¨ ಜೀವಸೆಲೆ
ಗೋದಲಿ ಕಡೆ ಹೋಗಿರುವಿರಾ ಹೇಳಿ

ಹಾಲಿಲ್ಲದೆ ಅಳುವ ಕಂದನ ರೋಧನ ಕೇಳಿದಿರೆ ಹೇಳಿ
ಚಳಿಗೆ ಬೆತ್ತಲೆಯಾಗಿರುವ ಕೊಳೆಗೇರಿಗಳ ಆಕ್ರಂದನ
ಕೇಳದಿದ್ದರೆ ! ನೋಡಿ
ನೀವು ಗೋದಲಿಯ ಕಡೆ ಹೋಗಲಿಲ್ಲ ಬಿಡಿ!
ಗೋದಲಿ ಕಡೆ ಹೋಗಿದ್ದೀರಾ ಹೇಳಿ
ಹೋಗಿರುವಿರಾದರೆ ಅಲ್ಲಿ
ನೊಂದ ಜನರ ಬೆಂದ ಮುಖಗಳು ಕಂಡಿತೆ ಹೇಳಿ
ಭಾರಕ್ಕೆ ಬೆಂಡಾಗಿರುವ ಬಾಗಿದ ಬೆನ್ನುಗಳ ಜೀವನ್ಮರಣ
ಕಾಣದಿದ್ದರೆ ! ನೋಡಿ
ನೀವು ಗೋದಲಿಯ ಕಡೆ ಹೋಗಲಿಲ್ಲ ಬಿಡಿ!
ಗೋದಲಿ ಕಡೆ ಹೋಗಿರುವಿರಾ ಹೇಳಿ
ಹೋಗಿರುವಿರಾದರೆ ಅಲ್ಲಿ
ಗೊಲ್ಲರ ಆನಂದದ ಅನುಭವ ಅನುಭವಿಸಿದಿರೇ ಹೇಳಿ
ತುಳಿತಕ್ಕೊಳಗಾದವರಿಗೆ ಕ್ರಿಸ್ತ ತಂದ ಭರವಸೆಯ ಹೊಂಗಿರಣ
ಸಿಕ್ಕದಿದ್ದರೆ ! ನೋಡಿ
ನೀವು ಗೋದಲಿಯ ಕಡೆ ಹೋಗಲಿಲ್ಲ ಬಿಡಿ!
ಹೋಗಿ, ಗೋದಲಿಯ ಕಡೆ ಮತ್ತೊಮ್ಮೆ
ಮಾರುಕಟ್ಟೆಯ ಗಲಾಟೆಗಳನ್ನೆಲ್ಲಾ ಬಿಟ್ಟು
ವಿಧಿಯಾಚರಣೆಗಳ ಪಕ್ಕಕಿಟ್ಟು
ಕಣ್ಣಾಯಿಸಿ ನಿಮ್ಮನೇ ಮರೆತು
ಪದವಿ ಬಿಟ್ಟು ಬಡ ದಾಸನಾದ ಕ್ರಿಸ್ತನ
ಬಡ ಗೋದಲಿಯಡೆ ಕೂತು
ಭರವಸೆಯ ತುಂಬಿದ ಗೊಲ್ಲರ ಜೊತೆ ಬೆರೆತು.
ಹೋಗಿ, ಗೋದಲಿಯ ಕಡೆ ಮತ್ತೊಮ್ಮೆ
***********
No comments:
Post a Comment