Saturday, 9 May 2020

ಗಝಲ್ - ಬರೆಯದೇ ಇದ್ದರೆ !



ಬರೆಯದೇ ಇದ್ದರೆ ಹೇಗೆ

ನೆನಪುಗಳು ಸತ್ತರೆ ಹೇಗೆ

 

ಕನವರಿಸುತಿರುವ ಕನಸುಗಳಿಗೆ

ಕಣ್ಣುಗಳು ಇರದಿದ್ದರೆ ಹೇಗೆ

 

ನಾನು ನೀನು ಹೇಗೆ ಬದುಕಿದ್ದು

ಗೊತ್ತಾಗುವುದಾದರೆ ಹೇಗೆ

 

ಬರೆದ ಮಾತು ನಿಲ್ಲುತ್ತದೆ

ಪದಗಳು ಹಾರಿದರೆ ಹೇಗೆ

 

ಬರವಣಿಗೆಗೆ ಬೆಂಕಿ ಬಿದ್ದರೆ

ಉಮರ್ ಬದುಕುವುದಾದರೂ ಹೇಗೆ

 

ಉಮರ್ ದೇವರಮನಿ


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...