Saturday, 9 May 2020

ಏಕಾಂತ


 - ಡೇವಿಡ್ ಕುಮಾರ್. ಎ

 

ಏಕಾಂತ ಮೇಲೆರಗಿ

ಮಾತುಗಳು ಮರೆಯಾಗಿ,

ನಮ್ಮೊಳಗೆ ನಾವಿಳಿಯೇ

ಅಚ್ಚಳಿಯದ ಮೌನ

 

ಗುಡಿದೇವರ ತೊರೆದು

ಎದೆದೇವರ ಕೆತ್ತಿ,

ನೆತ್ತಿ ಮೇಲಿನ ತಾರೆ

ನೆತ್ತರೊಳಗೆ ಮಿಂಚಿದಂತೆ !

 

ತಂಗಾಳಿಯ ಅಲೆಯು

ಮುತ್ತ ಹೊತ್ತು ತೇಲಿ

ಮುಖಗವಸುಗಳ ಸೀಳಿ

ಕೆನ್ನೆ ಗಲ್ಲಗಳ ಅಪ್ಪಿ !

 

ಗರಿಕೆ ಚಿಗುರು ದಾರಿ ಹಸಿರು

ನವ ಲೋಕದ ಕುರುಹು,

ದುಂಬಿ ನಾದ, ಚಿಟ್ಟೆ ಚಿತ್ತಾರ

ಕಲ್ಪನೆಗಳ ತವರು !

 

**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...