ಮನದಾಳದಿಂಡ ಯಾರಿಗೂ ಕೇಳಿಸದ
ಹಾಡು ಹಾಡೇ ಹಾಡುವುದು ನಿನಗೆ
ಇಂದೆನಲ್ಲ ಎಂದೆಂದೂ ಎಲ್ಲೆಲೂ ಹಾಡುತ್ತಲೇ
ಇರುವುದು ನಿನಗೆ ಗೆಳಯಾ
ಬರಿ ಜೀವವಿದ್ದರೆ ಜಗದಲ್ಲಿ
ಜಡತ್ವ
ಜೀವಕ್ಕೆ ಪ್ರೀತಿಯ ಸಂಗೀತ ನೀ
ತುಂಬಿರಬೇಕು
ಭೃಂಗವಾಗಿ ನನ್ನ ಅರಳಿದ ಹೃದಯ
ಹೂವಿನ
ಸವಿಜೇನ ಹೀರಲು ನೀ ಇರಬೇಕು
ಈ ಜೀವ ಹೂವಾಗಿ ಅರಳುವ
ಹಿಂದಿನ ಪ್ರೇರಣೆ ಬೆಳಕು
ನೀನು
ದೀಪವಾಗಿ ಬೆಳಕು
ಚೆಲ್ಲುತ್ತಿರಲು
ಅದರ ಎಣ್ಣೆಯೂ ನೀನು
ಹೃದಯ ಗೂಡಲಿ ಹಕ್ಕಿಯು ನೀ
ನಲ್ಲ
ಹಕ್ಕಿಯ ಹಾಡು ನೀನು
ಎಂದೆಂದೂ ಎಲ್ಲೆಲ್ಲೂ ಹಾಡೇ
ಹಾಡುವುದು
ನಿನಗೆ ಈ ಹೃದಯದ ಹಕ್ಕಿ
ದೀಪವಾಗಿಸಿರುವ ನಿನ್ನ
ಅವನದಾಗಿ
ಅವನಿಗಾಗಿ ಕತ್ತಲ ಹೃದಯದ
ಬೆಳಕ್ಕಾಗಿ
ಅಡ್ಡಿಯಾಗುವ ಗಾಳಿಯೂ ಅವನದೆ
ಉರಿಸುವ ಪ್ರೇರಣೆಯೂ ಅವನೇ
ಬೆಳಗುತ್ತಿರು ನೀನು ಎಂದೆಂದೂ
ಎಲ್ಲೆಲ್ಲೂ
ಅಮರ ಜ್ಯೋತಿಯಂತೆ
- ಜೀವಸೆಲೆ
No comments:
Post a Comment