ಗ್ರೆಟಾ ಥನ್ಬರ್ಗ್ 16 ವಯಸ್ಸಿನ ಯುವ ಪರಿಸರವಾದಿ ಹೆಣ್ಣುಮಗಳು. ಇತ್ತೀಚಿಗೆ ನಡೆದ ವಿಶ್ವಸಂಸ್ಥೆ ಹವಾಮಾನ ಶೃಂಗದಲ್ಲಿ ವಿಶ್ವ ನಾಯಕರನ್ನೇ ತರಾಟೆಗೆ ತೆಗೆದುಕೊಂಡಿದ್ದ ಸ್ವೀಡನ್ ದೇಶದ ಈ ಯುವ ಪರಿಸರ ಹೋರಾಟಗಾರ್ತಿ ಇತರ ಹದಿನೈದು ಮಕ್ಕಳ ಜೊತೆಗೂಡಿ; ವಿಶ್ವದ ಐದು ಶ್ರೀಮಂತ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಹವಾಮಾನ ವೈಪರೀತ್ಯ ತಡೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿದಳು.
''ಹವಾಮಾನ ವೈಪರೀತ್ಯದಿಂದ ಜನರು ನರಳುತ್ತಾ ಸಾಯುತ್ತಿದ್ದಾರೆ. ನಿಮ್ಮ ಸುಳ್ಳಿನ ಭರವಸೆಗಳ ಮೂಲಕ ನಮ್ಮ ಕನಸುಗಳು ಹಾಗೂ ಬಾಲ್ಯವನ್ನು ಕಸಿದುಕೊಂಡಿದ್ದೀರಿ, ಆದರೂ, ನಾನು ಅದೃಷ್ಟಶಾಲಿಗಳಲ್ಲಿ ಒಬ್ಬಳು'' ಎಂದು ಹೇಳುವ ಮೂಲಕ ವಿಶ್ವದ ನಾಯಕರ ವಿರುದ್ಧ ಗ್ರೆಟಾ ಥನ್ಬರ್ಗ್ ಕಿಡಿಕಾರಿದಳು.
ಪ್ರತಿ ಶುಕ್ರವಾರ ಶಾಲೆಗೆ ಹೋಗದೆ ಸ್ವೀಡಿಷ್ ಸಂಸತ್ತಿನ ಹೊರಗೆ ನಿಂತು ಬಲವಾದ ಹವಾಮಾನ ಕಾಯಿದೆಗಾಗಿ ಒತ್ತಾಯಿಸುತ್ತಿದ್ದಳಂತೆ.
ವಿಶ್ವಸಂಸ್ಥೆಯಲ್ಲಿ ಜಾಗತಿಕ ತಾಪಮಾನ ವೈಪರೀತ್ಯ ಕುರಿತ ಸಮ್ಮೇಳನ ನಡೆಯುವುದಕ್ಕೂ ಮೊದಲು ಇಂಡಿಯಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗಳಿಂದ ಸ್ಪೂರ್ತಿ ಪಡೆದು ಅವಳ ಮುಂದಾಳತ್ವದಲ್ಲಿ ಪ್ರತಿಭಟಿಸಿದನ್ನು ಕಂಡ ಜಗತ್ತು ಹಲವಾರು ಪ್ರಶಸ್ತಿಗಳನ್ನು ಕೊಟ್ಟು ಗ್ರೆಟಾಳನ್ನು ಗೌರವಿಸುತ್ತಿದೆ.
· ಅನು
No comments:
Post a Comment