- ಎಲ್.ಚಿನ್ನಪ್ಪ, ಬೆಂಗಳೂರು
19ನೇ ಶತಮಾನದಲ್ಲಿ ಭಾರತ ಕಂಡ ಅಪ್ರತಿಮ ದೇಶ ಪ್ರೇಮಿ ಹಾಗು ನೊಬೇಲ್
ಪ್ರಶಸ್ತಿ ವಿಜೇತ ಪ್ರಸಿದ್ಧ ಕವಿ ರವೀಂದ್ರÀನಾಥ್ ಟಾಗೋರ್ ಅವರು. ಟಾಗೋರ್
ಅವರು ಹುಟ್ಟಿದ್ದು 1861ನೇ ಮೇ 7 ರಂದು ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ. ಇದೇ ಮೇ 7 ರಂದು ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಅವರ ತಂದೆ-ತಾಯಿಗೆ
ಜನಿಸಿದ ಹದಿನಾಲ್ಕು ಮಕ್ಕಳಲ್ಲಿ ಇವರೇ ಕೊನೆಯವರು. ಅವರು ಜನಿಸಿದ್ದು ಸಕಲ ಸೌಲಭ್ಯಗಳನ್ನು
ಹೊಂದಿದ್ದ ಶ್ರೀಮಂತ ಕುಟುಂಬದಲ್ಲಿ. ಆದರೆ ಉನ್ನತ ಶಿಕ್ಷಣವನ್ನು ಪೂರೈಸುವ ಭಾಗ್ಯ ಅವರಿಗೆ
ಕೂಡಿಬರಲಿಲ್ಲ. ಆದರೆ ಅವರು ಮಾಡಿದ ಸಾಧನೆ ಮಾತ್ರ ಅಪಾರ. ಮುಂದೆ ಅದು ವಿಶ್ವದಲ್ಲೆಲ್ಲ ಮೊಳಗಿತು.
ಆಗಿನ ಸಮಯದಲ್ಲ್ಲಿ ಟಾಗೋರ್‍ರವರ ಸಂಬಂಧಿಕರು
ಇಂಗ್ಲೆಂಡ್‍ನಲ್ಲಿ ನೆಲೆಸಿದ್ದರು. ಆದ್ದರಿಂದ ಅವರು ಅಲ್ಲಿ ಕಾನೂನು ಶಿಕ್ಷಣವನ್ನು ಪಡೆಯಲು
ತೆರಳಿದರು. ಆದರೆ ಕಾನೂನು ಶಿಕ್ಷಣ ಅವರಿಗೆ ಒಲಿಯಲಿಲ್ಲ. ಶಿಕ್ಷಣವನ್ನು ಅರ್ಧದಲ್ಲೇ
ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಮರಳಿದರು. ಅವರು ಕೆಲವು ವರ್ಷಗಳ ಕಾಲ ಕೊಲ್ಕತ್ತದಲ್ಲಿ ತಮ್ಮ
ಪೂರ್ವಿಕರ ಆಸ್ತಿಗಳ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡರು. ಈ ಅವಧಿಯಲ್ಲಿ ಅವರು
ಅನೇಕ ಸಾಹಿತ್ಯಕೃತಿಗಳನ್ನು, ಲೇಖನಗಳನ್ನು, ಕಥೆಗಳನ್ನು ಮತ್ತು ದೇಶಭಕ್ತಿ ಗೀತೆಗಳನ್ನು ರಚಿಸಿದರು. 1883ರ ಡಿಸೆಂಬರ್ 9 ರಂದು ಮೃಣಾಲಿನಿ
ದೇವಿಯವರನ್ನು ವಿವಾಹವಾದರು. ಅವರಿಗೆ ಜನಸಿದ ಐದು ಮಕ್ಕಳಲ್ಲಿ ಇಬ್ಬರು ಫ್ರೌಢರಾಗುವ ಮುನ್ನವೇ
ತೀರಿಕೊಂಡರು.
ಬೆಂಗಾಲಿ ಭಾಷೆಯಲ್ಲಿ
ರಚನೆಗೊಂಡ ಅವರ ಕೆಲವು ಸಾಹಿತ್ಯವು ಪಾಶ್ಚಿಮಾತ್ಯ ಭಾಷೆಗಳಿಗೆ ಅನುವಾದಗೊಂಡಿತು. ತದನಂತರ ಅವರ
ಪ್ರತಿಭೆ ಬೆಳಕಿಗೆ ಬಂದು ಅವರ ಕೀರ್ತಿ ಪತಾಕೆ ಎತ್ತರಕ್ಕೆ ಮೊಳಗಿತು. ತಮ್ಮ ಸಾಹಿತ್ಯದ ಜೊತೆಗೆ
ಕೊಲ್ಕತ್ತಾದ ಶಾಂತಿನಿಕೇತನದಲ್ಲಿ ಶಾಲೆಯೊಂದನ್ನು ಸಹ ಪ್ರಾರಂಭಿಸುತ್ತಾರೆ. ತಾವು ಸ್ಥಾಪಿಸಿದ
ಶಾಲೆಯಲ್ಲಿ ನೂತನ ಶಿಕ್ಷಣದ ಪ್ರಯೋಗ ಮಾಡಿ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಮುಂದೆ ಅದು
ವಿಶ್ವಭಾರತಿ ವಿಶ್ವವಿದ್ಯಾನಿಲಯವಾಗಿ ಪ್ರಸಿದ್ಧಗೊಂಡಿತು. ಅವರ ಕೀರ್ತಿ ಎಲ್ಲೆಲ್ಲೂ
ಹರಡಿದ್ದರಿಂದ ಬ್ರಿಟಿಷ್ ಸರಕಾರವು ಅವರ ಮೇರು ಸಾಧನೆಯನ್ನು ಗುರುತಿಸಿ 1915ರಲ್ಲಿ ಅವರಿಗೊಂದು ಪ್ರಶಸ್ತಿಯನ್ನೂ ನೀಡಿ ಗೌರವಿಸುತ್ತದೆ. ಆದರೆ
ಬ್ರಿಟಿಷರು ಭಾರತೀಯರ ವಿರುದ್ಧ ತಾಳಿದ್ದ ನಿಲುವುಗಳಿಗೆ ಬೇಸತ್ತ ರವೀಂದ್ರನಾಥ್ ಟಾಗೋರ್, ತಮಗೆ ನೀಡಿದ ಪ್ರಶಸ್ತಿಯನ್ನು ಹಿಂತಿರುಗಿಸುತ್ತಾರೆ. ಬ್ರಿಟಿಷರ ಆಡಳಿತವನ್ನು ಖಂಡಿಸಿ ಸ್ವಾತಂತ್ರ್ಯ
ಚಳುವಳಿಯನ್ನು ಬೆಂಬಲಿಸುತ್ತಾರೆ. 1910ರಲ್ಲಿ ಅವರು ರಚಿಸಿದ
ಗೀತಾಂಜಲಿ (Soಟಿg oಜಿ ಔಜಿಜಿeಡಿiಟಿg) ಗೀತೆಗೆ 1913ರಲ್ಲಿ ಅವರಿಗೆ ವಿಶ್ವದ ಅತ್ಯುನ್ನತ ನೊಬೇಲ್ ಪ್ರಶಸ್ತಿ
ದೊರೆಯುತ್ತದೆ. ಒಬ್ಬ ಭಾರತೀಯ ವ್ಯಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪಡೆದ
ಪ್ರಪ್ರಥಮ ನೊಬೇಲ್ ಪ್ರಶಸ್ತಿ ಅದು. ಅವರು ಬರೆದ ಇತರೆ ಕವನಗಳು ವಿಶ್ವದ ಮನ್ನೆಣೆಗಳಿಸುವುದರ
ಮೂಲಕ ಅನೇಕ ಪ್ರಶಸ್ತಿಗಳನ್ನು ಅವರಿಗೆ ತಂದುಕೊಡುತ್ತವೆ. ಅವರ ‘ಜನಗಣಮನ’ ಗೀತೆಯು ಇಂದು
ರಾಷ್ಟ್ರಗೀತೆಯಾಗಿ ಬೆಳಗಿದೆ. ಅವರ ಮತ್ತೊಂದು ಗೀತೆ,
‘ಅಮರ್ ಸೋನಾರ್’
ಬಾಂಗ್ಲಾ ದೇಶದ ರಾಷ್ಟ್ರಗೀತೆಯಾಗಿದೆ. ಇಂತಹ ಮಹಾನ್ ಕವಿಯನ್ನು, ದೇಶ ಪ್ರೇಮಿಯನ್ನು ಮೇ 7 ರಂದು ರಾಷ್ಟ್ರ
ಸ್ಮರಿಸುವುದು ಸೂಕ್ತವಾಗಿಯೇ ಇದೆ. ಒಬ್ಬ ಶ್ರೇಷ್ಠ ಕವಿಯಾಗಿ, ಕಾದಂಬರಿಗಾರರಾಗಿ, ನಾಟಕಗಾರರಾಗಿ, ಕಥೆಗಾರರಾಗಿ, ಪ್ರಬಂಧಕಾರರಾಗಿ, ಕಲೆಗಾರರಾಗಿ, ಸಂಗೀತಗಾರರಾಗಿ ಮಾಡಿದ ಸಾಧನೆ ಶಿಖರದಷ್ಟು. ಅವು ಜನರ ಮನದಲ್ಲಿ
ಚಿರಸ್ಮರಣೀಯವಾಗಿ ಉಳಿದಿವೆ. ಅವರು ತೀರಿಕೊಂಡಿದ್ದು ಆಗಸ್ಟ್ 7, 1941ರಂದು.
ಈ ಕೆಳಗಿನ ಅವರ ‘ಉo ಟಿoಣ ಣo ಣhe ಖಿemಠಿಟe’ ಕವನವು ಮಾನವ ಜನ್ಮವು
ಸಾರ್ಥಕಥೆ ಹೊಂದಬೇಕಾದರೆ, ಅವನಿಲ್ಲಿರಬೇಕಾದ ಮಾನವೀಯ
ಗುಣಗಳಿಗೆ ಅರವಿನ ಕನ್ನಡಿ ಹಿಡಿಯುತ್ತದೆ.
ದೇವರ ಪಾದಗಳಿಗೆ ಹೂಗಳನ್ನು
ಅರ್ಪಿಸಲು,
ಮೊದಲು ಪ್ರೀತಿ ಸೌಜನ್ಯವೆಂಬ
ಸೌರಭದಿಂದ
ನಿನ್ನ ಮನೆಯನ್ನು ತುಂಬಿಸು |
ದೇವರ ಪೀಠದ ಬಳಿ ಮೋಂಬತ್ತಿ
ಹಚ್ಚಲು,
ಮೊದಲು ನಿನ್ನ ಹೃದಯದಲ್ಲಿರುವ
ಪಾಪದ
ಅಂಧತ್ವವನ್ನು, ಅಹಂನ್ನು ತೆಗೆದುಬಿಡು |
ಗುಡಿಗೆ ಹೋಗಬೇಡ
ದೇವರ ಬಳಿ ತಲೆಬಾಗಿ
ಪ್ರಾರ್ಥಿಸಲು,
ಮೊದಲು ನಿನ್ನ
ಸಹವರ್ತಿಗಳೊಡನೆ
ವಿನಯದಿಂದ ಬಾಗುವುದನ್ನು ಕಲಿ,
ಯಾರ ಮುಂದೆ ತಪ್ಪೆಸಗಿರುವಿಯೋ
ಅವರಲ್ಲಿ ಕ್ಷಮೆ ಯಾಚಿಸು |
ದೇವರ ಬಳಿ ಮೊಣಕಾಲೂರಿ
ಪ್ರಾರ್ಥಿಸಲು,
ಮೊದಲು ಕೆಳಗೆ ಬಿದ್ದವರನ್ನು
ಮೇಲಕ್ಕೆತ್ತಲು ಬಾಗು
ಅವರನ್ನು ಬಲಪಡಿಸು, ತುಳಿಯಬೇಡ |
ಪಾಪಗಳಿಗೆ ಪ್ರಾಯಶ್ಚಿತ್ತ
ಕೋರಲು
ಮೊದಲು ನಿನ್ನನ್ನು
ನೋಯಿಸಿದವರನ್ನು,
ಪೀಡಿಸಿದವರನ್ನು ಪೂರ್ಣ
ಹೃದಯದಿಂದ ಕ್ಷಮಿಸು !
**********
No comments:
Post a Comment