- ಆಜು
ಯಾವಾಗಲೂ ಗೋಪಿ ಎಚ್ಚರಾಗುವ
ಮೊದಲೆ ಬರುತ್ತಿದ ಬೇಸಿಗೆಯ ಸೂರ್ಯ ಇಂದೇಕೊ ತಡವಾಗಿ ಬಂದಂತಿದೆ. ಸೂರ್ಯ ತಡವಾಗಿ ಬಂದನೋ? ಗೋಪಿ ಬೇಗ ಎದ್ದನೋ ಸಮಯಕ್ಕೂ ಸಂಶಯ. ಫ್ಯಾಕ್ಟರಿಯ ಸೈರನ್ ಕೂಗಿದ್ದು
ಕೇಳಿಯೂ ಸಹ ಅಪ್ಪ ನಿಶ್ಚಿಂತೆಯಿಂದ ಸ್ನಾನದ ಮನೆ ಹೊಕ್ಕಿದ್ದರು "ಇಂತು ಷಾರ ಓಗಯಿ ಇಂತು
ಹಾರಿ ಕೀ" ಸ್ನಾನದ ಮನೆಯಿಂದ
ಮೆಲುದನಿಯಲಿ ಕೇಳಿಸುತ್ತಿತು. ಗೋಪಿಯ ಮುಖದಲ್ಲಿ ಇದ್ದ ಆ ಸಂತೋಷ ಅದೇಕೋ ಅವನ ಅಮ್ಮನ ಮುಖದಿಂದ
ಮಾಯವಾಗಿತ್ತು "ಈ ಹಾಳು ಸೂಳೆ ಕಟ್ಕೊಂಡು ಬದುಕು ನಡಿಸ್ಬೇಕು ನಾನು" ಅಂತ ಅಪ್ಪ
ರಾತ್ರಿ ಬೈದ ಮಾತಿಗೆ ಬೇಜಾರಾಗಿದ್ಳ? ಇಲ್ಲ ಅಪ್ಪನ ಮಾತೆ ಹಾಗೆ
ಅಮ್ಮನಿಗೆ ಅದ್ಯಾವುದು ಹೊಸತಲ್ಲ ಇಷ್ಟಕೂ ಅಮ್ಮನನ್ನು ರಾತ್ರಿ ಅಪ್ಪ ಬೈದಿದೇಕೆ? ನೋಡಲು ಆಕೆ ಏನೋ ನಿರ್ಭಾವುಕಳಂತೆ ಕಂಡರು. ಮುಂಬರುವ ಅದ್ಯಾವುದೋ
ನೋವಿನ ಚಿಂತೆಯಲ್ಲಿ ಇದ್ದಂತಿತು. ಗೋಪಿಗೆ ಇದ್ಯಾವುದು ಗಮನಕ್ಕೆ ಬರುತ್ತಿಲ್ಲ. ಇಷ್ಟೇ ಯಾಕೆ
ನೆನ್ನೆಯ ಆಟದ ಬಾಕಿ ಗೋಲಿ, ಕೆರೆಯ ಮೀನು, ಶ್ಯಾಮಣ್ಣನ ತೋಟದಿಂದ ಕದ್ದು ತಂದಿದ್ದ ಮಾವಿನಕಾಯಿ. ಹಲಾಲ್ ಸಾಬಿಯ ಅಂಗಡಿಯಲ್ಲಿನ ತಿಳಿಗುಲಾಜಿ ಬಣ್ಣದ
ಭತ್ತಾಸು ಉಹೂ! ಯಾವುದು ಗಮನಕ್ಕೆ ಬಾರದಂತ ಒಂದು ಸಂತಸ ತಲೆ ತುಂಬಿತ್ತು. ಕಿಟಕಿಯ ಆಜೆ ಮೋರಿಯ
ನೀರು ಹರಿಯುತ್ತಿದುದ್ದನೇ ನೋಡುತ. ಪದೆ ಪದೆ ಸ್ನಾನದ ಮನೆಯ ಬಾಗಿಲ ಕಡೆ ತಿರುಗಿ. ಅಪ್ಪನ ತೇವದ
ಕಾಲುಗಳು ಕಾದು ಕುಂತಿದ್ದ ಶಬರಿಯಂತಹ ಮ್ಯಾಟಿನ ಮೇಲೆ ಯಾವಾಗ ಐಕ್ಯವಾಗುವುದೋ ಎಂದು
ಕಾಯುತ್ತಿದನು. ಮನೆಯ ಯಾವ ಮೂಲೆಯನ್ನು ಬಿಡದೆ ಸುತ್ತಿ ಸುತ್ತಿ ಮತ್ತೆ ನಿಂತ ಜಾಗಕ್ಕೆ ಬಂದು
ನಿಲ್ಲುತ್ತಿದನು. ಹೇಗೊ ಗೋಪಿಯ ತಾಳ್ಮೆಯ ರೇಖೆಯ ಒಳಗೆ ಅಪ್ಪನ ಸ್ನಾನ ಮುಕ್ತಾಯವಾಯಿತು.
ವಾಡಿಕೆಯಂತೆ ಅಮ್ಮನನ್ನು
ಟವಲ್ ಕೇಳಿದ ಅಪ್ಪನಿಗೆ ಸವರಲು ಸಿಕ್ಕಿದು ಗೋಪಿಯ ಕೋಮಲ ಪುಟ್ಟ ಕೈಗಳು. ಸಿದ್ದರಾದ ಅಪ್ಪನ ಬೆನ್ನು
ಬಿದ್ದ ಗೋಪಿ "ಅಪ್ಪ ನಾವು ಯಾವಾಗ ಹೋಗೋದು" ಎಂದು ಪೀಡಿಸ ತೊಡಗಿದ. ಅವನ ಯಾವ ಮಾತು
ಅಪ್ಪನ ಗಾಂಭೀರ್ಯದಲ್ಲಿ ಬದಲಾವಣೆ ತರಲಿಲ್ಲ, ಅಲ್ಲೇ ಅಡುಗೆ ಮನೆಯಲ್ಲಿನ
ಹೆತ್ತ ಕರಳು ನರಳುವ ಸದ್ದು ಯಾರಿಗೂ ಕೇಳಿಸಲಿಲ್ಲ. ಗೋಪಿಯ ಇಷ್ಟದ ಚೌ ಚೌ ಭಾತ್ ತಟ್ಟೆಯ ಮೇಲಿನ
ಎರಡು ಪುಟ್ಟ ಬೆಟ್ಟಗಳಂತೆ ಕಂಡರು. ಯಾವುದನ್ನು ಲೆಕ್ಕಿಸದ ಗೋಪಿಯ ಮನಸ್ಸಲ್ಲಿ
ತ್ಯೋಳಾಡುತ್ತಿದದ್ದು ಇನ್ನೂ ಅರ್ಧ ಗಂಟೆಯಲ್ಲಿ ಹತ್ತಲಿರುವ ಕೆಂಪು ಬಸ್ಸು ನಾಲ್ಕು ತಾಸಿನ
ಪ್ರಯಾಣ, ಅದರಾಚಿಗಿನ ಅಪ್ಪ ಹೇಳಿದ
ರಂಗು ರಂಗಿನ ಬೆಂಗಳೂರು.
"ಬೆಂಗಳೂರು ದೊಡ್ಡ ಜಾತ್ರೆಯಂತಹ ಊರು, ಹಗಲು-ರಾತ್ರಿ ಬೇರಾಗದಂತಹ ಜಾಗ" ಎಂದು ಲಲಿತಕ್ಕ ಹೋದ ಹಬ್ಬಕ್ಕೆ
ತವರಿಗೆ ಬಂದಾಗ ಹೇಳಿದು ನೆನಪಾಯಿತು. "ತಡವಾಯಿತು ನಡಿ. ಈ ಬಸ್ಸು ಹೋದರೆ ಇನ್ನೂ ಎರಡು
ತಾಸು ಕಾಯಬೇಕು" ಎಂಬ ಅಪ್ಪನ ಗದರು ತನ್ನ ಕಲ್ಪನಲೋಕಕ್ಕೆ ಬಿದ್ದ ಬಾಂಬಿನಂತಾಗಿ
ಬೆಚ್ಚಿಬಿದ್ದ ಗೋಪಿ ಅದಾಗಲೇ ಅಮ್ಮನ ತೆಕ್ಕೆಯಲ್ಲಿದ್ದ,
ಅವನ ಮೂತಿ ತೊಳೆದು, ಪೌಡರ್ ಹಾಕಿ, ತಲೆ ಬಾಚಿದಳು ಅಮ್ಮ
ಬೆಳಗಿನಿಂದ ಇದು ಆರನೇ ಸತಿ. ಅಮ್ಮ ಹೊರಡಲು
ಸಿದ್ದಳಿರಲಿಲ್ಲ ಅವಳು ಬೆಂಗಳೂರಿಗೆ ಬರಲ್ವ? ಇಲ್ಲ. ಅವಳಿಗೆ ಜ್ವರವ? ಗೋಪಿ ಬಾ ಅಂದ "ಇಲ್ಲ ಮಗ ನಾನು ಬರಲಾಗೋದಿಲ್ಲ " ಎಂದು ಹೇಳಿ ಅವನನ್ನು ತಬ್ಬಿ ಒಂದು ಮುತ್ತು
ಕೊಟ್ಟಳು, ಅವಳ ಪ್ರೀತಿಯ ಮುತ್ತಿನ ಬಿಸಿ
ಎಂಜಲು ಗೋಪಿಯ ಕೆನ್ನೆಗೆ ಅಂಟಿತ್ತು
"ಸಾಕು ನಡೀರಿ" ಅಪ್ಪ ಬುಸುಗುಟ್ಟಿದ ಅಮ್ಮ ಬಸ್ ಸ್ಟಾಪಿನವರೆಗೆ ಬಂದಳು.
ಕಣ್ಣಲ್ಲಿ ನೀರು ಇಣುಕುತ್ತಿತು ಯಾತಕೆ? ಗೊತ್ತಿಲ್ಲ. ಗೋಪಿಗೆ ಬಸ್ನ
ಕಿಟಕಿಯಿಂದ ಅಮ್ಮ ಪೆÇೀಟೋ ಫ್ರೇಮ್‍ನಲ್ಲಿನ
ಚಿತ್ರದಂತೆ ಕಂಡಳು.
ಬಸ್ಸು ಶುರುವಾಯಿತು ....ಈಗ
ಖಾಲಿ ಫ್ರೇಮಿನಂತಹ ಕಿಟಕಿ ಮಾತ್ರ ಅವನೊಂದಿಗೆ ಬರುತ್ತಿತು ಅದರ ಆಚೆಯ ಅಮ್ಮನ ಚಿತ್ರ ಸರಿದಿದೆ.
ಅಮ್ಮ ಇನ್ನೂ ಅಲ್ಲೇ ನಿಂತಿದಾಳ? ಇಲ್ಲ ತರಕಾರಿ ಅಂಗಡಿಯ
ಗಿರಿಜವ್ವನ ಜೊತೆ ಮಾತುಕತೆ ನಡೆಸುತ್ತಿದಾಳ? ಇಲ್ಲಾ ಮನೆಯನ್ನು ಸೇರಿ
ಬಿಟ್ಟಳಾ? ಯಾಕೆ ಅವಳು ನಮ್ಮ ಜೊತೆ
ಬರಲಿಲ್ಲ? ಈ ಎಲ್ಲಾ ಪ್ರಶ್ನೆಗಳು
ಕಿಟಕಿಯ ಗಾಳಿಯ ಜೊತೆಯಲ್ಲೇ ಬೀಸುತಿತ್ತು "ಅಪ್ಪನಿಗೆ ನೆನಪು ಬೇಡ ಕಿಟಕಿಯು ಬೇಡ ಬಸ್ಸಿನ
ಬುಡಕು ನೆತ್ತಿಗೂ ಅಂಟಿದ್ದ ಕಂಬಿಗೆ ತಲೆ ಕೊಟ್ಟು ನಿದ್ದೆ ಹೊಡೆಯುತ್ತಿದೆ. ಅಪ್ಪನ ಕನಸಲ್ಲಿ
ಅಮ್ಮ ಬರುತ್ತಾಳ? ಇಲ್ಲ ಅಜ್ಜಿ? ಅಷ್ಟಕ್ಕೂ ಅಪ್ಪನಿಗೆ ಕನಸು ಬರುತ್ತದೆಯೆ? ಗೋಪಿಗೆ ಕಣ್ಣು ಬಿಟ್ಟರು ಮುಚ್ಚಿದರು ಈಗ ಬೆಂಗಳೂರಿನದೆ ಕನಸು ದಾರಿ
ಸಾಗುತಿತ್ತು
ಮಿಲಗತ್ತಾ-ಉರ್ಗದೂರ-ಹರಿಗೆ-ನಿಡಿಗೆ-ಮಜ್ಜೆಗೆನಳ್ಳಿ-ಹುಲಿಬಂಡೆ-ಕಾರೇನಳ್ಳಿ-ಹುರುಳಿಹಳ್ಳಿ-ತರಿಕೆರೆ-ಹುಲಿಯೂರ-ಒರಕೆರೆ-ತುಮಕೂರು-ಗುರುಗುಂಟೆಪಾಳ್ಯ-ಮೈಜೆಸ್ಟಿಕ್.
ಗೋಪಿಯ ಕಲ್ಪನೆಯ ಲೋಕ ಸತ್ಯ ತೆರೆಯಿತು. ಎಲ್ಲಿ
ನೋಡಿದರು ಜನಜಂಗುಳಿ ಮಿಲಗತ್ತಾದಲ್ಲಿ ಎಲ್ಲಿ ಬರಬೇಕು ಇಷ್ಟು ಜನ? ಬಣ್ಣ ಬಣ್ಣದ ಗಾಜಿನ ಕಟ್ಟಡಗಳು. ಗೋಪಿ ಮಂತ್ರಮುಗ್ಧನಾಗಿದ್ದ. ಅಪ್ಪ ಆ
ಜನಜಗಾಟದಲ್ಲಿ ಗೋಪಿಯ ಕೈ ಹಿಡಿದು ಜಗ್ಗುತ್ತಿದ್ದ ಆ ನೂಕು ನುಗ್ಗಲೂ ಸಹ ಗೋಪಿಯ ಕಣ್ಣಿಗೆ
ಅಲ್ಲೆಲ್ಲೋ ಒಂದು ಕ್ಯಾಂಡಿ ಐಸ್ನ ಗಾಡಿ, ಗಾಳಿಗೆ ಹಾರುವ ಬಲೂನು, ಬೀದಿಯಲ್ಲಿ ಹಂಗಾತ ಮಲಗಿದ್ದ ಬೊಂಬೆಗಳು ಕಾಣಿಸಿತು. ಅವನ ಮನಸ್ಸಿನ
ಲೆಕ್ಕಚಾರ ಅಪ್ಪನಿಗೆ ಮೊದಲೆ ತಿಳಿದಂತಿತ್ತು ಸೀದಾ ಒಂದು ಹೋಟಲಿಗೆ ನಡೆದರು ಅವನಿಗೊಂದು ಮಸಾಲೆ
ದೋಸೆ ಅಪ್ಪ ಒಂದು ಇಡ್ಲಿ ಮಾತ್ರ ತಿನ್ನಲಾರಂಭಿಸಿದರು. ಅಮ್ಮ ನೆನಪಾದಳು ಅವಳು ತಿಂದ್ಲ?
ಅಪ್ಪ ಕಾಫಿ ಪ್ರಿಯ. ಅಪ್ಪ
ಎಮ್ಮೆಯಾಗಿದ್ದಿದ್ರೆ ಕಾಫಿ ಕಲಗಚ್ಚಿಯಾಗುತಿತ್ತು,
ಅದ್ರೆ ಅಪ್ಪ
ಹಂದಿಯಾಗಿ ಹುಟ್ಟಬಾರದಷ್ಟೆ! "ಅಪ್ಪ ವಿಧಾನಸೌಧಕ್ಕೆ ಕರ್ಕೊಂಡು ಹೋಗ್ತಿಯಾ"? ಅಪ್ಪ ಕಾಫಿ ಇರುತ್ತಲೆ "ಹುಂ" ಲಾಲ್ ಬಾಗ್ "ಹುಂ”
ಪಟ್ಟಿ ಬೆಳೆಯುತ್ತಿತು. ಹುಂಗುಟ್ಟಿನ ಸದ್ದು ಸಾಥ್ ನೀಡುತ್ತಿತ್ತು. ಹೋಟಲ್‍ನ ಬಿಲ್ಲು ಕಟ್ಟಿ
ಸೀದಾ ವಿಧಾನಸೌಧ ಅಪ್ಪ ಪೇಪರಿನಲ್ಲಿ ಒಮ್ಮೊಮ್ಮೆ ನೋಡಿ ಬೈಯುತ್ತಿದ "ಕಳ್ಳನನ್ಮಕಳು"
ಇಲ್ಲೇ ಅಂತೆ ಇರೋದು ಬರೋದು ಹೋಗೋದು. ಅಪ್ಪ ವಿವರಿಸಿದ್ದ ಅದ್ರೆ ಗೋಪಿಯ ಕಣ್ಣಿಗೆ ಅದು
ಅರಮನೆಯಂತೆ ಕಾಣಿಸುತಿತ್ತು ಪಕ್ಕದಲ್ಲೇ ವಿಕಾಸಸೌಧ ನೋಡಿ. ತಿರುಗಿದರೆ ಕೆಂಪು ಕೆಂಪಾಗಿ
ಕಾಣಿಸುತ್ತಿದ್ದ ಹೈ ಕೋರ್ಟ್ ಅಲ್ಲಿಂದ ಕಬ್ಬನ್
ಪಾರ್ಕ್ ಗೋಪಿಗೆ ಬೇಕಿದ್ದ ಎಲ್ಲವೂ ಕಣ್ಣ ಮುಂದೆ ಪುಟ್ಟಾಣಿ ಟ್ರೈನು, ಗಿರಗಿಟ್ಲೆ, ಉಯ್ಯಾಲೆ, ಬೊಂಬೆ ಮಿಠಾಯಿ, ಅಪ್ಪ ಯಾವುದಕ್ಕು
ಅಡಿಯಾಗಲಿಲ್ಲ. ಅಮ್ಮ ಬಂದಿದ್ದರೆ ಚನ್ನಾಗಿತ್ತು ಹೋಗಿ ಅವಳಿಗೆ ಎಲ್ಲಾ ತಿಳಿಸಬೇಕು ಇನ್ನೂ ಖುಷಿ
ಪಡುತ್ತಾಳೆ ಅಪ್ಪ ಮುಂದೆ ಮ್ಯೂಸಿಯಂಗೆ ಕರೆದ್ಯೋದರು. ಅಲ್ಲಿ ಎಲ್ಲಾ ಕಲಿಕೆ ಆಟ ಪಾಠ ಮಿಶ್ರಿತ
ತಂತ್ರಜ್ಞಾನದ ಮಾಯೇ!! ಗೋಪಿಯ ಆನಂದದ ಎಲ್ಲೇ ಮೀರಿತ್ತು ಇನ್ನೂ ಲಾಲ್‍ಬಾಗ್ ಗಾಜಿನ ಮನೆ ತೋಟ ಹೂವ
ಎಲ್ಲಾ ಹೊಸದು ಹೊಸದು. ಅಪ್ಪ ಅದ್ಯಾವುದೋ ದೊಡ್ಡ ಬಟ್ಟೆ ಅಂಗಡಿಯ ಒಳ ಹೋಗಿ ಗೋಪಿಗೆ ಬಟ್ಟೆಗಳನ್ನು
ಕೊಡಿಸಿದರು, ಹಾಗೆ ಬುಕ್ಕು, ಪೆನ್ಸೀಲು, ರಬ್ಬರು, ಮೆಂಡರು, ಎಲ್ಲಾ ಹೊಸ ಬ್ಯಾಗಿನ ಹೊಟ್ಟೆ
ಸೇರಿತು. ಗೋಪಿಗೋ ದಣಿವೂ ಸಾಕಾಗಿತ್ತು. ಎಲ್ಲಾ ಸಂತಸ ಮುಗಿದ ಮೇಲೆ ಮನೆ, ಮನೆಯೊಳಗಿನ ಅಮ್ಮ ನೆನಪಾಗಿದ್ದಳು ಈಗ ಮುಂದೆ ಎಲ್ಲಿಗೆ ಹೋಗೋದು
ಅಪ್ಪನನ್ನು ಕಣ್ಣಿನಿಂದಲೇ ಕೇಳಿದ ಅಪ್ಪನಿಂದ ನಿರುತ್ತರ! "ಆಟೋ"ಎಂದ. ಹಸಿರು ಬಣ್ಣದ
ಕಪ್ಪು ಪೇಟದ ಒಂದು ಆಟೋ. ಹಿಂದೆಯಿಂದ ಹೊಗೆ ಬಿಡುತ್ತ ಕಿವಿ ಕಟ್ಟುವಂತೆ ಸದ್ದು ಮಾಡುತ್ತ ಬಂದು
ನಿಂತಿತು. “ಅಬ್ಬುರು" ಗೋಪಿ "ಅಪ್ಪ ಇದೆಲ್ಲಿಗೆ ಹೋಗುತ್ತಿದ್ದಾರೆ ಅಲ್ಲಿ ನಮ್ಮ
ಸಂಬಂಧಿಕರಿರಬಹುದೇ? ಅಮ್ಮ ಹೇಳಲಿಲ್ಲ ಯಾಕೆ? "ಪೆÇೀನಾಲ್ ಪೆÇೀಗಟುಮ್ ಪೆÇಡ ಇಂದ ಭೂಮಿಯಲ್
ನಿರಂತರಂ..." ಹಾಡಿಗೆ ಆಟೋದವನು ಹ್ಯಾಂಡಲ್ ತಿರುಗಿಸುತ್ತಿದ. ಆಟೋ ಯಾವುದೊ ಹಳೆಯ
ಬಿಲ್ಡಿಂಗ್ ನಂತಹ ಕಟ್ಟಡದ ಮುಂದೆ ಬಂದು ನಿಂತಿತು,
ದೊಡ್ಡ ಗೇಟು, ಕಾಂಪೆÇಂಡು, ತಿಳಿನೀಲಿ ಅಂಗಿ, ಕಪ್ಪು ಪ್ಯಾಂಟು ಮೋಟು ಲಾಟಿ
ಹಿಡಿದ ವಾಚ್‍ಮ್ಯಾನ್ ನಿಂತಿದ್ದ, ಗೋಪಿಯನ್ನೇ ನೋಡುತ್ತ ಒಂದು
ನಗೆ ಬೀರಿ ಅಪ್ಪನಿಗೊಂದು ಸಲಾಮ್ ಹೊಡೆದು ಗೇಟ್ ತೆಗೆದ,
ಇಲ್ಲಿಂದ ಯಾವುದು
ಗೋಪಿಗೆ ಅರ್ಥವಾಗುತ್ತಿರಲಿಲ್ಲ. ಆ ಕಟ್ಟಡದ ಒಳ
ಭಾಗ ನಾಲ್ಕು ಮೂರು ಹಕ್ಕಿಗಳ ದೊಡ್ಡ ಪಂಜರಗಳನ್ನು ಜೋಡಿ ಮಾಡಿ ಇಟ್ಟಂತಿತ್ತು, ಮೆಟ್ಟಿಲು ಹಿಡಿದು ಮೇಲೆ ನಡೆದರೆ ಅಲ್ಲಿ ವಾರ್ಡನ್ ಎಂಬ ತಲೆ ಬರಹದ
ರೋಮಿನ ಬಾಗಿಲು ಬಾಯಿ ತೆರೆದು ಕಾಯುತಿತ್ತು. ಅಪ್ಪ ಒಳಹೊಕ್ಕಿದ, ರಿಜಿಸ್ಟರ್ಬುಕ್
ನೊಂದಿಗೆ ಪೆನ್ ಹಿಡಿದು ಕೂತಿದ್ದ ಆಕೃತಿಯೊಂದು ಅಪ್ಪನನ್ನು ಕುಳಿತುಕೊಳ್ಳಲು ಹೇಳಿತು.
ಅಪ್ಪ ಕಿಸೆಯಿಂದ ದುಡ್ಡು ತೆಗೆದು ಕೊಟ್ಟ, ಒಂದು ಚೀಟಿಯಲ್ಲಿ ವಿವರ
ಬರೆದು ಸಹಿ ಹಾಕಿ ಕೊಟ್ಟರು. ಅಪ್ಪ ತೆಗೆದು ಮತ್ತೆ ಕಿಸೆಯಲ್ಲಿರಿಸಿಕೊಂಡ, ಟೇಬೆಲ್ ಬೆಲ್‍ನ ಸದ್ದು ಕೇಳಿ ಪ್ಯೂನ್ ಬಂದ “ನೀವಿನ್ನು ಹೊರಡಿ ನಿಮ್ಮ
ಮಗುವನ್ನ ನಾವು ನೋಡ್ಕೋತೀವಿ" ಈ ಮಾತು ಅಪ್ಪನಿಗಿಂತ ಗೋಪಿಗೆ ಹೆಚ್ಚು ತಟಿತ್ತು. ಕಣ್ಣಿಂದ
ಅರಿವಿಲ್ಲದಂತೆ ನೀರು ಸುರಿಯುತ್ತಿದಂತೆ ಅಮ್ಮ ಎಂಬ ಚೀತ್ಕಾರ "ಅಪ್ಪ ಬಿಟ್ಟು
ಹೋಗಬೇಡ" ಎಂಬ ಬೇಡಿಕೆಯ ಕೂಗಿ. "ಸರಿ ನೀವು ಹೋಗಿ ಇಂತ ನೂರು ಮಕ್ಕಳನ್ನ ನಾವು
ನೋಡಿದ್ದೀವಿ, ನೀವಿದಷ್ಟು ಹಠ ಜಾಸ್ತಿ”!”
ಅಪ್ಪಾ...ಅಪ್ಪಾ" ಎಂಬ ಕೂಗು ಹೆಚ್ಚಾದಂತೆ ಅಪ್ಪ ದೂರಾಗುತ್ತ ಹೋದರು. ಹತ್ತಿದ ಮೆಟ್ಟಿಲಿನ
ತಿರುವಲ್ಲಿ ಅಪ್ಪ ಮರೆಯಾದ. ಗೇಟಿನ ಆಚೆ ಬಂದು ಹಿಂತಿರುಗಿ ನೋಡಿದಾಗ ಅಪ್ಪನಿಗೆ" ಆ
ರೆಸ್ಸಿಡೆಂಟಲ್ ಶಾಲೆ"ಯ ಬೋರ್ಡಿಂಗ್‍ನಲ್ಲಿ ಮಗನ ಭವಿಷ್ಯ ಕೆತ್ತಿದಂತೆ ಭಾಸವಾಯಿತು.
ಮತ್ತದೆ ಆಟೋ ಹತ್ತಿದ. ಆದರೆ ಗೋಪಿಗೆ ಊರು ಹೊಲ ಗದ್ದೆ ಬೆಟ್ಟ, ಕೆರೆ, ಗೋಲಿ, ಕೆರೆಯ ಮೀನು, ಅಮ್ಮ ಇನ್ನೂ ಮುಂದೆ ಬಂದು
ಹೋಗುವ ರಜೆ ಮಾತ್ರ.
**********
No comments:
Post a Comment