಗಿಯೂ ನಾವು ನಮ್ಮ ಗುರಿಯ ಮನೆಯನ್ನು ತಲುಪೇ ತಲಪುತ್ತೇವೆ. ಅದರಲ್ಲಿ ಅನುಮಾನವೇ ಬೇಡ.

**********

ಪ್ರಯಾಣಿಸಲು ನಮಗೆ ಉತ್ತಮ ಆತ್ಮೀಯ ಗೆಳೆಯರು ಬೇಕೇಬೇಕು

ಬದುಕೆಂಬುವುದು ಒಂದು ಪ್ರಯಣ. ಆದರೆ ನಾವ್ಯಾರು ಏಕಾಂಗಿಯಾಗಿ ಈ ಪ್ರಯಾಣವನ್ನು ಕೈಗೊಳ್ಳಲು ಸಾಧ್ಯವಿಲ್ಲ. ಪ್ರಯಾಣಿಸಲು ನಮಗೆ ಉತ್ತಮ ಆತ್ಮೀಯ ಗೆಳೆಯರು ಬೇಕೇಬೇಕು, ಹೌದು, ಪ್ರಯಾಣ ನಮಗೆ ಕಠಿಣವಾದಾಗ, ನಮ್ಮನ್ನು ಪೆÇ್ರೀತ್ಸಾಹಿಸಿ ಮುನ್ನಡೆಸಲು ನಮಗೆ ನಮ್ಮ ಆತ್ಮೀಯರು ಬೇಕು. ಈ ಮೊದಲು ಪ್ರಯಾಣಿಸಿ ಅನುಭವ ಪಡೆದವರು ನಮ್ಮ ಮಾರ್ಗದರ್ಶನಕ್ಕಾಗಿ ನಮಗೆ ಬೇಕು. ಅವರು ನಮ್ಮ ಪ್ರಯಾಣದ ದಾರಿಗಳಲ್ಲಿ ಮೈಲಿಗಲ್ಲುಗಳಂತೆ. ಪ್ರಯಾಣ ವೇಳೆ ನಮ್ಮನ್ನು ನಕ್ಕು ನಗಿಸಲು ಮತ್ತು ನಮ್ಮ ನಗುವನ್ನು ಹಂಚಿಕೊಳ್ಳಲು ಕೆಲವರ ಅವಶ್ಯಕತೆ ನಮಗಿದೆ. ಇನ್ನೂ ಕೆಲವರು ಮೌನದಿಂದ ಎಲ್ಲವನ್ನು ಗ್ರಹಿಸಿಕೊಳ್ಳುತ್ತಾ ನಮ್ಮ ಜೊತೆ ಜೊತೆಗೆ ಹೆಜ್ಜೆ ಹಾಕಿ ನಡೆಯಲು ಬೇಕು. ಹೌದು, ನಮ್ಮ ಪ್ರಯಾಣದ ಜೊತೆಗಾರರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಬೇಕಾಗಿದೆ. ಆರಿಸಿಕೊಂಡು ನಮ್ಮ ಪ್ರಯಾಣದಲ್ಲಿ ಅವರು ವಹಿಸುವ ಪ್ರಾಮುಖ್ಯತೆಯನ್ನು ತಿಳಿದು ಅದನ್ನು ಅವರಿಗೆ ತಿಳಿಸಿ ಜೊತೆ ಜೊತೆಯಾಗಿ ನಡೆಯಬೇಕಾಗಿದೆ. ಅಷ್ಟೂ ಮಾತ್ರವಲ್ಲ, ಅವರ ಸುಖ ಪ್ರಯಾಣಕ್ಕೆ ನಾವು ಕೂಡ ಅವರ ಜೊತೆ ಸಹಕರಿಸಿ ನಡೆಯಬೇಕಾಗಿದೆ. ಹೌದು, ಪ್ರಯಾಣಿಸುವ ನಾವು ಏಕಾಂಗಿಗಳಲ್ಲ. ಏಕಾಂಗಿಯಾಗಿ ಪ್ರಯಾಣಿಸಲು ಕಷ್ಟಸಾಧ್ಯ. ಒಳ್ಳೆಯ ಜೊತೆಗಾರರ ಜತೆ ನಾವು ಹೆಜ್ಜೆ ಕಾಕಿದರೆ ಖಂಡಿತವಾಗಿಯೂ ನಮ್ಮ ಪ್ರಯಾಣ ಸುಲಭವಾಗಿಯೂ ಮತ್ತು ಸುರಕ್ಷಿತವಾಗಿರುತ್ತದೆ.

**********

ಏಕೆಂದರೆ ಒಬ್ಬನಿಗಿಂತ ಇಬ್ಬರು ಲೇಸು...

ಉಪದೇಶಕ ಹೇಳುವಂತೆ “ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಹೆಚ್ಚಿನ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುತ್ತಾನೆ; ಬಿದ್ದಾಗ ಎತ್ತುವವನು ಇಲ್ಲದಿದ್ದರೆ ಅವನ ಗತಿ ದುರ್ಗತಿಯೇ ಸರಿ”. ಬಿದ್ದವನನ್ನು ಮೇಲೆತ್ತಲು ಯಾರು ಇಲ್ಲದ ದುಸ್ಥಿತಿಯನ್ನು ಕಲ್ಪಿಸಿಕೊಳ್ಳಿ! ಅದು ಭಯಂಕರ. ಹೌದು ಈ ಅಸ್ತವ್ಯಸ್ತವಾಗಿರುವ ದುರಿತ ಕಾಲದಲ್ಲಿ ನಾವು ಸಮಸ್ಯೆಗಳಿಗೆ ಸಿಲುಕಿದಾಗ, ಸಮಸ್ಯೆಗಳಿಂದ ಜಾಗರೂಕತೆಯಿಂದ ನಮ್ಮನ್ನು ಬಿಡಿಸಿ ಮುನ್ನಡೆಸಲು ನಮಗೆ ಇನ್ನೊಬ್ಬರ ಅಗತ್ಯ ತುಂಬಾ ಇದೆ. ನಾವು ಆತಂಕಕ್ಕೊಳಗಾದಾಗ ನಮಗೆ ಧೈರ್ಯ ಹೇಳಲು ನಮ್ಮ ಆತ್ಮೀಯರು ನಮಗೆ ಬೇಕೇ ಬೇಕು, ನಮ್ಮ ಸುಖದುಃಖಗಳನ್ನು, ನಮ್ಮ ಆಸೆ ಆಕಾಂಕ್ಷೆಗಳನ್ನು ಹಂಚಿಗೊಳ್ಳಲು ಮತ್ತೊಬ್ಬರ ಅಗತ್ಯವಿದೆ. ನಿಮ್ಮ ಜೊತೆ ಮತ್ತೊಬ್ಬರು ಇದ್ದಾರೆ ಎಂಬುವುದು ನನ್ನ ನಂಬಿಕೆ. ಏಕೆಂದರೆ ಒಬ್ಬನಿಗಿಂತ ಇಬ್ಬರು ಲೇಸಲ್ಲವೇ!

- ಅನು


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...